ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ಇಂದು ಜಿಕ್ಸರ್ ಎಸ್‌ಎಫ್ 155 ಮೋಟೋ ಜಿಪಿ ಆವೃತ್ತಿಯ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಸುಜುಕಿಯ ರೇಸಿಂಗ್ ಪರಂಪರೆಗೆ ಗೌರವ ನೀಡಲಾಗಿದೆ. ಹೊಸ ವಿನ್ಯಾಸದಲ್ಲಿರುವ ಮೋಟೋ ಜಿಪಿ ಜಿಕ್ಸರ್ ಎಸ್‌ಎಫ್ 155 ಆವೃತ್ತಿ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1,10,605ಗಳಾಗಿದೆ. 2015ರಲ್ಲಿ ಪರಿಚಯಿಸಲಾದ ಮೋಟೋ ಜಿಪಿ ನೀಲಿ ಬಣ್ಣವು ಭಾರತದಲ್ಲಿನ ಜಿಕ್ಸರ್ ಎಸ್‌ಎಫ್ ಸರಣಿಯ ಬೈಕುಗಳಿಗೆ ಹೇಳಿ ಮಾಡಿಸಿದಂತಿದ್ದು, ಹೊಸ ಬೈಕ್ ಸಹ ಇದೇ ಬಣ್ಣವನ್ನು ಹೊಂದಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ವಿನ್ಯಾಸದ ಅಂಶಗಳ ಬಗ್ಗೆ ಹೇಳುವುದಾದರೆ ಟೀಂ ಸುಜುಕಿಯ ಎಕ್ಸ್ಟಾರ್ ಡೆಕಾಲ್ಸ್, ವೀಲ್ ಪಿನ್ ಸ್ಟ್ರೈಪ್ಸ್ ಹಾಗೂ ರೇಸಿಂಗ್ ಸ್ಫೂರ್ತಿಯ ಬಿಟ್‌ಗಳನ್ನು ಒಂದುಗೂಡಿಸಿದೆ. ಹೊಸ ಜಿಕ್ಸರ್ ಮೋಟೊ ಜಿಪಿ ಬೈಕ್, 2019ರ ಸುಜುಕಿ ಮೋಟೋ ಜಿಪಿ ಜಿಎಸ್ಎಕ್ಸ್-ಆರ್‍ಆರ್ ಆವೃತ್ತಿಯಲ್ಲಿರುವಂತಹ ಲಿವರಿ ಥೀಮ್ ಹಾಗೂ ಸುಜುಕಿ ರೇಸಿಂಗ್ ನೀಲಿ ಬಣ್ಣವನ್ನು ಹೊಂದಿದೆ. ಜಿಕ್ಸರ್ ಎಸ್‌ಎಫ್ ಮೋಟೋ ಜಿಪಿ ಆವೃತ್ತಿಯು 155 ಸಿಸಿ, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಷನ್, ಎಸ್‌ಇಪಿ ಟೆಕ್ನಾಲಜಿಯ ಏರ್-ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್‌ ಹೊಂದಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಈ ಎಂಜಿನ್ 8000 ಆರ್‍‍ಪಿ‍ಎಂ‍‍ನಲ್ಲಿ 13.9 ಬಿ‍‍ಹೆಚ್‍‍ಪಿ ಹಾಗೂ 6000 ಆರ್‍‍ಪಿಎಂ‍‍ನಲ್ಲಿ 14.0 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಐದು ಸ್ಪೀಡ್‍‍ನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಸಸ್ಪೆಂಷನ್ ಕಾರ್ಯಗಳಿಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ನಿಯಂತ್ರಿಸಲು ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದ್ದು, ಈ ಬೈಕ್ ಸಿಂಗಲ್ ಚಾನಲ್ ಎಬಿಎಸ್ ಹೊಂದಿದೆ. ಇದರ ಜೊತೆಗೆ ಅತ್ಯುತ್ತಮ ಫ್ಯೂಯಲ್ ಎಫಿಶಿಯನ್ಸಿ ಹಾಗೂ ಪರ್ಫಾಮೆನ್ಸ್ ನೀಡಲಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಏರೋಡೈನಾಮಿಕ್ ಡಿಸೈನ್, ಶಾರ್ಪ್ ಕ್ಯಾರೆಕ್ಟರ್ ಲೈನ್ ಹಾಗೂ ಲೋವರ್ ಸೆಂಟರ್ ಗ್ರಾವಿಟಿಗಳನ್ನು ಹೊಂದಿದೆ. ಇದರಿಂದಾಗಿ ಬೈಕಿನ ಸ್ಟೈಲಿಂಗ್ ಹಾಗೂ ಫಂಕ್ಷಾನಾಲಿಟಿ ಹೆಚ್ಚಲಿದೆ. ಹ್ಯಾಂಡಲ್ ಮೇಲಿರುವ ಕ್ಲಿಪ್‍‍ಗಳು ಚಾಲನಾ ಭಂಗಿಯನ್ನು ಸುಧಾರಿಸಲಿವೆ. ಇದರಿಂದಾಗಿ ಹತ್ತಿರದ ಹಾಗೂ ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆ. ಹಗುರವಾದ ಹಾಗೂ ನಿರ್ವಹಿಸಲು ಸುಲಭವಾದ, ಈ ಬೈಕ್ ಸ್ಪೋರ್ಟಿ ರೈಡಿಂಗ್ ಅನುಭವವನ್ನು ನೀಡಲಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಜಿಕ್ಸರ್ ಎಸ್‌ಎಫ್ ಮೋಟೋ ಜಿಪಿ ಆವೃತ್ತಿಯ ಬೈಕ್ ಅನ್ನು ಬೈಕ್ ಉತ್ಸಾಹಿಗಳಿಗಾಗಿಯೇ ತಯಾರಿಸಲಾಗಿದೆ ಎಂದು ಕಂಪನಿಯು ಹೇಳಿದೆ. ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈ. ಲಿಮಿಟೆಡ್‍‍ನ ಉಪಾಧ್ಯಕ್ಷರಾದ ದೇವಶಿಶ್ ಹಂಡಾರವರು ಮಾತನಾಡಿ,ಜಿಕ್ಸರ್ ಎಸ್‌ಎಫ್ ಸರಣಿ ಮೋಟೋ ಜಿಪಿ ಆವೃತ್ತಿಯ ಬೈಕ್ ಅನ್ನು ಬಿಡುಗಡೆಗೊಳಿಸಲು ನಮಗೆ ಸಂತೋಷವಾಗಿದ್ದು, ಈ ಬಣ್ಣವು ಲೆಜೆಂಡರಿ ಜಿಎಸ್‌ಎಕ್ಸ್ ಆರ್ ಸರಣಿಯ ಪರಂಪರೆಯಿಂದ ಪ್ರೇರಿತವಾದ ರೇಸಿಂಗ್‌ನ ಪ್ಯಾಷನ್ ಹಾಗೂ ಸ್ಪಿರಿಟ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸ್ಟೇಟ್ ಆಫ್ ದಿ ಆರ್ಟ್ ವಿನ್ಯಾಸ ಹೊಂದಿರುವ ಎಂಜಿನ್, ಕಡಿಮೆ ಇಂಧನವನ್ನು ಬಳಸಿ ಹೆಚ್ಚಿನ ಔ‍‍ಟ್‍‍ಪುಟ್ ನೀಡುವುದರ ಜೊತೆಗೆ ಚಾಸಿಸ್ ಅನ್ನು ಸುಲಭವಾಗಿ ನಿಭಾಯಿಸಲಿದೆ. ಮೋಟೋ ಜಿಪಿ ಆವೃತ್ತಿಯನ್ನು ಗ್ರಾಹಕರನ್ನು ಆಕರ್ಷಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಮೋಟೋ ಜಿಪಿ ಬಣ್ಣ ಹೊಂದಿ, ಹೊಸದಾಗಿ ಬಿಡುಗಡೆಯಾದ ಜಿಕ್ಸರ್ ಎಸ್‌ಎಫ್ ಬೈಕಿಗೆ ನಿರೀಕ್ಷೆಗಿಂತ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಇಂದು ದೇಶಿಯ ಮಾರುಕಟ್ಟೆಯಲ್ಲಿ ಬೈಕಿನ ಬಿಡುಗಡೆಯ ಬಗ್ಗೆ ಘೋಷಿಸಲು ಸಂತೋಷಪಡುತ್ತೇವೆ ಎಂದು ಹೇಳಿದರು. ಸುಜುಕಿ ಕಂಪನಿಯು, ಹೊಸ ಜಿಕ್ಸರ್ ಎಸ್‌ಎಫ್ 250 ಮೋಟೋ ಜಿಪಿ ಆವೃತ್ತಿಯ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದ್ದು, ಬಹುಶಃ ಮುಂದಿನ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕಿನಲ್ಲಿ 249ಸಿಸಿ, ಸುಜುಕಿ ಆಯಿಲ್ ಕೂಲಿಂಗ್ ಸಿಸ್ಟಂ (ಎಸ್‌ಒಸಿಎಸ್) 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಫ್ಯೂಯಲ್ ಇಂಜೆಕ್ಷನ್ ಎಸ್‌ಒಹೆಚ್‌ಸಿ ಎಂಜಿನ್‌ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಸುಜುಕಿ ಜಿಕ್ಸರ್ 155 ಮೋಟೋ ಜಿಪಿ ಬೈಕ್

ಈ ಎಂಜಿನ್ 9000 ಆರ್‍‍ಪಿ‍ಎಂ‍‍ನಲ್ಲಿ 26.12ಬಿ‍‍ಹೆಚ್‍‍ಪಿ ಹಾಗೂ 7,500 ಆರ್‍‍ಪಿ‍ಎಂ‍‍ನಲ್ಲಿ 22.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಸ್‍ಒ‍‍ಸಿ‍ಎಸ್ ತಂತ್ರಜ್ಞಾನವು ಹಗುರವಾದ ಮತ್ತು ವೇಗದ ಎಂಜಿನ್ ಒದಗಿಸುತ್ತದೆ. ಈ ಬೈಕ್ ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್ ಹೊಂದಿದೆ.

Most Read Articles

Kannada
English summary
2019 Suzuki Gixxer SF MotoGP Edition launched - Read in kannada
Story first published: Thursday, July 18, 2019, 16:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X