ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಪುಣೆ ಮೂಲದ ಟಾರ್ಕ್ ಮೋಟಾರ್ಸ್‌ಗೆ ಯಮಹಾ ಮೋಟಾರ್ಸ್ ಮಾಜಿ ಉದ್ಯೋಗಿ ರಾಯ್ ಕುರಿಯನ್ ರವರು ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕಗೊಂಡಿದ್ದಾರೆ. ರಾಯ್ ಕುರಿಯನ್ ಈ ಮೊದಲು ಯಮಹಾ ಮೋಟಾರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಈಗ ತಮ್ಮ 14 ವರ್ಷಗಳ ಅನುಭವವನ್ನು ಟಾರ್ಕ್ ಮೋಟಾರ್ಸ್ ನಲ್ಲಿ ಬಳಸಿ ಕೊಳ್ಳಲಿದ್ದಾರೆ. ಕುರಿಯನ್‍‍ರವರ ಮುಂದಿರುವ ಬಹು ದೊಡ್ಡ ಸವಾಲೆಂದರೆ ಟಾರ್ಕ್ ಮೋಟಾರ್ಸ್‍‍ನ ಟಿ6‍‍‍ಎಕ್ಸ್ ಎಲೆಕ್ಟ್ರಿಕ್ ಮೋಟಾರ್‍‍ಸೈಕಲ್‍‍ನ ಬಿಡುಗಡೆ, ಮಾರಾಟ ತಂತ್ರಗಳ ಜೊತೆಗೆ, ಮಾರ್ಕೆಟಿಂಗ್ ಮತ್ತು ಟಾರ್ಕ್ ಮೋಟಾರ್ಸ್‍ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲಿರುವ ವಾಹನಗಳನ್ನು ವಿತರಣೆ ಮಾಡುವುದು. ಟಾರ್ಕ್ ಮೋಟಾರ್ಸ್‍‍ನ ಸ್ಥಾಪಕರು ಮತ್ತು ಸಿ‍ಇಒ ಆದ ಕಪಿಲ್ ಶೆಲ್ಕೆ ರವರು ಇದರ ಬಗ್ಗೆ ಮಾತನಾಡಿದರು.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಆಟೋ ಮೊಬೈಲ್ ಉದ್ಯಮದಲ್ಲಿ ಅಪಾರವಾದ ಅನುಭವವನ್ನು ಹೊಂದಿರುವ ರಾಯ್ ಕುರಿಯನ್‍ರವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಮಗೆ ಅಪಾರ ಖುಶಿಯಾಗುತ್ತಿದೆ. ನಾವು ನಮ್ಮ ಮೊದಲ ಎಲೆಕ್ಟ್ರಿಕ್ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲು ಅಣಿಯಾಗಿದ್ದು, ರಾಯ್ ರವರ ಅನುಭವವನ್ನು ನೆಚ್ಚಿಕೊಂಡಿದ್ದೇವೆ ಎಂದು ತಿಳಿಸಿದರು.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಟಾರ್ಕ್ ಮೋಟಾರ್ಸ್‍‍ನಲ್ಲಿನ ಸ್ಥಾನದ ಬಗ್ಗೆ ಮಾತನಾಡಿದ ರಾಯ್ ಕುರಿಯನ್ ರವರು, ನಾನು ಭವಿಷ್ಯದ ಭಾಗವಾಗುತ್ತಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಮತ್ತು ಮಾರುಕಟ್ಟೆಗೆ ಸರಿಯಾದ ಸಮಯದಲ್ಲಿ ಪ್ರವೇಶಿಸುತ್ತಿದ್ದೇನೆ ಎಂದು ತಿಳಿಸಿದರು.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಟಾರ್ಕ್ ಕಂಪನಿಯು ಟಿ6‍‍ಎಕ್ಸ್ ವಾಹನದ ಅಭಿವೃದ್ಧಿಯನ್ನು 2015ರ ಮಧ್ಯ ಭಾಗದಲ್ಲಿ ಆರಂಭಿಸಿ, ಮೂಲ ಮಾದರಿಯನ್ನು ಸೆಪ್ಟೆಂಬರ್ 2016ರಲ್ಲಿ ಅನಾವರಣಗೊಳಿಸಿತು. ಪ್ರಪಂಚದ ಎರಡನೇ ಅತಿ ದೊಡ್ಡ ಬಿಡಿಭಾಗಗಳ ಕಂಪನಿಯಾದ ಭಾರತ್ ಫೋರ್ಜ್, 2018ರ ಆರಂಭದಲ್ಲಿ ಟಾರ್ಕ್ ಮೋಟಾರ್ಸ್ ಜೊತೆ ಕೈಜೋಡಿಸಿತು. ಟಾರ್ಕ್ ಮೋಟಾರ್ಸ್ ಟೂ ಫ್ರಂಟ್ ಟೆಕ್ನಾಲಜಿ ಮತ್ತು ಸ್ಕಿಲ್ಡ್ ರಿಸೋರ್ಸ್ ನಲ್ಲಿ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ. ಟಿ6‍ಎಕ್ಸ್ ವಾಹನದ 5 ಮೂಲ ಮಾದರಿಗಳನ್ನು, 10 ವರ್ಷದ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ ನಿರ್ಮಿಸಲಾಗಿದೆ.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಟಿ6‍ಎಕ್ಸ್ ಎಲೆಕ್ಟ್ರಿಕ್ ಮೋಟಾರ್‍‍ಸೈಕಲ್‍‍ನ ನಿರ್ಮಾಣವು ಕೊನೆಯ ಹಂತದಲ್ಲಿದ್ದು, ಈ ವಾಹನವನ್ನು ಈ ವರ್ಷದ ಆರಂಭದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಟಾರ್ಕ್ ಕಂಪನಿಯು ಈ ವಾಹನದ ಬಿಡುಗಡೆಯನ್ನು ಮೊದಲಿಗೆ ಪುಣೆಯಲ್ಲಿ, ನಂತರದಲ್ಲಿ ಬೆಂಗಳೂರು ಮತ್ತು ದೇಶದ ಇತರ ನಗರಗಳಲ್ಲಿ ಮಾಡಲಿದೆ. ಟಾರ್ಕ್ ಮೋಟಾರ್ಸ್ ದೇಶಿಯವಾಗಿ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ತಯಾರಿಸುವ ಭಾರತದ ಮೊದಲ ಕಂಪನಿಯಾಗಿದೆ.

MOST READ: ವಿನ್ಯಾಸದಲ್ಲಿ ಬದಲಾವಣೆ ಕಂಡ ಸುಜುಕಿ ಜಿಕ್ಸರ್ 150

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಈ ಕಂಪನಿಯು ಕೃತಕ ಬುದ್ದಿ ಮತ್ತೆ ಬಳಸಿ ವಾಹನ ಚಲಾಯಿಸುವ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿ‍‍ಐಆರ್‍ಒ‍ಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿದೆ.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಟಾರ್ಕ್ ಮೋಟಾರ್ಸ್‍‍ನ ಟಿ6‍ಎಕ್ಸ್ ಮೋಟಾರ್‍‍ಸೈಕಲ್ ಚಾಲನಾ ಅನುಭವವನ್ನು ಹೆಚ್ಚಿಸಲಿದ್ದು, ಇದರಲ್ಲಿ ಜಿ‍‍ಪಿ‍ಎಸ್, ಯುಟಿಲಿಟಿ ಸ್ಟೋರೇಜ್, ಕ್ಲೌಡ್ ಕನೆಕ್ಟಿವಿಟಿ ಮತ್ತು ಫೋನ್ ಚಾರ್ಜರ್‍‍ಗಳಿವೆ. ಈ ಮೋಟಾರ್ ಸೈಕಲ್ ಪ್ರತಿ ರೈಡಿನ ಬಗ್ಗೆ ವಿವರಣೆ ನೀಡಲಿದೆ, ಪವರ್ ಮ್ಯಾನೇಜ್‍‍ಮೆಂಟ್ ಮಾಡಲಿದ್ದು, ಕ್ರಮಿಸ ಬೇಕಿರುವ ದೂರದ ಬಗ್ಗೆ ತಿಳಿಸುತ್ತದೆ. ಟಿ‍‍ಐಆರ್‍ಒ‍ಎಸ್ ಚಾಲಾಕನ ಚಾಲನಾ ವಿಧಾನದ ಬಗ್ಗೆ ತಿಳಿಯುತ್ತದೆ.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಈ ಮೋಟಾರ್ ಸೈಕಲ್‍‍ನ ಬೆಲೆಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ.

ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅತಿ ದೊಡ್ಡ ಮೋಟಾರ್ ಸೈಕಲ್ ಕಂಪನಿಯಲ್ಲಿ ಸುಮಾರು 14 ವರ್ಷಗಳ ಅನುಭವವಿರುವ ವ್ಯಕ್ತಿಯನ್ನು, ಆರಂಭಿಕ ಹಂತದಲ್ಲಿರುವ ಕಂಪನಿಯೊಂದು ತನ್ನ ತೆಕ್ಕೆಗೆ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಬಹುಷಃ ಯಮಹಾ ಮೋಟಾರ್ಸ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್‍‍ಗಳ ವಿಭಾಗವನ್ನು ತೆರೆದಾಗ ಪುನಃ ಕುರಿಯನ್ ರವರನ್ನು ತನ್ನ ತೆಕ್ಕೆಗೆ ಸೆಳೆಯುವ ಸಂಭವವಿದೆ. ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕು, ಅಲ್ಲಿಯವರೆಗೆ ಕಾದು ನೋಡೋಣ.

Most Read Articles

Kannada
English summary
Tork Motors Hires Ex-Yamaha Head Of Sales And Marketing - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X