ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ದೇಶಾದ್ಯಂತ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಬಿಎಸ್-6 ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ನಿಯಮ ಅನುಸಾರ ಬೈಕ್‌ಗಳ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರವಾಗಿ ವಾಹನಗಳ ಬಿಡುಗಡೆಗೆ ಸಿದ್ದವಾಗುತ್ತಿವೆ. ಇನ್ನು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ಈಗಾಗಲೇ ಬಿಎಸ್-6 ವಾಹನಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ರಾಯಲ್ ಎನ್‌ಫೀಲ್ಡ್ ಕೂಡಾ ಹೊಸ ಮಾದರಿಯ ಬೈಕ್‌ಗಳ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಮಾಹಿತಿಗಳ ಪ್ರಕಾರ, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 2020ರ ಮಾರ್ಚ್ ಅಂತ್ಯದಲ್ಲಿ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದ್ದು, ಬಿಎಸ್-6 ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಸಹ ಮುಂದಿನ ಆರು ತಿಂಗಳ ಅವಧಿಯಲ್ಲಿ ರಸ್ತೆಗಿಳಿಯಲಿವೆಯೆಂತೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುವುದೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಸಹ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

2030ರ ವೇಳೆಗೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಯೊಂದಿಗೆ ಬೃಹತ್ ಯೋಜನೆ ರೂಪಿಸಿರುವ ನೀತಿ ಆಯೋಗವು ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ತೆರಿಗೆ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, 2020ರ ಕೊನೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಇವಿ ವಾಹನ ಮಾರಾಟವನ್ನು ಆರಂಭಗೊಳಿಸಲಿವೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಈ ಹಿನ್ನಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಹ ಹೊಸ ಯೋಜನೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಇಂಡಿಯಾ ವಿಭಾಗಕ್ಕೆ ಹೊಸದಾಗಿ ನೇಮಕಗೊಂಡಿರುವ ಸಿಇಒ ವಿನೋದ್ ದಾಸರಿ ಅವರು ಸಹ ಸಂಸ್ಥೆಯ ಬೆಳವಣಿಗೆ ಹಲವು ಹೊಸ ಯೋಜನೆಗಳನ್ನು ಸಿದ್ದಪಡಿಸಿದ್ದಾರೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಹೊಸ ಯೋಜನೆಗಳಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಉತ್ಪನ್ನಗಳ ಅಭಿವೃದ್ದಿಯು ಪ್ರಮುಖ ಆಕರ್ಷಣೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಜೊತೆ ಜೊತೆಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಇನ್ನು ಪ್ರೀಮಿಯಂ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಬೈಕ್ ಮಾರಾಟವನ್ನು ಹೆಚ್ಚಿಸುವ ಸಂಬಂಧ ಮಾರಾಟ ವಿಭಾಗದಲ್ಲಿ ಬದಲಾವಣೆಗೆ ನಿರ್ಧರಿಸಿದೆ.

MOST READ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ರೂ.2,800 ಕೋಟಿ ಹೂಡಿಕೆ ಮಾಡಲಿದೆ ಬಿವೈಡಿ

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಬೈಕ್ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವತ್ತ ವಿವಿಧ ಮಾದರಿಯ ಹೊಸ ಶೈಲಿಯ ಕ್ಲಾಸಿಕ್ ಬೈಕ್‌ಗಳನ್ನು ಪರಿಚಯಿಸಿದ್ದು, ಆರ್‌ಇ ಕೂಡಾ ಇದೇ ನಿಟ್ಟಿನಲ್ಲಿ ತನ್ನ ಬಹುನೀರಿಕ್ಷಿತ ಕಾಂಟಿನೆಂಟಲ್ ಜಿಟಿ ಮತ್ತು ಇಂಟರ್‌ಸೆಪ್ಟರ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.

MOST READ: ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಆದರೆ, ಹೊಸ ಬೈಕ್ ಮಾರಾಟಕ್ಕಾಗಿ ಮಾರಾಟ ಮಳಿಗೆಗಳ ಕೊರತೆ ಎದುರಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮೆಟ್ರೋ ನಗರಗಳನ್ನು ಹೊರತುಪಡಿಸಿ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲೂ ಸಣ್ಣಗಾತ್ರದ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿದೆ.

ಡೆಡ್‌ಲೈನ್‌ಗೂ ಮುನ್ನ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ಇದಕ್ಕಾಗಿಯೇ ಬಿಎಸ್-6 ನಿಯಮ ಅನುಸಾರ ಹೊಸ ಬೈಕ್ ಉತ್ಪಾದನೆ ಮತ್ತು ಬೈಕ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುವ ಹೊಸ ಯೋಜನೆಗಳಿಗಾಗಿ ಬರೋಬ್ಬರಿ ರೂ.700 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಮುಂದಿನ ಹಣಕಾಸು ವರ್ಷದ ಅವಧಿಯಲ್ಲಿ ಬರೋಬ್ಬರಿ 10 ಲಕ್ಷ ಬೈಕ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಗುರಿಹೊಂದಲಾಗಿದೆ.

Most Read Articles

Kannada
English summary
Royal Enfield’s 350cc Line Up To Get BS6 Compliant Engines Before 1 April. Read in Kannada.
Story first published: Wednesday, December 4, 2019, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X