ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಸುಜುಕಿ ಕಂಪನಿಯು, ಹೊಸ 250 ಸಿಸಿ ನೇಕೆಡ್ ರೋಡ್‍‍ಸ್ಟರ್ ಬೈಕ್ ಅನ್ನು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಗೊಳಿಸುವ ಚಿಂತನೆಯಲ್ಲಿದೆ. ಈ ಬೈಕಿಗೆ ಜಿಕ್ಸರ್ 250 ಎಂಬ ಹೆಸರಿಟ್ಟು, ದೀಪಾವಳಿಯ ಹೊತ್ತಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಹೊಸ ಬೈಕ್ ಹಾಗೂ ಇತ್ತೀಚಿಗಷ್ಟೆ ಬಿಡುಗಡೆಯಾದ ಜಿಕ್ಸರ್ ಎಸ್‍ಎಫ್ 250 ಬೈಕ್ ನಡುವೆ ಅನೇಕ ಸಾಮ್ಯತೆಗಳಿವೆ.

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಇಂಡಿಯನ್‍ಆಟೋಸ್‍‍ಬ್ಲಾಗ್ ವರದಿಗಳ ಪ್ರಕಾರ, ದೀಪಾವಳಿ ವೇಳೆಗೆ ಬಿಡುಗಡೆಯಾಗಲಿರುವ ನೇಕೆಡ್ ರೋಡ್‍‍ಸ್ಟರ್ 250 ಬೈಕಿನಲ್ಲಿ ಎಲ್‍ಇ‍‍ಡಿ ಹೆಡ್‍‍ಲೈಟ್‍‍ಗಳು, ಟೇಲ್ ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್, ಸ್ಪ್ಲಿಟ್ ಸೀಟುಗಳು, ಟೂ ಪೀಸ್ ನ ಪಿಲಿಯನ್ ಗ್ರಾಬ್ ರೇಲ್ ಮತ್ತು ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್‍‍ಗಳಿರಲಿವೆ.

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಈ ಬೈಕಿನ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ, ಸಿಂಗಲ್ ಪೀಸಿನ ಹ್ಯಾಂಡಲ್‍‍ಬಾರ್ ಅಳವಡಿಸಿ, ಚಾಲನಾ ಭಂಗಿಯು ನೇರವಾಗಿರುವಂತೆ ಮಾಡಲಾಗುವುದು. ಹೊಸ ಬೈಕಿನಲ್ಲಿರುವ ಎಂಜಿನ್, ಜಿಕ್ಸರ್ ಎಸ್‍ಎಫ್ 250 ಬೈಕಿನಲ್ಲಿರುವ ಇಂಜಿನ್‍‍ನಂತೆಯೇ ಇದೆ.

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಈ ಎಂಜಿನ್ 249 ಸಿಸಿಯ ಸಿಂಗಲ್ ಸಿಲಿಂಡರ್, 4 ವಾಲ್ವ್, ಎಸ್‍ಒ‍‍‍ಹೆಚ್‍‍ಸಿ, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಆಗಿದ್ದು, ಸುಜುಕಿಯ ಆಯಿಲ್ ಕೂಲಿಂಗ್ ಸಿಸ್ಟಂ ಹೊಂದಿದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಸುಜುಕಿ ಕಂಪನಿಯು ಈ ಮೋಟಾರ್‍‍ಸೈಕಲ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಿದ್ದು, ಈ ಬೈಕ್ ಬಿ‍ಎಸ್6 ಆಧಾರಿತ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜಿಕ್ಸರ್ 250 ಎಸ್ಎಫ್ ಬೈಕನ್ನು, ಬಿ‍ಎಸ್4 ಎಂಜಿನ್ ಅಳವಡಿಸಿ ಬಿಡುಗಡೆಗೊಳಿಸಲಾಗಿತ್ತು, ನಂತರ ಇದನ್ನು ಬಿ‍ಎಸ್ 6 ಗೆ ಅಪ್ಗ್ರೇಡ್ ಮಾಡುವ ಯೋಜನೆಗಳಿದ್ದವು. ಈಗಿರುವ ಜಿಕ್ಸರ್ ಎಸ್‍ಎಫ್ 250 ಬೈಕ್ 26.5 ಬಿಹೆಚ್‍‍ಪಿಯನ್ನು 9000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಿದರೆ, 22.6 ಎನ್‍ಎಂ ಟಾರ್ಕ್ ಅನ್ನು 7500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಿ, ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದೆ. ಮುಂದೆ ಬಿಡುಗಡೆಯಾಗಲಿರುವ ಸುಜುಕಿ 250 ಸಿಸಿ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳನ್ನು ಅಳವಡಿಸಲಾಗಿದೆ. ಎಸ್‍ಎಫ್ 250 ಬೈಕಿನಲ್ಲಿರುವಂತಹ ವ್ಹೀಲ್‍‍ಗಳನ್ನೆ ಹೊಸ ಬೈಕಿನಲ್ಲೂ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ 110/70ಆರ್-17 ಎಂ/ಸಿ ಹಾಗೂ ಹಿಂಭಾಗದಲ್ಲಿ 150/60 ಆರ್ - 17 ಎಂ/ಸಿ ರೇಡಿಯಲ್ ಟ್ಯೂಬ್‍‍ಲೆಸ್ ಟಯರ್‍‍ಗಳಿವೆ.

MOST READ: ಟಿ‍ಎಸ್‍ಐ ಎಂಜಿನ್ ಹೊಂದಲಿದೆ ಸ್ಕೋಡಾ ರ್‍ಯಾಪಿಡ್

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ನೇಕೆಡ್ ರೋಡ್‍‍ಸ್ಟರ್ ಜಿಕ್ಸರ್ ಬೈಕ್, ಜಿಕ್ಸರ್ ಎಸ್‍ಎಫ್ 250 ಬೈಕಿಗಿಂತ ಕಡಿಮೆ ತೂಕ ಹೊಂದಿರಲಿದ್ದು, ಇದರ ತೂಕವು ಸುಮಾರು 158 ಕೆ.ಜಿ ಗಳಾಗಿರಲಿದೆ. ಈ ಬೈಕಿನ ಬೆಲೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಾಗಿಲ್ಲ, ಆದರೆ ಹೊಸ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಲ್ಲಿರುವಂತೆ ರೂ.1.65 ಲಕ್ಷಗಳಾಗಬಹುದು.

ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಜಿಕ್ಸರ್ 250 ಎಸ್‍ಎಫ್ ಬೈಕಿನ ಬಿಡುಗಡೆಯ ನಂತರ ಸ್ಪೋರ್ಟ್ ಮಾದರಿಯ ಬೈಕಿನ ಬಿಡುಗಡೆಯನ್ನು ನಿರೀಕ್ಷಿಸಲಾಗುತ್ತಿತ್ತು. ಅದೇ ರೀತಿಯಲ್ಲಿ ಕಾಣುತ್ತಿರುವ ಬೈಕ್ ಅದೇ ಎಂಜಿನ್ ಹೊಂದಿ ವಿಭಿನ್ನವಾದ ವಿನ್ಯಾಸದೊಂದಿಗೆ ರಸ್ತೆಗಿಳಿಯಲಿದೆ. ನೇರವಾದ ಚಾಲನಾ ಭಂಗಿಯನ್ನು ಬಯಸುವವರಿಗೆ ಈ ಬೈಕ್ ಇಷ್ಟವಾಗಲಿದೆ.

Most Read Articles

Kannada
English summary
Suzuki Confirms Gixxer 250 Naked Roadster Launch — Coming Diwali 2019 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X