ದೇಶಿಯ ಮಾರುಕಟ್ಟೆಯಲ್ಲಿ ಮತ್ತೆರಡು ಹೊಸ ಬೈಕ್‍ಗಳನ್ನು ಬಿಡುಗಡೆ ಮಾಡಿದ ಟ್ರಯಂಫ್

ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟ್ರಯಂಫ್ ತಮ್ಮ ಹೊಸ ಸ್ಟ್ರೀಟ್ ಟ್ವಿನ್ ಮತ್ತು ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್‍ಗಳನ್ನು ಬಿಡುಗಡೆಗೊಳಿಸಿದ್ದು, ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.45 ಲಕ್ಷ ಮತ್ತು ರೂ. 8.55 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ದೇಶಿಯ ಮಾರುಕಟ್ಟೆಗೆ ಮತ್ತೆರಡು ಹೊಸ ಬೈಕ್‍ಗಳನ್ನು ಬಿಡುಗಡೆ ಮಾಡಿದ ಟ್ರಯಂಫ್

ಹೊಸ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕ್‍ಗಳಿಗೆ ಆಕರ್ಷಕವಾದ ವಿನ್ಯಾಸವನ್ನು ನೀಡಲಾಗಿದ್ದು, ಬ್ರಷ್ಡ್ ಅಲ್ಯೂಮೀನಿಯಂ ಹೆಡ್‍ಲೈಟ್ ಬ್ರಾಕೆಟ್, ಸ್ಟೈಲಿಷ್ ಸೈಡ್ ಪ್ಯಾನೆಲ್ಸ್ ಮತ್ತು ಮರುವಿನ್ಯಾಸ ಮಾಡಲಾದ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಸ್ ಅನ್ನು ಅಳವಡಿಸಲಾಗಿದೆ. ಇಷ್ಟೆ ಅಲ್ಲದೇ ಈ ಬೈಕ್‍ಗಳು ಅಡ್ಜಸ್ಟಬಲ್ ಲಿವರ್ಸ್ ಮತ್ತು ಬೋನೆವಿಲ್ಲೆ ಮೆಟಲ್‍‍ನಿಂದ ಸಜ್ಜುಗೊಂಡ ಅಪ್ಡೇಟೆಡ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒದಗಿಸಲಾಗಿದೆ.

ಹೊಸ ಸ್ಟ್ರೀಟ್ ಟ್ವಿನ್ ಬೈಕ್‍ಗಳು 900ಸಿಸಿ ಎಂಜಿನ್‍ನಿಂದ ಚಲಿಸಲಿದ್ದು, 65 ಬಿಹೆಚ್‍ಪಿ ಮತ್ತು 80 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇನ್ನು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಇದು ಸ್ಲಿಪ್-ಅಸಿಸ್ಟ್ ಕ್ಲಚ್ ಫೀಚರ್ ಅನ್ನು ಕೂಡಾ ಪಡೆದುಕೊಂಡಿದೆ.

ದೇಶಿಯ ಮಾರುಕಟ್ಟೆಗೆ ಮತ್ತೆರಡು ಹೊಸ ಬೈಕ್‍ಗಳನ್ನು ಬಿಡುಗಡೆ ಮಾಡಿದ ಟ್ರಯಂಫ್

ಇವುಗಳಲ್ಲದೇ ಸ್ಟ್ರೀಟ್ ಟ್ವಿನ್ ಬೈಕ್‍ಗಳಲ್ಲಿ ಸುರಕ್ಷತೆಗಾಗಿ ಎಬಿಎಸ್ ಮತ್ತು ಸ್ವಿಚಬಲ್ ಟ್ರಾಕ್ಷನ್ ಕಂಟ್ರೋಲ್ ಎಂಬ ಫೀಚರ್ಸ್ ಅನ್ನು ಸ್ತ್ಯಾಂಡರ್ಡ್ ಆಗಿ ನೀಡಲಾಗಿದೆ. ಸ್ವಿಚಬಲ್ ಎಬಿಎಸ್ ರೈಡರ್‍‍ಗೆ ಹೆಚ್ಚು ಸಹಾಯಕವಾಗಲಿದ್ದು, ಇದನ್ನು ಇನ್ಸ್ಟ್ರೂಮೆಂಟ್ ಮೆನು ಮುಖಾಂತರ ನಿಲ್ಲಿಲ್ಸಬಹುದಾಗಿದೆ. ಇನ್ನು ಸ್ವಿಚಬಲ್ ಟ್ರಾಕ್ಷನ್ ಕಂಟ್ರೋಲ್ ಎಂಜಿನ್‍ಗೆ ಟಾರ್ಕ್ ಅನ್ನು ರವಾನಿಸುವುದರಲ್ಲಿ ಸಹಕರಿಸುತ್ತದೆ.

ರೋಡ್ ಮತ್ತು ರೈನ್ ಎಂಬ ಎರಡು ರೈಡಿಂಗ್ ಮೋಡ್‍ಗಳನ್ನು ಪಡೆದುಕೊಂಡಿರುವ ಈ ಬೈಕ್‍ಗಳಲ್ಲಿ ಮೃದುವಾದ ಕ್ರಾಂಕ್, ಬ್ಯಾಲನ್ಸರ್ ಶಿಫ್ಟ್, ಸ್ಮೂಥರ್ ಕ್ಲಚ್ ಮತ್ತು ಮ್ಯಾಗ್ನೇಷಿಯಂ ಕ್ಯಾಮ್ ಕವರ್ ಅನ್ನು ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಇದರಲ್ಲಿ 4 ಪಿಸ್ಟನ್ ಬ್ರೆಂಬೊ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
2019 Triumph Street Twin And Scrambler Launched In India. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X