ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಹೆಚ್ಚುತ್ತಿರುವ ಮಾಡಿಫೈಡ್ ಬೈಕ್‍ಗಳ ಹಾವಳಿಯನ್ನು ತಡೆಗಟ್ಟಲು ಟ್ರಾಫಿಕ್ ಪೊಲೀಸರು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾನೂನುಬಾಹಿರವಾಗಿ ಮಾಡಿಫೈ ಮಾಡಲಾದ ವಾಹನ ಮಾಲೀಕರಿಂದ ಭರ್ಜರಿ ದಂಡ ವಸೂಲಿ ಮಾಡಿರುವುದಲ್ಲದೇ ಬೈಕ್ ಎಕ್ಸಾಸ್ಟ್‌ಗಳನ್ನು ಕಿತ್ತುಹಾಕುತ್ತಿದ್ದಾರೆ. ಹಾಗೆಯೇ ಅದೇ ಮಾಡಿಫೈ ಎಕ್ಸಾಸ್ಟ್‌ನಿಂದ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದಾರೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಹೌದು, ಮಾಡಿಫೈ ಬೈಕ್‌ಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರು ಈಗಾಗಲೇ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದು, ಸ್ಥಳದಲ್ಲೇ ಮಾಡಿಫೈ ಮಾಡಲಾದ ಬೈಕ್‌ಗಳ ಎಕ್ಸಾಸ್ಟ್ ಕಿತ್ತುಹಾಕಿ ಬೈಕ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಇದೀಗ ಅದೇ ಬೈಕ್ ಎಕ್ಸಾಸ್ಟ್‌ಗಳನ್ನೇ ಬಳಸಿಕೊಂಡು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡುತ್ತಿರುವ ಪೊಲೀಸರು ಬಿಲ್ ಬೋರ್ಡ್‌ಗಳನ್ನಾಗಿ ಮಾಡುತ್ತಿದ್ದಾರೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ನಗರದ ವಿವಿಧಡೆ ಕಾರ್ಯಾಚರಣೆ ಮಾಡಿ ವಶಪಡಿಸಿಕೊಳ್ಳಲಾದ ಎಕ್ಸಾಸ್ಟ್‌ಗಳಿಂದ ಎಚ್ಚರಿಕೆ ಸಂದೇಶ ನೀಡುಲ ಬಿಲ್ ಬೋರ್ಡ್‌ಗಳನ್ನು ಸಿದ್ದಪಡಿಸಲಾಗಿದ್ದು, ಕಾನೂನು ವಿರುದ್ದವಾಗಿ ಮಾಡಿಫೈ ಮಾಡಲಾದ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಇದಲ್ಲದೇ ಮಾಡಿಫೈ ವಾಹನ ಮಾಲೀಕರ ಜೊತೆಗೆ ಮಾಡಿಫೈ ಬೀಡಿಭಾಗಗಳನ್ನು ಉತ್ಪಾದನೆ ಮಾಡಿ ಪೂರೈಸುವ ಹಾಗೂ ಮಾಡಿಫೈ ವಾಹನಗಳನ್ನು ಸಿದ್ದಪಡಿಸುವ ಗ್ಯಾರೇಜ್ ಮಾಲೀಕರಿಗೂ ಖಡಕ್ ವಾರ್ನ್ ಮಾಡಿರುವ ಮಾಡಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಾತುತಪ್ಪಿದ್ದಲ್ಲಿ ಸೂಕ್ತ ಕಾನೂನು ಜರಗಿಸುವುದಾಗಿ ಎಚ್ಚರಿಸಿದ್ದಾರೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಹೀಗಾಗಿ ಸದ್ಯ ಮಾಡಿಫೈಗೊಂಡಿರುವ ವಾಹನಗಳನ್ನು ಹೊರತುಪಡಿಸಿ ಹೊಸದಾಗಿ ಮಾಡಿಫೈ ಮಾಡುವುದಕ್ಕೆ ಗ್ಯಾರೇಜ್ ಮಾಲೀಕರು ಕೂಡಾ ಹಿಂದೇಟು ಹಾಕುತ್ತಿದ್ದು, ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ನಿಯಮಬಾಹಿರ ಮಾಡಿಫೈ ವಾಹನಗಳ ಮುಕ್ತ ನಗರವನ್ನಾಗಿ ಮಾಡುವುದಾಗಿ ಟ್ರಾಫಿಕ್ ಪೊಲೀಸರು ಪಣತೊಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಸೀಜ್ ಮಾಡ ಎಕ್ಸಾಸ್ಟ್‌ಗಳಿಂದಲೇ ಬಿಲ್ ಬೋರ್ಡ್ ಮಾಡಿರುವುದು ಸಾರ್ವಜನಿಕರಲ್ಲಿ ಅರ್ಥಪೂರ್ಣವಾದ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಇತ್ತೀಚೆಗೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಕಾನೂನು ಬಾಹಿರ ಬೈಕ್ ಮಾಡಿಫೈಗಳ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿರುವುದಕ್ಕೆ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದ್ರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಆದ್ರೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಮಾತ್ರ ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೆ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ. ಇದರಿಂದ ಬೈಕ್ ಸವಾರನಿಗೆ ಹೆಚ್ಚಿನ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚೆಚ್ಚು ಸಮಸ್ಯೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಜೊತೆಗೆ ಬೈಕ್‌ಗಳ ಎಕ್ಸಾಸ್ಟ್ ಬದಲಾವಣೆಯಿಂದಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಎಡೆಮಾಡುಕೊಡುತ್ತಿದೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಇದರಿಂದ ಸಾರ್ವಜನಿಕರು ಮಾಡಿಫೈ ಬೈಕ್ ಸವಾರರ ಜೊತೆ ಹಲವು ಸಂದರ್ಭಗಳಲ್ಲಿ ವಾಗ್ವಾದಕ್ಕೆ ಕಾರಣವಾಗುತ್ತಿದ್ದು, ಮಾಡಿಫೈ ಬೈಕ್ ಸವಾರರ ವಿರುದ್ಧ ಪ್ರಕರಣಗಳನ್ನು ಕೂಡಾ ದಾಖಲಿಸುತ್ತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಲ್ಲಿ ಮಾಡಿಫೈ ಬೈಕ್ ಸವಾರರಿಂದ ಆಗುತ್ತಿರುವ ಕಿರಿಕಿರಿ ಅಷ್ಟಿಲ್ಲ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಸಾರ್ವಜನಿಕರು ನೀಡಿರುವ ದೂರಗಳ ಅನ್ವಯ ವಿಶೇಷ ಕಾರ್ಯಾಚರಣೆಗೆ ಇಳಿದಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ರಾಯಲ್ ಎನ್‌ಫೀಲ್ಡ್ ಸವಾರರಿಗೆ ಶಾಕ್ ನೀಡುತ್ತಿದ್ದಾರೆ. ಎಕ್ಸಾಸ್ಟ್ ಬದಲಿಸಿರುವ ಬೈಕ್‌ಗಳ ಸೈಲೆನ್ಸರ್‌ಗಳನ್ನು ಸ್ಪಾಟ್‌ನಲ್ಲೇ ಕಿತ್ತು ಹಾಕುತ್ತಿರುವ ಪೊಲೀಸರು ಭಾರೀ ಮೊತ್ತದ ದಂಡವನ್ನು ಕೂಡಾ ವಿಧಿಸುತ್ತಿದ್ದಾರೆ.

ಸೀಜ್ ಮಾಡಿದ ಬೈಕ್ ಎಕ್ಸಾಸ್ಟ್‌ಗಳಿಂದಲೇ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ ಬೆಂಗಳೂರು ಪೊಲೀಸರು..!

ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ. ಇಲ್ಲವಾದ್ರೆ ಭಾರೀ ಪ್ರಮಾಣದ ದಂಡ ಬೀಳುವುದಲ್ಲದೇ ಬೈಕ್ ಕೂಡಾ ಸೀಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Source: Gaadiwaadi

Most Read Articles

Kannada
English summary
Bangalore Traffic Police Makes Billboard Out Of Seized Illegal Exhausts.
Story first published: Friday, July 19, 2019, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X