Just In
- 7 min ago ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- 9 min ago ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರಸ್ ಕಾರುಗಳು.. ಇವೇ ಜನಸಾಮಾನ್ಯರ ಲ್ಯಾಂಬೋರ್ಗಿನಿಗಳು!
- 2 hrs ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 15 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
Don't Miss!
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- News Lok Sabha Elections 2024: ಮತದಾನದ ದಿನ ಏನಿರುತ್ತೆ...ಏನಿರಲ್ಲ..?
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಿವು
ದೇಶಿಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಪೈಕಿ 16.58%ನಷ್ಟು ಕುಸಿತ ಉಂಟಾಗಿದೆ. 2018ರ ಆಗಸ್ಟ್ ನಲ್ಲಿ 12,39,084 ಯುನಿಟ್ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 10,33,585 ಯುನಿಟ್ಗಳ ಮಾರಾಟವಾಗಿದೆ.
ಪ್ರತಿ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ, ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ 0.03%ನಷ್ಟು ಅಲ್ಪ ಪ್ರಮಾಣದ ಕುಸಿತ ಉಂಟಾಗಿದೆ. ಜುಲೈ ತಿಂಗಳಿನಲ್ಲಿ 10,33,241 ಯುನಿಟ್ಗಳ ಮಾರಾಟವಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ಹೆಚ್ಚಿನ ಪ್ರಮಾಣದ ಕುಸಿತವನ್ನು ಕಂಡಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 3,10,851 ಯುನಿಟ್ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 2,34,279 ಯುನಿಟ್ಗಳ ಮಾರಾಟವಾಗಿ, 24.63%ನಷ್ಟು ಕುಸಿತ ಉಂಟಾಗಿದೆ.
ತಿಂಗಳ ಮಾರಾಟದ ಪ್ರಕಾರ ಜುಲೈ ತಿಂಗಳಿನಲ್ಲಿ ಹೋಂಡಾ ಆಕ್ಟಿವಾ ಸ್ಕೂಟರಿನ 2,43,604 ಯುನಿಟ್ಗಳ ಮಾರಾಟವಾಗಿತ್ತು. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ 3.83%ನಷ್ಟು ನಷ್ಟ ಉಂಟಾಗಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಹೀರೋ ಎಚ್ಎಫ್ ಡಿಲಕ್ಸ್ ಬೈಕುಗಳಿವೆ.
ಸ್ಥಾನ | ಮಾದರಿಗಳು | ಆಗಸ್ಟ್ 19 | ಆಗಸ್ಟ್ 18 | ವ್ಯತ್ಯಾಸ % |
1 | ಹೋಂಡಾ ಆಕ್ಟಿವಾ | 2,34,279 | 3,10,851 | -24.63 |
2 | ಹೀರೋ ಸ್ಪ್ಲೆಂಡರ್ | 2,12,839 | 2,47,116 | -13.87 |
3 | ಹೀರೋ ಹೆಚ್ಎಫ್ ಡೀಲಕ್ಸ್ | 1,60,684 | 1,83,716 | -12.54 |
4 | ಹೋಂಡಾ ಸಿಬಿ ಶೈನ್ | 87,434 | 1,08,790 | -19.63 |
5 | ಬಜಾಜ್ ಪಲ್ಸರ್ | 70,562 | 70,051 | 0.73 |
6 | ಹೀರೊ ಗ್ಲಾಮರ್ | 60,706 | 74,097 | -18.07 |
7 | ಟಿವಿಎಸ್ ಜೂಪಿಟರ್ | 57,849 | 79,223 | -26.98 |
8 | ಟಿವಿಎಸ್ ಎಕ್ಸ್ ಎಲ್ ಸೂಪರ್ ಲೂನಾ | 55,812 | 70,883 | -21.26 |
9 | ಸುಜುಕಿ ಆಕ್ಸೆಸ್ | 48,646 | 48,436 | 0.43 |
10 | ಬಜಾಜ್ ಪ್ಲಾಟಿನಾ | 44,774 | 45,921 | -2.50 |
ಮಾರಾಟದ ಕುಸಿತದ ದೃಷ್ಟಿಯಿಂದ ಎರಡೂ ಮೋಟರ್ ಸೈಕಲ್ಗಳು ಕ್ರಮವಾಗಿ 13.87% ಹಾಗೂ 12.54%ನಷ್ಟು ಕುಸಿದಿವೆ. 2018ರ ಆಗಸ್ಟ್ ನಲ್ಲಿ ಸ್ಪ್ಲೆಂಡರ್ ಬೈಕಿನ 2,47,116 ಯುನಿಟ್ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 2,12,839 ಯುನಿಟ್ಗಳಿಗೆ ಇಳಿದಿದೆ. ತಿಂಗಳ ಮಾರಾಟದ ಪ್ರಕಾರ 18.97%ನಷ್ಟು ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ 1,78,907 ಯುನಿಟ್ಗಳ ಮಾರಾಟವಾಗಿತ್ತು.
ಎಚ್ಎಫ್ ಡಿಲಕ್ಸ್ ಮಾರಾಟವು 2018ರ ಆಗಸ್ಟ್ ನಲ್ಲಿ 1,83,716 ಯುನಿಟ್ಗಳಾಗಿತ್ತು. ಈ ವರ್ಷ ಈ ಪ್ರಮಾಣವು 1,60,684 ಯುನಿಟ್ಗಳಿಗೆ ಇಳಿದಿದೆ. ತಿಂಗಳ ಮಾರಾಟದಲ್ಲಿಯೂ 5.27%ನಷ್ಟು ಕುಸಿತ ಉಂಟಾಗಿದೆ. ಈ ವರ್ಷದ ಜುಲೈ ತಿಂಗಳಿನಲ್ಲಿ 1,69,632 ಯುನಿಟ್ಗಳ ಮಾರಾಟವಾಗಿತ್ತು.
ಹೋಂಡಾ ಸಿಬಿ ಶೈನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಬೈಕ್ 19.63%ನಷ್ಟು ಕುಸಿತ ದಾಖಲಿಸಿದೆ. ಮಾರಾಟ ಪ್ರಮಾಣವು ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. 2018ರ ಆಗಸ್ಟ್ ನಲ್ಲಿ 1,08,790 ಯುನಿಟ್ಗಳ ಮಾರಾಟವಾಗಿದ್ದರೆ, ಈ ವರ್ಷ 87,434 ಯುನಿಟ್ಗಳಿಗೆ ಇಳಿದಿದೆ. ತಿಂಗಳ ಮಾರಾಟದಲ್ಲಿ 7.53%ನಷ್ಟು ಕುಸಿದಿದೆ. ಜುಲೈ ತಿಂಗಳಿನಲ್ಲಿ 94,559 ಯುನಿಟ್ಗಳ ಮಾರಾಟವಾಗಿತ್ತು.
ಬಜಾಜ್ ಪಲ್ಸರ್ ಬೈಕಿನ ಮಾರಾಟವು 0.73%ನಷ್ಟು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷದ ಆಗಸ್ಟ್ ನಲ್ಲಿ 70,562 ಯುನಿಟ್ಗಳ ಮಾರಾಟವಾಗಿದ್ದರೆ, ಕಳೆದ ವರ್ಷದ ಆಗಸ್ಟ್ ನಲ್ಲಿ 70,051 ಯುನಿಟ್ಗಳ ಮಾರಾಟವಾಗಿತ್ತು. ತಿಂಗಳ ಮಾರಾಟ ಪ್ರಮಾಣವು 12.96% ನಷ್ಟು ಹೆಚ್ಚಾಗಿದೆ. ಜುಲೈ ತಿಂಗಳಿನಲ್ಲಿ 62,469 ಯುನಿಟ್ಗಳ ಮಾರಾಟವಾಗಿತ್ತು.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?
ಹೀರೋ ಗ್ಲಾಮರ್ ಬೈಕ್, 18.07%ನಷ್ಟು ಕುಸಿತ ಕಂಡಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 74,097 ಯುನಿಟ್ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 60,762 ಯುನಿಟ್ಗಳ ಮಾರಾಟವಾಗಿದೆ. ತಿಂಗಳ ಮಾರಾಟದಲ್ಲೂ 14.69%ನಷ್ಟು ಕುಸಿತವಾಗಿದೆ. ಜುಲೈ ತಿಂಗಳಿನಲ್ಲಿ 71,160 ಯುನಿಟ್ಗಳ ಮಾರಾಟವಾಗಿತ್ತು.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು
ಈ ಪಟ್ಟಿಯ ಏಳು ಹಾಗೂ ಎಂಟನೇ ಸ್ಥಾನದಲ್ಲಿ ಟಿವಿಎಸ್ ಕಂಪನಿಯ ಜೂಪಿಟರ್ ಸ್ಕೂಟರ್ ಹಾಗೂ ಎಕ್ಸ್ ಎಲ್ ಸೂಪರ್ ಲೂನಾಗಳಿವೆ. ಟಿವಿಎಸ್ ಕಂಪನಿಯ ಯಾವ ಬೈಕುಗಳೂ ಈ ಪಟ್ಟಿಯಲ್ಲಿಲ್ಲದಿದ್ದರೂ ಜೂಪಿಟರ್ ಸ್ಕೂಟರ್, ಟಿವಿಎಸ್ ಕಂಪನಿಯ ಹೆಚ್ಚು ಮಾರಾಟವಾಗುತ್ತಿರುವ ವಾಹನವಾಗಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ
ಆಗಸ್ಟ್ ತಿಂಗಳಿನಲ್ಲಿ ಜೂಪಿಟರ್ ಸ್ಕೂಟರಿನ 57,849 ಯುನಿಟ್ಗಳ ಮಾರಾಟವಾಗಿದ್ದರೆ, 2018ರ ಆಗಸ್ಟ್ ತಿಂಗಳಿನಲ್ಲಿ 79,223 ಯುನಿಟ್ಗಳ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 26.98%ನಷ್ಟು ಕುಸಿತವಾಗಿದೆ. ತಿಂಗಳ ಮಾರಾಟದಲ್ಲಿ 0.20%ನಷ್ಟು ಹೆಚ್ಚಳವಾಗಿದೆ. ಜುಲೈ ತಿಂಗಳಿನಲ್ಲಿ 57,731 ಯುನಿಟ್ಗಳ ಮಾರಾಟವಾಗಿತ್ತು.
ಟಿವಿಎಸ್ ಎಕ್ಸ್ಎಲ್ ಸೂಪರ್ ಲೂನಾ ಮಾರಾಟವು 21.26%ನಷ್ಟು ಕುಸಿದಿದೆ. ಈ ವರ್ಷದ ಆಗಸ್ಟ್ ನಲ್ಲಿ 55,812 ಯುನಿಟ್ಗಳ ಮಾರಾಟವಾಗಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ 70,883 ಯುನಿಟ್ಗಳ ಮಾರಾಟವಾಗಿತ್ತು. ಜುಲೈ ತಿಂಗಳಿನಲ್ಲಿ ಮಾರಾಟವಾದ 51,192 ಯುನಿಟ್ಗಳಿಗೆ ಹೋಲಿಸಿದರೆ ಮಾರಾಟವು 9.02%ನಷ್ಟು ಏರಿಕೆಯಾಗಿದೆ.
ಸುಜುಕಿ ಆಕ್ಸೆಸ್ ಮಾರಾಟವೂ 0.43%ನಷ್ಟು ಏರಿಕೆಯಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 48,436 ಯುನಿಟ್ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 48,646 ಯುನಿಟ್ಗಳ ಮಾರಾಟವಾಗಿದೆ. ಆದರೆ ತಿಂಗಳ ಮಾರಾಟ ಪ್ರಮಾಣದಲ್ಲಿ 5.54%ನಷ್ಟು ಕುಸಿತ ಉಂಟಾಗಿದೆ. ಜುಲೈ ತಿಂಗಳಿನಲ್ಲಿ 51,498 ಯುನಿಟ್ಗಳ ಮಾರಾಟವಾಗಿತ್ತು.
ಬಜಾಜ್ ಪ್ಲಾಟಿನಾ ಮಾರಾಟವು 2.5%ನಷ್ಟು ಕಡಿಮೆಯಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 45,921 ಯುನಿಟ್ಗಳಿದ್ದ ಮಾರಾಟವು 44,774 ಯುನಿಟ್ಗಳಿಗೆ ಇಳಿದಿದೆ. ತಿಂಗಳ ಮಾರಾಟ ಪ್ರಮಾಣವು 14.70%ನಷ್ಟು ಕುಸಿದಿದೆ. ಜುಲೈ ತಿಂಗಳಿನಲ್ಲಿ 52,489 ಯುನಿಟ್ಗಳ ಮಾರಾಟವಾಗಿತ್ತು.