ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯವಾಗಿವೆ. ದೇಶಿಯ ಮಾರುಕಟ್ಟೆಯಲ್ಲಿನ ಕುಸಿತದ ಪರಿಣಾಮ ಏನೇ ಇದ್ದರೂ ಇಂದಿಗೂ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕುಗಳು ಜನಪ್ರಿಯತೆಯನ್ನು ಹೊಂದಿವೆ.

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ಬೈಕುಗಳ ಮೇಲಿರುವ ಪೆಟ್ರೋಲ್ ಟ್ಯಾಂಕ್‍ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಸುಮಾರು 60 ವರ್ಷಗಳಿಂದ ಈ ರೀತಿಯಾಗಿ ವಿಶೇಷವಾಗಿ ಪೆಟ್ರೋಲ್ ಟ್ಯಾಂಕ್‍‍ಗಳನ್ನು ವಿನ್ಯಾಸಗೊಳಿಸುತ್ತಿದೆ.

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ಕಂಪನಿಯು ಈ ಟ್ಯಾಂಕ್‍‍ಗಳನ್ನು ಮದ್ರಾಸ್ ಪಿನ್ ಸ್ಟ್ರೈಪ್ ಸಂಸ್ಕೃತಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಈ ಸಂಸ್ಕೃತಿಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಕೈಯಿಂದ ಬಣ್ಣ ಬಳಿದಿರುವ ಹೆಲ್ಮೆಟ್‍‍ಗಳನ್ನು ಮಾರಾಟ ಮಾಡಲಿದೆ.

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ವಿಶೇಷವಾಗಿ ತಯಾರಿಸಲಾಗಿರುವ ಈ ಹೆಲ್ಮೆಟ್‍‍ಗಳನ್ನು ರಾಯಲ್ ಎನ್‍‍ಫೀಲ್ಡ್ ಕಂಪನಿಯ ವೆಬ್‍‍‍ಸೈಟಿನಲ್ಲಿ ಆರ್ಡರ್ ಮಾಡುವ ಮೂಲಕ ಖರೀದಿಸಬಹುದು. ಕೇವಲ 200 ಹೆಲ್ಮೆಟ್‍‍ಗಳನ್ನು ಮಾತ್ರ ಮಾರಾಟ ಮಾಡಲಾಗುವುದು.

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ಪ್ರತಿಯೊಂದು ಹೆಲ್ಮೆಟ್ ತನ್ನದೇ ಆದ ವಿಭಿನ್ನವಾದ ಸೀರಿಯಲ್ ನಂಬರ್ ಹೊಂದಿರಲಿದೆ. ಈ ಹೆಲ್ಮೆಟ್‍‍ಗಳನ್ನು ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮದಡಿಯಲ್ಲಿ ಮೊದಲು ಆರ್ಡರ್ ಮಾಡಿದವರಿಗೆ ಮೊದಲು ಮಾರಾಟ ಮಾಡಲಾಗುವುದು. ರಾಯಲ್ ಎನ್‍‍ಫೀಲ್ಡ್ ಕಂಪನಿಯ ಕುಮಾರ್ ಬ್ರದರ್ಸ್ ಈ ಹೆಲ್ಮೆಟ್‍‍ಗಳ ಮೇಲಿರುವ ಮದ್ರಾಸ್ ಸ್ಟ್ರೈಪ್‍‍ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ.

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ಬಹುತೇಕ ಕಂಪನಿಗಳು ತಮ್ಮ ಕಂಪನಿಯ ಹೆಲ್ಮೆಟ್‍‍ಗಳನ್ನು ವಿನ್ಯಾಸಗೊಳಿಸಲು ರೊಬೊಟಿಕ್‍‍ಗಳನ್ನು ಬಳಸಿದರೆ, ರಾಯಲ್ ಎನ್‍‍ಫೀಲ್ಡ್ ಕಂಪನಿಯು ಮಾತ್ರ ತನ್ನ ಹೆಲ್ಮೆಟ್‍‍ಗಳನ್ನು ವಿನ್ಯಾಸಗೊಳಿಸಲು ಕೈನಿಂದ ಬಣ್ಣ ಬಳಿಯುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ಈ ಹೆಲ್ಮೆಟ್‍‍ಗಳನ್ನು ಉನ್ನತವಾದ ಗುಣಮಟ್ಟದಿಂದ ತಯಾರಿಸಲಾಗಿದೆ. ಹೆಲ್ಮೆಟ್‍‍ನ ಹೊರಭಾಗವು ಕೈನಿಂದ ರಚಿಸಲಾದ ಸ್ಟ್ರೈಪ್‍‍ಗಳನ್ನು ಹೊಂದಿದೆ. ಈ ಹೆಲ್ಮೆಟ್‍‍‍ಗಳು ಲೆದರ್ ಬೀಡಿಂಗ್ ಹೊಂದಿವೆ. ಜೊತೆಗೆ ಈ ಹೆಲ್ಮೆಟ್‍ ಹಾಕಿಕೊಂಡಾಗ ಸರಾಗವಾಗಿ ಉಸಿರಾಡಲು ವೆಂಟಿಲೇಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಕೈ ಬಣ್ಣದಿಂದ ತಯಾರಾದ ಹೆಲ್ಮೆಟ್‍ ಮಾರಾಟ ಮಾಡಲಿದೆ ರಾಯಲ್ ಎನ್‍‍ಫೀಲ್ಡ್

ಈ ಹೆಲ್ಮೆಟ್‍‍ಗಳ ಬೆಲೆಯ ಬಗ್ಗೆ ಹೇಳುವುದಾದರೆ, ತೆರೆದ ಹೆಲ್ಮೆಟ್‍‍ಗಳಿಗೆ ರೂ.4,000 ಹಾಗೂ ಮುಖವನ್ನು ಪೂರ್ತಿಯಾಗಿ ಮುಚ್ಚುವ ಹೆಲ್ಮೆಟ್‍‍ಗಳಿಗೆ ರೂ.5,000 ನಿಗದಿಪಡಿಸಲಾಗಿದೆ. ರಾಯಲ್ ಎನ್‍‍ಫೀಲ್ಡ್ ಬಿಡಿಭಾಗಗಳು ಹಾಗೂ ವಿಶೇಷ ಉತ್ಪನ್ನಗಳ ಮುಖ್ಯಸ್ಥರಾದ ಪುನೀತ್‍‍ರವರು ಮಾತನಾಡಿ, ಈ ಹೆಲ್ಮೆಟ್‍‍ಗಳು ವಿಶೇಷವಾದ ಹೆಲ್ಮೆಟ್‍ಗಳನ್ನು ಬಯಸುವವರಿಗೆ ಹೇಳಿ ಮಾಡಿಸಿದಂತಿವೆ ಎಂದು ಹೇಳಿದರು.

Most Read Articles

Kannada
English summary
Royal enfield introduces limited edition pinstripes helmets - Read in Kannada
Story first published: Tuesday, December 3, 2019, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X