ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತನ್ನ ಹೂಡಿಕೆ ಯೋಜನೆಗಳನ್ನು ಸದ್ಯಕ್ಕೆ ಕೈಬಿಟ್ಟಿದೆ. ಹೂಡಿಕೆ ಮಾಡುವ ಯೋಜನೆ ಪ್ರಕ್ರಿಯೆಯಲ್ಲಿದ್ದರು, ಆಟೋಮೊಬೈಲ್ ಕ್ಷೇತ್ರದಲ್ಲಿ ತೀವ್ರ ಮಟ್ಟದ ಕುಸಿತ ಕಂಡ ಹಿನ್ನಲೆಯಲ್ಲಿ ಆ ಯೋಜನೆಗಳನ್ನು ಸ್ಥಗಿತಗೊಳಿಸಿದೆ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಆಟೋಮೊಬೈಲ್ ಕ್ಷೇತ್ರದ ದುಸ್ಥಿತಿಯಿಂದ ವಾಹನಗಳ ಮಾರಾಟವು ಪಾತಳಕ್ಕೆ ಕುಸಿದಿರುವುದರಿಂದ ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ಹೂಡಿಕೆ ಯೋಜನೆಯನ್ನು ಸದ್ಯಕ್ಕೆ ಕೈಬಿಟ್ಟಿದೆ. ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಸ್ಎಂಐ‍ಪಿಎಲ್) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳವುದು ಮತ್ತು ಭಾರತದಲ್ಲಿ ಹೆಚ್ಚುವರಿ ಉತ್ಪಾದನಾ ಘಟಕದಲ್ಲಿ ಹೂಡಿಕೆ ಮಾಡುವುದನ್ನು ರದ್ದು ಮಾಡಿದ್ದಾರೆ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಅನೇಕ ಕಾರಣಗಳಿಂದಾಗಿ ಈ ಯೋಜನೆಗಳನ್ನು ಈಗ ಸ್ಥಗಿತಗೊಳಿಸಲಾಗಿದೆ, ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವುದು ಕೂಡ ಅದಕ್ಕೆ ಪ್ರಮುಖ ಕಾರಣ. ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಬ್ಬರು.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ದೇಶಿಯ ಮಾರುಕಟ್ಟೆಗೆ ಅನೇಕ ಮೋಟಾರ್‍‍ಸೈಕಲ್ ವಿಭಾಗಗಳ ಕೊಡುಗೆಯನ್ನು ನೀಡಿದ್ದಾರೆ. ಪ್ರೀಮಿಯಂ ಪ್ರಯಾಣಿಕರ ವಿಭಾಗದಲ್ಲಿ ಸುಜುಕಿ ಗಿಕ್ಸ್‌ಸರ್ ಸರಣೆಯಿಂದ ಕ್ವಾರ್ಟರ್ ಲೀಟರ್ ವಿಭಾಗದಲ್ಲಿ ಗಿಕ್ಸ್‌ಸರ್ 250 ಮತ್ತು ಗಿಕ್ಸ್‌ಸರ್ ಎಸ್‍ಎಫ್ 250, ಮತ್ತು ಸೂಪರ್‍‍ಬೈಕ್ ವಿಭಾಗದಲ್ಲಿ ಹಯಾಬುಸಾ ಮತ್ತು ಜಿಎಸ್‍ಎಕ್ಸ್-ಆರ್ 1000 ಆರ್, ಹೀಗೆ ಎಲ್ಲಾ ವಿಭಾಗದಲ್ಲಿ ಸುಜುಕಿಯು ಜನಪ್ರಿಯ ಬೈಕ್‍ಗಳನ್ನು ಹೊಂದಿದೆ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಅದೇ ಪಟ್ಟಿಗೆ ಸೇರುವ ಅಡ್ವೆಂಚರ್ ವಿಭಾಗದಲ್ಲಿ ಸುಜುಕಿ ವಿ-ಸ್ಟ್ರೀಮ್ 650 ಎಕ್ಸ್‌ಟಿ ಮತ್ತು ಮಿಡ್ ವೈಟ್ ಮೋಟಾರ್ ಸೈಕಲ್ ವಿಭಾಗದಲ್ಲಿ ಜಿಎಸ್ಎಕ್ಸ್-ಎಸ್ 750. ಇಂತಹ ವೈವಿಧ್ಯಮಯ ಮೋಟಾರ್‍‍ಸೈಕಲ್ ಹೊಂದಿರುವ ಸುಜುಕಿ, 2019ರ ಆಗಸ್ಟ್ ತಿಂಗಳಲ್ಲಿ ಬೆಳವಣಿಗೆಯನ್ನು ದಾಖಲಿಸಿದ ಎರಡು ಕಂಪನಿಗಳಲ್ಲಿ ಸುಜುಕಿ ಒಂದಾಗಿರುವುದು ಕೂಡ ಅಚ್ಚರಿಯ ಸಂಗತಿ ಅಲ್ಲ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಕಳೆದ ವರ್ಷ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 2019 ರ ಆಗಸ್ಟ್ ನಲ್ಲಿ ಸುಜುಕಿ 2.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆಗಸ್ಟ್ ನಲ್ಲಿ ಸುಜುಕಿ ಗಿಕ್ಸ್‌ಸರ್ 250 ಅನ್ನು ಬಿಡುಗಡೆ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ಸಂದರ್ಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಹೂಡಿಕೆ ಮಾಡಿ ಸುಜುಕಿ ಮೋಟಾರ್‍‍ಸೈಕಲ್ ರಿಸ್ಕ್ ತೆಗೆಯಲು ಸಿದ್ಧವಿಲ್ಲ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಾಣಲು ಆರ್ಥಿಕ ಹಿಂಜರಿತೆವೇ ಕಾರಣ ಎಂಬುವುದು ಕೆಲವರ ವಾದವಾಗಿದೆ. ಹಲವಾರು ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ವಜಾಗೊಳಿಸಿದ್ದಾರೆ, ಇನ್ನೂ ಕೆಲವರು ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ದೇಶದ ಹಲವು ಪ್ರಮುಖ ಕಂಪನಿಗಳು ಉತ್ಪಾದನೆಯನ್ನು ಕಡಿಮೆಗೊಳಿಸಿದ್ದಾರೆ. ಇದರಿಂದಾಗಿ ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ಮತ್ತೊಂಡು ಉತ್ಪಾದನಾ ಘಟಕದಲ್ಲಿ ಹೂಡಿಕೆ ಮಾಡಲು ಸಿದ್ದವಿಲ್ಲ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಸುಜುಕಿಯ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ ಅನಿಶ್ಚಿತತೆ ಮತ್ತು ಬಿಎಸ್-4 ಯಿಂದ ಬಿಎಸ್-6 ಎಂಜಿನ್ ಬದಲಾಯಿಸುವುದರಿಂದ ಇನ್ನಷ್ಟು ನಿಧಾನವಾಗಬಹುದು. ಸುಜುಕಿ ಮೋಟಾರ್‍‍‍ಸೈಕಲ್ ಇಂಡಿಯಾದ ಉಪಾಧ್ಯಕ್ಷ ದೇವಶಿಶ್ ಹಂಡಾ ಮಾತನಾಡಿ ಬಿಎಸ್-4 ಯಿಂದ ಬಿಎಸ್-6 ಗೆ ಬದಲಾಯಿಸುವುದರಿಂದ ಅದರನ್ನು ಜನರು ಹೇಗೆ ಸ್ವಿಕರಿಸುತ್ತಾರೆ ಎಂಬುವುದರ ಮೇಲೆ ಅವಲಂಬಿತವಾಗಿದೆ ಎಂದರು.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ 2020 ರ ಏಪ್ರಿಲ್ 1 ರಂದು ಬಿಎಸ್-6 ಮಾಲಿನ್ಯ ನಿಯಮ ಜಾರಿ ಬರಲಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಈಗಾಗಲೇ ಆಟೋಮೊಬೈಲ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಕೆಲವು ಕಂಪನಿಗಳು ಡೀಸೆಲ್ ಎಂಜಿನ್‍‍ಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಬಿಎಸ್-6 ಎಂಜಿನ್ ವಾಹನಗಳು ಹೆಚ್ಚು ದುಬಾರಿಯಾಗುತ್ತೇವೆ ಎಂಬುವುದು ಸ್ಪಷ್ಟವಾಗಿದೆ, 2018ರ ಸೆಪ್ಟೆಂಬರ್‍‍ನಲ್ಲಿ ಜಾರಿಗೆ ಬಂದ ಹೊಸ ವಿಮಾ ನಿಯಮಗಳಂತೆಯೇ ಬಿಎಸ್-6 ಮಾಲಿನ್ಯ ನಿಯಮದಿಂದ ಪರಿಣಾಮ ಬೀರಬಹುದು ಎಂದು ದೇವಶಿಶ್ ಹಂಡಾ ಹೇಳಿದ್ದಾರೆ. ಎಲ್ಲಾ ಹೊಸ ವಾಹನಗಳನ್ನು 5 ವರ್ಷಗಳ ವಿಮಾ ಪಾಲಿಸಿಗಳೊಂದಿಗೆ ಮಾರಾಟ ಮಾಡಬೇಕೆಂದು ವಿಮಾ ನಿಯಮಗಳು ಅದೇಶಿಸಿವೆ, ಇದರಿಂದ ರಸ್ತೆ ತೆರಿಗೆಯು ಶೇ. 14 ರಿಂದ 15 ರಷ್ಟು ಹೆಚ್ಚಾದವು ಇದು ಕೂಡ ಆಟೋಮೊಬೈಲ್ ಕುಸಿಯುದಕ್ಕೆ ಕಾರಣ ಎಂದರು.

ಸದ್ಯಕೆ ಹೂಡಿಕೆ ಯೋಜನೆಯನ್ನು ಕೈಬಿಟ್ಟ ಸುಜುಕಿ ಮೋಟಾರ್‍‍ಸೈಕಲ್

ಆಟೋಮೊಬೈಲ್ ಕ್ಷೇತ್ರದಲ್ಲಿ ದಿನಗಳು ಕಳದಂತೆ ಕುಸಿಯುತ್ತಿದೆ, ಈ ಸಂದರ್ಭದಲ್ಲಿ ಹೂಡಿಕೆ ಮಾಡದಿರುವುದೇ ಒಳಿತು ಎಂದು ಸುಜುಕಿ ಮೋಟಾರ್‍‍‍ಸೈಕಲ್ ಹೂಡಿಕೆ ಯೋಜನೆಯನ್ನು ಸದ್ಯಕ್ಕೆ ಕೈ‍ಬಿಟ್ಟಿದೆ. ಕಂಪನಿಯ ಹಿತ ದೃಷ್ಟಿಯಿಂದ ಸುಜುಕಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ, ಆದರೆ ಈ ಹೂಡಿಕೆಯಿಂದ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಬಹುದಿತ್ತು.

Most Read Articles

Kannada
English summary
Auto Industry Slowdown Causes Suzuki’s Investment & Expansion Plans To Be Put On Hold - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X