ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

2019ರ ಮೇ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‌ಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಹೋಂಡಾ ಆಕ್ಟಿವಾ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಹೋಂಡಾ ಆಕ್ಟಿವಾ 5ಜಿ ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ ಸ್ಕೂಟರ್‌ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. 2019ರ ಏಪ್ರಿಲ್‍ ತಿಂಗಳಿನಲ್ಲಿ ಅಗ್ರ ಐದು ಸ್ಥಾನಗಳಲ್ಲಿದ್ದ ಕಂಪನಿಗಳು ಅದೇ ಸ್ಥಾನದಲ್ಲಿ ಮುಂದುವರೆದಿವೆ. ಹೋಂಡಾ ಆಕ್ಟಿವಾ, ಟಿವಿಎಸ್ ಜುಪಿಟರ್, ಸುಜುಕಿ ಆಕ್ಸೆಸ್ 125, ಹೋಂಡಾ ಡಿಯೋ ಹಾಗೂ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‍‍ಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ.

ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಆದರೆ ಈ ಸ್ಕೂಟರ್‌ಗಳ ಮಾರಾಟ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮೇ ತಿಂಗಳಿನಲ್ಲಿ 2,18,734 ಹೋಂಡಾ ಆಕ್ಟಿವಾ ಸ್ಕೂಟರ್‍‍ಗಳ ಮಾರಾಟವಾಗಿದೆ. ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಸುಮಾರು 8,000 ಸ್ಕೂಟರ್‍‍ಗಳ ಹೆಚ್ಚು ಮಾರಾಟವಾಗಿದೆ.

ಸ್ಥಾನ ಸ್ಕೂಟರ್ ಮಾದರಿ ಮೇ 2019ರಲ್ಲಿನ ಮಾರಾಟ
1 ಹೋಂಡಾ ಆಕ್ಟಿವಾ 2,18,734
2 ಟಿವಿ‍ಎಸ್ ಜೂಪಿಟರ್ 56,797
3 ಸುಜುಕಿ ಆಕ್ಸೆಸ್ 51,414
4 ಹೋಂಡಾ ಡಿಯೊ 46,840
5 ಟಿವಿ‍ಎಸ್ ಎನ್‍‍ಟಾರ್ಕ್ 21,010
6 ಹೀರೋ ಡೆಸ್ಟಿನಿ 125 16,752
7 ಯಮಹಾ ಫಸಿನೋ 15,459
8 ಹೀರೊ ಮ್ಯಾಸ್ಟ್ರೋ 13,423
9 ಹೋಂಡಾ ಗ್ರಾಜಿಯಾ 11,513
10 ಯಮಹಾ ರೇ 10,920
ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಟಿವಿಎಸ್ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್125 ಸ್ಕೂಟರ್‍‍ಗಳ ಮಾರಾಟವೂ ಹೆಚ್ಚಾಗಿದೆ. 56,797 ಸ್ಕೂಟರ್‍‍ಗಳ ಮಾರಾಟದೊಂದಿಗೆ ಟಿವಿಎಸ್ ಜೂಪಿಟರ್‍ ಎರಡನೇ ಸ್ಥಾನದಲ್ಲಿದೆ.

ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

51,414 ಸ್ಕೂಟರ್‍‍ಗಳ ಮಾರಾಟದೊಂದಿಗೆ ಸುಜುಕಿ ಆಕ್ಸೆಸ್ 125 ಮೂರನೇ ಸ್ಥಾನದಲ್ಲಿದೆ. ಹೋಂಡಾ ಡಿಯೊದ 46,840 ಸ್ಕೂಟರ್‍‍ಗಳು ಮಾರಾಟವಾಗಿ ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ. ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ 21,010 ಯುನಿಟ್‍‍ಗಳ ಮಾರಾಟದೊಂದಿಗೆ ಐದನೇ ಸ್ಥಾನದಲ್ಲಿದೆ. ಈ ಪಟ್ಟಿಯ ಕೊನೆಯ ಐದು ಸ್ಥಾನಗಳಲ್ಲಿ ಹೀರೋ ಡೆಸ್ಟಿನಿ 125, ಯಮಹಾ ಫ್ಯಾಸಿನೊ, ಹೀರೋ ಮೆಸ್ಟ್ರೋ, ಹೋಂಡಾ ಗ್ರಾಜಿಯಾ ಮತ್ತು ಯಮಹಾ ರೇ ಸ್ಕೂಟರ್‍‍ಗಳಿವೆ.

MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಈ ಸ್ಕೂಟರ್‍‍ಗಳು ಕ್ರಮವಾಗಿ 16,572, 15,459, 13,423, 11,513 ಹಾಗೂ 10,920 ಮಾರಾಟವಾಗಿವೆ. ಹೀರೋ ಕಳೆದ ತಿಂಗಳು ಹೀರೋ ಪ್ಲೆಷರ್ 110 ಹಾಗೂ ಹೀರೋ ಮೆಸ್ಟ್ರೋ ಎಡ್ಜ್ 125 ಹೆಸರಿನ ಎರಡು ಹೊಸ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

MOST READ: ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಎರಡೂ ಹೊಸ ಸ್ಕೂಟರ್‌ಗಳಲ್ಲಿ ಹೊಸ ಹೊಸ ಫೀಚರ್‍‍ಗಳನ್ನು ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ. ಹೀರೋ ಮೊಟೊಕಾರ್ಪ್ ಈ ಎರಡು ಹೊಸ ಸ್ಕೂಟರ್‍‍ಗಳ ಬಿಡುಗಡೆಯೊಂದಿಗೆ ತನ್ನ ಮಾರಾಟ ಪ್ರಮಾಣವನ್ನು ಏರಿಸಿಕೊಳ್ಳುವ ಗುರಿಯನ್ನು ಹೊಂದಿದೆ.

MOST READ: ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಆಕ್ಟಿವಾ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಸ್ಕೂಟರ್ ಆಗಿದೆ. ಈ ಸ್ಕೂಟರ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಮೂಲಕ, ಪ್ರತಿ ತಿಂಗಳ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತಿದೆ. ಶೀಘ್ರದಲ್ಲಿಯೇ ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವಂತಹ ಎಂಜಿನ್ ಹೊಂದಿರುವ ಹೊಸ ಆಕ್ಟಿವಾ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ.

Most Read Articles

Kannada
English summary
Top-Selling Scooters In India For May 2019 — Honda Activa Retains The Top-Ranking Once Again - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X