2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತನ್ನ ಜನಪ್ರಿಯ ವಾಹನವಾದ ಇಂಟ್ರೂಡರ್ ಕ್ರೂಸರ್ ಮೋಟಾರ್‍‍ಸೈಕಲ್‍‍ನ 250 ಸಿಸಿ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ಇಂ‍ಟ್ರೂಡರ್ 250 ಬೈಕಿನಲ್ಲಿ ಹೊಸ ಚಾಸೀಸ್ ಅಳವಡಿಸಲಿದ್ದು, ಚಾಲ್ತಿಯಲ್ಲಿರುವ 155 ಸಿಸಿ ಮಾದರಿಯ ಬೈಕುಗಳಿಗಿಂತ ಹೆಚ್ಚು ಬದಲಾವಣೆಗಳನ್ನು ಹೊಂದಲಿದೆ.

2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಸುಜುಕಿ ಇತ್ತೀಚಿಗೆ ಜಿಕ್ಸರ್ ಎಸ್‍ಎಫ್ 250 ಬೈಕ್ ಅನ್ನು, ಜಿಕ್ಸರ್ ಎಸ್‍ಎಫ್ 155 ಸಿಸಿ ಬೈಕಿನ ಜೊತೆಯಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಸುಜುಕಿ ಇಂ‍ಟ್ರೂಡರ್ 250 ಬೈಕಿನಲ್ಲಿಯೂ ಸಹ ಅದೇ ಎಂಜಿನ್ ಇರಲಿದ್ದು, ಇದರ ಜೊತೆಗೆ ಹಲವಾರು ಹೊಸ ಅಪ್‍‍ಡೇಟ್ ಹಾಗೂ ವಿನ್ಯಾಸಗಳನ್ನು ಪಡೆಯಲಿದೆ. ಈ ಎಂಜಿನ್ 249 ಸಿಸಿ ಲಿಕ್ವಿಡ್ ಕೂಲ್ ಸಿಂಗಲ್ ಸಿಲಿಂಡರ್ ಯೂನಿಟ್ ಹೊಂದಿರಲಿದ್ದು, 26.5 ಬಿಹೆಚ್‍‍ಪಿ ಹಾಗೂ 22.5 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಇದರಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹೊಸ ಸುಜುಕಿ ಇಂ‍ಟ್ರೂಡರ್ 250 ಬೈಕ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು. ಹೊಸ 250 ಸಿಸಿ ಆವೃತ್ತಿಯ ಬೈಕಿನಲ್ಲಿ ಹೊಸ ವಿನ್ಯಾಸದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳಿವೆ.

2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಇದರ ಜೊತೆಗೆ ಎಲ್‍ಇ‍‍ಡಿ ಟೇಲ್ ಲೈಟ್ಸ್, ಫಾರ್ವಡ್ ಸೆಟ್ ಫುಟ್ ಪೆಗ್‍‍ಗಳು, ಲೋ ಸೀಟುಗಳು, ಆರಾಮದಾಯಕವಾದ ಹ್ಯಾಂಡಲ್‍‍ಬಾರ್‍‍ಗಳು ಹಾಗೂ ಉದ್ದವಾದ ಸ್ವಿಂಗ್ ಆರ್ಮ್‍‍ಗಳಿವೆ. ಇಂ‍ಟ್ರೂಡರ್ 250 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೊದಲು, ಸುಜುಕಿ ಕಂಪನಿಯು ಜಿಕ್ಸರ್ ಎಸ್‍ಎಫ್250 ಬೈಕಿನ ನೇಕೆಡ್ ಆವೃತ್ತಿಯ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಈ ನೇಕೆಡ್ ಆವೃತ್ತಿಯ ಬೈಕಿಗೆ ಜಿಕ್ಸರ್250 ಎಂದು ಹೆಸರಿಡಲಾಗಿದೆ. ಹೊಸ ಸುಜುಕಿ ಜಿಕ್ಸರ್250 ಬೈಕ್ ಈ ವರ್ಷದ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕೆಟಿ‍ಎಂ ಡ್ಯೂಕ್ 250 ಹಾಗೂ ಯಮಹಾ ಎಫ್‍‍ಝಡ್25 ಬೈಕುಗಳಿಗೆ ಪೈಪೋಟಿ ನೀಡಲಿದೆ. ಹೊಸ ಇಂ‍ಟ್ರೂಡರ್ 250 ಬೈಕಿನಲ್ಲಿ ಜಿಕ್ಸರ್ ಎಸ್‍ಎಫ್250 ಬೈಕಿನಲ್ಲಿರುವ ಮೆಕಾನಿಕಲ್ ಅಂಶಗಳನ್ನೇ ಬಳಸುವ ಸಾಧ್ಯತೆಗಳಿವೆ. ಆದರೆ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಮೊನೊಶಾಕ್ ಸಸ್ಪೆಂಷನ್‍‍ಗಳನ್ನು ಹೊಸ ಬೈಕಿಗೆ ತಕ್ಕಂತೆ ಟ್ಯೂನ್ ಮಾಡಲಾಗುವುದು.

MOST READ: ರಷ್ಯಾದಲ್ಲಿ ಬಿಡುಗಡೆಯಾಗುವ ರೆನಾಲ್ಟ್ ಅರ್ಕಾನಾ ಭಾರತಕ್ಕೆ ಬರುತ್ತಾ?

2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಹೊಸ ಬೈಕ್ ಸಹ ಜಿಕ್ಸರ್‍‍ನಲ್ಲಿರುವಂತಹ ಬ್ರೇಕಿಂಗ್ ಹಾಗೂ ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಸಿಸ್ಟಂಗಳನ್ನು ಪಡೆಯಲಿದೆ.

2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಇಂ‍ಟ್ರೂಡರ್ 250 ಭಾರತದಲ್ಲಿ ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿರುವ ಏಕೈಕ ಕ್ವಾರ್ಟರ್ ಲೀಟರ್ ಕ್ರೂಸರ್ ಬೈಕ್ ಆಗಿರಲಿದೆ. ಈ ಬೈಕಿಗೆ ಯಾವುದೇ ಪ್ರತಿಸ್ಪರ್ಧಿಗಳಿರುವುದಿಲ್ಲ. ಆದರೆ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350ಯ ಬೈಕುಗಳು ಈ ಸೆಗ್‍‍ಮೆಂಟಿನಲ್ಲಿ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಇಂ‍ಟ್ರೂಡರ್ 250 ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.1.5 ಲಕ್ಷಗಳಿಂದ ರೂ.1.9 ಲಕ್ಷಗಳಾಗಿರಲಿದೆ.

Most Read Articles

Kannada
English summary
Suzuki Intruder 250 In The Works — Launch Expected During 2020 Auto Expo - Read in kannada
Story first published: Saturday, May 25, 2019, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X