ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..!

ದೇಶದ ಪ್ರಮುಖ ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡ್ ಸೃಷ್ಠಿಸುತ್ತಿರುವ ಕಾರ್ ಮತ್ತು ಬೈಕ್‌ ಮಾಡಿಫಿಕೇಷನ್ ಹಾವಳಿಯಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದ್ದು, ಪೊಲೀಸರು ಎಷ್ಟೇ ಕಠಿಣ ಕ್ರಮಕೈಗೊಂಡರು ಕೂಡಾ ಮಾಡಿಫೈ ವಾಹನಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಇದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಟ್ರಾಫಿಕ್ ಪೊಲೀಸರು ಮಾರುವೇಷದಲ್ಲಿ ಮಾಡಿಫೈ ಪ್ರಿಯರ ಹಾವಳಿಗೆ ಬ್ರೇಕ್ ಹಾಕುತ್ತಿದ್ದಾರೆ.

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಮಾಡಿಫೈಗೊಂಡ ವಾಹನಗಳಿಂದ ಮಾಲೀಕರಿಗೆ ಏನೇ ಅನುಕೂಲಕಲತೆಗಳಿದ್ದರೂ, ಅದು ಇತರರಿಗೆ ಕಿರಿಕಿರಿ ಅಂದ್ರೆ ತಪ್ಪಾಗುವುದಿಲ್ಲ. ಕಾರು ಮತ್ತು ಬೈಕ್‌ಗಳಲ್ಲಿ ಜೋರಾಗಿ ಸದ್ದು ಬರಲಿಸಲು ಬಹುತೇಕ ಮಾಡಿಫೈ ಪ್ರಿಯರು ಎಕ್ಸಾಸ್ಟ್ ಬದಲಿಸುತ್ತಿದ್ದು, ಇದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದಲ್ಲದೇ ಅತಿಯಾದ ಶಬ್ದದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ವಿಶೇಷ ಕಾರ್ಯಚರಣೆ ಆರಂಭಿಸಿರುವ ಮಹಾರಾಷ್ಟ್ರ ಪೊಲೀಸರು ಭಿಕ್ಷುಕರ ವೇಷದಲ್ಲಿ ನಿಂತುಕೊಂಡು ಮಾಡಿಫೈ ಪ್ರಿಯರಿಗೆ ಶಾಕ್ ನೀಡುತ್ತಿದ್ದಾರೆ.

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಹೆಚ್ಚುತ್ತಿರುವ ವಾಹನ ಸಂಖ್ಯೆಯಿಂದಾಗಿ ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಲೇ ಇದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದರು ಸಹ ವರ್ಷದಿಂದ ವರ್ಷಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಇದರಿಂದ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದ್ದು, ಇಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಮಾಡಿಫೈ ಎಕ್ಸಾಸ್ಟ್ ಹಾಕಿಕೊಂಡು ತಿರುಗುವ ಕಾರು, ಬೈಕ್ ಸವಾರರ ಹಾವಳಿಯಿಂದಾಗಿ ವೃದ್ದರು ಮತ್ತು ಮಕ್ಕಳು ರಸ್ತೆ ದಾಟುವುದೇ ಒಂದು ದುಸ್ತರವಾಗಿದೆ. ಇದರ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಕೆಲವು ಮಾಡಿಫೈ ವಾಹನ ಸವಾರರು ಮಾತ್ರ ಪೊಲೀಸರಿಗೂ ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಇಲಾಖೆಯ ಸಮವಸ್ತ್ರದಲ್ಲಿ ನಿಂತು ತಪಾಸಣೆ ಮಾಡುವ ಪೊಲೀಸರ ಮಾಮೂಲಿ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗೆ ಹೆಚ್ಚು ಗದ್ದಲ ಮಾಡುವ ಮಾಡಿಫೈ ಪ್ರಿಯರು ತಮ್ಮನ್ನು ಮಟ್ಟ ಹಾಕುವವರು ಯಾರು ಇಲ್ಲ ಎನ್ನುವಂತೆ ಮೆರದಾಟುತ್ತಿದ್ದು, ಮಹಾರಾಷ್ಟ್ರದ ಭಾಯಾಂದರ್‌ನಲ್ಲಿ ಟ್ರಾಫಿಕ್ ಪೊಲೀಸರು ನಡೆಸಿತ್ತಿರುವುದು ವಿಶೇಷ ಕಾರ್ಯಾಚರಣೆಗೆ ಭಾರೀ ಪ್ರಸಂಶೆಗೆ ಕಾರಣವಾಗಿದೆ.

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸರು ತಪಾಸಣೆ ವೇಳೆ ಸಮವಸ್ತ್ರದಲ್ಲಿರುವಾಗ ಮಾಡಿಫೈ ಬೈಕ್ ಸವಾರರು ಸುಲಭವಾಗಿ ತಪ್ಪಿಸಿಕೊಳ್ಳಲು ಬದಲಿ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ಮಾಡಿಫೈ ಬೈಕ್ ಸವಾರರನ್ನು ರೆಡ್ ಹ್ಯಾಂಡ್ ಆಗಿ ಹಿಡಿಲು ಮುಂದಾಗಿರುವ ಪೊಲೀಸರು, ಭಿಕ್ಷುಕರ ವೇಷ ಧರಿಸಿ ಕಾರ್ಯಚರಣೆ ನಡೆಸಿದ್ದಾರೆ.

MOST READ: ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಸಿಗ್ನಲ್‌ಗಳಲ್ಲಿ ಭಿಕ್ಷುಕರ ರೀತಿಯಲ್ಲಿ ಓಡಾಡಿಕೊಂಡು ಮಾಡಿಫೈ ಬೈಕ್‌ ಸವಾರರನ್ನು ಹಿಡಿಯುತ್ತಿರುವ ಪೊಲೀಸರು ಕರ್ಕಶ ಶಬ್ದ ಮಾಡುವ ಮಾಡಿಫೈ ಬೈಕ್ ಎಕ್ಸಾಸ್ಟ್‌ಗಳನ್ನು ಸ್ಥಳದಲ್ಲೇ ಕಿತ್ತುಹಾಕಿ ದಂಡ ವಿಧಿಸುತ್ತಿದ್ದಾರೆ. ಇದಕ್ಕಾಗಿಯೇ ವಿಶೇಷ ತಂಡವನ್ನು ರಚಿಸಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ಪೊಲೀಸರ ಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಮುಂಬೈನಿಂದ ಕೇವಲ 8 ಕಿ.ಮಿ ದೂರದಲ್ಲಿರುವ ಭಾಯಾಂದರ್ ನಗರದಲ್ಲಿ ಬೈಕ್‌ ಎಕ್ಸಾಸ್ಟ್ ಮಾಡಿಫೈ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧಾರಿಸಿ ಈ ರೀತಿಯ ಕ್ರಮಕೈಗೊಳ್ಳುತ್ತಿರುವುದಾಗಿ ಹಿರಿಯ ಪೊಲೀಸರೇ ಮಾಹಿತಿ ನೀಡಿದ್ದಾರೆ.

MOST READ: 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು ಗೊತ್ತಾ?

ಮಾಡಿಫೈ ಬೈಕ್ ಸವಾರರಿಗೆ ಭಿಕ್ಷರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಮಾಡಿಫೈ ಬೈಕ್ ಹಾವಳಿಯು ದೇಶದ ವಿವಿಧ ನಗರಗಳಲ್ಲೂ ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಸಾರ್ವಜನಿಕ ಪ್ರದೇಶಗಲ್ಲೇ ಡ್ರ್ಯಾಗ್ ರೇಸ್, ವೀಲಿಂಗ್ ಮಾಡುವುದು ಸಾರ್ವಜನಿಕ ಜೀವನಕ್ಕೆ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಪೊಲೀಸರು ವಿಭಿನ್ನ ರೀತಿಯಲ್ಲಿ ಕಾರ್ಯಚರಣೆ ಕೈಗೊಂಡಿದ್ದು, ಬೆಂಗಳೂರಿನಲ್ಲೂ ಇಂತಹ ಕಾರ್ಯಾಚರಣೆಗಳ ಅವಶ್ಯಕತೆ ಇದೆ.

Source: HP Live

Most Read Articles

Kannada
English summary
Traffic Cops Disguise As Beggars On Road. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X