ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದ ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಆವೃತ್ತಿ ಇನ್‌ಟ್ರುಡರ್ 150 ಮಾದರಿಯು ಇತ್ತೀಚೆಗೆ ಮಾರಾಟ ವಿಭಾಗದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಶೀಘ್ರದಲ್ಲೇ ಸ್ಥಗಿತಗೊಳಿಸುವ ಸೂಚನೆ ನೀಡಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಇನ್‌ಟ್ರುಡರ್ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 1.22 ಲಕ್ಷದಿಂದ ರೂ.1.30 ಲಕ್ಷ ಬೆಲೆ ಹೊಂದಿದ್ದು, 150 ಬೈಕ್ ಮಾದರಿಗಳಲ್ಲೇ ದುಬಾರಿ ಬೆಲೆಯಿಂದಾಗಿ ಗ್ರಾಹಕರ ಆಯ್ಕೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಕಳೆದ ಐದಾರು ತಿಂಗಳಿನಿಂದ ಇನ್‌ಟ್ರುಡರ್ ಬೈಕ್ ಮಾರಾಟದಲ್ಲಿ ಎರಡಂಕಿಯನ್ನು ಸಹ ದಾಟಲು ಪರದಾಟುತ್ತಿರುವ ಸುಜುಕಿ ಸಂಸ್ಥೆಯು ಹೊಸ ಬೈಕ್ ಉತ್ಪಾದನೆ ಈಗಾಗಲೇ ಬಂದ್ ಮಾಡಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಇದರಿಂದಾಗಿ 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಗುಣವಾಗಿಯೂ ಇನ್‌ಟ್ರುಡರ್ ಬೈಕ್ ಉನ್ನತೀಕರಣಕ್ಕೂ ಮುಂದಾಗದ ಸುಜುಕಿ ಸಂಸ್ಥೆಯು ಬಿಎಸ್-6 ಜಾರಿಯಾಗವ ತನಕ ಮಾತ್ರವೇ ಇನ್‌ಟ್ರಡರ್ ಮಾರಾಟ ಮಾಡಲಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಬಿಎಸ್-4 ವಾಹನ ಮಾರಾಟ ನಿಷೇಧದ ನಂತರ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಅಧಿಕೃತವಾಗಿ ಮಾರಾಟ ಬಂದ್ ಮಾಡಲಿದ್ದು, ಇನ್ನುಳಿದ ಬೈಕ್ ಆವೃತ್ತಿಗಳನ್ನು ಮಾತ್ರವೇ ಬಿಎಸ್-6 ನಿಯಮ ಅನುಸಾರ ಉನ್ನತೀಕರಿಸಿ ಮಾರಾಟ ಮುಂದುವರಿಸಲಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಇನ್ನು ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಇನ್‌ಟ್ರುಡರ್ 150ಸಿಸಿ ಕ್ರೂಸರ್ ಬೈಕ್ ಮಾದರಿಯು ಸುಜುಕಿ ನಿರ್ಮಾಣದ ಮತ್ತೊಂದು ಕ್ರೂಸರ್ ಬೈಕ್ ಎಂ1800ಆರ್ ಬೈಕಿನ ಡಿಸೈನ್ ಪ್ರೇರಣೆ ಪಡೆದುಕೊಂಡಿದ್ದು, ಸಾಂಪ್ರದಾಯಿಕ ಕ್ರೂಸರ್ ಮತ್ತು ಸ್ಟ್ರೀಟ್ ಫೈಟರ್ ವಿನ್ಯಾಸದ ಸಮ್ಮಿಶ್ರಣವನ್ನು ಪಡೆದಿದೆ. ಆದರೆ ಹೊಸ ಬೈಕ್ ಮಾದರಿಯು ಯುರೋಪ್ ಮಾರುಕಟ್ಟೆಯಲ್ಲಿ ಜನಪ್ರಿಯ ಸಾಧಿಸಿದ ಹಾಗೆ ಭಾರತೀಯ ಮಾರುಕಟ್ಟೆಯಲ್ಲಿ ಅಷ್ಟಾಗಿ ಬೇಡಿಕೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಸದ್ಯ ಭಾರತದಲ್ಲಿ ಸುಜುಕಿ ಸಂಸ್ಥೆಯು ಎಂಟ್ರಿ ಲೆವಲ್ ಹಯಾಟೆ, ಜಿಕ್ಸರ್ ಸರಣಿ ಪ್ಲಸ್ ಮತ್ತು ಸ್ಕೂಟರ್ ವಿಭಾಗದಲ್ಲಿ ಆಕ್ಸೆಸ್ 125, ಬರ್ಗಮನ್ ಸ್ಟ್ರೀಟ್ ಹಾಗೆಯೇ ಪ್ರೀಮಿಯಂ ಬೈಕ್ ವಿಭಾಗದಲ್ಲಿ ವಿ-ಸ್ಟ್ರೊಮ್ 650, ಹಯಾಬುಸಾ, ಜಿಎಸ್ಎಕ್ಸ್ಎಸ್ 1000 ಮತ್ತು ವಿ-ಸ್ಟ್ರೊಮ್ 1000 ಬೈಕ್ ಮಾರಾಟ ಮಾಡುತ್ತಿದ್ದು, ಇದರಲ್ಲಿ ಇನ್‌ಟ್ರುಡರ್ 150 ಕೂಡಾ ಒಂದು.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಇನ್‌ಟ್ರುಡರ್ 150 ಬೈಕ್ ಮಾದರಿಯು ಜಾಗತಿಕ ಕ್ರೂಸರ್ ಬೈಕ್‌ಗಳಿಗೆ ಹೊಸ ಆಯಾಮವನ್ನು ತುಂಬಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್)ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯು ದೈನಂದಿನ ಸೇರಿದಂತೆ ವಾರಂತ್ಯದ ಪ್ರಯಾಣಕ್ಕೂ ಸೂಕ್ತವೆನಿಸಲಿದೆ. ಹಾಗೆಯೇ ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿಂದಲೂ ಕೂಡಿದೆ.

MOST READ: ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಡಿಸೈನ್‌ಗಳು ಹೊಸ ಇನ್‌ಟ್ರುಡರ್ 150 ಬೈಕ್ ಹೊಂದಿದ್ದು, ಮುಂಭಾಗದ ಇಂಡಿಕೇಟರ್‌ಗಳು ಚೂಪಾದ ವಿನ್ಯಾಸದೊಂದಿಗೆ ಹಿಂಬದಿಯ ನೋಟದ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

MOST READ: ದುಬಾರಿ ಕಾರಿನ ಟ್ಯಾಕ್ಸ್ ಉಳಿಸಲು ಈತ ಮಾಡಿದ್ದೇನು ಗೊತ್ತಾ?

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಇದಲ್ಲದೇ ಶಕ್ತಿಯುತವಾದ ವಿನ್ಯಾಸ, ಇಂಧನ ಟ್ಯಾಂಕ್, ಕಡಿಮೆ ಎತ್ತರದ ಸೀಟು, ಹ್ಯಾಂಡಲ್‌ಬಾರ್, ಫೂಟ್ ಪೆಗ್, ಆರಾಮದಾಯಕ ಸೀಟು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಎಂಜಿನ್ ಸಾಮರ್ಥ್ಯ

154.9ಸಿಸಿ ಏರ್ ಕೂಲ್ಡ್, ಫ್ಯೂಲ್-ಇಂಜೆಕ್ಷ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ ಬೈಕ್‌, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 14.5 ಬಿಎಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಇದರಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಅಂದ್ರೆ, ನಗರಪ್ರದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಡಿಸೈನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯಲ್ಲಿ ಎಸ್‌ಇಪಿ(ಸುಜುಕಿ ಇಕೋ ಪರ್ಫಾಮೆನ್ಸ್) ತಂತ್ರಜ್ಞಾನ ಹೊಂದಿರುವುದು ಬೈಕಿನ ಪರ್ಫಾಮನ್ಸ್ ಹೆಚ್ಚಿಸಿರುವುದಲ್ಲದೇ ಇಂಧನ ದಕ್ಷತೆಯನ್ನು ಸಹ ಹೆಚ್ಚಿಸಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಬೈಕಿನಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದ ಚಕ್ರದಲ್ಲಿ ಮೊನೋಶಾರ್ಕ್‌ ಸಸ್ಷೆಷನ್ ಹೊಂದಿದೆ. ಹಾಗೆಯೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಚಕ್ರದಲ್ಲಿ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಅಳವಡಿಕೆ ಮಾಡಲಾಗಿದೆ.

ಸದ್ಯದಲ್ಲೇ ಇನ್‌ಟ್ರುಡರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲಿದೆ ಸುಜುಕಿ ಮೋಟಾರ್‌ಸೈಕಲ್

ಈ ಮೂಲಕ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೂ ಸಹ ಗ್ರಾಹಕರ ಆಯ್ಕೆ ಹಿಂದಿಬಿದ್ದಿರುವ ಇನ್‌ಟ್ರುಡರ್ 150 ಬೈಕ್ ಆವೃತ್ತಿಯು ಮಾರುಕಟ್ಟೆಯಿಂದ ನಿರ್ಗಮಿಸುವ ಪರಿಸ್ಥಿತಿ ಎದುರಾಗಿದ್ದು, ಮುಂದಿನ ವರ್ಷ ಮಾರ್ಚ್ ತನಕ ಮಾತ್ರವೇ ಈ ಬೈಕ್ ಮಾರಾಟಕ್ಕೆ ಲಭ್ಯಲಿರಲಿದೆ.

Most Read Articles

Kannada
English summary
According to reports, Suzuki Motorcycles is planning to discontinue the Intruder 155 in India due to its poor sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X