ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಪ್ರೀಮಿಯಂ ಬೈಕುಗಳ ಸಂಸ್ಕೃತಿಯು ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬೆಳವಣಿಗೆಯನ್ನು ಕಾಣುತ್ತಿದೆ. ಪ್ರೀಮಿಯಂ ಬೈಕುಗಳ ಖರೀದಿಯು ಹೆಚ್ಚಿದಂತೆಲ್ಲಾ ಹೊಸ ಬೈಕ್ ಸಂಸ್ಕೃತಿಯು ನಿರ್ಮಾಣವಾಗುತ್ತಿದೆ. ಜನರೂ ಸಹ ಬೈಕುಗಳ ಮೇಲೆ ಹೆಚ್ಚು ಖರ್ಚು ಮಾಡಲು ಸಿದ್ಧರಿದ್ದಾರೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅತ್ಯುತ್ತಮವಾದ ಬೈಕುಗಳನ್ನು ಹೊಂದಲು ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧರಿರುವ ಜನರಿದ್ದಾರೆ. ಬೈಕುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡುವ ವ್ಯಕ್ತಿಗಳಿಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹತ್ತು ಅತ್ಯಂತ ದುಬಾರಿ ಬೈಕುಗಳ ಬಗೆಗಿನ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ. ಈ ಬೈಕುಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಇಲ್ಲಿ ನಮೂದಿಸಲಾಗಿರುವ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

10. ಕವಾಸಕಿ ನಿಂಜಾ ಹೆಚ್2

ಬೆಲೆ ರೂ. 34.99 ಲಕ್ಷ

ಕವಾಸಕಿ ನಿಂಜಾ ಹೆಚ್2, ಈ ಪಟ್ಟಿಯಲ್ಲಿರುವ ಕಡಿಮೆ ಬೆಲೆಯ ಬೈಕ್ ಆಗಿದೆ. ಕವಾಸಕಿ ನಿಂಜಾ ಹೆಚ್2 ಬೈಕ್ ಅನ್ನು ಅಪ್‍‍ಡೇಟ್‍‍ಗೊಳಿಸಲಾಗಿದೆ. ಅಪ್‍‍‍ಡೇಟ್‍‍ನ ನಂತರ 31 ಬಿಎಚ್‌ಪಿ ಪವರ್ ಹಾಗೂ 8.2 ಎನ್‌ಎಂ ಟಾರ್ಕ್ ಅನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತದೆ. ಈ ಬೈಕ್ ಈಗ 231 ಎಚ್‌ಪಿ ಪವರ್ ಹಾಗೂ 141.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಬೈಕ್ ಈಗ ಸೆಲ್ಫ್ ಹೀಲಿಂಗ್ ಬಣ್ಣವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

9. ಇಂಡಿಯನ್ ಚೀಫ್‍‍ಟೇನ್ ಲಿಮಿಟೆಡ್

ಬೆಲೆ ರೂ.39.19 ಲಕ್ಷ

ಇಂಡಿಯನ್ ಚೀಫ್‍‍ಟೇನ್ ಲಿಮಿಟೆಡ್ ಬೈಕ್ ಅನ್ನು ಇಂಡಿಯನ್ ಮೋಟಾರ್‍‍‍ಸೈಕಲ್ ಕಂಪನಿಯು ಹಾರ್ಲೆ ಡೇವಿಡ್ಸನ್ ಟೂರಿಂಗ್ ಸರಣಿಯ ಬೈಕುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಳಿಸಿದೆ. ಇವೆರಡೂ ಕಂಪನಿಯ ಬೈಕುಗಳನ್ನು ಹೈವೇಗಳ ರಾಜನೆಂದು ಪರಿಗಣಿಸಲಾಗುತ್ತದೆ. 2019ರ ಚೀಫ್‍‍ಟೇನ್ ಲಿಮಿಟೆಡ್ ಬೈಕ್, ರೈಡ್ ಕಮಾಂಡ್ ಸಿಸ್ಟಂ ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಕಂಪನಿಯ ಪ್ರಕಾರ, ಎರಡು ವ್ಹೀಲ್‍‍ಗಳಲ್ಲಿ ವೇಗವಾಗಿ ಹಾಗೂ ಹೆಚ್ಚು ಕಸ್ಟಮೈಸಬಲ್ ಬಳಕೆಯ ಇಂಟರ್ ಫೇಸ್ ಆಗಿದ್ದು, ದೊಡ್ಡ ಸ್ಕ್ರೀನ್‍‍ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇಂಡಿಯನ್ ಚೀಫ್‍‍ಟೇನ್ ಬೈಕ್, ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಬೈಕಿನ ಮಾಹಿತಿ ಸೇರಿದಂತೆ ಇನ್ನಿತರ ಫೀಚರ್‍‍ಗಳನ್ನು ಹೊಂದಿದೆ. ಈ ಬೈಕಿನಲ್ಲಿರುವ 1811 ಸಿಸಿಯ ಥಂಡರ್ ಸ್ಟ್ರೋಕ್ 3 ವಿ ಟ್ವಿನ್ ಎಂಜಿನ್, 161 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

8. ಕವಾಸಕಿ ನಿಂಜಾ ಹೆಚ್ 2 ಕಾರ್ಬನ್

ಬೆಲೆ ರೂ.41.79 ಲಕ್ಷ

ಈ ಪಟ್ಟಿಯಲ್ಲಿರುವ ಕವಾಸಕಿ ಕಂಪನಿಯ ಎರಡನೇ ಬೈಕ್ ನಿಂಜಾ ಹೆಚ್ 2 ಕಾರ್ಬನ್. ಈ ಬೈಕ್ ಪೂರ್ಣ ಪ್ರಮಾಣದ ಕಾರ್ಬನ್ ಫೈಬರ್ ಅಪ್ಪರ್ ಕೌಲ್, ನವೀಕರಿಸಿದ ಇನ್‍‍‍ಟೇಕ್ ಸಿಸ್ಟಂ, ಇಸಿಯು, ಟಯರ್‍‍ಗಳು, ನಿಂಜಾ ಹೆಚ್‍2 ನಲ್ಲಿರುವ ಎಂಜಿನ್ ಹಾಗೂ ಸೆಲ್ಫ್ ಹೀಲಿಂಗ್ ಬಣ್ಣಗಳನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

7. ಇಂಡಿಯನ್ ರೋಡ್ ಮಾಸ್ಟರ್

ಬೆಲೆ ರೂ.42.15 ಲಕ್ಷ

ಹೈವೇಗಳಲ್ಲಿ ಸವಾರಿ ಮಾಡಲು ಬಯಸುವವರಿಗೆ ಇಂಡಿಯನ್ ಚೀಫ್‍‍ಟೇನ್ ಲಿಮಿಟೆಡ್ ಬೈಕ್ ಇದ್ದರೆ, ಕ್ರಾಸ್ ಕಂಟ್ರಿ ಟೂರರ್ ವಿಷಯಕ್ಕೆ ಬಂದಾಗ ಇಂಡಿಯನ್ ರೋಡ್‍‍ಮಾಸ್ಟರ್ ಬೈಕ್ ಇದೆ. ಈ ಬೈಕಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಅವುಗಳೆಂದರೆ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ವಿಂಡ್ ಡಿಫ್ಲೆಕ್ಟರ್, ಅಡ್ಜಸ್ಟಬಲ್ ಫುಟ್‌ಪೆಗ್‌, ಹೀಟೆಡ್ ಗ್ರಿಪ್, ಕ್ರೂಸ್ ಕಂಟ್ರೋಲ್, ಹೀಟೆಡ್ ಸೀಟುಗಳು ಹಾಗೂ ಕೀ ಲೆಸ್ ಇಗ್ನಿಷನ್. ಇಂಡಿಯನ್ ಮೋಟರ್ ಸೈಕಲ್ಸ್ ಈ ವರ್ಷದ ಆರಂಭದಲ್ಲಿ ರೂ.48 ಲಕ್ಷ ಬೆಲೆಯ ಇಂಡಿಯನ್ ರೋಡ್ ಮಾಸ್ಟರ್ ಎಲೈಟ್ ಬೈಕ್ ಅನ್ನು ಮಾರಾಟ ಮಾಡಿತ್ತು.

MOST READ: ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

6. ಹಾರ್ಲೆ ಡೇವಿಡ್ಸನ್ ಸಿವಿಒ

ಬೆಲೆ ರೂ.50.53 ಲಕ್ಷ

ಹಾರ್ಲೆ ಡೇವಿಡ್ಸನ್ ಬೈಕುಗಳ ಬಗ್ಗೆ ಮಾತನಾಡದೇ ಹೈವೇ ಹಾಗೂ ಕ್ರಾಸ್ ಕಂಟ್ರಿ ಟೂರ್ ಬೈಕುಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅಮೇರಿಕ ಮೂಲದ ಬೈಕುಗಳ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್, ಸಿವಿಒ ಅಂದರೆ ಕಸ್ಟಮ್ ವೆಹಿಕಲ್ ಆಪರೇಶನ್ಸ್ ಬೈಕುಗಳನ್ನು ತಯಾರಿಸುತ್ತದೆ. ಈ ಬೈಕಿನಲ್ಲಿ 1923 ಸಿಸಿಯ ಮಿಲ್ವಾಕೀ 117 ಎಂಜಿನ್ ಅಳವಡಿಸಲಾಗಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಆಡಿಯೊ ಸಿಸ್ಟಂ, ಹೀಟೆಡ್ ಗ್ರಿಪ್, ಹೀಟೆಡ್ ಸೀಟ್ ಹಾಗೂ ಕೀ ಲೆಸ್ ಇಗ್ನಿಷನ್ ಸೇರಿ ಹಲವಾರು ಫೀಚರ್‍‍ಗಳನ್ನು ನೀಡಲಾಗಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

5. ಡುಕಾಟಿ ಪ್ಯಾನಿಗಲ್ ವಿ 4 ಸ್ಪೆಷಲ್

ಬೆಲೆ ರೂ.51.8 ಲಕ್ಷ

ಕ್ರೂಸರ್‌ ಬೈಕುಗಳ ಪಟ್ಟಿಯಲ್ಲಿರುವ ಮೊದಲ ಐದು ಸ್ಥಾನಗಳನ್ನು ಸೂಪರ್‍‍ಬೈಕುಗಳು ಪಡೆದಿವೆ. ಡುಕಾಟಿ ಪ್ಯಾನಿಗಲ್ ವಿ 4 ಸ್ಪೆಷಲ್‌ ಐದನೇ ಸ್ಥಾನದಲ್ಲಿದೆ. ಈ ಬೈಕಿನಲ್ಲಿ ಅಡ್ಜಸ್ಟಬಲ್ ಫುಟ್ ಪೆಗ್‌, ಸಾಕಷ್ಟು ಪ್ರಮಾಣದ ಕಾರ್ಬನ್ ಫೈಬರ್ ಬಿಟ್‌, ಅಲ್ಕಾಂಟರಾ ಸೀಟುಗಳು ಹಾಗೂ ಪೂರ್ಣ ಪ್ರಮಾಣದ ಅಕ್ರಾಪೊವಿಕ್ ಎಕ್ಸಾಸ್ಟ್ ಸಿಸ್ಟಂಗಳಿವೆ. ಈ ಬೈಕಿನಲ್ಲಿರುವ ಎಂಜಿನ್ 226 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ. ವಿಶ್ವದ್ಯಾಂತ ಈ ಬೈಕಿನ 1,500 ಯುನಿಟ್‍‍ಗಳನ್ನು ಮಾತ್ರ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

4. ಡುಕಾಟಿ ಪ್ಯಾನಿಗಲ್ ವಿ 4 ಆರ್

ಬೆಲೆ ರೂ.51.87 ಲಕ್ಷ

ಪ್ಯಾನಿಗಲ್ ವಿ 4 ಆರ್ ಏಕರೂಪದ ಆವೃತ್ತಿಯಾಗಿದ್ದು, 998 ಸಿಸಿಯ ವಿ 4 ಎಂಜಿನ್‌ ಹೊಂದಿದೆ. ಈ ಎಂಜಿನ್ 221 ಬಿಹೆಚ್‌ಪಿ ಪವರ್ ಹಾಗೂ 112 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಡುಕಾಟಿ ಕಂಪನಿಯ ಅಕ್ರಪೋವಿಕ್ ಎಕ್ಸಾಸ್ಟ್ ಸಿಸ್ಟಂ ಅನ್ನು ಈ ಬೈಕಿನಲ್ಲಿ ಅಳವಡಿಸಿದರೆ, 15,500 ಆರ್‍‍ಪಿ‍ಎಂನಲ್ಲಿ 234 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸಲಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಲಶಾಲಿ ಬೈಕುಗಳ ಪೈಕಿ ಒಂದು.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

3. ಡುಕಾಟಿ ಪ್ಯಾನಿಗಲ್ ವಿ4 ಆನಿವರ್ಸರಿಯೊ 916

ಬೆಲೆ ರೂ.54.90 ಲಕ್ಷ

ಡುಕಾಟಿ ಪ್ಯಾನಿಗಲೆ ವಿ 4 ಆರ್ ಬೈಕ್ ಅತ್ಯಂತ ಪರ್ಫಾಮೆನ್ಸ್ ಆಧಾರಿತ ಡುಕಾಟಿ ಆಗಿದ್ದರೆ, ಸೀಮಿತ ಆವೃತ್ತಿಯ ಪ್ಯಾನಿಗಲೆ ವಿ 4 25 ಆನಿವರ್ಸರಿಯೊ 916 ಅತ್ಯಂತ ದುಬಾರಿ ಬೆಲೆಯ ಡುಕಾಟಿ ವಿ4 ಆಗಿದೆ. ಈ ಬೈಕ್ ಕಂಪನಿಯ ಐತಿಹಾಸಿಕ ಬೈಕ್ ಆದ 916ರ 25 ವರ್ಷಗಳ ನೆನಪಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕ್ ಸಾರ್ವಕಾಲಿಕ ಅತ್ಯಂತ ಯಶಸ್ವಿ ಡುಕಾಟಿ ರೇಸಿಂಗ್ ಬೈಕ್ ಆಗಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಈ ಬೈಕ್ ಅನ್ನು ವಿಶ್ವದ್ಯಾಂತ ಸೀಮಿತ ಸಂಖ್ಯೆಯಲ್ಲಿ, ಅಂದರೆ 500 ಬೈಕು‍ಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಈ ಬೈಕ್ ಇದುವರೆಗೂ 120 ರೇಸ್‍‍ಗಳಲ್ಲಿ ಗೆಲುವು ಸಾಧಿಸಿ, 8 ಕನ್‌ಸ್ಟ್ರಕ್ಟರ್‌ ಪ್ರಶಸ್ತಿ ಹಾಗೂ ಆರು ರೈಡರ್ ಪ್ರಶಸ್ತಿಗಳನ್ನು ಗೆದ್ದಿದೆ. ಪ್ಯಾನಿಗಲೆ ವಿ4 25 ಆನಿವರ್ಸರಿಯೊ 916 ಬೈಕ್, ಐತಿಹಾಸಿಕ ಬೈಕಿಗೆ ನೀಡುತ್ತಿರುವ ದೊಡ್ಡ ಗೌರವವಾಗಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಈ ಬೈಕಿನ ಮೆಕಾನಿಕಲ್ ಬದಲಾವಣೆಗಳ ವಿಷಯದ ಬಗ್ಗೆ ಹೇಳುವುದಾದರೆ, ಈ ಬೈಕ್ ಪ್ಯಾನಿಗಲ್ ವಿ4 ಎಸ್‌ ಬೈಕಿನಲ್ಲಿರುವಂತಹ ಎಂಜಿನ್ ಹಾಗೂ ಸಸ್ಪೆಂಷನ್‍‍ಗಳನ್ನು ಹೊಂದಿದೆ. ಸ್ಪೋರ್ಟಿಯರ್ ಫ್ರೇಮ್‍‍ಗಳನ್ನು ವಿ4 ಆರ್ ಬೈಕಿನಿಂದ ಪಡೆದಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಕಾರ್ಬನ್ ಫೈಬರ್ ಹಾಗೂ ಬಿಲೆಟ್ ಅಲ್ಯೂಮಿನಿಯಂ ಕಾಂಪೊನೆಂಟ್‍‍ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

2. 2019 ಕವಾಸಕಿ ನಿಂಜಾ ಹೆಚ್ 2 ಆರ್

ಬೆಲೆ ರೂ.75.80 ಲಕ್ಷ

ಕವಾಸಕಿ ನಿಂಜಾ ಹೆಚ್ 2 ಆರ್, ಈ ಪಟ್ಟಿಯಲ್ಲಿರುವ ಮತ್ತೊಂದು ಕವಾಸಕಿ ಬೈಕ್. ಈ ಬೈಕ್ ಅತ್ಯಂತ ರೋಮಾಂಚಕಾರಿ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿರುವ 998 ಸಿಸಿ ಎಂಜಿನ್ ಸೂಪರ್ ಚಾರ್ಜ್ ಆಗಿದ್ದು, ಬಹುತೇಕ ನಂಬಲಾಸಾಧ್ಯವಾದ 326 ಬಿಹೆಚ್‌ಪಿ ಪವರ್ ಹಾಗೂ 165 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಈ ಬೈಕಿನಲ್ಲಿ ಬ್ರೆಂಬೊ ಸ್ಟೈಲಿನ ಮಾ ಬ್ರೇಕ್‌, ಸೆಲ್ಫ್ ಹೀಲಿಂಗ್ ಹೆಚ್ 2 ಪೇಂಟ್ ಹಾಗೂ ಎಂಜಿನ್ ಕೇಸಿಂಗ್‍‍ನಲ್ಲಿ ಹೊಸ ಸೂಪರ್ ಚಾರ್ಜ್ ಲಾಂಛನಗಳಿವೆ. ಈ ಬೈಕುಗಳನ್ನು ರೇಸ್ ಟ್ರ್ಯಾಕ್‌‍‍ಗಳಿಗಾಗಿಯೇ ತಯಾರಿಸಲಾಗಿದ್ದು, ರಸ್ತೆಗಳಲ್ಲಿ ಬಳಸುವಂತಿಲ್ಲ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

1. ಬಿಎಂಡಬ್ಲ್ಯು ಹೆಚ್‌ಪಿ 4 ರೇಸ್

ಬೆಲೆ ರೂ.86.70 ಲಕ್ಷ

ಬಿಎಂಡಬ್ಲ್ಯು ಹೆಚ್‌ಪಿ 4 ರೇಸ್ ಭಾರತದಲ್ಲಿರುವ ಅತ್ಯಂತ ದುಬಾರಿ ಬೆಲೆಯ ಬೈಕ್ ಆಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಈ ಬೈಕಿನ ತುಂಬಾರ ಕಾರ್ಬನ್ ಫೈಬರ್ ಅನ್ನು ವ್ಯಾಪಕವಾಗಿ ಬಳಸಲಾಗಿದೆ. ಬಿಎಂಡಬ್ಲ್ಯು ಹೆಚ್‌ಪಿ 4 ರೇಸ್ ಮೈನ್‌ಫ್ರೇಮ್ ಅನ್ನು ನೀಡುವ ವಿಶ್ವದ ಮೊದಲ ಉತ್ಪಾದನಾ ಬೈಕ್ ಆಗಿದೆ.

ಭಾರತದಲ್ಲಿ ಮಾರಾಟವಾಗುವ ಹತ್ತು ದುಬಾರಿ ಬೈಕುಗಳಿವು

ಈ ಬೈಕ್ ಅನ್ನು 7.8 ಕಿಲೋ ತೂಕದ ಕಾರ್ಬನ್ ಫೈಬರ್‌ನಿಂದ ಪೂರ್ಣವಾಗಿ ತಯಾರಿಸಲಾಗಿದೆ. ಈ ಬೈಕಿನಲ್ಲಿ ಕಾರ್ಬನ್ ಫೈಬರ್ ವ್ಹೀಲ್‍‍ಗಳೂ ಸಹ ಇವೆ. ಈ ಬೈಕ್ 171 ಕೆ.ಜಿ ತೂಕವನ್ನು ಹೊಂದಿದೆ. ಈ ಬೈಕಿನಲ್ಲಿರುವ ಎಂಜಿನ್ 215 ಬಿ‍‍ಹೆಚ್‌ಪಿ ಉತ್ಪಾದಿಸುತ್ತದೆ. ಈ ಬೈಕುಗಳನ್ನೂ ಸಹ ಸಾಮಾನ್ಯ ರಸ್ತೆಗಳಲ್ಲಿ ಚಲಾಯಿಸುವಂತಿಲ್ಲ. ರೇಸ್ ಟ್ರ್ಯಾಕ್‌ಗಳಲ್ಲಿ ಮಾತ್ರ ಚಲಾಯಿಸಲು ತಯಾರಿಸಲಾಗಿದೆ.

Most Read Articles

Kannada
English summary
Top 10 Most Expensive Motorcycles on Sale in India - Read in kannada
Story first published: Friday, August 16, 2019, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X