ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೀರೋ ಮೋಟೊಕಾರ್ಪ್ ಅಗ್ರಸ್ಥಾನದಲ್ಲಿದ್ದು, ಸ್ಪ್ಲೆಂಡರ್ ಮಾದರಿಯ ಬೈಕ್ ಅತಿ ಹೆಚ್ಚು ಮಾರಾಟವಾಗಿದೆ.

ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಹೀರೋ ಮೋಟೊಕಾರ್ಪ್ ತನ್ನ ಸ್ಪ್ಲೆಂಡರ್ ಮತ್ತು ಹೆಚ್‍ಎಫ್ ಡೀಲಕ್ಸ್ ಮಾದರಿಯ ಬೈಕುಗಳನ್ನು ಹೆಚ್ಚು ಮಾರಾಟ ಮಾಡುವ ಮೂಲಕ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಸ್ಪ್ಲೆಂಡರ್ ನ 2,23,532 ಬೈಕುಗಳನ್ನು ಮಾರಾಟ ಮಾಡಲಾಗಿದ್ದರೆ, ಹೆಚ್‍ಎಫ್ ಡೀಲಕ್ಸ್ ನ 1,82,029 ಬೈಕುಗಳನ್ನು ಮಾರಾಟ ಮಾಡಲಾಗಿದೆ. ಏಪ್ರಿಲ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಹೀರೊ ಸ್ಪ್ಲೆಂಡರ್‍‍ನ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಏಪ್ರಿಲ್ ತಿಂಗಳಿನಲ್ಲಿ 2,46,656 ಸ್ಪ್ಲೆಂಡರ್ ಬೈಕುಗಳನ್ನು ಮಾರಾಟ ಮಾಡಲಾಗಿತ್ತು.

ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಆದರೆ ಹೀರೋ ಹೆಚ್‍ಎಫ್ ಡೀಲಕ್ಸ್ ಬೈಕಿನ ಮಾರಾಟದಲ್ಲಿ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ 1,46,162 ಬೈಕುಗಳನ್ನು ಮಾರಾಟ ಮಾಡಲಾಗಿತ್ತು. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಹೋಂಡಾ ಸಿಬಿ ಶೈನ್ ಮತ್ತು ಬಜಾಜ್ ಪಲ್ಸರ್‍‍‍ನ ಬೈಕುಗಳಿವೆ. ಏಪ್ರಿಲ್ 2019ರಲ್ಲಿ ಮಾರಾಟವಾದ ಬೈಕುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ಸ್ಥಾನ

ಮಾದರಿ

ಏಪ್ರಿಲ್ 2019ರಲ್ಲಿನ ಮಾರಾಟ ಪ್ರಮಾಣ

1

ಹೀರೋ ಸ್ಪ್ಲೆಂಡರ್

2,23,532

2

ಹೀರೋ ಹೆಚ್‍ಎಫ್ ಡೀಲಕ್ಸ್

1,82,029

3

ಹೋಂಡಾ ಸಿಬಿ ಶೈನ್

82,315

4

ಬಜಾಜ್ ಪಲ್ಸರ್

75,589

5

ಹೀರೋ ಗ್ಲಾಮರ್

67,829

6

ಬಜಾಜ್ ಪ್ಲಾಟಿನಾ

67,599

7

ಹೀರೋ ಪ್ಯಾಷನ್ 59,138

8

ಬಜಾಜ್ ಸಿಟಿ 45,693

9

ಟಿವಿ‍ಎಸ್ ಅಪಾಚೆ 43,499

10

ರಾಯಲ್ ಎನ್‍‍‍ಫೀಲ್ಡ್ 350

35,196

ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಹೋಂಡಾ ಕಂಪನಿಯ ಸಿಬಿ ಶೈನ್ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ 2019ರಲ್ಲಿ 82,315 ಸಿಬಿ ಶೈನ್ ಬೈಕುಗಳನ್ನು ಮಾರಾಟ ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ 29,827 ಬೈಕುಗಳನ್ನು ಮಾರಾಟ ಮಾಡಲಾಗಿತ್ತು. ಮಾರ್ಚ್ ತಿಂಗಳಿನಲ್ಲಿ 10ನೇ ಸ್ಥಾನದಲ್ಲಿದ್ದ ಸಿಬಿ ಶೈನ್ ಏಪ್ರಿಲ್ 2019ರಲ್ಲಿ ಮೂರನೇ ಸ್ಥಾನಕ್ಕೇರಿದೆ.

ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಬಜಾಜ್ ತನ್ನ ಜನಪ್ರಿಯ ಪಲ್ಸರ್ ಸರಣಿಯ ಬೈಕುಗಳನ್ನು ಹೆಚ್ಚು ಮಾರಾಟ ಮಾಡುವ ಮೂಲಕ ಟಾಪ್ 5 ರೊಳಗಿನ ಸ್ಥಾನ ಪಡೆದಿದೆ. ಆದರೂ ಮಾರ್ಚ್ ಹಾಗೂ ಏಪ್ರಿಲ್ ನಡುವಿನ ಅವಧಿಯಲ್ಲಿ 75,589 ರಷ್ಟು ಬೈಕುಗಳನ್ನು ಮಾರಾಟ ಮಾಡಲಾಗಿದ್ದು, ಸುಮಾರು 25,000 ಬೈಕುಗಳಷ್ಟು ಕುಸಿತ ಉಂಟಾಗಿದೆ. ಇನ್ನು ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿರುವ ಹೀರೋ ಗ್ಲಾಮರ್‍‍ನ 67,829 ಬೈಕುಗಳನ್ನು ಮಾರಾಟ ಮಾಡಲಾಗಿದೆ. ನಂತರದ ಸ್ಥಾನಗಳಲ್ಲಿ ಬಜಾಜ್ ಪ್ಲಾಟಿನಾ, ಹೀರೋ ಪ್ಯಾಷನ್, ಬಜಾಜ್ ಸಿಟಿ, ಟಿ‍‍ವಿ‍ಎಸ್ ಅಪಾಚೆ ಸರಣಿಯ ಬೈಕುಗಳು ಮತ್ತು ರಾಯಲ್ ಎನ್‍‍‍ಫೀಲ್ಡ್ 350 ಬೈಕುಗಳಿವೆ.

MOST READ: ಸ್ಪಾಟ್ ಟೆಸ್ಟ್ ನಡೆಸಿದ ಬಜಾಜ್ ಅರ್ಬನೈಟ್ ?

ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೆಚ್ಚು ಮಾರಾಟವಾದ ಬೈಕುಗಳ ಪಟ್ಟಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗದೇ, ಮಾರ್ಚ್ 2019ರಲ್ಲಿದ್ದ ಪಟ್ಟಿಯೇ ಬಹುತೇಕ ಮುಂದುವರೆದಿದೆ. ಆದರೆ ಅನೇಕ ಕಂಪನಿಗಳ ಸ್ಥಾನದಲ್ಲಿ ಪಲ್ಲಟವಾಗಿದೆ. ಇತ್ತೀಚಿಗಷ್ಟೇ ಹೀರೋ ಈ ಸೆಗ್‍‍ಮೆಂಟಿನಲ್ಲಿ ಮೂರು ಹೊಸ ಬೈಕುಗಳನ್ನು ಬಿಡುಗಡೆ ಮಾಡಿದೆ, ಇದರಿಂದಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಏರು ಪೇರಾಗುವ ಸಾಧ್ಯತೆಗಳಿವೆ.

Source: AutoPunditz

Most Read Articles

Kannada
English summary
Top-Selling Bikes In India For April 2019 — Hero MotoCorp Receives Stiff Competition From Honda - Read in kannada
Story first published: Thursday, May 23, 2019, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X