ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಸುಜುಕಿ ಸಂಸ್ಥೆಯು ಈಗಾಗಲೇ ಪರ್ಫಾಮೆನ್ಸ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಇದೀಗ ಎಂಟ್ರಿ ಲೆವಲ್ ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ತನ್ನದೇ ಜನಪ್ರಿಯ ಅಡ್ವೆಂಚರ್ ಆವೃತ್ತಿಯಾದ ವಿ-ಸ್ಟ್ರೋಮ್ 650 ಎಕ್ಸ್‌ಟಿ ಪ್ರೇರಣೆಯೊಂದಿಗೆ ಹೊಸ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್ ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ರಾಯಲ್ ಎನ್‌ಫೀಲ್ಡ್ ಹಿಮಾಯಲನ್ ಮತ್ತು ಹೀರೋ ಎಕ್ಸ್‌ಪಲ್ಸ್ 200 ಬೈಕ್‌ಗಳು ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿವೆ. ಇದರ ಹೊರತಾಗಿ ಖರೀದಿಗೆ ಲಭ್ಯವಿರುವ ಬಹುತೇಕ ಅಡ್ವೆಂಚರ್ ಬೈಕ್‌ಗಳು ರೂ.5 ಲಕ್ಷಕ್ಕಿಂತಲೂ ಹೆಚ್ಚುವರಿ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಈ ನಡುವಿನ ಅಂತರವನ್ನು ತುಂಬಲು ಮುಂದಾಗಿರುವ ಸುಜುಕಿ ಸಂಸ್ಥೆಯು 250 ಸಿಸಿ ಸಾಮರ್ಥ್ಯದ ಅಡ್ವೆಂಚರ್ ಮಾದರಿಯನ್ನು ಸಿದ್ದಪಡಿಸುತ್ತಿದೆಯೆಂತೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಸದ್ಯ ಸುಜುಕಿ ಸಂಸ್ಥೆಯು 250ಸಿಸಿ ಸಾಮರ್ಥ್ಯದ ಪ್ರೀಮಿಯಂ ಬೈಕ್‌ಗಳ ಅಭಿವೃದ್ಧಿ ಮೇಲೆ ಹೆಚ್ಚಿನ ಗಮನಹರಿಸಿದ್ದು, ಮುಂಬರುವ ದಿನಗಳಲ್ಲಿ ಜಿಕ್ಸರ್ 250 ಬೈಕ್ ಬಿಡುಗಡೆಯ ತಯಾರಿಯಲ್ಲಿದೆ. ಇದೇ ಬೈಕಿನ ಎಂಜಿನ್ ಅನ್ನು ಹೊಸ ಅಡ್ವೆಂಚರ್ ಬೈಕಿನಲ್ಲಿ ಬಳಕೆ ಮಾಡುವ ಯೋಜನೆಯಲ್ಲಿದ್ದು, ಹೊಸ ಬೈಕಿಗಾಗಿ ಪ್ರತ್ಯೇಕ ಚಾರ್ಸಿ ಸಿದ್ದಪಡಿಸಲಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಹೀಗಾಗಿ ಸುಜುಕಿ ಬಿಡುಗಡೆ ಮಾಡಲಿರುವ ಹೊಸ ಅಡ್ವೆಂಚರ್ ಮಾದರಿಯು 500 ಸಿಸಿ ಸಾಮರ್ಥ್ಯದ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿಗಿಂತಲೂ ಕಡಿಮೆ ಎಂಜಿನ್‌ನಲ್ಲಿ ಮತ್ತು 200ಸಿಸಿ ಸಾಮಾರ್ಥ್ಯದ ಹೀರೋ ಎಕ್ಸ್‌ಪಲ್ಸ್ 200ಗಿಂತ ಉತ್ತಮ ಪರ್ಫಾಮೆನ್ಸ್ ಹೊಂದುವ ನೀರಿಕ್ಷೆಯಲ್ಲಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಈ ಮೂಲಕ ಬಿಎಂಡಬ್ಲ್ಯು ಜಿ310ಆರ್ ಮತ್ತು ಬಿಡುಗಡೆಯಾಗಲಿರುವ ಕೆಟಿಎಂ 390 ಅಡ್ವೆಂಚರ್ ಆವೃತ್ತಿಗಳಿಗೂ ಪೈಪೋಟಿ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿರುವ ಸುಜುಕಿ ಸಂಸ್ಥೆಯು ಹೊಸ ಬೈಕ್ ಮಾದರಿಯನ್ನು ರೂ.2.30 ಲಕ್ಷದಿಂದ ರೂ.2.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಲಿದೆ. ಇದರಿಂದ ಹೊಸ ಬೈಕ್ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭವಾಗುವ ನೀರಿಕ್ಷೆಗಳಿದ್ದು, ಭಾರತ ಸೇರಿ ಯುರೋಪ್ ಮಾರುಕಟ್ಟೆಗಳಿಗೂ ಇದೇ ಬೈಕ್ ಮಾದರಿಯನ್ನು ಪರಿಚಯಿಸಲಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಮಾಹಿತಿಗಳ ಪ್ರಕಾರ ಹೊಸ ಬೈಕ್ ಮಾದರಿಯ ಜಿಕ್ಸರ್ 250 ನೆಕೆಡ್ ವರ್ಷನ್ ಬಿಡುಗಡೆಯ ನಂತರವಷ್ಟೇ ಅಡ್ವೆಂಚರ್ ಆವೃತ್ತಿಯು ಬಿಡುಗಡೆಯಾಗಲಿದೆ ಎನ್ನಲಾಗಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಹೊಸ ಬೈಕ್ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆ ಕುರಿತಾಗಿ ಮತ್ತಷ್ಟು ಮಾಹಿತಿ ದೊರೆಯಲಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಇನ್ನು ಸುಜುಕಿ ಸಂಸ್ಥೆಯು ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಭಾರತದಲ್ಲಿನ ತನ್ನ ಬೈಕ್ ಸರಣಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಎಂಟ್ರಿ ಲೆವಲ್ ಸೆಗ್ಮೆಂಟ್‌ನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಜಿಕ್ಸರ್ ಎಸ್‌ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿತ್ತು.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷವೇ ಜಿಕ್ಸರ್ 150 ಸರಣಿಯನ್ನು ಪರಿಚಯಿಸಿದ್ದ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಇದೇ ಮೊದಲ ಬಾರಿಗೆ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಮಾದರಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ಜಿಕ್ಸರ್ ಎಸ್ಎಫ್ ಮಾದರಿಯು ರೂ. 1,09,870 ಮತ್ತು ಜಿಕ್ಸರ್ ಎಸ್ಎಫ್ 250 ಮಾದರಿಯು ರೂ. 1,70,655 ಬೆಲೆ ಪಡೆದುಕೊಂಡಿವೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಕಡಿಮೆ ಎಂಜಿನ್ ಸಾಮರ್ಥ್ಯದಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳಾಗಿರುವ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಬೈಕ್‌ಗಳು, ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಸ್ಪೋರ್ಟಿ ಡಿಸೈನ್ ಹೊಂದಿರುವ ಉತ್ಸಾಹಿ ಬೈಕ್ ಸವಾರರ ಗಮನಸೆಳೆಯಲಿವೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಹೊಸ ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕ್ ಮಾದರಿಯು 154.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 14.1-ಬಿಹೆಚ್‍ಪಿ ಮತ್ತು 14-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಹೊಸ ಎಂಜಿನ್ ಮಾದರಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಹಾಗೆಯೇ ಎಸ್ಎಫ್ 250 ಬೈಕ್ ಮಾದರಿಯು 249ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 26.5-ಬಿಹೆಚ್‍ಪಿ ಮತ್ತು 22.6-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿ ಹೊಂದಿದ್ದು, ಹೊಸ ಬೈಕ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಇದರಲ್ಲೇ ಇದೀಗ ಜಿಕ್ಸರ್ 250 ಬೈಕ್ ಮಾದರಿಯು ಜಿಕ್ಸರ್ ಎಸ್ಎಫ್ 250 ಬೈಕಿಗಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬರಲಿದ್ದು, ತದನಂತರವಷ್ಟೇ 250 ಸಿಸಿ ವೈಶಿಷ್ಟ್ಯತೆ ಅಡ್ವೆಂಚರ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Suzuki Developing Entry-Level Adventure Bike. Read in Kannada.
Story first published: Saturday, August 3, 2019, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X