ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..!

ಕಳೆದ ತಿಂಗಳ ಹಿಂದಷ್ಟೇ ದ್ವಿಚಕ್ರ ವಾಹನಗಳ ಥರ್ಡ್ ಪಾರ್ಟಿ ವಿಮಾ ದರಗಳನ್ನು ಯಾವುದೇ ಕಾರಣಕ್ಕೂ ಏರಿಕೆ ಮಾಡುವುದಿಲ್ಲ ಎಂದಿದ್ದ ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ (IRDAI) ಸಂಸ್ಥೆಯು ಇದೀಗ ಬೆಲೆ ಏರಿಕೆಯ ಶಾಕ್ ನೀಡಿದ್ದು, ಹೊಸ ದರ ಪಟ್ಟಿಯಲ್ಲಿ ಪ್ರೀಮಿಯಂ ಬೈಕ್ ಮಾಲೀಕರಿಗೆ ಭರ್ಜರಿ ಶಾಕ್ ನೀಡಲಾಗಿದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

2019-20ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಹೊಸ ವಿಮಾ ದರಗಳನ್ನು ಪ್ರಕಟಿಸಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ ಸಂಸ್ಥೆಯು ಜೂನ್ 16ರಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದು, ಬೈಕ್ ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ವಿಮಾ ದರವನ್ನು ಶೇಕಡಾವಾರು ಹೆಚ್ಚಳ ಮಾಡಲಾಗಿದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

75ಸಿಸಿ ಒಳಗೆ

ಭಾರತದಲ್ಲಿ 75 ಸಿಸಿಗಿಂತ ಕಡಿಮೆ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಯಾರೋಬ್ಬರು ಬಳಕೆ ಮಾಡದ್ದಿದ್ದರೂ ಸಹ ನಿಯಮಗಳಿಗೆ ಅನುಗುಣವಾಗಿ ಶೇ.12.9 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದು ಯಾರಿಗೂ ಹೊರೆಯಾಗುವ ಪ್ರಶ್ನೆಯೇ ಇಲ್ಲ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

75ಸಿಸಿ ಯಿಂದ 150ಸಿಸಿ

ಭಾರತದಲ್ಲಿ ಬಳಕೆಯಾಗುವ ಬಹುತೇಕ ಬೈಕ್ ಮಾದರಿಗಳು 75ಸಿಸಿಯಿಂದ 150ಸಿಸಿ ಸಾಮರ್ಥ್ಯವನ್ನು ಹೊಂದಿದ್ದು, 75ಸಿಸಿ ಯಿಂದ 150ಸಿಸಿ ಸಾಮಾರ್ಥ್ಯದ ಬೈಕ್ ಮತ್ತು ಸ್ಕೂಟರ್‌ಗಳ ವಿಮಾ ಮೊತ್ತದಲ್ಲಿ ಶೇ. 4.4 ರಷ್ಟ ಹೆಚ್ಚಳ ಮಾಡಲಾಗಿದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

150ಸಿಸಿ ಯಿಂದ 350ಸಿಸಿ

ಮೇಲೆ ಹೇಳಿದ ಹಾಗೆ, ಪ್ರೀಮಿಯಂ ಬೈಕ್ ಮಾಲೀಕರಿಗೆ ಭರ್ಜರಿ ಶಾಕ್ ನೀಡಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು 150ಸಿಸಿ ಯಿಂದ 350ಸಿಸಿ ಸ್ಮೆಗೆಂಟ್‌ನಲ್ಲಿರುವ ಬರುವ ಪ್ರೀಮಿಯಂ ಬೈಕ್ ವಿಮಾ ದರಗಳಲ್ಲಿ ಶೇ.21.1 ರಷ್ಟು ಹೆಚ್ಚಳ ಮಾಡಿದ್ದು, ಪ್ರೀಮಿಯಂ ದರಗಳು ಬಿಸಿ ತುಪ್ಪವಾಗಲಿವೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

350 ಸಿಸಿ ಮೇಲ್ಪಟ ಬೈಕ್

ಈ ಹಿಂದಿನಂತೆಯೇ 350 ಸಿಸಿ ಮೇಲ್ಪಟ್ಟ ಬೈಕ್ ವಿಮಾದರದಲ್ಲಿ ಯಾವುದೇ ಬದಲಾವಣೆ ಮಾಡದ ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು ರೂ.2,323 ನಿಶ್ಚಿತ ಮೊತ್ತವನ್ನು ನಿಗದಿಪಡಿಸಿದ್ದು, ಇದು ಮಧ್ಯಮ ವರ್ಗದವರಿಗೆ ಯಾವ ಪರಿಣಾಮವನ್ನು ಬಿರದು.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಇನ್ನು ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳಿಗೂ ವಿಮಾ ದರವನ್ನು ನಿಗದಿಪಡಿಸಿದ್ದು, 3ಕಿಲೋ ವ್ಯಾಟ್‌ಗಿಂತಲೂ ಕಡಿಮೆ ಬ್ಯಾಟರಿ ಸೌಲಭ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.410 ಮತ್ತು 3ಕಿಲೋ ವ್ಯಾಟ್‌ನಿಂದ 7ಕಿಲೋ ವ್ಯಾಟ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.639 ನಿಗದಿ ಮಾಡಲಾಗಿದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಹಾಗೆಯೇ 7ಕಿಲೋ ವ್ಯಾಟ್‌‌ನಿಂದ 16ಕಿಲೋ ವ್ಯಾಟ್ ಮಧ್ಯದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.1,014 ಮತ್ತು 16ಕಿಲೋ ವ್ಯಾಟ್ ಮೇಲ್ಪಟ್ಟ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.1,975 ನಿಗದಿಪಡಿಸಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು ಹೊಸ ದರಗಳನ್ನು ಇದೇ ತಿಂಗಳು ಜೂನ್ 16ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಮೋಟಾರು ವಿಮೆ ಎಂದರೇನು?

ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಅರಿಯಲ್ಪಡುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಮೋಟಾರು ವಿಮಾ ಪಾಲಿಸಿಗಳ ಅವಧಿಯೆಷ್ಟು?

ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಕಾರಿಗೆ ರಕ್ಷಣೆ ಒದಗಿಸುವುದು ಅತಿ ಅಗತ್ಯವಾಗಿದೆ. ಸಾಮಾನ್ಯವಾಗಿ ಮೋಟಾರು ವಿಮೆ ಕರಾರು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗಿರುತ್ತದೆ. ಆದ್ರೆ ಇದೀಗ ಹೊಸ ವಾಹನಗಳಿಗೆ ನೀಡಲಾಗುತ್ತಿರುವ ವಿಮೆಗಳು ಬೈಕ್‌ಗೆ ಐದು ವರ್ಷ ಮತ್ತು ಕಾರಿಗೆ ಮೂರು ವರ್ಷ ಅನ್ವಯಿಸುತ್ತೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಮೋಟಾರು ವಿಮಾ ಪಾಲಿಸಿಗಳಲ್ಲಿ ಎಷ್ಟು ವಿಧ?

ಕಾರು ವಿಮಾ ಪಾಲಿಸಿಯಲ್ಲಿ ಎರಡು ವಿಧಗಳಿವೆ. ಪಾಲಿಸಿ 'ಎ' ಎಂಬುದು ಮೂರನೇ ವ್ಯಕ್ತಿ ವಿಮಾ ಹಾಗೂ ಪಾಲಿಸಿ 'ಬಿ' ಎಂಬುದು ಸಮಗ್ರ ಪಾಲಿಸಿಯಾಗಿದೆ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಮೂರನೇ ವ್ಯಕ್ತಿಗೆ ಮಾತ್ರ. ಅಂದರೆ ಕಾರಿಗೆ ಆಗುವ ಹಾನಿಯನ್ನು ಇದು ಒಳಗೊಂಡಿರುವುದಿಲ್ಲ. ಎರಡನೇಯದ್ದಲ್ಲಿ ವಾಹನಕ್ಕಾಗುವ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಮೂರನೇ ವ್ಯಕ್ತಿ ವಿಮೆಯು ಕೆಳಗಿನ ನಷ್ಟಗಳನ್ನು ಒಳಗೊಳ್ಳುತ್ತದೆ..!

ನಿಮ್ಮ ವಿಮಾ ವಾಹನದಿಂದಾಗಿ ಮೂರನೇ ವ್ಯಕ್ತಿಗೆ ಯಾವುದೇ ಶಾಶ್ವತ ಗಾಯ ಅಥವಾ ಮರಣ ಸಂಭವಿಸಿದ್ದಲ್ಲಿ ಹಾಗೆಯೇ ನಿಮ್ಮ ವಿಮಾ ವಾಹನದಿಂದಾಗಿ ಯಾವುದೇ ಹಾನಿ ಸಂಭವಿಸಿದ್ದಲ್ಲಿ (ವಾಹನ ಹೊರತುಪಡಿಸಿ) ಇದು ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯಲ್ಲಿ ವಿಮೆಯೂ ಮೂರನೇ ವ್ಯಕ್ತಿಯ ಆಸ್ತಿಯ ಯಾವುದೇ ನಷ್ಟ ಸಂಭವಿಸಿದ್ದಲ್ಲಿ ಖಾಸಗಿ ಕಾರಿಗೆ 7.5 ಲಕ್ಷ ರು. ಹಾಗೂ ದ್ವಿಚಕ್ರವಾಗಿದ್ದಲ್ಲಿ ರು. 1 ಲಕ್ಷದ ವರಗೆ ರಕ್ಷಣೆಯನ್ನು ಒದಗಿಸುತ್ತದೆ.

ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇನ್ನು ಮತ್ತಷ್ಟು ದುಬಾರಿ..!

ಸಮಗ್ರ ಮೋಟಾರ್ ವಿಮಾ ನೀತಿ ಎಂದರೇನು?

ಸಮಗ್ರ ವಾಹನ ವಿಮೆಯು ಮೂರನೇ ವ್ಯಕ್ತಿ ಪಾಲಿಸಿಗಿಂತ ತುಂಬಾ ವಿಭಿನ್ನವಾಗಿದ್ದು, ವಾಹನಕ್ಕಾಗುವ ಎಲ್ಲ ನಷ್ಟವನ್ನು ಭರಿಸುತ್ತದೆ. ಇದರಂತೆ ಪಾಲಿಸಿ ಆಧಾರದಲ್ಲಿ ನಷ್ಟ ಪರಿಹಾರ ದೊರಕುತ್ತದೆ. ಇದರಲ್ಲಿ ಥರ್ಡ್ ಪಾರ್ಟಿ ಜತೆಗೆ ಬೆಂಕಿ, ಅಪಘಾತ, ಕಳವು, ಪ್ರವಾಹ, ಭೂಕಂಪ, ಗಲಭೆ ಇತ್ಯಾದಿ ಅನಿಷ್ಟಗಳಿಂದಾಗಿ ವಾಹನಕ್ಕಾಗುವ ನಷ್ಟಗಳ ಜತೆಗೆ ಸಹ ಪ್ರಯಾಣಿಕ ಸೇರಿದಂತೆ ಮಾಲಿಕರಿಗಾಗುವ ನಷ್ಟವನ್ನು ಭರಿಸುತ್ತದೆ.

Most Read Articles

Kannada
English summary
Third-Party Insurance Premium For Two-Wheelers Hiked: New Rates Effective From 16 June. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X