ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಪೈಕಿ 16.58%ನಷ್ಟು ಕುಸಿತ ಉಂಟಾಗಿದೆ. 2018ರ ಆಗಸ್ಟ್ ನಲ್ಲಿ 12,39,084 ಯುನಿಟ್‍‍ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 10,33,585 ಯುನಿಟ್‍‍ಗಳ ಮಾರಾಟವಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಪ್ರತಿ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ, ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ 0.03%ನಷ್ಟು ಅಲ್ಪ ಪ್ರಮಾಣದ ಕುಸಿತ ಉಂಟಾಗಿದೆ. ಜುಲೈ ತಿಂಗಳಿನಲ್ಲಿ 10,33,241 ಯುನಿಟ್‍‍ಗಳ ಮಾರಾಟವಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ಹೆಚ್ಚಿನ ಪ್ರಮಾಣದ ಕುಸಿತವನ್ನು ಕಂಡಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 3,10,851 ಯುನಿಟ್‍ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 2,34,279 ಯುನಿಟ್‍‍ಗಳ ಮಾರಾಟವಾಗಿ, 24.63%ನಷ್ಟು ಕುಸಿತ ಉಂಟಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ತಿಂಗಳ ಮಾರಾಟದ ಪ್ರಕಾರ ಜುಲೈ ತಿಂಗಳಿನಲ್ಲಿ ಹೋಂಡಾ ಆಕ್ಟಿವಾ ಸ್ಕೂಟರಿನ 2,43,604 ಯುನಿಟ್‍‍ಗಳ ಮಾರಾಟವಾಗಿತ್ತು. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ 3.83%ನಷ್ಟು ನಷ್ಟ ಉಂಟಾಗಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಹೀರೋ ಎಚ್‌ಎಫ್ ಡಿಲಕ್ಸ್ ಬೈಕುಗಳಿವೆ.

ಸ್ಥಾನ ಮಾದರಿಗಳು ಆಗಸ್ಟ್ 19 ಆಗಸ್ಟ್ 18 ವ್ಯತ್ಯಾಸ %
1 ಹೋಂಡಾ ಆಕ್ಟಿವಾ 2,34,279 3,10,851 -24.63
2 ಹೀರೋ ಸ್ಪ್ಲೆಂಡರ್ 2,12,839 2,47,116 -13.87
3 ಹೀರೋ ಹೆಚ್‍ಎಫ್ ಡೀಲಕ್ಸ್ 1,60,684 1,83,716 -12.54
4 ಹೋಂಡಾ ಸಿಬಿ ಶೈನ್ 87,434 1,08,790 -19.63
5 ಬಜಾಜ್ ಪಲ್ಸರ್ 70,562 70,051 0.73
6 ಹೀರೊ ಗ್ಲಾಮರ್ 60,706 74,097 -18.07
7 ಟಿವಿ‍ಎಸ್ ಜೂಪಿಟರ್ 57,849 79,223 -26.98
8 ಟಿವಿ‍ಎಸ್ ಎಕ್ಸ್ ಎಲ್ ಸೂಪರ್ ಲೂನಾ 55,812 70,883 -21.26
9 ಸುಜುಕಿ ಆಕ್ಸೆಸ್ 48,646 48,436 0.43
10 ಬಜಾಜ್ ಪ್ಲಾಟಿನಾ 44,774 45,921 -2.50
ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಮಾರಾಟದ ಕುಸಿತದ ದೃಷ್ಟಿಯಿಂದ ಎರಡೂ ಮೋಟರ್ ಸೈಕಲ್‌ಗಳು ಕ್ರಮವಾಗಿ 13.87% ಹಾಗೂ 12.54%ನಷ್ಟು ಕುಸಿದಿವೆ. 2018ರ ಆಗಸ್ಟ್ ನಲ್ಲಿ ಸ್ಪ್ಲೆಂಡರ್ ಬೈಕಿನ 2,47,116 ಯುನಿಟ್‌ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 2,12,839 ಯುನಿಟ್‌ಗಳಿಗೆ ಇಳಿದಿದೆ. ತಿಂಗಳ ಮಾರಾಟದ ಪ್ರಕಾರ 18.97%ನಷ್ಟು ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ 1,78,907 ಯುನಿಟ್‌ಗಳ ಮಾರಾಟವಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಎಚ್‌ಎಫ್ ಡಿಲಕ್ಸ್ ಮಾರಾಟವು 2018ರ ಆಗಸ್ಟ್ ನಲ್ಲಿ 1,83,716 ಯುನಿಟ್‌ಗಳಾಗಿತ್ತು. ಈ ವರ್ಷ ಈ ಪ್ರಮಾಣವು 1,60,684 ಯುನಿಟ್‍‍ಗಳಿಗೆ ಇಳಿದಿದೆ. ತಿಂಗಳ ಮಾರಾಟದಲ್ಲಿಯೂ 5.27%ನಷ್ಟು ಕುಸಿತ ಉಂಟಾಗಿದೆ. ಈ ವರ್ಷದ ಜುಲೈ ತಿಂಗಳಿನಲ್ಲಿ 1,69,632 ಯುನಿಟ್‌ಗಳ ಮಾರಾಟವಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹೋಂಡಾ ಸಿಬಿ ಶೈನ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಬೈಕ್ 19.63%ನಷ್ಟು ಕುಸಿತ ದಾಖಲಿಸಿದೆ. ಮಾರಾಟ ಪ್ರಮಾಣವು ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. 2018ರ ಆಗಸ್ಟ್ ನಲ್ಲಿ 1,08,790 ಯುನಿಟ್‌ಗಳ ಮಾರಾಟವಾಗಿದ್ದರೆ, ಈ ವರ್ಷ 87,434 ಯುನಿಟ್‌ಗಳಿಗೆ ಇಳಿದಿದೆ. ತಿಂಗಳ ಮಾರಾಟದಲ್ಲಿ 7.53%ನಷ್ಟು ಕುಸಿದಿದೆ. ಜುಲೈ ತಿಂಗಳಿನಲ್ಲಿ 94,559 ಯುನಿಟ್‌ಗಳ ಮಾರಾಟವಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಬಜಾಜ್ ಪಲ್ಸರ್ ಬೈಕಿನ ಮಾರಾಟವು 0.73%ನಷ್ಟು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷದ ಆಗಸ್ಟ್ ನಲ್ಲಿ 70,562 ಯುನಿಟ್‌ಗಳ ಮಾರಾಟವಾಗಿದ್ದರೆ, ಕಳೆದ ವರ್ಷದ ಆಗಸ್ಟ್ ನಲ್ಲಿ 70,051 ಯುನಿಟ್‌ಗಳ ಮಾರಾಟವಾಗಿತ್ತು. ತಿಂಗಳ ಮಾರಾಟ ಪ್ರಮಾಣವು 12.96% ನಷ್ಟು ಹೆಚ್ಚಾಗಿದೆ. ಜುಲೈ ತಿಂಗಳಿನಲ್ಲಿ 62,469 ಯುನಿಟ್‌ಗಳ ಮಾರಾಟವಾಗಿತ್ತು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಹೀರೋ ಗ್ಲಾಮರ್ ಬೈಕ್, 18.07%ನಷ್ಟು ಕುಸಿತ ಕಂಡಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 74,097 ಯುನಿಟ್‌ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 60,762 ಯುನಿಟ್‍‍ಗಳ ಮಾರಾಟವಾಗಿದೆ. ತಿಂಗಳ ಮಾರಾಟದಲ್ಲೂ 14.69%ನಷ್ಟು ಕುಸಿತವಾಗಿದೆ. ಜುಲೈ ತಿಂಗಳಿನಲ್ಲಿ 71,160 ಯುನಿಟ್‌ಗಳ ಮಾರಾಟವಾಗಿತ್ತು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಈ ಪಟ್ಟಿಯ ಏಳು ಹಾಗೂ ಎಂಟನೇ ಸ್ಥಾನದಲ್ಲಿ ಟಿವಿಎಸ್ ಕಂಪನಿಯ ಜೂಪಿಟರ್ ಸ್ಕೂಟರ್ ಹಾಗೂ ಎಕ್ಸ್ ಎಲ್ ಸೂಪರ್ ಲೂನಾಗಳಿವೆ. ಟಿವಿ‍ಎಸ್ ಕಂಪನಿಯ ಯಾವ ಬೈಕುಗಳೂ ಈ ಪಟ್ಟಿಯಲ್ಲಿಲ್ಲದಿದ್ದರೂ ಜೂಪಿಟರ್ ಸ್ಕೂಟರ್, ಟಿ‍‍ವಿ‍ಎಸ್ ಕಂಪನಿಯ ಹೆಚ್ಚು ಮಾರಾಟವಾಗುತ್ತಿರುವ ವಾಹನವಾಗಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಆಗಸ್ಟ್ ತಿಂಗಳಿನಲ್ಲಿ ಜೂಪಿಟರ್ ಸ್ಕೂಟರಿನ 57,849 ಯುನಿಟ್‍‍ಗಳ ಮಾರಾಟವಾಗಿದ್ದರೆ, 2018ರ ಆಗಸ್ಟ್ ತಿಂಗಳಿನಲ್ಲಿ 79,223 ಯುನಿಟ್‍‍ಗಳ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 26.98%ನಷ್ಟು ಕುಸಿತವಾಗಿದೆ. ತಿಂಗಳ ಮಾರಾಟದಲ್ಲಿ 0.20%ನಷ್ಟು ಹೆಚ್ಚಳವಾಗಿದೆ. ಜುಲೈ ತಿಂಗಳಿನಲ್ಲಿ 57,731 ಯುನಿಟ್‌ಗಳ ಮಾರಾಟವಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಟಿವಿಎಸ್ ಎಕ್ಸ್‌ಎಲ್ ಸೂಪರ್ ಲೂನಾ ಮಾರಾಟವು 21.26%ನಷ್ಟು ಕುಸಿದಿದೆ. ಈ ವರ್ಷದ ಆಗಸ್ಟ್ ನಲ್ಲಿ 55,812 ಯುನಿಟ್‌ಗಳ ಮಾರಾಟವಾಗಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ 70,883 ಯುನಿಟ್‍‍ಗಳ ಮಾರಾಟವಾಗಿತ್ತು. ಜುಲೈ ತಿಂಗಳಿನಲ್ಲಿ ಮಾರಾಟವಾದ 51,192 ಯುನಿಟ್‌ಗಳಿಗೆ ಹೋಲಿಸಿದರೆ ಮಾರಾಟವು 9.02%ನಷ್ಟು ಏರಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಸುಜುಕಿ ಆಕ್ಸೆಸ್ ಮಾರಾಟವೂ 0.43%ನಷ್ಟು ಏರಿಕೆಯಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 48,436 ಯುನಿಟ್‌ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 48,646 ಯುನಿಟ್‌ಗಳ ಮಾರಾಟವಾಗಿದೆ. ಆದರೆ ತಿಂಗಳ ಮಾರಾಟ ಪ್ರಮಾಣದಲ್ಲಿ 5.54%ನಷ್ಟು ಕುಸಿತ ಉಂಟಾಗಿದೆ. ಜುಲೈ ತಿಂಗಳಿನಲ್ಲಿ 51,498 ಯುನಿಟ್‍‍ಗಳ ಮಾರಾಟವಾಗಿತ್ತು.

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು

ಬಜಾಜ್ ಪ್ಲಾಟಿನಾ ಮಾರಾಟವು 2.5%ನಷ್ಟು ಕಡಿಮೆಯಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 45,921 ಯುನಿಟ್‌ಗಳಿದ್ದ ಮಾರಾಟವು 44,774 ಯುನಿಟ್‍‍ಗಳಿಗೆ ಇಳಿದಿದೆ. ತಿಂಗಳ ಮಾರಾಟ ಪ್ರಮಾಣವು 14.70%ನಷ್ಟು ಕುಸಿದಿದೆ. ಜುಲೈ ತಿಂಗಳಿನಲ್ಲಿ 52,489 ಯುನಿಟ್‌ಗಳ ಮಾರಾಟವಾಗಿತ್ತು.

Most Read Articles

Kannada
English summary
Two wheeler sales Aug 2019 – Honda Activa beats Hero Splendor - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X