ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಫ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಪೀಡ್ ಟ್ವಿನ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. 2019ರ ಮಾದರಿಯ ಟ್ರಯಂಫ್ ಸ್ಪೀಡ್ ಟ್ವಿನ್ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಲ್ಲಿ ರೂ.9.46 ಲಕ್ಷ ಎಂದು ನಿಗದಿಪಡಿಸಲಾಗಿದೆ. ಟ್ರಯಂಫ್ ಹೊಸ ಸ್ಪೀಡ್ ಟ್ವಿನ್ ರೋಡ್‍ಸ್ಟರ್ ಅನ್ನು ಪ್ರಪಂಚದ ಮೊದಲ ಯಶಸ್ವಿ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿದ್ದ 1938 ರ ಮಾದರಿಯ ಸ್ಪೀಡ್ ಟ್ವಿನ್ 5ಟಿ ಯ ಪುನರ್ ಅವತಾರ ಎಂದು ಕರೆಯಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

ಟ್ರಯಂಫ್ ಸ್ಪೀಡ್ ಟ್ವಿನ್ ನಲ್ಲಿ, ಲಿಕ್ವಿಡ್ ಕೂಲ್ 1,200 ಪ್ಯಾರಲೆಲ್ ಎಂಜಿನ್ ಥ್ರಕ್ಸ್ ಸ್ಟನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಹೊಸ ಮೋಟಾರ್ ಸೈಕಲ್ ಗಾಗಿಯೇ ಅಳವಡಿಸಲಾಗಿದೆ. ಸ್ಪೀಡ್ ಟ್ವಿನ್ ವರ್ಷನ್ ನ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಸ ಮ್ಯಾಗ್ನೆಷಿಯಂ ಕವರ್ ಹೊಂದಿದ್ದು, ಮಾಸ್ ಆಪ್ಟಿಮೈಸ್ಡ್ ಕವರ್ ಮತ್ತು ರಿವೈಸ್ಡ್ ಕ್ಲಚ್ ಅಸೆಂಬ್ಲಿ ಹೊಂದಿದೆ. ಥ್ರಕ್ಸ್ ಸ್ಟನ್ ಗೆ ಹೋಲಿಸಿದರೆ ಈ ಬದಲಾವಣೆಗಳು ಬೈಕ್ ಅನ್ನು ಸುಮಾರು 2.5 ಕೆ.ಜಿಯಷ್ಟು ತೂಕ ಕಡಿಮೆ ಮಾಡುತ್ತವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

2019ರ ಟ್ರಯಂಫ್ ಸ್ಪೀಡ್ ಟ್ವಿನ್ ಎಂಜಿನ್ 95.6 ಬಿಹೆಚ್‍ಪಿ ಯನ್ನು 6,750 ಆರ್‍‍ಪಿಎಂ ನಲ್ಲಿ ಮತ್ತು 112 ಎನ್ಎಂ ಟಾರ್ಕ್ ಅನ್ನು 4,950 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ 49% ಹೆಚ್ಚು ಪವರ್ ಮತ್ತು 40% ಹೆಚ್ಚು ಟಾರ್ಕ್ ಅನ್ನು 2018 ರ ಮಾಡೆಲ್‍ಗಿಂತ ಹೆಚ್ಚು ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

ಈ ಎಂಜಿನ್ 6 ಸ್ಪೀಡ್ ನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. 2019ರ ಟ್ರಯಂಫ್ ಸ್ಪೀಡ್ ಟ್ವಿನ್ ಥ್ರಕ್ಸ್ ಸ್ಟನ್ ನಂತೆಯೇ ಫೀಚರ್‍‍ಗಳನ್ನು ಹೊಂದಿದ್ದು, ಸಸ್ಪೆಷನ್ ಸೆಟ್ ಅಪ್ ನಲ್ಲಿ 41 ಎಂಎಂ ನ ಕಾಟ್ರಿಡ್ಜ್ ಅನ್ನು ಮುಂಭಾಗದಲ್ಲಿ ಮತ್ತು ಟ್ವಿನ್ ಶಾಕ್ ಅಬ್ಸರ್ವರ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

ಈ ಪವರ್ ಫುಲ್ ಸ್ಪೀಡ್ ಟ್ವಿನ್ ಅನ್ನು ನಿಯಂತ್ರಿಸಲು ಟ್ರಯಂಫ್ ಕಂಪನಿಯು 305 ಎಂಎಂ ನ ಫೋರ್ ಪಿಸ್ಟಾನ್ ಆಕ್ಸಿಯಲ್ ಕ್ಯಾಲಿಪರ್ ಗಳನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ. ಹಿಂಭಾಗದ ವ್ಹೀಲ್ ಅನ್ನು ನಿಯಂತ್ರಿಸಲು 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ನಿಸ್ಸಿನ್ ನ ಎರಡು ಫ್ಲೋಟಿಂಗ್ ಕ್ಯಾಲಿಪರ್ ಗಳನ್ನು ಹೊಂದಿದೆ. 2019ರ ಸ್ಪೀಡ್ ಟ್ವಿನ್ 17 ಇಂಚಿನ ಅಲಾಯ್ ವ್ಹೀಲ್ ಗಳ ಮೇಲೆ ಕೂರುತ್ತದೆ, ಅವುಗಳನ್ನು ಪಿರೆಲ್ಲಿ ಡಯಾಬ್ಲೋ ರೊಸ್ಸೊ 3 ಟಯರ್‍‍ಗಳಿಂದ ಮಾಡಲಾಗಿದೆ.

MUST READ: ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

ಟ್ರಯಂಫ್ ಸ್ಪೀಡ್ ಟ್ವಿನ್ ನಲ್ಲಿ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್‍ಗಳನ್ನು ಸ್ಟಾಂಡರ್ಡ್ ಸಾಧನಗಳಾಗಿ ಅಳವಡಿಸಲಾಗಿದೆ. ಈ ಬೈಕ್ - ರೇನ್, ರೋಡ್ ಮತ್ತು ಸ್ಪೋರ್ಟ್ - ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ನೀಡುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ ಟ್ವಿನ್

ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ, ಟ್ರಯಂಫ್ ಮೋಟಾರ್ ಸೈಕಲ್ಸ್ ಇಂಡಿಯಾ ಜನರಲ್ ಮ್ಯಾನೇಜರ್ ಶೋಯಬ್ ಫಾರೂಕ್ ರವರು, 2019 ರ ಸ್ಪೀಡ್ ಟ್ವಿನ್ ಬೈಕ್ ಅನ್ನು ಈಗಿರುವ ಮಾಡರ್ನ್ ಕ್ಲಾಸಿಕ್ ರೇಂಜ್‍ಗೆ ತಕ್ಕಂತೆ ಬಿಡುಗಡೆ ಮಾಡಲು ನಮಗೆ ಖುಷಿಯಾಗುತ್ತಿದ್ದು, ಈ ಮಾಡರ್ನ್ ಕ್ಲಾಸಿಕ್ ರೇಂಜ್ ಜನರು ಅತಿ ಹೆಚ್ಚು ಇಷ್ಟ ಪಡುವ ಬೈಕ್ ಆಗಿರಲಿದ್ದು, ದೇಶಿಯ ಮಾರುಕಟ್ಟೆಗೆ 55% ಕೊಡುಗೆಯನ್ನು ನೀಡಲಿದೆ. ಸವಾರರು ಇಷ್ಟ ಪಡುವ ಹೆಚ್ಚು ಲಗ್ಷುರಿ ಬೈಕ್ ಗಳನ್ನು ನಾವು ನೀಡಲಿದ್ದು, ಇನ್ನೂ ಸ್ಮಾರ್ಟ್ ಆದ ಹೈ ಪರ್ಫಾರ್ಮೆನ್ಸ್ ಮೆಷಿನ್ ಹೊಂದಿರುವ ಬೈಕ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ನಮ್ಮ ಇರುವಿಕೆಯನ್ನು ದೃಢ ಮಾಡಿಕೊಳ್ಳಲಿದ್ದೇವೆ. ಸ್ಪೀಡ್ ಟ್ವಿನ್ ಪ್ರಪಂಚದ ಮೊದಲ ಪ್ಯಾರೆಲಲ್ ಟ್ವಿನ್ ಎಂಜಿನ್ ಎಂಬ ಹೆಗ್ಗಳಿಕೆ ಹೊಂದಿದ್ದು, ಪರ್ಫಾಮೆನ್ಸ್ ನಲ್ಲೂ ನಂ 1 ಎಂಬ ಗರಿ ಹೊಂದಿತ್ತು. ಅದನ್ನು ರೈಡರ್‍‍ಗಳ ಮೊದಲ ಬೈಕ್ ಎಂದು ಹೇಳಬಹುದು. ಸ್ಪೀಡ್ ಟ್ವಿನ್ ನ ಬಿಡುಗಡೆಯೊಂದಿಗೆ ಕಂಪನಿಯ ಗುರಿಯು ಯಶಸ್ಸಿನೆಡೆಗೆ ಸಾಗುವುದಾಗಿದ್ದು, ಈ ಬೈಕ್ ಅನ್ನು ಮಾಡರ್ನ್ ರೋಡ್‍ಸ್ಟರ್‍‍ನಂತೆ ಹ್ಯಾಂಡಲ್ ಮಾಡಬೇಕಾಗಿದೆ ಎಂದು ಹೇಳಿದರು.

Most Read Articles

Kannada
English summary
2019 Triumph Speed Twin Launched In India At Rs 9.46 lakh - Read in Kannada
Story first published: Thursday, April 25, 2019, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X