ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಕ್ಸರ್ 155 ಬೈಕ್ ಅನ್ನು, ಇನ್ನು ಕೆಲವು ದಿನಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕ್‍‍ನ ವಿನ್ಯಾಸವನ್ನು ಜಿಕ್ಸರ್ ಎಸ್‍ಎಫ್ ಬೈಕಿನ ವಿನ್ಯಾಸದಂತೆಯೇ ಮಾಡಲಾಗುವುದು ಎಂಬ ನಿರೀಕ್ಷೆಗಳಿದ್ದವು.

ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

ಸೋರಿಕೆಯಾಗಿರುವ ಕೆಲವು ಚಿತ್ರಗಳು ಜಿಕ್ಸರ್ 155 ಬೈಕ್ ಹೇಗೆ ಕಾಣಲಿದೆ ಎಂಬುದನ್ನು ತೋರಿಸುತ್ತವೆ. ಹೊಸ ಜಿಕ್ಸರ್ 155 ಬೈಕ್ ಹಿಂದಿನ ಮಾದರಿಯ ಬೈಕಿನಂತೆಯೇ ಬಲಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಆದರೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಟ್ಯಾಂಕ್ ಮೇಲೆ ಅಗಲವಾಗಿರುವ ಗೆರೆಗಳಿದ್ದು, ಟ್ಯಾಂಕ್ ಮೇಲಿನ ಹೊದಿಕೆಗಳು ಅಗಲವಾಗಿ ತೀಕ್ಷ್ಣವಾಗಿವೆ. ಹೊಸ ಆವೃತ್ತಿಯ ಬೈಕಿನಲ್ಲಿರುವ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್‍‍ಗಳು, ಹಿಂದಿನ ಬೈಕಿನಲ್ಲಿದ್ದ ಬಲ್ಬಸ್ ಯೂನಿಟ್‍‍ಗಿಂತ ವಿಭಿನ್ನವಾಗಿವೆ.

ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

ಜಿಕ್ಸರ್ ಎಸ್‍ಎಫ್ ಬೈಕಿನಲ್ಲಿದ್ದ ಆರೇಂಜ್ ಬ್ಯಾಕ್ಲಿಟ್ ಯೂನಿಟ್‍‍ನ ಬದಲಿಗೆ ಮರುವಿನ್ಯಾಸಗೊಳಿಸಲಾದ, ಬಿಳಿ-ಬ್ಯಾಕ್ಲಿಟ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಹಿಂಭಾಗದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲಾಗಿದ್ದು, ಹೊಸ ಬಗೆಯ ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ.

ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

ಜಿಕ್ಸರ್ ಎಸ್ಎಫ್ ಬೈಕಿನಲ್ಲಿರುವಂತಹ ಸ್ಪ್ಲಿಟ್-ಸೀಟ್ ಸೆಟಪ್ ಅನ್ನು ಈ ಬೈಕಿನಲ್ಲಿಯೂ ಅಳವಡಿಸಲಾಗಿದೆ. ಸೋರಿಕೆಯಾದ ಚಿತ್ರಗಳಲ್ಲಿ ಎಕ್ಸಾಸ್ಟ್ ಡಿಸೈನ್ ಅನ್ನು ಮರೆಮಾಡಲ್ಪಟ್ಟಿದ್ದರೂ ಸಹ, ಹಿಂದಿನ ಬೈಕಿನಲ್ಲಿರುವಂತೆಯೇ ಇರಲಿದೆ. ಎಂಜಿನ್ ಸಹ ಜಿಕ್ಸರ್ ಎಸ್‍‍ಎಫ್ ಬೈಕಿನಲ್ಲಿರುವಂತೆಯೇ ಇರಲಿದೆ.

ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

155 ಸಿಸಿ, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನನ್ನು ಅಳವಡಿಸಲಾಗುವುದು. ಈ ಎಂಜಿನ್ 13.9 ಬಿಹೆಚ್‌ಪಿ ಪವರ್ ಮತ್ತು 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿರಲಿವೆ. ಸಿಂಗಲ್ ಚಾನಲ್ ಎಬಿಎಸ್ ಇರಲಿದ್ದು, ಮುಂಬದಿ, ಹಿಂಬದಿಗಳಲ್ಲಿ ಡಿಸ್ಕ್ ಬ್ರೇಕ್ ಹೊಂದಿರಲಿದೆ. 2019ರ ಹೊಸ ಜಿಕ್ಸರ್ 155 ಬೈಕಿನ ಬೆಲೆಯು ರೂ.95,000ಗಳಾಗುವ ಸಾಧ್ಯತೆಗಳಿವೆ.

MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

ಈ ಬೈಕ್ 17 ಇಂಚಿನ ಕಪ್ಪು ಅಲಾಯ್ ವ್ಹೀಲ್‍‍ಗಳನ್ನು, ಮುಂಭಾಗದಲ್ಲಿ 100/80 ಆರ್ - 17 ಹಾಗೂ ಹಿಂಭಾಗದಲ್ಲಿ 40/60 ಆರ್ - 17 ಟೈರ್‌ಗಳನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವು 12 ಲೀಟರ್ ಆಗಿದ್ದು, ಹೊಸ ಮಾದರಿಯ ಬೈಕಿನ ತೂಕವು ಸುಮಾರು 140 ಕೆಜಿ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಬಹಿರಂಗವಾದ ಸುಜುಕಿ ಜಿಕ್ಸರ್ 155 ಬೈಕಿನ ಚಿತ್ರಗಳು

ಈ ಬೈಕ್ ಯಮಹಾ ಎಫ್‍‍ಝಡ್ ಎಸ್, ಹೋಂಡಾ ಸಿಬಿ ಹಾರ್ನೆಟ್ 160 ಆರ್ ಹಾಗೂ ಟಿ‍‍ವಿ‍ಎಸ್ ಆರ್‍‍ಟಿ‍ಆರ್ 160-4ವಿ ಬೈಕುಗಳಿಗೆ ಪೈಪೋಟಿ ನೀಡಲಿದೆ.

Source: Rushlane

Most Read Articles

Kannada
Read more on ಸುಜುಕಿ suzuki
English summary
2019 Suzuki Gixxer 155 images leaked ahead of India launch - Read in kannada
Story first published: Friday, June 21, 2019, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X