ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ದೇಶಾದ್ಯಂತ ದಿನಂಪ್ರತಿ ಸಾವಿರಾರು ವಾಹನಗಳು ರಸ್ತೆಗಿಳಿಯುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಲೇ ಇವೆ. ಅದರಲ್ಲೂ ಹೆಲ್ಮೆಟ್ ಇಲ್ಲದ ಬೈಕ್ ಸವಾರಿಯನ್ನು ಸಂಪೂರ್ಣವಾಗಿ ತಗ್ಗಿಸುವ ಉದ್ದೇಶದಿಂದ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಅಪಘಾತ ಸಂದರ್ಭದಲ್ಲಿ ಬೈಕ್ ಸವಾರರಿಗೆ ಸುರಕ್ಷತೆ ಸಿಗಲಿ ಎನ್ನುವ ಉದ್ದೇಶದಿಂದ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವಂತೆ ದೇಶದ ಪ್ರತಿ ನಗರದಲ್ಲೂ ಸೂಕ್ತ ಕ್ರಮ ಕೈಗೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು, ಹೆಲ್ಮೆಟ್ ಬಳಕೆ ಮಾಡದ ಸವಾರರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದಾರೆ. ಆದರೂ ಕೂಡಾ ಹೆಲ್ಮೆಟ್ ಇಲ್ಲದ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಹೊಸದಾಗಿ ಬೈಕ್ ಖರೀದಿಸುವ ಗ್ರಾಹಕರು ಕಡ್ಡಾಯವಾಗಿ ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಪ್ರಮಾಣಿಕೃತ ಹೆಲ್ಮೆಟ್ ಅನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ತಮಿಳುನಾಡಿನಲ್ಲಿ ಇಂತದೊಂದು ಕಠಿಣ ಕ್ರಮವನ್ನು ಜಾರಿಗೆ ಮಾಡಲಾಗಿದ್ದು, ಬೈಕ್ ಖರೀದಿಸುವ ಗ್ರಾಹಕರು ಕಡ್ಡಾಯವಾಗಿ ಹೊಸ ಬಿಐಎಸ್ ಹೆಲ್ಮೆಟ್ ಅನ್ನೇ ಖರೀದಿ ಮಾಡಬೇಕೆಂಬ ನಿಯಯವನ್ನು ಜಾರಿಗೊಳಿಸಿದ್ದಾರೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಬಹುತೇಕ ಬೈಕ್ ಸವಾರರು ಸಾವಿರಾರು ಕೊಟ್ಟು ಬೈಕ್ ಖರೀದಿ ಮಾಡಿದರೂ ಸಹ ಒಂದು ಉತ್ತಮವಾದ ಹೆಲ್ಮೆಟ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ಅಗ್ಗದ ಬೆಲೆಯ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನ ಖರೀದಿಸುತ್ತಾರೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಆದ್ರೆ ಅಪಘಾತಗಳ ಸಂದರ್ಭದಲ್ಲಿ ಇದರಿಂದ ಪ್ರಾಣ ಉಳಿಯುವ ಬದಲು ಪ್ರಾಣಕ್ಕೆ ಮತ್ತಷ್ಟು ಸಂಚಕಾರ ತರಲಿವೆ ಎಂಬುವುದು ಗೊತ್ತಿದ್ದರೂ ಸಹ ಅಗ್ಗದ ಬೆಲೆಯ ಹೆಲ್ಮೆಟ್‌ಗಳೇ ಹೆಚ್ಚು ಮಾರಾಟವಾಗುತ್ತಿದ್ದು, ಇಂತಹ ಪ್ರವೃತ್ತಿಯನ್ನು ತಪ್ಪಿಸಲು ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ತಮಿಳುನಾಡು ಪೊಲೀಸರು ಹೊಸ ಬೈಕ್ ಖರೀದಿ ವೇಳೆ ಬಿಐಎಸ್ ಹೆಲ್ಮೆಟ್ ಖರೀದಿಯನ್ನು ಕಡ್ಡಾಯಗೊಳಿಸಿದರೇ, ಗುಜರಾತಿನ ರಾಜಕೋಟ್ ಪೊಲೀಸರು ತಮಿಳುನಾಡು ಪೊಲೀಸರಿಗಿಂತ ವಿಭಿನ್ನವಾದ ರೂಲ್ಸ್ ಒಂದನ್ನು ಜಾರಿಗೆ ತಂದಿದ್ದಾರೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಹೊಸದಾಗಿ ಬೈಕ್ ಖರೀದಿಸುವ ಗ್ರಾಹಕರಿಗೆ ಡೀಲರ್ಸ್‌ಗಳೇ ಉಚಿತವಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ವಿತರಣೆ ಮಾಡುವಂತೆ ಸೂಚನೆ ನೀಡಲಾಗಿದ್ದು, ನಿಯಮ ಪಾಲಿಸದ ಡೀಲರ್ಸ್ ವಿರುದ್ಧ ಸೂಕ್ತ ಕೈಗೊಳ್ಳುವುದಾಗಿದೆ ರಾಜಕೋಟ್ ಎಸ್‌ಪಿ ಮನೋಜ್ ಅಗರವಾಲ್ ಅವರು ಖಡಕ್ ಆಗಿಯೇ ವಾರ್ನ್ ಮಾಡಿದ್ದಾರೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಹಾಗೆಯೇ ಹೆಲ್ಮೆಟ್ ಬಳಕೆ ಮಾಡದ ದ್ವಿಚಕ್ರ ವಾಹನ ಸವಾರರ ವಿರುದ್ದವು ಸೂಕ್ತ ಕ್ರಮ ಕೈಗೊಳ್ಳಲು ಪ್ರತ್ಯೇಕ ತಂಡ ರಚಿಸಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು, ಸಾರಿಗೆ ನಿಯಮಗಳನ್ನು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ 2018-19ರ ಆರ್ಥಿಕ ವರ್ಷದ ಅವಧಿಯಲ್ಲಿ ಬರೋಬ್ಬರಿ 1.35 ಲಕ್ಷ ಇ-ಚಲನ್‌ಗಳನ್ನು ನೀಡಲಾಗಿದೆ.

ಹೊಸ ಬೈಕ್ ಜೊತೆ ಬಿಐಎಸ್ ಹೆಲ್ಮೆಟ್ ಖರೀದಿಸುವುದು ಇನ್ಮುಂದೆ ಕಡ್ಡಾಯ

ಇನ್ನು ನಕಲಿ ಹೆಲ್ಮೆಟ್ ಬಳಸಬೇಡಿ ಎಂದು ಎಷ್ಟೇ ಮನವಿ ಮಾಡಿದ್ರು ಬಹುತೇಕ ಬೈಕ್ ಸವಾರರು ಮಾತ್ರ ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳನ್ನೇ ಬಳಕೆ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

Most Read Articles

Kannada
English summary
Tamil Nadu Govt Makes BIS Certified Helmets Mandatory When Buying New 2-Wheeler.
Story first published: Wednesday, April 17, 2019, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X