ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಟ್ರಯಂಫ್ ಮೋಟಾರ್‍‍ಸೈಕಲ್ಸ್ ಹೊಸ ತಲೆಮಾರಿನ ಟೈಗರ್ ಸರಣಿಯ ಟೀಸರ್ ವೀಡಿಯೊ ಹಾಗೂ ಫೋಟೊಗ್ರಾಫ್‍‍ಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಬಿಡುಗಡೆಯಾಗಲಿರುವ ಮಿಡಲ್‍‍ವೇಟ್ ಅಡ್ವೆಂಚರ್ ಟೂರರ್ ಬೈಕುಗಳನ್ನು ಕಾಣಬಹುದು.

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಟೀಸರ್ ಫೋಟೊಗ್ರಾಫ್ ಬೈಕಿನಲ್ಲಿರುವ ಪರಿಷ್ಕೃತ ಮುಂಭಾಗದ ಫಾಸ್ಕಿಯಾದ ಒಂದು ನೋಟವನ್ನು ನೀಡುತ್ತದೆ. ಅದು ಯುನಿಬ್ರೋ ಶೈಲಿಯ ಎಲ್ಇಡಿ ಡಿಆರ್‍ಎಲ್ ಹಾಗೂ ಆಕ್ಸಿಲರಿ ಲೈಟ್‍‍ಗಳನ್ನು ಪ್ಯಾಕ್ ಮಾಡುತ್ತದೆ. ಇದು ಲೀನ್ ಸೆನ್ಸಿಟಿವ್ (ಕಾರ್ನರಿಂಗ್) ಲೈಟಿಂಗ್ ಫಂಕ್ಷನ್‍‍ನ ಭಾಗವಾಗಿದೆ.

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಕಾರ್ನರಿಂಗ್ ಲೈಟ್ಸ್ ಫೀಚರ್ ಹೆಚ್ಚುವರಿ ಆಯ್ಕೆಯಾಗಿರುತ್ತದೆ. ಮತ್ತೊಂದೆಡೆ ಟೀಸರ್ ವೀಡಿಯೊ, ಟೈಗರ್ ಸರಣಿಯ ಆಫ್-ರೋಡ್ ಸ್ಪೆಕ್ ಆವೃತ್ತಿಯಲ್ಲಿ ಕ್ರಾಸ್-ಸ್ಪೋಕ್ ಲೇ‍ಔ‍‍ಟ್ ಅನ್ನು ಬಹಿರಂಗಪಡಿಸುತ್ತದೆ.

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಕಂಪನಿಯ ಯುಕೆ ವೆಬ್‌ಸೈಟ್ ಬೈಕುಗಳ ಮಾದರಿಯ ಹೆಸರನ್ನು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿರುವ ರಸ್ತೆ ಆಧಾರಿತ ಬೈಕುಗಳನ್ನು ಎಕ್ಸ್‌ಆರ್ ಸರಣಿಯ ಅಡಿಯಲ್ಲಿ ಹಾಗೂ ಆಫ್ ರೋಡರ್‌ಗಳನ್ನು ಎಕ್ಸ್‌ಸಿ ಸರಣಿಗಳ ಅಡಿಯಲ್ಲಿ ಪ್ರತ್ಯೇಕಿಸಿದಂತೆ, 2020ರ ಬೈಕುಗಳನ್ನು ರ್‍ಯಾಲಿ ಹಾಗೂ ಜಿಟಿ ಟ್ಯಾಗ್‌ಗಳ ಅಡಿಯಲ್ಲಿ ಮಾರಾಟ ಮಾಡಲಾಗುವುದು.

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಈ ಸಮಯದಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಎಕ್ಸ್‌ಸಿ ಅಥವಾ ಆಫ್-ರೋಡ್ ಸರಣಿಯ ಬೈಕುಗಳನ್ನು ರ್‍ಯಾಲಿಗಳೆಂದು ಹಾಗೂ ರಸ್ತೆ ಆಧಾರಿತ ಎಕ್ಸ್‌ಆರ್ ಸರಣಿಯ ಬೈಕುಗಳನ್ನು ಜಿಟಿ ಎಂದು ಕರೆಯುವ ಸಾಧ್ಯತೆಗಳಿವೆ.

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

2020ರ ಟ್ರಯಂಫ್ ಟೈಗರ್ 900 ರ್‍ಯಾಲಿ ಸರಣಿಯ ಬೈಕುಗಳು ಆಫ್-ರೋಡ್ ಆಧಾರಿತ ಬೈಕುಗಳಾಗಿದ್ದು, ಅವುಗಳು ದೀರ್ಘ ಪ್ರಯಾಣದ ಸಸ್ಪೆಂಷನ್, ಉತ್ತಮ ಎಂಜಿನ್ ರಕ್ಷಣೆ (ಮೆಟಲ್ ಬ್ಯಾಷ್ ಪ್ಲೇಟ್) ಹಾಗೂ ಟ್ಯೂಬ್‌ಲೆಸ್ ಟಯರ್‍‍ಗೆ ಹೊಂದಿಕೊಳ್ಳುವ ಕ್ರಾಸ್ ಸ್ಪೋಕ್ ವ್ಹೀಲ್‍ಗಳಿದ್ದು ಮುಂಭಾಗದಲ್ಲಿ 21 ಇಂಚಿನ ಯುನಿಟ್ ಹೊಂದಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಜಿಟಿ ಸರಣಿಯ ಸಸ್ಪೆಂಷನ್ ಕಡಿಮೆ ಪ್ರಯಾಣದ ರೇಟಿಂಗ್, 19 ಇಂಚಿನ ಮುಂಭಾಗದ ಘಟಕವನ್ನು ಹೊಂದಿರುವ ಫೈಬರ್ ಎಂಜಿನ್ ಕೌಲ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಪರೀಕ್ಷಾ ಮಾದರಿಗಳ ಸ್ಪೈ ಫೋಟೊಗ್ರಾಫ್‍‍ಗಳು 2020ರ ಮಾದರಿಯ ಬೈಕಿನ ವಿವಿಧ ವಿವರಗಳನ್ನು ಹೊಂದಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಈ ಬೈಕುಗಳಲ್ಲಿ ಚಾಸಿಸ್ ವೆಲ್ಡೆಡ್ ಯುನಿಟಿಗೆ ಬದಲು ಬೋಲ್ಟ್ ಮಾಡಿದ ಸಬ್ ಫ್ರೇಂಗಳಿರಲಿವೆ. ಕುಸಿತ ಅಥವಾ ಕ್ರಾಶ್‍‍ನಿಂದಾಗಿ ಸಬ್ ಫ್ರೇಂ ಹಾನಿಗೊಳಗಾದರೆ ಇದು ರಿಪೇರಿಯನ್ನು ಸುಲಭ ಹಾಗೂ ಕಡಿಮೆಗೊಳಿಸುತ್ತದೆ. ಫ್ಯೂಯಲ್ ಟ್ಯಾಂಕ್ ಮಾರುಕಟ್ಟೆಯಲ್ಲಿರುವ ಬೈಕಿಗಿಂತ ಭಿನ್ನವಾಗಿರಲಿದೆ. ಆದರೆ ಸಾಮರ್ಥ್ಯವು ಕಡಿಮೆಯಾಗುವುದಿಲ್ಲ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಮುಂಬರುವ ಯುರೋ 5 ಎಮಿಷನ್ ನಿಯಮಗಳಿಗೆ ಅನುಸಾರವಾಗಿ ಎಂಜಿನ್ ವಿಶೇಷತೆಗಳು ಬದಲಾಗುತ್ತವೆ. ಬೈಕಿನ ಹೊಸ ಟ್ಯಾಗ್‍‍ನಿಂದ ಈ ಬೈಕಿನಲ್ಲಿ ಹೊಸ ಎಂಜಿನ್ ಅಳವಡಿಸುವುದು ಖಚಿತವಾಗಿದೆ. 2020ರ ಟೈಗರ್ ಸರಣಿಯು 900 ಸಿಸಿ ಮೋಟರ್ ಅನ್ನು ಹೊಂದಿರುತ್ತದೆ.

ಮಾರುಕಟ್ಟೆಯಲ್ಲಿರುವ ಬೈಕ್ 800 ಸಿಸಿ ಎಂಜಿನ್ ಹೊಂದಿದೆ. ಇನ್‍‍ಲೈನ್ ​​3 ಸಿಲಿಂಡರ್‍‍ನ ಲಿಕ್ವಿಡ್-ಕೂಲ್ಡ್ ಸೆಟಪ್ ಅನ್ನು 2020ರ ಹೊಸ ಬೈಕಿನಲ್ಲಿಯೂ ಅಳವಡಿಸಲಾಗುವುದು. ಹೆಚ್ಚಿಸ ಸಿಸಿ ಹೊಂದಿರುವ ಬೈಕ್ ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದೆ.

ಡಿಸೆಂಬರ್ 3ಕ್ಕೆ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900

ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವ 800 ಸಿಸಿ ಲಿಕ್ವಿಡ್-ಕೂಲ್ಡ್, 12-ವಾಲ್ವ್, ಡಿಒಹೆಚ್‌ಸಿ, ಇನ್-ಲೈನ್ 3-ಸಿಲಿಂಡರ್ ಎಂಜಿನ್ 9,500 ಆರ್‌ಪಿಎಂನಲ್ಲಿ 93 ಬಿ‍‍ಹೆಚ್‍‍ಪಿ ಪವರ್ ಹಾಗೂ 8,050 ಆರ್‌ಪಿಎಂನಲ್ಲಿ 79 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
2020 Triumph Tiger 900 to debut on 3 December - Read in Kannada
Story first published: Friday, November 15, 2019, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X