ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ರಾಯಲ್ ಎನ್‍‍ಫೀಲ್ಡ್ ಕಂಪನಿಯು 2019ರ ರೈಡರ್ ಮೆನಿಯಾದ ದಿನಾಂಕವನ್ನು ಘೋಷಿಸಿದೆ. ರೈಡರ್ ಮೆನಿಯಾ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಪ್ರತಿ ವರ್ಷ ಆಯೋಜಿಸುವ ಬೈಕ್ ಉತ್ಸವವಾಗಿದೆ. ಬಹುತೇಕ ಬಾರಿ ಈ ಉತ್ಸವವನ್ನು ಗೋವಾದಲ್ಲಿ ಆಯೋಜಿಸಲಾಗುತ್ತದೆ. 2019ರ ರಾಯಲ್ ಎನ್‍‍ಫೀಲ್ಡ್ ರೈಡರ್ ಮೆನಿಯಾವನ್ನು ನವೆಂಬರ್ 22ರಿಂದ 24ರವರೆಗೂ ಆಯೋಜಿಸಲಾಗುತ್ತದೆ.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಹಲವು ರಾಯಲ್ ಎನ್‍‍ಫೀಲ್ಡ್ ಬೈಕುಗಳ ಪ್ರಿಯರು ಸೇರಿ 2003ರಲ್ಲಿ ಈ ಉತ್ಸವವನ್ನು ಮೊದಲ ಬಾರಿಗೆ ಗೋವಾದಲ್ಲಿ ಆಯೋಜಿಸಿದ್ದರು. ಸುಮಾರು 75 ಬೈಕುಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಪ್ರತಿ ವರ್ಷವು ನಡೆಯುವ ಈ ಉತ್ಸವವು ಯಶಸ್ವಿಯಾದ ಕಾರಣ, ರಾಯಲ್ ಎನ್‍‍ಫೀಲ್ಡ್ ಕಂಪನಿಯೇ ಈ ಉತ್ಸವವನ್ನು ಆಯೋಜಿಸುತ್ತಿದೆ.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಈ ವರ್ಷ 8,000ಕ್ಕೂ ಹೆಚ್ಚು ಬೈಕುಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ಪ್ರಪಂಚದ ಅತಿ ದೊಡ್ಡ ರಾಯಲ್ ಎನ್‍‍ಫೀಲ್ಡ್ ಬೈಕುಗಳು ಒಂದೆಡೆ ಸೇರಲಿವೆ. 2019ರ ರೈಡರ್ ಮೆನಿಯಾ ಮತ್ತೊಮ್ಮೆ ಗೋವಾದಲ್ಲಿರುವ ವ್ಯಾಗಟೊರ್‍‍ನಲ್ಲಿ ನಡೆಯಲಿದೆ. ಭಾರತದ ಅನೇಕ ಭಾಗಗಳಿಂದ ಬರುವ ಜನರಿಗೆ ಈ ಬೈಕ್ ಉತ್ಸವವು ಹಬ್ಬದ ವಾತಾವರಣವನ್ನು ನಿರ್ಮಿಸಲಿದೆ.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಈ ಬೈಕ್ ಉತ್ಸವವು ಈಗಾಗಲೇ ಕಳೆಗಟ್ಟಿದ್ದು, ವಿವಿಧ ಬೈಕ್ ಗ್ರೂಪ್‍‍ಗಳು ಹಾಗೂ ಬೈಕ್ ಸವಾರರು ತಮ್ಮ ಬೈಕ್ ಚಾಲನೆಯ ಯೋಜನೆಯನ್ನು ಗೋವಾಕ್ಕಾಗಿ ಮೀಸಲಿಟ್ಟಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿರುವ ಬೈಕ್ ಸವಾರರು ರೈಡರ್ ಮೆನಿಯಾ 2019ರಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಗೋವಾ ತನ್ನ ಲೈಫ್ ಸ್ಟೈಲ್, ಬೀಚ್, ಎಂದೂ ಮುಗಿಯದ ಪಾರ್ಟಿ ಸಂಸ್ಕೃತಿಗೆ ಹೆಸರಾಗಿದೆ. 2019ರ ರೈಡರ್ ಮೆನಿಯಾದಲ್ಲೂ ಸಹ ಬೈಕ್ ಸವಾರರು ಗೋವಾದಲ್ಲಿನ ಈ ವಾತಾವರಣವನ್ನು ಮತ್ತೆ ಪಡೆಯಬಹುದು. ಈ ಬೈಕ್ ಉತ್ಸವದಲ್ಲಿ ಟ್ರಯಲ್ಸ್, ಸ್ಲೋ ರೇಸ್, ಡರ್ಟ್ ಟ್ರಾಕ್ ರೇಸಿಂಗ್, ಮೊಟೊಬಾಲ್ ಸೇರಿದಂತೆ ಹಲವು ವಿಧದ ಬೈಕ್ ಆಧಾರಿತ ಸ್ಪರ್ಧೆಗಳಿರಲಿವೆ.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಇವುಗಳ ಜೊತೆಗೆ ಕುಸ್ತಿ ಸ್ಪರ್ಧೆ, ಸಂಗೀತ, ಮನರಂಜನೆ, ಮೋಟಾರ್‍‍ಬೈಕ್ ಸ್ಟಾಲ್‍‍ಗಳು, ಕಲಾ ಮೇಳಗಳು, ಗ್ಯಾರೇಜ್ ಕೆಫೆ ವರ್ಕ್‍‍ಶಾಪ್‍‍ಗಳಿರಲಿವೆ. ರಾಯಲ್ ಎನ್‍‍ಫೀಲ್ಡ್ ಬೈಕ್ ತನ್ನ ಕಂಪನಿಯ ಬೈಕುಗಳಿಗಾಗಿ ಸರ್ವಿಸ್ ಅನ್ನು ಸಹ ನೀಡಲಿದೆ.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ರೈಡರ್ ಮೆನಿಯಾದಲ್ಲಿ ಕಾರ್ಯಕ್ರಮ ನೀಡಲು ದೇಶದ ಉತ್ತಮ ಸಂಗೀತಗಾರರು, ಗಾಯಕರು ಹಾಗೂ ತಂಡಗಳನ್ನು ರಾಯಲ್ ಎನ್‍‍ಫೀಲ್ಡ್ ಕಂಪನಿಯು ಬುಕ್ ಮಾಡಿದೆ. 2019ರ ರೈಡರ್ ಮೆನಿಯಾ ಆವೃತ್ತಿಯಲ್ಲಿ, ರಾಯಲ್ ಎನ್‍‍ಫೀಲ್ಡ್ ಕಂಪನಿಯು ಪ್ಲಾಸ್ಟಿಕ್ ನಿಷೇಧವನ್ನು ಪ್ರೋತ್ಸಾಹಿಸಲಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಈ ವರ್ಷದ ಆರಂಭದಿಂದಲೇ ಕಂಪನಿಯು ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡುತ್ತಿದೆ. ಇದರ ಜೊತೆಗೆ ರೈಡರ್ ಮೆನಿಯಾದಲ್ಲೂ ಪ್ಲಾಸ್ಟಿಕ್ ಬಳಸದಂತೆ ನೋಡಿಕೊಳ್ಳಲಿದೆ. ಪ್ಲಾಸ್ಟಿಕ್ ಬಾಟಲ್‍‍ಗಳಲ್ಲಿ ನೀರನ್ನು ಕುಡಿಯುವುದರಿಂದಲೂ ಸಹ ಪರಿಸರಕ್ಕೆ ಹಾನಿಯಾಗಲಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಪ್ರತಿಯೊಬ್ಬ ಸ್ಪರ್ಧಿಯು ದಿನಕ್ಕೆ ಮೂರು ಬಾಟಲ್‍‍ಗಳಂತೆ ಬಳಸಿದರೂ, ಮೂರು ದಿನಕ್ಕೆ 1.5ಲಕ್ಷಕ್ಕೂ ಹೆಚ್ಚಿನ ವಾಟರ್ ಬಾಟಲ್‍‍ಗಳ ಬಳಕೆಯಾಗಲಿದೆ. ಇದನ್ನು ತಡೆಗಟ್ಟುವ ಸಲುವಾಗಿ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಉತ್ಸವದಲ್ಲಿ ಭಾಗವಹಿಸುವವರಿಗೆ ರಿಜಿಸ್ಟ್ರೇಷನ್ ಸಮಯದಲ್ಲಿ ಮೆಟಲ್ ಸಿಪ್ಪರ್‍‍ಗಳನ್ನು ನೀಡಲಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಇದರ ಜೊತೆಗೆ ಸಮಾರಂಭ ನಡೆಯುವ ಸ್ಥಳದ ಸುತ್ತಲೂ ನೀರಿನ ವ್ಯವಸ್ಥೆ ಮಾಡಲಿದೆ. ಈ ಉತ್ಸವದಲ್ಲಿ ಭಾಗವಹಿಸಲು ಇಚ್ಚಿಸುವವರು ರಾಯಲ್‍ಎನ್‍‍ಫೀಲ್ಡ್.ಕಾಮ್‍ ವೆಬ್‍‍ಸೈಟಿನಲ್ಲಿ ರೂ.2,500 ಹಾಗೂ ರೂ.3,000ಗಳನ್ನು ಪಾವತಿಸಿ ರಿಜಿಸ್ಟರ್ ಮಾಡಬಹುದು.

ನವೆಂಬರ್‍‍ನಲ್ಲಿ ನಡೆಯಲಿದೆ ರಾಯಲ್ ಎನ್‍‍‍ಫೀಲ್ಡ್ ಉತ್ಸವ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನದೇ ಆದ ಪರಂಪರೆಯನ್ನು ಹೊಂದಿರುವ ಕೆಲವೇ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿರುವ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಈ ಉತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿದೆ. 8,000ಕ್ಕೂ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳುವ ಈ ವರ್ಷದ ಮೇಳವು ಇದುವರೆಗಿನ ಅತಿ ದೊಡ್ಡ ಉತ್ಸವವೆನಿಸಿಕೊಳ್ಳಲಿದೆ.

Most Read Articles

Kannada
English summary
Rider Mania 2019: Dates, Registrations & Details For The World’s Largest Gathering Of Royal Enfields - Read in kannada
Story first published: Thursday, September 26, 2019, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X