ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ಮೋಟಾರ್‌ಸೈಕಲ್‌ ಡಿಸೆಂಬರ್ 5 ರಂದು ಭಾರತದಲ್ಲಿ 2020 ರಾಕೆಟ್ 3 ಮೋಟಾರ್‌ಸೈಕಲ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಹೊಸ ಟ್ರಯಂಫ್ ರಾಕೆಟ್ 3 ಅನ್ನು ಈ ವರ್ಷದ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿತ್ತು.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಆಟೊಕಾರ್ ಇಂಡಿಯಾ ವರದಿಗಳ ಪ್ರಕಾರ, ಕಂಪನಿಯು ಈ ಬೈಕ್ ಅನ್ನು ಭಾರತದಲ್ಲಿ ಅನಾವರಣಗೊಳಿಸಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ರಾಕೆಟ್ 3 ಬೈಕ್ ಅನ್ನು ಬ್ರಿಟಿನ್ ಮೂಲದ ಟ್ರಯಂಫ್ ಕಂಪನಿಯ ಹೊಸ ಪ್ಲಾಟ್‍‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೈಕ್ ಅನ್ನು ರಾಕೆಟ್ 3 ಆರ್ ಹಾಗೂ ರಾಕೆಟ್ 3 ಜಿಟಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಟ್ರಯಂಫ್ ಕಂಪನಿಯು ಭಾರತದಲ್ಲಿ ಈ ಎರಡು ಮಾದರಿಗಳ ಪೈಕಿ ಯಾವುದನ್ನು ಮಾರಾಟ ಮಾಡಲಿದೆ ಎಂಬುದನ್ನು ಖಚಿತ ಪಡಿಸಿಲ್ಲ.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

2020ರ ಹೊಸ ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಮಾಸ್ ಬೈಕುಗಳಲ್ಲಿಯೇ ಅತಿ ದೊಡ್ಡದು ಎನ್ನಲಾದ 2,500 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 167 ಬಿ‍‍ಹೆಚ್‍‍ಪಿ ಪವರ್ ಹಾಗೂ 4,000 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಈ ಎಂಜಿನ್ ಹೊಸದಾದ ಕ್ರಾಂಕ್‍‍ಕೇಸ್ ಅಸೆಂಬ್ಲಿ, ಬ್ಯಾಲೆನ್ಸರ್ ಶಾಫ್ಟ್ ಹಾಗೂ ಲ್ಯುಬ್ರಿಕೇಷನ್ ಸಿಸ್ಟಂಗಳನ್ನು ಹೊಂದಿದೆ. ಇದರಿಂದಾಗಿ ಈ ಎಂಜಿನ್‍‍ನ ತೂಕವು 18 ಕೆ.ಜಿಯಷ್ಟು ಕಡಿಮೆಯಾಗಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಹಲವಾರು ಫೀಚರ್ ಹಾಗೂ ಎಲೆಕ್ಟ್ರಾನಿಕ್ ಎಕ್ವಿಪ್‍‍ಮೆಂಟ್‍‍ಗಳಿವೆ. 2020ರ ರಾಕೆಟ್ 3 ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲೈಟ್‌, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್‌, ಹಗುರ ತೂಕದ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍‍ಗಳಿವೆ.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ರಾಕೆಟ್ 3 ಬೈಕ್ ಹೊಸ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ಇದು ಬೃಹತ್ ಎಂಜಿನ್‍‍ನ ಒತ್ತಡ ನಿವಾರಿಸುವಂತೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸಸ್ಪೆಂಷನ್ ಹಾಗೂ ಬ್ರೇಕ್‍‍ಗಳನ್ನು ಹೊಂದಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ರಾಕೆಟ್ 3 ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಯುಎಸ್‍‍ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍‍ಗಳಿವೆ. ಮುಂಭಾಗದ ಸಸ್ಪೆಂಷನ್ 120 ಎಂಎಂ ಟ್ರಾವೆಲ್‍‍ನೊಂದಿಗೆ ಬಂದರೆ, ಹಿಂಭಾಗವು 107 ಎಂಎಂ ಟ್ರಾವೆಲ್‍‍ನೊಂದಿಗೆ ಬರುತ್ತದೆ. ಈ ಎರಡೂ ಸಸ್ಪೆಂಷನ್‍‍ಗಳು ಶೋವಾ ಕಂಪನಿಯಾದಾಗಿವೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಮುಂಭಾಗದ ಸಸ್ಪೆಂಷನ್ ಕಂಪ್ರೆಷನ್ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿಯೊಂದಿಗೆ ಬರುತ್ತದೆ. ಹಿಂಭಾಗದ ಸಸ್ಪೆಂಷನ್ ರಿಮೋಟ್ ಅಡ್ಜಸ್ಟರ್ ಹೊಂದಿದೆ. ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಗಳಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟ್ರಯಂಫ್ ರಾಕೆಟ್ 3 ಬೈಕ್ ಮಾಸ್ ಬೈಕುಗಳ ಪೈಕಿ ಅತಿ ದೊಡ್ಡದಾದ ಎಂಜಿನ್ ಹೊಂದಿದೆ. ರಾಕೆಟ್ 3 ಬೈಕ್ ಅನ್ನು ಆರ್ ಹಾಗೂ ಜಿಟಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜಿಟಿ ಬೈಕ್ ಅನ್ನು ಟೂರಿಂಗ್‍‍ಗಳಿಗಾಗಿ ಅಭಿವೃದ್ದಿಪಡಿಸಲಾಗಿದೆ.

ಡಿಸೆಂಬರ್ 5ಕ್ಕೆ ಅನಾವರಣಗೊಳ್ಳಲಿದೆ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ಕಂಪನಿಯು ಇನ್ನು ಕೆಲವು ತಿಂಗಳುಗಳಲ್ಲಿ ರಾಕೆಟ್ 3 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಟ್ರಯಂಫ್ ಕಂಪನಿಯು ಈ ಎರಡೂ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆಯೇ ಎಂಬುದು ಇನ್ನು ಕೆಲ ದಿನಗಳಲ್ಲಿಯೇ ತಿಳಿಯಲಿದೆ.

Most Read Articles

Kannada
English summary
Triumph Rocket 3 To Be Unveiled In India On 5th Of December: Launch Expected Soon - Read in Kannada
Story first published: Monday, November 25, 2019, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X