ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಭಾರತದಲ್ಲಿ ಸೂಪರ್‍‍ಬೈಕ್‍‍ಗಳನ್ನು ಇಷ್ಟ ಪಟ್ಟು ಅವುಗಳಲ್ಲಿ ಓಡಾಡುವ ಯುವ ಸಮೂಹವಿದೆ. ಹೀಗೆ ಓಡಾಡುವ ಕೆಲವರಿಗೆ ಅವರ ತಂದೆ ಬೆಂಬಲವಿರುತ್ತದೆ. ನಮ್ಮ ಬೆಂಬಲಕ್ಕೆ ನಿಲ್ಲುವ ತಂದೆಗೆ ನಾವೂ ಸಹ ಬೆಂಬಲ ನೀಡಬೇಕು.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ತನಗೆ ಸೂಪರ್ ಬೈಕ್ ಚಲಾಯಿಸಲು ಬೆಂಬಲವಾಗಿದ್ದ ತಂದೆಗೆ ಮಗನೊಬ್ಬ ಸೂಪರ್ ಬೈಕ್ ಗಿಫ್ಟ್ ಆಗಿ ನೀಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ತಂದೆಗೆ ಮಗ ಸೂಪರ್ ಬೈಕ್ ಅನ್ನು ಗಿಫ್ಟ್ ನೀಡುತ್ತಿರುವ ದೃಶ್ಯವನ್ನು ಅಶ್ವಿನ್ ಸಿಂಗ್ ಟಕಿಯಾರ್‍‍ರವರ ಯೂಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಲಾಗಿದೆ.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಮಗ ತನ್ನ ತಂದೆಗೆ ಸುಜುಕಿ ಕಂಪನಿಯ ಇಂಟ್ರೂಡರ್ ಎಂ 1800 ಆರ್ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಸುಜುಕಿ ಕಂಪನಿಯು ಭಾರತದಲ್ಲಿ ಈ ಬೈಕ್ ಅನ್ನು ಸ್ಥಗಿತಗೊಳಿಸಿದೆ. ಆ ಕಾರಣಕ್ಕೆ ಸೆಕೆಂಡ್ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಸುಜುಕಿ ಕಂಪನಿಯು ಕಡೆಯ ಬಾರಿಗೆ ಇಂಟ್ರೂಡರ್ ಬೈಕ್ ಅನ್ನು ಭಾರತದಲ್ಲಿ ಮಾರಾಟ ಮಾಡಿದಾಗ ಆ ಬೈಕಿನ ಆನ್ ರೋಡ್ ದರವು ರೂ.18 ಲಕ್ಷಗಳಾಗಿತ್ತು. ಈ ವೀಡಿಯೊದಲ್ಲಿ ಸೆಕೆಂಡ್ ಹ್ಯಾಂಡ್ ಬೈಕಿನ ಬೆಲೆಯ ಬಗ್ಗೆ ಹೇಳಲಾಗಿಲ್ಲ.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಮಗ ಬೈಕ್ ಶೋರೂಂಗೆ ಹೋಗಿ ಬೈಕ್ ಖರೀದಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಬೈಕ್ ಖರೀದಿಯ ವಿವರಗಳು ಈ ವೀಡಿಯೊದಿಂದ ಗೊತ್ತಾಗದಿದ್ದರೂ ಈ ಸೂಪರ್ ಬೈಕಿನ ಬೆಲೆಯು ಅದರ ಕಂಡಿಷನ್ ಆಧಾರದ ಮೇಲೆ ರೂ.10 ಲಕ್ಷಗಳಾಗಬಹುದು.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಮಗ ಚಲಾಯಿಸುವ ಬೈಕ್ ಸುಸ್ಥಿತಿಯಲ್ಲಿರುವುದನ್ನು ಕಾಣಬಹುದು. ಬೆಡ್‍‍ಶೀಟ್‍‍ನಿಂದ ಮುಚ್ಚಿರುವ ಬೈಕ್ ಅನ್ನು ನೋಡಲು ತಂದೆಯನ್ನು ಕರೆಯುತ್ತಾರೆ. ತಂದೆ ಬಂದು ಬೆಡ್‍‍ಶೀಟ್ ತೆರೆದು ಬೈಕ್ ಅನ್ನು ಕಂಡು ಅದು ಇಂಟ್ರೂಡರ್ ಬೈಕ್ ಎಂದು ತಿಳಿದಾಗ ಖುಷಿ ಪಡುತ್ತಾರೆ.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ನಂತರ ಅದನ್ನು ತನ್ನ ಮನೆಯ ಸುತ್ತ ಟೆಸ್ಟ್ ರೈಡಿಗೆ ಕೊಂಡೊಯುತ್ತಾರೆ. ದೇಶಿಯ ಮಾರುಕಟ್ಟೆಯಲ್ಲಿರುವ ಸುಜುಕಿ ಇಂಟ್ರೂಡರ್ 155 ಬೈಕ್ ಅನ್ನು ಇಂಟ್ರೂಡರ್ ಎಂ 1800 ಆರ್ ಬೈಕಿನ ಪ್ರೇರಣೆಯಿಂದ ತಯಾರಿಸಲಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಇಂಟ್ರೂಡರ್ ಎಂ 1800 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬೈಕ್ ಪ್ರಿಯರ ನೆಚ್ಚಿನ ಬೈಕ್ ಆಗಿತ್ತು. ಈ ಬೈಕ್ ಮಾರಾಟವಾಗುತ್ತಿದ್ದ ಸಮಯದಲ್ಲಿ ಹಾರ್ಲೆ ಡೇವಿಡ್ಸನ್ ಹಾಗೂ ಇಂಡಿಯನ್ ಮೋಟಾರ್‍‍ಸೈಕಲ್ಸ್ ಬೈಕುಗಳಿಗೆ ಪೈಪೋಟಿ ನೀಡುತ್ತಿತ್ತು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಈ ಬೈಕಿನಲ್ಲಿ 1,783 ಸಿಸಿಯ ವಿ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 127 ಬಿ‍‍ಹೆಚ್‍‍ಪಿ ಪವರ್ ಹಾಗೂ 160 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ವಿ-ಟ್ವಿನ್ ಎಂಜಿನ್ ಹೊಂದಿರುವುದರಿಂದ, ಕಡಿಮೆ ಪ್ರಮಾಣದ ಟಾರ್ಕ್ ಅನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಹೊಸದಾಗಿ ಈ ಬೈಕ್ ಅನ್ನು ಚಲಾಯಿಸುವವರಿಗೆ ಇದು ಭಾರೀ ಪ್ರಮಾಣವಾಗಿದೆ. ಟ್ರಾನ್ಸ್ ಮಿಷನ್ ಮುರಿದು ಹೋಗದಂತೆ ಇಂಟ್ರೂಡರ್ ಬೈಕಿನ ಎಂಜಿನ್ ಅನ್ನು ಎಲೆಕ್ಟ್ರಾನಿಕ್ ಆಗಿ ನಿರ್ಬಂಧಿಸಲಾಗಿದೆ. ಎಂ1800 ಆರ್ ಬೈಕ್ ಭಾರೀ ಗಾತ್ರವನ್ನು ಹೊಂದಿದೆ.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ಹಿಂಭಾಗದಲ್ಲಿ 240 ಎಂಎಂ ಕ್ರಾಸ್ ಸೆಕ್ಷನ್ ಟಯರ್‍‍ಗಳನ್ನು ಹೊಂದಿದೆ. ಈ ಟಯರ್‍‍ಗಳು ಭಾರತದಲ್ಲಿ ಮಾರಾಟವಾಗುವ ಯಾವುದೇ ಬೈಕಿನ ದೊಡ್ಡ ಗಾತ್ರದ ಟಯರ್‍‍ಗಳಾಗಿವೆ. ಬೇರೆ ಯಾವುದೇ ಬೈಕಿನಲ್ಲಿ ಇಷ್ಟು ದೊಡ್ಡ ಗಾತ್ರದ ಟಯರ್‍‍ಗಳನ್ನು ಅಳವಡಿಸುವುದಿಲ್ಲ.

ವೀಡಿಯೊದಲ್ಲಿ ಕಾಣುತ್ತಿರುವ ಇಂಟ್ರೂಡರ್ ಎಂ 1800 ಬೈಕ್ ಮ್ಯಾಟ್ ಗ್ರೇ ಬಣ್ಣವನ್ನು ಹೊಂದಿದೆ. ಭಾರತದಲ್ಲಿ ಮಾರಾಟವಾಗುತ್ತಿದ್ದ ಸಮಯದಲ್ಲಿ ಈ ಬಣ್ಣದಲ್ಲಿ ಬೈಕುಗಳನ್ನು ಮಾರಾಟ ಮಾಡುತ್ತಿರಲಿಲ್ಲ. ಆದ ಕಾರಣ ಈ ಬೈಕಿನ ಬಣ್ಣವನ್ನು ಬದಲಿಸಿರುವ ಸಾಧ್ಯತೆಗಳಿವೆ.

ತಂದೆಗೆ ದುಬಾರಿ ಬೆಲೆಯ ಸೂಪರ್‍‍ಬೈಕ್ ಗಿಫ್ಟ್ ನೀಡಿದ ಮಗ

ತಂದೆ ತನ್ನ ಮಗ ತನಗೆ ನೀಡಿರುವ ಈ ಗಿಫ್ಟ್ ಅನ್ನು ನೋಡಿ ಖುಷಿಯಾಗಿದ್ದಾರೆ. ಈ ವೀಡಿಯೊದಲ್ಲಿರುವ ಪ್ರಕಾರ ಎಂ 1800 ಆರ್ ತಂದೆಯ ನೆಚ್ಚಿನ ಬೈಕ್ ಆಗಿದ್ದ ಕಾರಣ ಮಗ ಈ ಗಿಫ್ಟ್ ಅನ್ನು ತನ್ನ ತಂದೆಗೆ ನೀಡಿದ್ದಾರೆ.

Image Courtesy: ASHWIN SINGH TAKIAR/YouTube

Most Read Articles

Kannada
English summary
Son gifts dad Suzuki Intruder superbike - Read in Kannada
Story first published: Wednesday, December 4, 2019, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X