ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯು 2018ರ ನವೆಂಬರ್‍‍ನಲ್ಲಿ ಬಿಡುಗಡೆಗೊಳಿಸಿದ್ದ ಇಂಟರ್‍‍ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳು ಈ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿವೆ. ಈ ಬೈಕುಗಳು ಆಕರ್ಷಕ ಬೆಲೆ, ಪ್ಯಾರೆಲಲ್ ಟ್ವಿನ್ ಎಂಜಿನ್ ಹೊಂದಿವೆ.

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ತಮ್ಮ ರೈಡಿಂಗ್ ಗುಣಮಟ್ಟದಿಂದಾಗಿ, ರಿಫೈನ್ ಮಾಡಿರುವ ಎಂಜಿನ್‍‍ನಿಂದಾಗಿ ಹಾಗೂ ಕಡಿಮೆ ಮಟ್ಟದ ವೈಬ್ರೇಷನ್ ಲೆವೆಲ್‍‍ನಿಂದಾಗಿ ಹೆಚ್ಚಿನ ಸಂಖ್ಯೆಯ ಜನರನ್ನು ತಮ್ಮತ್ತ ಸೆಳೆದು, ಭಾರೀ ಯಶಸ್ಸನ್ನು ಪಡೆದಿದ್ದವು. ಚೆನ್ನೈ ಮೂಲದ ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಜನಪ್ರಿಯ ಸೆಗ್‍‍ಮೆಂಟ್‍‍ಗಳಾದ 350 ಸಿಸಿ ಹಾಗೂ 500 ಸಿಸಿಯಿಂದ ಹೊರಬಂದು ಹೊಸ ಸೆಗ್‍‍ಮೆಂಟಿನಲ್ಲಿ ಬೈಕುಗಳನ್ನು ಬಿಡುಗಡೆಗೊಳಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿತು.

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ಇದರ ಜೊತೆಗೆ ಆಕರ್ಷಕವಾದ ಬೆಲೆಯೂ ಸಹ ಬೈಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವಂತೆ ಮಾಡಿತ್ತು. ಇದರಿಂದಾಗಿ ಪ್ರತಿಸ್ಪರ್ಧಿ ಕಂಪನಿಗಳಾದ ಹಾರ್ಲೆ ಡೇವಿಡ್‍‍ಸನ್ ಹಾಗೂ ಟ್ರಯಂಫ್ ಕಂಪನಿಗಳ ಮಾರಾಟ ಪ್ರಮಾಣವು ಕುಸಿದಿತ್ತು.

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯು 2019ರ ಏಪ್ರಿಲ್‍‍ನಲ್ಲಿ ಈ ಸೆಗ್‍‍ಮೆಂಟಿನಲ್ಲಿ 2,000 ಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿ, ಹೊಸ ದಾಖಲೆಯನ್ನು ಬರೆದಿದೆ. 650 ಸಿಸಿಯ ಟ್ವಿನ್ ಬೈಕುಗಳು ರಸ್ತೆಗಳಲ್ಲಿ ಹಾಗೂ ಹೈವೇಗಳಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ತೋರುತ್ತವೆ.

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ಗುಡ್ಡಗಾಡು ಹಾಗೂ ಬೆಟ್ಟಗಳಲ್ಲಿ ಚಲಿಸುವಾಗ ತೋರುವ ಅಸಾಮರ್ಥ್ಯದಿಂದಾಗಿ ಅನೇಕ ಚಾಲಕರು ಹಾಗೂ ಬೈಕ್ ಪ್ರಿಯರು ಈ ಬೈಕುಗಳನ್ನು ಟೀಕಿಸಿದ್ದರು. ಈಗ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಗ್ರಾಹಕರ ತೊಂದರೆಯನ್ನು ಆಲಿಸಿ, ಅದಕ್ಕೆ ಪರಿಹಾರ ನೀಡಲು ಮುಂದಾಗಿದೆ. ಗಾಡಿವಾಡಿ ವರದಿಗಳ ಪ್ರಕಾರ, ಇಂಟರ್‍‍ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳನ್ನು ಡೀಲರ್ ಬಳಿಗೆ ಕೊಂಡೊಯ್ದು ಸಾಫ್ಟ್ ವೇರ್ ಅಪ್‍‍ಡೇಟ್ ಮಾಡಿಸಿಕೊಳ್ಳುವಂತೆ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಬೈಕುಗಳ ಮಾಲೀಕರಿಗೆ ಸೂಚಿಸಿದೆ.

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ಈ ಅಪ್‍‍ಡೇಟ್ ಮಾಡಲು 10 ನಿಮಿಷಗಳು ಸಾಕು. ಈ ಸಾಫ್ಟ್ ವೇರ್ ಅಪ್‍‍ಡೇಟ್ ಅನ್ನು ಎ‍ಆರ್‍ಎ‍ಐ ಸಂಸ್ಥೆಯು ಪರೀಕ್ಷಿಸಿ ಅನುಮೋದನೆ ನೀಡಿದೆ. ಈ ಸಾಫ್ಟ್ ವೇರ್ ಅನ್ನು 2019ರ ಜೂನ್ ನಂತರದಲ್ಲಿ ತಯಾರಾಗುವ ಪ್ರತಿ ಇಂಟರ್‍‍ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿ‍‍ಟಿ ಮಾದರಿಯ ಬೈಕುಗಳಲ್ಲಿ ಅಳವಡಿಸಲಾಗುವುದು.

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ಇಂಟರ್‍‍ಸೆಪ್ಟರ್ 650 ಹಾಗೂ ಕಾಂಟಿನೆಂಟರ್ ಜಿ‍‍ಟಿ 650 ಬೈಕುಗಳಲ್ಲಿ 648 ಸಿಸಿಯ 4 ಸ್ಟ್ರೋಕ್ ಪ್ಯಾರಲೆಲ್ ಟ್ವಿನ್ ಸಿಂಗಲ್ ಒವರ್‍‍ಹೆಡ್ ಕ್ಯಾಮ್‍‍ಶಿಫ್ಟ್ ಎಂಜಿನ್ ಅಳವಡಿಸಲಾಗಿದ್ದು, 47 ಬಿ‍‍ಹೆಚ್‍‍ಪಿ ಪವರ್ ಹಾಗೂ 52 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

MOST READ: ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.5 ಲಕ್ಷಗಳಿಂದ ರೂ.2.7 ಲಕ್ಷಗಳವರೆಗೆ ಇರಲಿದೆ. ಈ ಬೈಕ್ ಅನ್ನು ಬೇಕರ್ ಎಕ್ಸ್ ಪ್ರೆಸ್, ಮಾರ್ಕ್ ಥ್ರೀ, ರ್‍ಯಾವಿಶಿಂಗ್ ರೆಡ್, ಆರೇಂಜ್ ಕ್ರಷ್, ಗ್ಲಿಟರ್ ಡಸ್ಟ್ ಹಾಗೂ ಸಿಲ್ವರ್ ಸ್ಪೆಕ್ಟರ್ ಎಂಬ ಆರು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಈ ಜರ್ಮನ್ ಅಂಬಾಸಿಡರ್‍‍‍ಗೆ ಬಲು ಇಷ್ಟ ನಮ್ಮ ಅಂಬಾಸಿಡರ್ ಕಾರು..!

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.65 ಲಕ್ಷಗಳಿಂದ ರೂ.2.85 ಲಕ್ಷಗಳವರೆಗೆ ಇರಲಿದೆ. ಈ ಬೈಕ್ ಅನ್ನು ಬ್ಲಾಕ್ ಮ್ಯಾಜಿಕ್, ಡಾ ಮೇಹೆಂ, ಐಸ್ ಕ್ವೀನ್, ವೆಂಚೂರಾ ಬ್ಲೂ ಹಾಗೂ ಮಿ. ಕ್ಲೀನ್ ಎಂಬ ಐದು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಸಾಫ್ಟ್ ವೇರ್ ಅಪ್‍‍ಡೇಟ್ ಪಡೆಯಲಿವೆ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

650 ಟ್ವಿನ್ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಕೇಕ್‍‍ನಂತೆ ಮಾರಾಟವಾಗುತ್ತಿವೆ. ಬೆಲೆಗಳು ಸಹ ಕೈಗೆಟುಕುವಂತಿವೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಗ್ರಾಹಕರ ಸಮಸ್ಯೆಗಳಿಗೆ ಮೊದಲಿನಿಂದಲೂ ಪರಿಹಾರ ನೀಡುತ್ತಾ ಬಂದಿದೆ. ಈಗಲೂ ಸಹ ಈ ಟ್ವಿನ್ ಬೈಕುಗಳಲ್ಲಿರುವ ಸಮಸ್ಯೆಯನ್ನು ದೂರ ಮಾಡಲು ನಿರ್ಧರಿಸಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯ ಈ ಸಾಹಸಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು.

Most Read Articles

Kannada
English summary
Interceptor And GT 650 Twins Recall Scheduled — The Twins Are Set To Receive A Software Update - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X