ದಿನವಿಡಿ ಸೇವೆ ನೀಡಲಿದೆ ಪಂಕ್ಚರ್ ಡಾಕ್ಟರ್

ಸ್ಟೀಲ್‍‍ಬರ್ಡ್ ಟಯರ್ಸ್ ಇತ್ತೀಚಿಗೆ ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಯೋಜನೆ ಘೋಷಿಸಿದ್ದು, ಯೋಜನೆಗೆ ಪಂಕ್ಚರ್ ಡಾಕ್ಟರ್ ಎಂದು ಹೆಸರಿಡಲಾಗಿದೆ. ಸ್ಟೀಲ್‍‍ಬರ್ಡ್ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಿದ್ದು, ಇದರ ಮೂಲ ಉದ್ದೇಶ ಫ್ಲಾಟ್ ಟಯರ್‍‍ಗಳ ರಿಪೇರಿ ಮಾಡುವುದಾಗಿದೆ.

ಫೈನಾನ್ಶಿಯಲ್ ಎಕ್ಸ್ ಪ್ರೆಸ್ ವರದಿಗಳ ಪ್ರಕಾರ, ಈ ಯೋಜನೆಯನ್ನು ಕಳೆದ ಡಿಸೆಂಬರ್‍‍ನಲ್ಲಿ, ಮೊದಲಿಗೆ ಕೇರಳ ಹಾಗೂ ಈಶಾನ್ಯ ಭಾರತದಲ್ಲಿ ಆರಂಭಿಸಲಾಗಿತ್ತು. ಈಗ ಈ ಯೋಜನೆಯು ದೇಶಾದ್ಯಂತ ಗ್ರಾಹಕರಿಗೆ ಲಭ್ಯವಾಗಲಿದೆ. ಸ್ಟೀಲ್‍‍ಬರ್ಡ್‍ನ ಪ್ರಕಾರ, ಈ ಸೇವೆಯು ದಿನದ 24 ಗಂಟೆಗಳ ಕಾಲವೂ ಲಭ್ಯವಿರಲಿದ್ದು, ಗ್ರಾಹಕರು ಟೋಲ್ ಫ್ರೀ ನಂಬರಿಗೆ ಕರೆ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ.

ಸ್ಟೀಲ್‍‍ಬರ್ಡ್ ಇಂಟರ್‍‍ನ್ಯಾಷನಲ್‍‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಾನವ್ ಕಪೂರ್ ರವರು ಮಾತನಾಡಿ, ಈ ಸೇವೆಯನ್ನು ದ್ವಿಚಕ್ರ ವಾಹನ ಚಾಲಕರು ಫ್ಲಾಟ್ ಟಯರ್‍‍ನಿಂದಾಗಿ ಅನುಭವಿಸುವ ತೊಂದರೆಯನ್ನು ನಿವಾರಿಸುವ ಸಲುವಾಗಿ ಶುರುಮಾಡಲಾಗಿದೆ.

ದಿನವಿಡಿ ಸೇವೆ ನೀಡಲಿದೆ ಪಂಕ್ಚರ್ ಡಾಕ್ಟರ್

ಯಾರಾದರೂ ಸಹಾಯಕ್ಕೆ ಬರಬಹುದು ಎಂದು ಕಾದು ಟೈಮ್ ವೇಸ್ಟ್ ಮಾಡುವ ಬದಲು, ಗ್ರಾಹಕರು ತಾವಿರುವ ಸ್ಥಳದಿಂದ ನಮ್ಮ ಟೋಲ್ ಫ್ರೀ ನಂಬರಿಗೆ ಡಯಲ್ ಮಾಡಿ ನಮ್ಮ ಸೇವೆಯನ್ನು ಪಡೆಯಬಹುದು. ಇದರಲ್ಲಿ ಗ್ರಾಹಕರ ವೈಯಕ್ತಿಕ ಸುರಕ್ಷತೆಯೂ ಅಡಗಿದೆ ಎಂದು ತಿಳಿಸಿದರು.

ಸ್ಟೀಲ್‍‍ಬರ್ಡ್ ಕಂಪನಿಯು ಸ್ಥಳೀಯವಾಗಿ ಅನೇಕ ಟಯರ್ ರಿಪೇರಿ ಅಂಗಡಿಗಳ ಜೊತೆ ಸಹಭಾಗಿತ್ವ ಮಾಡಿಕೊಂಡಿದೆ. ಇದರಲ್ಲಿ ಅವರೊಂದಿಗೆ ಆದಾಯವನ್ನು ಸಮಾನವಾಗಿ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ. ಬಿಡಿಭಾಗಗಳನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದರ ಮೇಲೆ ಇಬ್ಬರ ನಡುವೆ ಆದಾಯವನ್ನು ನಿರ್ಧರಿಸಲಾಗುವುದು. ಈ ಯೋಜನೆಯ ಮೂಲಕ ಕಂಪನಿಯು ಸ್ಥಳೀಯ ಪಂಚರ್ ಅಂಗಡಿಗಳ ಮಾಲೀಕರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲಿದೆ. 2ನೇ ಹಾಗೂ 3ನೇ ಹಂತದ ನಗರಗಳಲ್ಲಿನ ಟಯರ್ ಅಂಗಡಿಗಳ ಮಾಲೀಕರು ಈ ಸೇವೆಯನ್ನು ನೀಡುತ್ತಾ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

ಕಪೂರ್‍‍ರವರು ಮಾತನಾಡಿ, ಸ್ಟೀಲ್‍‍ಬರ್ಡ್ ಟಯರ್ಸ್‍‍ನ ಫಿಲಾಸಫಿಯು ಹೆಚ್ಚು ಜನರನ್ನು ತಲುಪುವುದಾಗಿದೆ, ನಮ್ಮ ಅಭಿಪ್ರಾಯವು "ಸೋರ್ ಲೈಕ್ ಎ ಬರ್ಡ್" ಎಂಬುದಾಗಿದೆ. ಯಾವುದೇ ತೊಂದರೆಗಳಿಲ್ಲದೇ, ಅಡ್ಡಿಗಳಿಲ್ಲದೇ, ಯಾವುದೇ ಚಿಂತೆಗಳಿಲ್ಲದೇ ಹಕ್ಕಿಯಂತೆ ಚಲಿಸಿ, ದ್ವಿಚಕ್ರ ವಾಹನ ಸವಾರರು ತಮ್ಮ ಚಾಲನೆಯಲ್ಲಿ ಹೊಸತನವನ್ನು ಪಡೆಯಲಿದ್ದಾರೆ. ತಮ್ಮ ಹಾದಿಯಲ್ಲಿನ ಫ್ಲಾಟ್ ಟಯರ್‍‍ಗಳ ತೊಂದರೆಗೆ ಪಂಚರ್ ಡಾಕ್ಟರ್ ಚಿಕಿತ್ಸೆ ನೀಡಲಿದೆ. ಆದ್ದರಿಂದ ಹಕ್ಕಿಗಳಂತೆ ಹಾರಿರಿ, ಸ್ಟೀಲ್‍‍ಬರ್ಡ್ ನಿಮ್ಮ ಹಿಂದಿರಲಿದೆ ಎಂದು ತಿಳಿಸಿದರು.

ಸ್ಟೀಲ್‍‍ಬರ್ಡ್ ಕಂಪನಿಯ ಪ್ರಕಾರ ಕಂಪನಿಯು ಉತ್ತರ ಭಾರತದ ಹಲವು ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿ ಎನ್‍‍ಸಿ‍ಆರ್ ಗಳಲ್ಲಿ ಈ ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಇದೇ ವೇಳೆ ಸ್ಟೀಲ್‍‍ಬರ್ಡ್ ಕಂಪನಿಯು - ರಿವಾಲ್ವ್, ಆರ್ಬಿಟ್, ಇನ್ಫಿನಿಟಿ, ರೇಂಜರ್, ಫೆರ್ರೊ ಮತ್ತು ವೊಯಜರ್ - ಎಂಬ ಹೊಸ ಸರಣಿಯ ಟಯರ್‍‍ಗಳನ್ನು ಕೇರಳದಲ್ಲಿ ಬಿಡುಗಡೆಗೊಳಿಸಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ
ಈ ಮೊದಲು ಯಾವುದೇ ಕಂಪನಿಯು ನೀಡದ ಯೋಜನೆಯನ್ನು ಸ್ಟೀಲ್‍‍ಬರ್ಡ್ ಕಂಪನಿ ನೀಡುತ್ತಿದೆ. ಇದೊಂದು ಅದ್ಭುತವಾದ ಯೋಜನೆಯಾಗಿದೆ. ಫ್ಲಾಟ್ ಟಯರ್‍‍ಗಳು ಚಾಲಕರನ್ನು ಕಾಡುವ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಸಮಯ ವ್ಯರ್ಥವಾಗುವುದಲ್ಲದೇ, ಚಿಂತೆಗೀಡಾಗ ಬೇಕಾಗುತ್ತದೆ. ಈ ರೀತಿಯ ರೋಡ್ ಸೈಡ್ ಅಸಿಸ್ಟ್ ಗಳು ಗ್ರಾಹಕರನ್ನು ಹೆಚ್ಚು ತಲುಪಲಿವೆ. ಈ ನಿಟ್ಟಿನಲ್ಲಿ ಸ್ಟೀಲ್‍‍ಬರ್ಡ್ ಕಂಪನಿಯ ಈ ಯೋಜನೆಯು ನಿಜಕ್ಕೂ ಶ್ಲಾಘನೀಯ.

Most Read Articles

Kannada
English summary
Steelbird Tyres Launches Puncture RSA Across India – Fix Your Flat With Ease - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X