ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಸುಜುಕಿ ಮೊಟಾರ್‍‍ಸೈಕಲ್ಸ್ ಸಂಸ್ಥೆಯು 2018ರ ಜುಲೈ ತಿಂಗಳಿನಲ್ಲಿ ತಮ್ಮ ಹೊಸ ಬರ್ಗ್‍ಮನ್ ಸ್ಟ್ರೀಟ್ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗೇ ಮಾಡಿತ್ತು. ಬಿಡುಗಡೆಗೊಂದ ಸುಮಾರು ಒಂದು ವರ್ಷವಾರದರೂ ಯಾವುದೇ ಬದಲಾವಣೆಗಳನ್ನು ಈ ಸ್ಕೂಟರ್‍‍ನಲ್ಲಿ ಮಾಡಲಿಲ್ಲವಾದರೂ, ಸರಾಸರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಆದರೆ ಸುಜುಕಿ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಇದೇ ಮೊದಲನೆಯ ಬಾರಿಗೆ ತಮ್ಮ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍‍ಗೆ ಹೊಸ ಬಣ್ಣ ನೀಡುವ ಯೋಜನೆಯಲಿದ್ದು, ಮೇಟ್ ಬ್ಲಾಕ್ ಬಣ್ಣದಲ್ಲಿ ಇದೀಗ ಕಾಣಿಸಿಕೊಂಡಿದೆ. ಈಗಾಗಲೇ ಮೆಟಾಲಿಕ್ ಮೇಟ್ ಫೈಬ್ರಿಯಾನ್ ಗ್ರೇ, ಗ್ಲಾಸ್ ಸ್ಪಾರ್ಕಲ್ ಮತ್ತು ಪರ್ಲ್ ಮಿರಾಜ್ ವೈಟ್ ಎಂಬ ಮೂರು ಬಣ್ಣಗಳಲ್ಲಿ ದೊರೆಯುತ್ತಿದ್ದು. ಎಕ್ಸ್ ಶೋರುಂ ಪ್ರಕಾರ ರೂ. 70,878 ಸಾವಿರದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಸ್ಕೂಟರ್ ಮುಂಭಾದ ವಿನ್ಯಾಸವು ಭಾರತದಲ್ಲಿ ಮಾರಾಟವಾಗುತ್ತಿರುವ ಸುಜುಕಿ ನಿರ್ಮಾಣದ ಇತರೆ ಸ್ಕೂಟರ್‌ಗಳಿಂತಲೂ ವಿಭಿನ್ನವಾಗಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು, ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಬರ್ಗ್‍ಮನ್ ಮ್ಯಾಕ್ಸಿ ಸ್ಕೂಟರ್ ಸರಣಿಯೆಂತೆಯೇ ಹಲವು ಡಿಸೈನ್‌ಗಳನ್ನು ಪಡೆದುಕೊಂಡಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಸುಜುಕಿ ಸಂಸ್ಥೆಯು ಭಾರತವನ್ನು ಹೊರತುಪಡಿಸಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳಲ್ಲೇ 150ಸಿಸಿ, 200ಸಿಸಿ, 350ಸಿಸಿ, 500ಸಿಸಿ ಸಾಮರ್ಥ್ಯದ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಕೆಲ ದಿನಗಳ ಹಿಂದಷ್ಟೆ ಭಾರತದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 125 ಸಿಸಿ ಸಾಮರ್ಥ್ಯ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಪರಿಚಯಿಸಿತ್ತು.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಪ್ರಿಮಿಯಂ ಸ್ಕೂಟರ್ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು ಸ್ಟೈಲಿಷ್ ಎಲ್‌ಇಡಿ ಟೈಲ್ ಲೈಟ್, ಏರಿಳಿತವಾದ ಸೀಟುಗಳ ಡಿಸೈನ್, ಡಿಜಿಟಲ್ ಇನ್‌ಸ್ಟ್ರೂಮೆಂಟಲ್ ಕ್ಲಸ್ಟರ್, ಆರ್ಪಾನ್ ಮೌಟೆಂಡ್ ಎಲ್ಇಡಿ ಹೆಡ್‌ಲ್ಯಾಂಪ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಇದರಲ್ಲಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಜೊತೆಗೆ 21.5-ಲೀಟರ್‌ನಷ್ಟು ಸೀಟ್ ಅಂಡರ್ ಸ್ಟೋರೇಜ್ ಸ್ಪೆಸ್ ಹೊಂದಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು, 108 ಕೆ.ಜಿ ತೂಕದೊಂದಿಗೆ 5.6-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಎಂಜಿನ್ ಸಾಮರ್ಥ್ಯ

124.3ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಮಾದರಿಗಳು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ 8.5-ಬಿಎಚ್‌ಪಿ ಮತ್ತು 10.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸುಜುಕಿ ನಿರ್ಮಾಣದ ಆಕ್ಸೆಸ್ 125 ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಎಂಜಿನ್ ಮಾದರಿಯನ್ನೇ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ನಲ್ಲಿ ಬಳಕೆ ಮಾಡಲಾಗಿದೆ.

ಸುರಕ್ಷಾ ಸೌಲಭ್ಯಗಳು

ಸಿಬಿಎಸ್(ಕೊಂಬಿ ಬ್ರೇಕ್ ಸಿಸ್ಟಂ) ಸೌಲಭ್ಯ ಪಡೆದಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಮುಂಭಾಗದ ಚಕ್ರದಲ್ಲಿ ನಿಸ್ಸಿನ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದ್ದರೇ ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಹೊಂದಿರಲಿವೆ. ಇನ್ನು ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳಲ್ಲಿ 5-ಸ್ಪೋಕ್ 12 ಇಂಚು ಸುತ್ತಳತೆಯ ಮುಂಭಾಗದ ಚಕ್ರಗಳನ್ನು ಬಳಕೆ ಮಾಡಿದ್ದು, ಹಿಂಭಾಗದಲ್ಲಿ 10 ಇಂಚಿನ ಸುತ್ತಳತೆಯ ಚಕ್ರಗಳನ್ನು ಜೋಡಿಸಿರುವುದು ಸ್ಕೂಟರ್ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತಂದಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಪ್ರತಿಸ್ಪರ್ಧಿಗಳು

ಪ್ರಿಮಿಯಂ ಗುಣಲಕ್ಷಣಗಳನ್ನು ಹೊಂದಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು ಹಲವು ವಿಶೇಷಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆದಿದ್ದು, ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‌ಟಾರ್ಕ್ 125 ಮತ್ತು ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳಿಗೆ ತೀವ್ರ ಪೈಟೋಟಿ ನೀಡುವ ತವಕದಲ್ಲಿದೆ.

ಹೊಸ ಬಣ್ಣದಲ್ಲಿ ದೊರೆಯಲಿದೆ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್

ಇಲ್ಲಿ ಗಮನಸಬೇಕಾದ ಮತ್ತೊಂದು ಅಂಶ ಅಂದ್ರೆ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯ ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವುದಲ್ಲದೇ ಭಾರತದಿಂದಲೇ ವಿಶ್ವದ ಪ್ರಮುಖ 30 ರಾಷ್ಟ್ರಗಳಿಗೆ ಇಲ್ಲಿಂದಲೇ ಹೊಸ ಸ್ಕೂಟರ್‌ಗಳನ್ನು ರಫ್ತು ಮಾಡುವ ಬೃಹತ್ ಯೋಜನೆ ಹೊಂದಿದೆ.

Source: Motoroids

Most Read Articles

Kannada
English summary
Suzuki Burgman Street 125 Spied With Matte Black Paint Scheme. Read In Kannada
Story first published: Friday, July 12, 2019, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X