ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಟಿ‍‍ವಿ‍ಎಸ್ ಮೋಟಾರ್ಸ್, ಅಪಾಚೆ ಆರ್‍ಆರ್ 310 ಬೈಕಿನ ಅಪ್‍‍ಡೇಟೆಡ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.27 ಲಕ್ಷಗಳಾಗಿದೆ.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಅಪ್‍‍ಡೇಟಿನ ಭಾಗವಾಗಿ ಟಿವಿ‍ಎಸ್ ಕಂಪನಿಯು ಈ ಹೊಸ ಬೈಕಿನಲ್ಲಿ ರೇಸ್ ಟ್ಯೂನಿನ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿದೆ. ಇನ್ನು ಮುಂದೆ ಈ ಬೈಕ್ ಹೊಸ ಬಣ್ಣವಾದ ಫ್ಯಾಂಟಮ್ ಬ್ಲಾಕ್‍‍ನಲ್ಲಿಯೂ ದೊರೆಯಲಿದೆ. ಸ್ಲಿಪರ್ ಕ್ಲಚ್‍‍ನಿಂದಾಗಿ ಈ ಬೈಕ್‍‍ನಲ್ಲಿ ವೇಗವಾಗಿ ಡೌನ್ ಶಿಫ್ಟ್ ಮಾಡಬಹುದಾಗಿದ್ದು, ಯಾವುದೇ ಚಕ್ರಗಳು ಕುಲುಕುವುದಿಲ್ಲ ಹಾಗೂ ಚೈನ್‍‍ಗಳು ಅಲುಗಾಡುವುದಿಲ್ಲ. ಇದರ ಜೊತೆಗೆ ಅಸಿಸ್ಟ್ ಫಂಕ್ಷನ್ ಅಳವಡಿಸಲಾಗಿದ್ದು, ಕ್ಲಚ್ ಪ್ಲೇಟ್‍‍ಗಳನ್ನು ಗಟ್ಟಿಯಾಗಿ ಲಾಕ್ ಮಾಡಿ, ಎಫರ್ಟ್ ಕಡಿಮೆ ಮಾಡುತ್ತದೆ.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಆರ್‍‍ಆರ್ 310 ರೇಸಿಂಗ್ ಆಕ್ಸೆಸರೀಸ್‍‍ನ ಭಾಗವಾಗಿರುವ ಹೊಸ ಆರ್‍‍ಟಿ ಸ್ಲಿಪರ್ ಕ್ಲಚ್ ಟೆಕ್ನಾಲಜಿಯನ್ನು ಚಾಲ್ತಿಯಲ್ಲಿರುವ ಬೈಕುಗಳಲ್ಲಿಯೂ ಅಳವಡಿಸಬಹುದಾಗಿದೆ. ಈಗ ತಮ್ಮಲ್ಲಿರುವ ಬೈಕ್ ಅನ್ನು ಯಾವುದೇ ಟಿ‍‍ವಿ‍ಎಸ್ ಸರ್ವಿಸ್ ಸೆಂಟರ್‍‍ಗೆ ಕೊಂಡೊಯ್ದು ನಿಗದಿತ ಶುಲ್ಕವನ್ನು ಪಾವತಿಸಿ, ಈ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿಕೊಳ್ಳಬಹುದು.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಟಿ‍‍ವಿ‍ಎಸ್ ಮೋಟಾರ್ ಕಂಪನಿಯ ನಿರ್ದೇಶಕರು ಹಾಗೂ ಸಿ‍ಇ‍ಒ ಆದ ಕೆ ಎನ್ ರಾಧಾಕೃಷ್ಣನ್‍‍ರವರು ಮಾತನಾಡಿ, ನಾವು ರೇಸ್ ಟ್ಯೂನ್ (ಆರ್‍‍ಟಿ) ಸ್ಲಿಪರ್ ಕ್ಲಚ್ ಅನ್ನು ಟಿ‍‍ವಿ‍ಎಸ್ ಅಪಾಚೆ ಆರ್‍‍ಆರ್ 310 ಬೈಕಿನಲ್ಲಿ ಬಿಡುಗಡೆಗೊಳಿಸಿರುವುದಕ್ಕೆ ಉಲ್ಲಾಸಿತರಾಗಿದ್ದೇವೆ. ಇದರಿಂದಾಗಿ ಈಗಿರುವ ಹಾಗೂ ಹೊಸ ಗ್ರಾಹಕರು ನಮ್ಮ ಅಪ್‍‍ಗ್ರೇಡ್ ಅನ್ನು ಪಡೆಯಬಹುದಾಗಿದೆ.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಈ ಸೂಪರ್ ಪ್ರಿಮೀಯಂ ಬೈಕ್ ಅನ್ನು ಅಲ್ಟಿಮೇಟ್ ಟ್ರಾಕ್ ವೆಪನ್ ಆಗಿ ನೋಡಲಾಗುತ್ತದೆ. ಈ ಅಪ್‍‍ಡೇಟ್ ನಮ್ಮ ರೇಸಿಂಗ್ ಪರಂಪರೆಯಿಂದ ಆಟೋಮೋಬೈಲ್ ಉದ್ಯಮದಲ್ಲಿಯೇ ಮೊದಲ ಬಾರಿಗೆ ಬಂದಿದೆ. ಈ ಟೆಕ್ನಾಲಜಿಯನ್ನು ಅಳವಡಿಸುತ್ತಿರುವುದು ಸ್ವಾಭಾವಿಕವಾದ ಬೆಳವಣಿಗೆಯಾಗಿದೆ. ಈ ಬದಲಾವಣೆಯಿಂದಾಗಿ ಟಿವಿ‍ಎಸ್ ಅಪಾಚೆ ಆರ್‍ಆರ್310 ಗ್ರಾಹಕರು ರೇಸಿಂಗ್‍ ಡೈನಾಮಿಕ್ಸ್ ಅನುಭವವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಹೊಸ ವಿನ್ಯಾಸದ ಅಪ್‍‍ಗ್ರೇಡ್ ಬೈಕಿ‍ನಲ್ಲಿ ಎದ್ದು ಕಾಣಲಿದ್ದು, ಗ್ರಾಹಕರಿಗೆ ತೃಪ್ತಿ ನೀಡಲಿದೆ ಎಂದು ತಿಳಿಸಿದರು. ಆರ್‍‍ಟಿ(ರೇಸ್ ಟ್ಯೂನ್ ) ಹೊಂದಿರುವ ಸ್ಲಿಪರ್ ಕ್ಲಚ್ ಅಪಾಚೆಯ ಹೊಸ ಆರ್‍ಆರ್310 ಬೈಕ್ ಅನ್ನು ಟಿ‍‍ವಿ‍ಎಸ್ ಕಂಪನಿಯು ತನ್ನ ಪ್ರಚಾರ ರಾಯಭಾರಿಯಾದ ಮಹೇಂದ್ರ ಸಿಂಗ್ ಧೋನಿರವರಿಗೆ ನೀಡಲಾಯಿತು. ಈ ಬಗ್ಗೆ ಮಾತನಾಡಿದ ಧೋನಿರವರು, ನಾನು ಟಿವಿ‍ಎಸ್ ಮೋಟಾರ್ ಕಂಪನಿಯೊಂದಿಗೆ ಸುಮಾರು 12 ವರ್ಷಗಳಿಂದ ಸಂಬಂಧವನ್ನು ಹೊಂದಿದ್ದೇನೆ. ವರ್ಷಗಳು ಕಳೆದಂತೆ ನಮ್ಮ ಸಂಬಂಧವು ಗಟ್ಟಿಗೊಳ್ಳುತ್ತಾ ಬಂದಿದೆ.

MOST READ: ಭಾರತಕ್ಕೂ ಕಾಲಿಡಲಿದೆ ಸಿಟ್ರನ್ ಕಂಪನಿಯ ಲಾ ಮೈಸೆನ್ ಸ್ಟೋರ್

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಬೈಕ್ ಪ್ರಿಯನಾಗಿರುವ ನನಗೆ, ಹೊಸ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್310 ಬೈಕಿನಲ್ಲಿರುವ ಹೊಸ ಅಪ್‍‍ಡೇಟ್ ಖುಷಿಯನ್ನು ನೀಡಿದೆ. ಭಾರತೀಯ ಬೈಕ್ ತಯಾರಕ ಕಂಪನಿಯ ಸೂಪರ್ ಪ್ರಿಮೀಯಂ ಬೈಕ್ ಅನ್ನು ಹೊಂದುತ್ತಿರುವುದಕ್ಕೆ ಹೆಮ್ಮೆಯಾಗಿದೆ. ಟಿ‍‍ವಿ‍ಎಸ್ ತಂಡಕ್ಕೆ ಶುಭವನ್ನು ಕೋರುತ್ತೇನೆ. ಈ ಹೊಸ ಬೈಕಿನಿಂದ ಪ್ರಯಾಣಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಇದೊಂದು ಬದಲಾವಣೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲೂ 312.2 ಸಿಸಿಯ ಲಿಕ್ವಿಡ್ ಕೂಲ್‍‍ನ ಸಿಂಗಲ್ ಸಿಲಿಂಡರ್ ರಿವರ್ಸ್ ಇನ್‍‍ಕ್ಲೈನ್ ಡಿ‍ಒ‍‍‍ಹೆಚ್‍‍ಸಿ ಎಂಜಿನ್ ಇದ್ದು, 34 ಬಿ‍‍ಹೆಚ್‍‍ಪಿ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಇದರಲ್ಲಿಯೂ ಸಹ ಬೈ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳು, ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಸಿಸ್ಟಂ, ವರ್ಟಿಕಲ್ ಸ್ಪೀಡೋ ಮೀಟರ್/ ಟ್ಯಾಕೋ ಮೀಟರ್ ಹಾಗೂ ಮಿಚೆಲಿನ್ ಪೈಲಟ್ ಸ್ಟ್ರೀಟ್ ಟಯರ್‍‍ಗಳಿವೆ.

ಅಪ್‍‍ಡೇಟೆಡ್ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬಿಡುಗಡೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಅಪಾಚೆ ಆರ್‍ಆರ್ 310 ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿರುವ ಟಿ‍‍ವಿ‍ಎಸ್ ಕಂಪನಿಯ ಬೈಕ್ ಆಗಿದೆ. ಇದರಲ್ಲಿ ಅನೇಕ ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ. ಈಗ ಸ್ಲಿಪರ್ ಕ್ಲಚ್ ಅನ್ನು ಅಳವಡಿಸಿರುವುದರಿಂದ ಮತ್ತಷ್ಟು ಹುರುಪನ್ನು ಪಡೆದಿದೆ. ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಡೊಮಿನರ್ 400, ಕೆ‍‍ಟಿ‍ಎಂ ಆರ್‍‍ಸಿ 390, ಹೋಂಡಾ ಸಿಬಿ 300ಆರ್ ಹಾಗೂ ಬಿ‍ಎಂ‍‍ಡಬ್ಲ್ಯೂ ಜಿ 310 ಆರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
TVS Apache RR 310 Launched In India With Slipper Clutch — Priced At Rs 2.27 Lakh - Read in kannada
Story first published: Monday, May 27, 2019, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X