ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಸುಜುಕಿ ಜಿಕ್ಸರ್ 250 ಬೈಕ್ ಅನ್ನು 20ನೇ ಮೇ 2019ರಂದು ಬಿಡುಗಡೆಗೊಳಿಸಲಾಗುವುದು. ಇತ್ತೀಚಿಗೆ ಬಿಡುಗಡೆ ಮಾಡಲಾದ ಫೋಟೊಗಳ ಪ್ರಕಾರ ಈ ಮೋಟಾರ್ ಸೈಕಲ್ ಉಳಿದ ಕ್ವಾರ್ಟರ್ ಲೀಟರ್ ಬೈಕ್ ಗಳಂತೆ ಆಕರ್ಷಕ ಸ್ಟೈಲ್ ಹೊಂದಿದೆ.

ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ರಶ್ ಲೇನ್ ವರದಿಗಳ ಪ್ರಕಾರ, ಸುಜುಕಿ ಜಿಕ್ಸರ್ 250 ಬೈಕ್ ಸ್ಟ್ರೀಟ್ ಫೈಟರ್ ಮಾದರಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಬಿಡುಗಡೆಯಾದ ಟೀಸರ್ ನಲ್ಲಿ ಮೋಟಾರ್ ಸೈಕಲ್ ಶೀಲ್ಡ್ ಶೇಪ್ ನ ಹೆಡ್ ಲೈಟ್ ಕ್ಲಸ್ಟರ್ ಹೊಂದಿದ್ದು, ಹೌಸ್ ಎಲ್ಇಡಿ ಎಲಿಮೆಂಟ್ ಗಳನ್ನು ಹೊಂದಿರುವ ಸಾಧ್ಯತೆಗಳಿವೆ. ಈ ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಡಿಸ್ ಪ್ಲೇ , ಸ್ಪ್ಲಿಟ್ ಸೀಟುಗಳು ಮತ್ತು ಫ್ಲಾಟ್ ರೇರ್ ಟಯರ್ ಮತ್ತು ಹ್ಯಾಂಡಲ್ ಬಾರ್ ಗಳ ಮೇಲೆ ಕ್ಲಿಪ್ ಗಳನ್ನು ಅಳವಡಿಸಲಾಗಿದೆ.

ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಮೋಟಾರ್ ಸೈಕಲ್ ನ ಮುಂಭಾಗದಲ್ಲಿ ಸಾಂಪ್ರಾದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್‍ಗಳನ್ನು ಅಳವಡಿಸಲಾಗಿದೆ. ಇದರ ಹೊರತಾಗಿ ಜಿಕ್ಸರ್ 250 ಬೈಕ್ ನ ಬಗ್ಗೆ ಬೇರೆ ಮಾಹಿತಿಗಳು ಲಭ್ಯವಾಗಿಲ್ಲ.

ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಎಂಜಿನ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಯುನಿಟ್ ಆಗಿದ್ದು, 6 ಸ್ಪೀಡಿನ ಟ್ರಾನ್ಸ್ ಮಿಷನ್ ಹೊಂದಿದೆ. ಈ ಎಂಜಿನ್ 26.5 ಬಿಹೆಚ್‍ಪಿ ಪವರ್ ಉತ್ಪಾದಿಸಲಿದೆ, ಸ್ಟಾಂಡರ್ಡ್ ಆಗಿ ಎಬಿಎಸ್ ಅನ್ನು ನೀಡಲಾಗುವುದು.

ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಜಿಕ್ಸರ್ 150 ಟ್ವಿನ್ ಬೈಕಿನಲ್ಲಿ ಅಳವಡಿಸಲಾಗಿದ್ದ ಚಾಸೀಸ್ ಮತ್ತು ಬೇರೆ ಕಾಂಪೋನೆಂಟ್ ಗಳನ್ನೇ ಈ ಬೈಕ್ ನಲ್ಲೂ ಅಳವಡಿಸಲಾಗಿದೆ. ಇದರಿಂದ ಬೆಲೆಯನ್ನು ಕಡಿಮೆ ಮಾಡಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ. ಬಿಡುಗಡೆಯಾದ ನಂತರ ಈ ಬೈಕ್ ಯಮಹಾ ಫೇಜರ್ 25, ಕೆಟಿಎಂ ಆರ್‍‍ಸಿ200, ಸಿಬಿಆರ್ 250ಆರ್ ಮತ್ತು ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ಮೋಟಾರ್ ಸೈಕಲ್ ಬ್ಲೂ, ಗ್ರೇ ಮತ್ತು ಸಿಲ್ವರ್ ಬಣ್ಣಗಳಲ್ಲಿ ದೊರೆಯಲಿದೆ.

ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಕಳೆದ ಬಾರಿ ಸುಜುಕಿ ಭಾರತದಲ್ಲಿ ಇನಾಜುಮ 250 ಬೈಕ್ ಅನ್ನು ಕ್ವಾರ್ಟರ್ ಲೀಟರ್ ಮೋಟಾರ್ ಸೈಕಲ್ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಿತ್ತು. ದುಬಾರಿಯಾಗಿದ್ದ ಕಾರಣ ಈ ಮೋಟಾರ್ ಸೈಕಲ್ ಹೆಚ್ಚು ಮಾರಾಟವಾಗಲು ವಿಫಲವಾಗಿತ್ತು. ಸುಜುಕಿ ಕಂಪನಿಯು ಹೊಸ ಜಿಕ್ಸರ್ 250ಯ ಬೆಲೆಯನ್ನು ರೂ.1.35 ಲಕ್ಷಗಳಲ್ಲಿ ನಿಗದಿಪಡಿಸಿದರೆ, ಈ ಮೋಟಾರ್ ಸೈಕಲ್ ಎಂಟ್ರಿ ಲೆವೆಲ್ ನಲ್ಲಿ ದೊಡ್ಡ ಮಟ್ಟದ ಪೈಪೋಟಿ ನೀಡಲಿದೆ.

MOST READ: ಹೊಸ ರೇಂಜ್ ರೋವರ್ ಜೊತೆಗೆ ಪೋಸ್ ನೀಡಿದ ಕತ್ರಿನಾ ಕೈಫ್

ಬಹಿರಂಗವಾಯಿತು ಸುಜುಕಿ ಜಿಕ್ಸರ್ 250 ಬೈಕ್ ಎಂಜಿನ್ ಮಾಹಿತಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಕಂಪನಿಯು ಕ್ವಾರ್ಟರ್ ಲೀಟರ್ ಸೆಗ್ ಮೆಂಟ್ ನಲ್ಲಿ ಬರುತ್ತಿರುವುದು ಖುಷಿಯ ವಿಚಾರ. ಇದು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸೆಗ್ ಮೆಂಟ್ ಆಗಿದೆ. ಪ್ರಸ್ತುತ ಹೊಂಡಾ ಸಿ ಬಿ ಆರ್ 250 ಆರ್ ಈ ಸೆಗ್ ಮೆಂಟಿನಲ್ಲಿ ಹೆಚ್ಚು ಜನಪ್ರಿಯವಾಗಿದೆ. ಸುಜುಕಿ ಕಂಪನಿಯ ಬೈಕುಗಳು ಈ ಸೆಗ್ ಮೆಂಟಿನಲ್ಲಿ ಜನಪ್ರಿಯವಾಗಬೇಕಾದರೆ ದರವನ್ನು ಕಡಿಮೆ ಬೆಲೆಯಲ್ಲಿ ನಿಗದಿಪಡಿಸಬೇಕಾಗಿದೆ. ಜಿಕ್ಸರ್ 250 ತನ್ನ ಲುಕ್ ನಂತೆ ಪರ್ಫಾಮೆನ್ಸ್ ನಲ್ಲೂ ಮಿಂಚಲಿ ಎಂದು ಆಶಿಸುತ್ತಾ, 20 ನೇ ಮೇ ಯಂದು ಬಿಡುಗಡೆಯಾಗುತ್ತಿರುವ ಈ ಮೋಟಾರ್ ಸೈಕಲ್ ಗೆ ಶುಭ ಹಾರಕೈಗಳು.

Most Read Articles

Kannada
Read more on ಸುಜುಕಿ suzuki
English summary
Suzuki Gixxer 250 Engine Specs Revealed — Is It Enough For A Quarter Litre? - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X