ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಎಕಾನಾಮಿಕ್ ಟೈಮ್ಸ್ ಆಟೋ ಪ್ರಕಾರ, ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಕಂಪನಿಯಾದ ಟ್ರಯಂಫ್ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪ್ರಿ-ಓನ್ಡ್ ಮಾರಾಟವನ್ನು ಶುರು ಮಾಡಲಿದೆ. ಇದರ ಹಿಂದಿರುವ ಉದ್ದೇಶವೆಂದರೆ, ಎಂಟ್ರಿ ಲೆವೆಲ್ ನಲ್ಲಿ ಮೋಟಾರ್ ಸೈಕಲ್ ಗಳ ಬೆಲೆಯನ್ನು ತಗ್ಗಿಸುವುದು, ಈಗ ಇದರ ಬೆಲೆ ಭಾರತದ ಎಕ್ಸ್ ಶೋ ರೂಂಗಳಲ್ಲಿರುವಂತೆ ರೂ 7.7 ಲಕ್ಷಗಳಾಗಿದೆ.

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಟ್ರಯಂಫ್ ಇಂಡಿಯಾದ ಜನರಲ್ ಮ್ಯಾನೇಜರ್ ಶೊಯಬ್ ಫಾರೂಕ್ ರವರ ಪ್ರಕಾರ, ಈ ರೀತಿಯಾಗಿ ಪ್ರಿ-ಓನ್ಡ್ ಮಾರಾಟ ಮಾಡುವುದರಿಂದ ಎಂಟ್ರಿ ಪ್ರೈಸ್ ದರವು ಸುಮಾರು 5 ಲಕ್ಷ ರೂಗಳಾಗಬಹುದು. ಹಾಗೂ ಮೋಟಾರ್ ಸೈಕಲ್ ಗಳನ್ನುಕಂಪನಿಯ ವಾರಂಟಿಯ ಅನುಸಾರ ನವೀಕರಿಸಬಹುದಾಗಿದೆ. ಟ್ರಯಂಫ್ ಥೈಲ್ಯಾಂಡ್ ನಲ್ಲಿ ತನ್ನ ದೊಡ್ಡ ತಯಾರಕ ಘಟಕವನ್ನು ಹೊಂದಿದ್ದು, ಅಲ್ಲಿಂದ ಮೋಟಾರ್ ಸೈಕಲ್ ಗಳನ್ನು ಸಿಕೆಡಿ (ಕಂಪ್ಲೀಟ್ ನಾಕ್ ಡೌನ್) ಮತ್ತು ಕಂಪ್ಲೀಟ್ ಬಿಲ್ಟ್ ಯೂನಿಟ್(ಸಿಬಿಯು)ಗಳಾಗಿ ಭಾರತಕ್ಕೆ ಆಮದು ಮಾಡಿಕೊಳ್ಳುತ್ತದೆ.

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಥೈಲ್ಯಾಂಡ್ ಮತ್ತು ಭಾರತದ ಮಧ್ಯೆ ಮುಕ್ತ ಮಾರಾಟ ಒಪ್ಪಂದವಿರುವುದರಿಂದ ಟ್ರಯಂಫ್ ಕಂಪನಿಗೆ ಭಾರತಕ್ಕೆ ಆಮದು ಮಾಡಿಕೊಳ್ಳಲು ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಸಿಕೆಡಿ ಕಿಟ್ ಗಳನ್ನು ಭಾರತಕ್ಕೆ ತಂದ ನಂತರ ಹರಿಯಾಣದ ಮಾನೆಸರ್ ನಲ್ಲಿರುವ ಟ್ರಯಂಫ್ ನ ಘಟಕದಲ್ಲಿ ಅಳವಡಿಸಲಾಗುವುದು.

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಟ್ರಯಂಫ್ ಭಾರತದಲ್ಲಿ 16 ಡೀಲರ್ ಶಿಪ್ ಗಳನ್ನು ಹೊಂದಿದ್ದು, ಮುಂದಿನ 2 ವರ್ಷದ ಅವಧಿಯಲ್ಲಿ ಹೆಚ್ಚುವರಿಯಾಗಿ ಇನ್ನೂ ನಾಲ್ಕು ಡೀಲರ್ ಶಿಪ್ ಗಳನ್ನು ತೆರೆಯಲು ಉದ್ದೇಶಿಸಿದೆ. ಫಾರೂಕ್ ರವರ ಪ್ರಕಾರ 2021-22 ರ ಹಣಕಾಸು ವರ್ಷದೊಳಗೆ ಟ್ರಯಂಫ್ ಇನ್ನು ಹೆಚ್ಚಿನ ಮಾರಾಟ ಮಾಡುವ ಉದ್ದೇಶ ಹೊಂದಿದೆ.

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಟ್ರಯಂಫ್ ಸದ್ಯಕ್ಕೆ 14 ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅವುಗಳೆಂದರೆ ಟ್ರಯಂಫ್ ಸ್ಟ್ರೀಟ್ ಸ್ಕ್ರಾಂಬ್ಲರ್, ಟ್ರಯಂಫ್ ಬೋನ್ ವಿಲ್ ಟಿ100, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ 765, ಟ್ರಯಂಫ್ ಬೋನ್ ವಿಲ್ ಟಿ 120, ಟ್ರಯಂಫ್ ಬೋನ್ ವಿಲ್ ಬಾಬರ್, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್, ಟ್ರಯಂಫ್ ಬೋನ್ ವಿಲ್ ಸ್ಪೀಡ್ ಮಾಸ್ಟರ್, ಟ್ರಯಂಫ್ ಥ್ರಾಕ್ಸ್ ಟನ್ ಆರ್, ಟೈಗರ್ 800 ಎಕ್ಸ್ ಆರ್, ಟ್ರಯಂಫ್ ಟೈಗರ್ 800 ಎಕ್ಸ್ ಆರ್ ಎಕ್ಸ್, ಟ್ರಯಂಫ್ ಟೈಗರ್ 800 ಎಕ್ಸ್ ಸಿ ಎಕ್ಸ್, ಟ್ರಯಂಫ್ ಟೈಗರ್ 800 ಎಕ್ಸ್ ಸಿ ಎ, ಟ್ರಯಂಫ್ ಟೈಗರ್ 1200.

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಭಾರತದ ಎಕ್ಸ್ ಶೋ ರೂಂ ದರದಲ್ಲಿ ಟ್ರಯಂಫ್ ಫ್ಲೀಟ್ ನ ಬೆಲೆಯನ್ನು ರೂ 7.70 ಲಕ್ಷಗಳಿಂದ ರೂ 17 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ.

MUST READ: ಎರಡು ಹೊಸ ಮಾದರಿಗಳಲ್ಲಿ ಬರಲಿರುವ ಎಫ್‍ಟಿಆರ್1200

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಪ್ರಿ-ಓನ್ಡ್ ಕಾಲಿಟ್ಟ ನಂತರ ಟ್ರಯಂಫ್ ಬೆನೆಲಿ ಟಿಆರ್‍‍ಕೆ 502 ಮತ್ತು ಟಿಆರ್‍‍ಕೆ502 ಎಕ್ಸ್, ಹ್ಯುಸಂಗ್ ಜಿಟಿ650ಆರ್ ಮತ್ತು ಪ್ರೋ650, ಕವಸಾಕಿ ವಲ್ಕನ್ ಎಸ್, ಹಾರ್ಲೆ ಡೇವಿಡ್ ಸನ್ ಸ್ಟ್ರೀಟ್ 750 ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಈ ಕಂಪನಿಗಳ ಮೋಟಾರ್ ಸೈಕಲ್ ಬೆಲೆಯನ್ನು ಭಾರತದ ಎಕ್ಸ್ ಶೋ ರೂಂ ದರದಂತೆ ರೂ 5.1 ಲಕ್ಷಗಳಿಂದ ರೂ 5.62 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ.

ಪ್ರಿ-ಓನ್ಡ್ ಮೋಟಾರ್ ಸೈಕಲ್ ಮಾರಾಟ ಮಾಡಲಿರುವ ಟ್ರಯಂಫ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟ್ರಯಂಫ್ ಕಂಪನಿಯು ಗ್ರಾಹಕರಿಗೆ ಉತ್ತಮವಾದ ಕೊಡುಗೆಯನ್ನು ನೀಡುತ್ತಿದೆ. ಪ್ರಿ-ಓನ್ಡ್ ಮೋಟಾರ್ ಸೈಕಲ್ ಗಳನ್ನು ಟ್ರಯಂಫ್ ನವೀಕರಣ ಮಾಡುವುದು ಹಾಗೂ ಕಂಪನಿ ಬ್ಯಾಕ್ ವಾರಂಟಿ ನೀಡುವುದು ಅತ್ಯುತ್ತಮ ಯೋಜನೆಯಾಗಿದೆ. ಕೆಟಿಎಂ ಕಂಪನಿಯು ತನ್ನ ಡ್ಯೂಕ್ 790 ಬೈಕ್ ಬಿಡುಗಡೆ ಮಾಡುತ್ತಿರುವ ಸಂದರ್ಭದಲ್ಲಿ 6 ಲಕ್ಷಗಳ ರೂಗಳ ಮೋಟಾರ್ ಸೈಕಲ್ ಸೆಗ್ ಮೆಂಟ್ ನಲ್ಲಿ ಈ ಆಫರ್ ನೀಡುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ.

Most Read Articles

Kannada
English summary
Triumph To Sell Pre-Owned Motorcycles To Lower Entry Price — Want A Piece Of The Sub-6 Lakh Segment - Read in Kannada
Story first published: Friday, April 26, 2019, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X