ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಬೈಕ್ ಉತ್ಪನ್ನವನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಜಿಕ್ಸರ್ ಸರಣಿಯ ಹೊಸ ಮಾದರಿಯನ್ನು ಹೊರತರುತ್ತಿದೆ.

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಹೌದು, ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಈ ಹಿಂದೆ ತಮ್ಮ ಜಿಕ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸಿ 150ಸಿಸಿ ಬೈಕ್‍ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು. ಆದ್ರೆ ತದನಂತರ ಸುಜುಕಿ ಸಂಸ್ಥೆಯು ಯಾವುದೇ ಹೆಚ್ಚು ಸಾಮರ್ಥ್ಯವುಳ್ಳ ಬೈಕ್ ಅನ್ನು ಬಿಡುಗಡೆಗೊಳಿಸಿರಲಿಲ್ಲ. ಇದೀಗ ಬಂದ ಮಾಹಿತಿಗಳ ಪ್ರಕಾರ ಜಿಕ್ಸರ್ 250 ಕೂಡಾ ಬಿಡುಗಡೆಯ ಪಟ್ಟಿಯಲ್ಲಿದೆ.

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಕೆಟಿಎಂ 250 ಡ್ಯೂಕ್‌ಗೆ ಪ್ರತಿಸ್ಪರ್ಧಿಯಾಗಿ ಜಿಕ್ಸರ್ 250 ಬೈಕ್ ಅನ್ನು ಪರಿಚಯಿಸಲು ಮುಂದಾಗಿರುವ ಸುಜುಕಿ ಸಂಸ್ಥೆಯು ಮುಂದಿನ ತಿಂಗಳು 20ರಂದು ಹೊಸ ಬೈಕ್ ಅನಾವರಣಗೊಳಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೇಕೆಡ್ ವರ್ಷನ್ ಮತ್ತು ಫೈರ್ಡ್ ವರ್ಷನ್ ಎರಡು ಮಾದರಿಯಲ್ಲೂ ಹೊಸ ಜಿಕ್ಸರ್ 250 ಖರೀದಿಗೆ ಲಭ್ಯವಾಗಲಿದೆ.

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಹೊಸ ಸುಜುಕಿ ಜಿಕ್ಸರ್ 250 ಬೈಕ್ ಜಿಎಸ್‍ಎಕ್ಸ್-ಎಸ್750 ಮತ್ತು ಜಿಎಸ್‍ಎಕ್ಸ್-ಎಸ್750 ಬೈಕ್‍‍ಗಳ ವಿನ್ಯಾಸವನ್ನು ಆಧರಿಸಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಸುಜುಕಿ ಜಿಕ್ಸರ್ 250ಬೈಕ್ 250ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 22ರಿಂದ 25ಬಿಹೆಚ್‍‍ಪಿ ಉತ್ಪಾದನಾ ಶಕ್ತಿಯನ್ನು ಪಡೆದಿದ್ದು, ಹೊಸ ಬೈಕ್ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಬಹುದಾಗಿದೆ ಎನ್ನಲಾಗಿದೆ. ಮತ್ತು ಈ ಬೈಕ್ ಸುಜುಕಿ ಸಂಸ್ಥೆಯ ಎಂಟ್ರಿ ಲೆವೆಲ್ ಟೂರಿಂಗ್ ಮೋಟಾರ್‍‍ಸೈಕಲ್ ಕೂಡಾ ಆಗಿರಬಹುದು ಎನ್ನಲಾಗಿದೆ.

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಜಿಕ್ಸರ್ 150 ಯಂತೆಯೇ ಅದೇ ಚೌಕಟ್ಟಿನಲ್ಲಿ ಸುಜುಕಿ ಜಿಕ್ಸರ್ 250 ಅನ್ನು ಪುನರ್‍‍ನಿರ್ಮಾಣ ಮಾಡಬಹುದಾಗಿದೆ. ಆದರೆ ದೊಡ್ಡ 250 ಸಿಸಿ ಎಂಜಿನ್‍‍ಗೆ ಸರಿಹೊಂದಿಸಲು ಸುಜುಕಿ ಫ್ರೇಮ್ ಅನ್ನು ಬಲಪಡಿಸಬೇಕಾಗುತ್ತದೆ. ಮೋಟಾರ್‍‍‍ಸೈಕಲ್ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಸಸ್ಪೆಷನ್ ಹೊಂದಿರಲಿದೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಹಾಗೆಯೇ ಸುಜುಕಿ ಜಿಕ್ಸರ್ 250 ಬೈಕ್‍‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ , ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿರಬಹುದಾಗಿದೆ. ಆದರೆ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಗೆ ಇದನ್ನು ಮಾರಾಟಮಾಡಬೇಕಾದರೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಬೇಕಾಗುತ್ತದೆ.

ಕೆಟಿಎಂ 250 ಡ್ಯೂಕ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಜಿಕ್ಸರ್ 250

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯ ಜಿಕ್ಸರ್ 150 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪದೆದಿದ್ದು, ಸಂಸ್ಥೆಯು ಇದೀಗ ಜಿಕ್ಸರ್ 250 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಸುಜುಕಿ ಜಿಕ್ಸರ್ ಬೈಕಿನ ಬೆಲೆಯು ಸುಮಾರು ರೂ. 1.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಯಮಹಾ ಎಫ್‍‍ಜೆಡ್25 ಮತ್ತು ಕೆಟಿಎಂ 250 ಡ್ಯೂಕ್ ಬೈಕ್‍‍ಗೆ ತೀವ್ರ ಪೈಪೋಟಿ ನೀಡಲಿದೆ.

Source: Motoroids

Most Read Articles

Kannada
Read more on ಸುಜುಕಿ suzuki
English summary
Suzuki Gixxer 250 To Be Launched In India Soon. Read in Kannada.
Story first published: Saturday, April 13, 2019, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X