ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಟ್ರಯಂಫ್ ಮೋಟಾರ್ ಸೈಕಲ್ ಇಂಡಿಯಾ ಟ್ರಯಂಫ್ ಸ್ಕ್ರಾಂಬ್ಲರ್ 1200 ಆವೃತ್ತಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಕಾರ್ ಆಂಡ್ ಬೈಕ್.ಕಾಮ್ ನ ಜೊತೆ ಮಾತನಾಡಿರುವ ಟ್ರಯಂಫ್ ಮೋಟಾರ್ ಸೈಕಲ್ಸ್ ಇಂಡಿಯಾದ ಜನರಲ್ ಮ್ಯಾನೇಜರ್ ಶೋಯಬ್ ಫಾರೂಖ್ ರವರು ಕಂಪನಿಯು 2019ರ ಮೇ ನಲ್ಲಿ ಸ್ಕ್ರಾಂಬ್ಲರ್ 1200 ಅನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಟ್ರಯಂಫ್ ಸ್ಕ್ರಾಂಬ್ಲರ್ ಅನ್ನು 2018ರ ಅಕ್ಟೋಬರ್ ನಲ್ಲಿ ವಿಶ್ವದಾದ್ಯಂತ ಅನಾವರಣಗೊಳಿಸಲಾಗಿತ್ತು. ಸ್ಕ್ರಾಂಬ್ಲರ್ 1200 ಎಕ್ಸ್ ಸಿ ಮತ್ತು ಸ್ಕ್ರಾಂಬ್ಲರ್ 1200 ಎಕ್ಸ್ಇ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಎಕ್ಸ್ ಸಿ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗುವುದು. ಎರಡೂ ಮಾದರಿಗಳ ಪೈಕಿ ಸ್ಕ್ರಾಂಬ್ಲರ್ 1200 ಎಕ್ಸ್ ಸಿ ಮಾದರಿಯು ರಸ್ತೆ ಆಧಾರಿತವಾಗಿದೆ. ಹೊಸ ಸ್ಕ್ರಾಂಬ್ಲರ್ 1200 ಎಕ್ಸ್ ಸಿ 1200 ಸಿಸಿಯ ಲಿಕ್ವಿಡ್ ಕೂಲ್ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಈ ಎಂಜಿನ್ 27 ಡಿಗ್ರಿ ಫೈರಿಂಗ್ ಆರ್ಡರ್ ನ ಫೀಚರ್ ಹೊಂದಿದ್ದು, 89 ಬಿಹೆಚ್‍ಪಿ ಯನ್ನು 7,400 ಆರ್‍‍ಪಿಎಂನಲ್ಲಿ ಮತ್ತು 110 ಎನ್ಎಂ ಟಾರ್ಕ್ ಅನ್ನು 3,950 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡಿನ ಗೇರ್ ಬಾಕ್ಸ್ ಹೊಂದಿದ್ದು, ಜೊತೆಗೆ ಟಾರ್ಕ್ ಅಸಿಸ್ಟ್ ಕ್ಲಚ್ ಒಳಗೊಂಡಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಇದೇ ಎಂಜಿನ್ ಅನ್ನು ಟ್ರಯಂಫ್ ನ ಥ್ರಾಕ್ಸ್ ಟನ್ ಆರ್ ನಲ್ಲೂ ಸಹ ಅಳವಡಿಸಲಾಗಿದೆ. ಅದನ್ನು ಸ್ಕ್ರಾಂಬ್ಲರ್ ನ ಅಡ್ವೆಂಚರ್ ಬೈಕ್ ಆಗಿ ಬಳಸಲಾಗುತ್ತದೆ. ಸ್ಕ್ರಾಂಬ್ಲರ್ 1200 ನಲ್ಲಿ ರೆಟ್ರೋ ಮಾದರಿಯ ಫ್ಯೂಯಲ್ ಟ್ಯಾಂಕ್ ಇದ್ದು, ಸಿಂಗಲ್ ಸೀಟ್ ಮತ್ತು ಎತ್ತರದ ಟ್ವಿನ್ ಎಕ್ಸಾಸ್ಟ್ ಗಳಿವೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಈ ಬೈಕ್ ಸ್ಟೀಲ್ ಡಬಲ್ ಕ್ರೇಡಲ್ ಫ್ರೇಮ್ , ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಒಹ್ಲಿನ್ ಗಳನ್ನು ಒಳಗೊಂಡಿದೆ. ಎರಡೂ ಮಾದರಿಗಳಲ್ಲೂ ವಿನ್ಯಾಸವು ಬೇರೆ ಬೇರೆಯಾಗಿದೆ. ಸ್ಕ್ರಾಂಬ್ಲರ್ 1200 ಎಕ್ಸ್ ಸಿಯಲ್ಲಿ 200 ಎಂಎಂ ನ ಟ್ರಾವೆಲ್ ಮುಂಭಾಗ ಮತ್ತು ಹಿಂಭಾಗದಲ್ಲಿ ಇದ್ದರೆ, ಸ್ಕ್ರಾಂಬ್ಲರ್ 1200 ಎಕ್ಸ್ಇ ಯಲ್ಲಿ 250 ಎಂಎಂ ಟ್ರಾವೆಲ್ ಇದೆ. ಎಕ್ಸ್ ಸಿ ಮಾದರಿಯಲ್ಲಿ ಶೋವಾ ಮುಂಭಾಗದಲ್ಲಿ 45 ಎಂಎಂ ಅಪ್ ಸೈಡ್ ಡೌನ್ ಕಾನ್ಫಿಗರೇಷನ್ ನಲ್ಲಿ ಇದ್ದರೆ, ಎಕ್ಸ್ಇ ಮಾದರಿಯಲ್ಲಿ 47 ಎಂಎಂ ನಲ್ಲಿ ಇದೆ.

MUST READ: ಸ್ಥಗಿತಗೊಳ್ಳಲಿರುವ ಜನಪ್ರಿಯ ಮಿಟ್ಸುಬಿಷಿ ಪಜೆರೋ

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಸ್ಕ್ರಾಂಬ್ಲರ್ 1200 ನಲ್ಲಿ 21 ಇಂಚಿನ ಫ್ರಂಟ್ ವ್ಹೀಲ್ ಮತ್ತು 17 ಇಂಚಿನ ಬ್ಯಾಕ್ ವ್ಹೀಲ್ ಗಳಿವೆ. ಎರಡೂ ವ್ಹೀಲ್ ಗಳು ಮೆಟ್ ಜೆಲೆರ್ ಟಯರ್ ಗಳನ್ನು ಹೊಂದಿವೆ. ಮುಂಭಾಗದಲ್ಲಿ 320 ಎಂಎಂ ನ ಬ್ರೆಂಬೊ ಎಂ50 ಮೊನೊಬ್ಲಾಕ್ ಕ್ಯಾಲಿಪರ್ ನ ಡಿಸ್ಕ್ ಇದ್ದರೆ, ಹಿಂಭಾಗದಲ್ಲಿ 225 ಎಂಎಂ ನ ಬ್ರೆಂಬೊ ಟೂ ಪಿಸ್ಟನ್ ಕ್ಯಾಲಿಪರ್ ನ ಡಿಸ್ಕ್ ಗಳಿವೆ. ಎರಡೂ ಮಾದರಿಯಲ್ಲೂ ಸ್ವಿಚೆಬಲ್ ಎಬಿಎಸ್ ಗಳಿವೆ, ಆದರೆ ಎಕ್ಸ್ಇ ಮಾದರಿಯಲ್ಲಿ ಸ್ವಿಚೆಬಲ್ ಕಾರ್ನರಿಂಗ್ ಎಬಿಎಸ್ ಇದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಸ್ಕ್ರಾಂಬ್ಲರ್ 1200 ನಲ್ಲಿ ಅನೇಕ ಫೀಚರ್ ಗಳಿವೆ. ಅವುಗಳೆಂದರೆ ಕ್ರೂಸ್ ಕಂಟ್ರೋಲ್, ರೈಡ್ ಬೈ ವೈರ್, ಹೀಟೆಡ್ ಗ್ರಿಪ್ ಗಳು, ಸೀಟಿನ ಕೆಳಗೆ ಯೂಎಸ್‍ಬಿ ಪೋರ್ಟ್ ಹೊಂದಿರುವ ಮೊಬೈಲ್ ಫೋನ್ ಸ್ಟೋರೆಜ್ ಯುನಿಟ್, ಕೀ ಲೆಸ್ ಇಗ್ನಿಷನ್ ಮತ್ತು ಟಾಕ್ ಅಸಿಸ್ಟ್ ಕ್ಲಚ್ ಗಳನ್ನು ಹೊಂದಿದೆ. ಈ ಮೋಟಾರ್ ಸೈಕಲ್ ನಲ್ಲಿ ಹೊಸ ತಲೆಮಾರಿನ ಟಿಎಫ್‍ಟಿ ಡಿಸ್ ಪ್ಲೇ ಸಹ ಇದೆ. ಸ್ಕ್ರಾಂಬ್ಲರ್ 1200 ನಲ್ಲಿ ಇಂಟಿಗ್ರೇಟೆಡ್ ಗೋ ಪ್ರೋ ಕಂಟ್ರೋಲ್ ಸಿಸ್ಟಂ ಇದೆ. ಇದು ಬ್ಲೂಟೂತ್ ಹೊಂದಿದ್ದು, ನ್ಯಾವಿಗೇಶನ್ ಬಗ್ಗೆ ಮಾಹಿತಿ ನೀಡುತ್ತದೆ. ಸ್ಕ್ರಾಂಬ್ಲರ್ 1200 ಎಕ್ಸ್ ಸಿ ಯ ಬೆಲೆಯ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ, ಭಾರತದಲ್ಲಿನ ಎಕ್ಸ್ ಶೋ ರೂಂ ದರದಲ್ಲಿರುವಂತೆ ರೂ. 13 ಲಕ್ಷಗಳಾಗಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Triumph Scrambler 1200 Launching May 2019 — The Brits Dispatch The Big Guns - Read in Kannada
Story first published: Saturday, April 27, 2019, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X