ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಬಿಎಸ್-6 ನಿಯಮ ಜಾರಿಗೆ ದಿನಗಣನೆ ಶುರುವಾಗುತ್ತಿದ್ದಂತೆ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ವಾಹನ ಬಿಡುಗಡೆಗೆ ಸಿದ್ದತೆ ನಡೆಸುತ್ತಿದ್ದು, ಟಿವಿಎಸ್ ಸಂಸ್ಥೆಯು ಸಹ ಮೊದಲ ಹಂತವಾಗಿ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಬಿಎಸ್-4 ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಉನ್ನತೀಕರಣ ಹೊಂದಿರುವ ಟಿವಿಎಸ್ ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು ರೂ.99,950ಕ್ಕೆ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯು ರೂ.1.24 ಲಕ್ಷ ಬೆಲೆ ಹೊಂದಿದೆ. ಹೊಸ ನಿಯಮದಿಂದಾಗಿ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳ ಬೆಲೆಯು ಈ ಹಿಂದಿನ ಆವೃತ್ತಿಗಿಂತ ರೂ.5 ಸಾವಿರದಿಂದ ರೂ.16 ಸಾವಿರದಷ್ಟು ದುಬಾರಿಯಾಗಿವೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಹೊಸ ಆವೃತ್ತಿಗಳು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನ್ನು ಪಡೆದುಕೊಂಡಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಇದೀಗ ಟಿವಿಎಸ್ ಬಿಡುಗಡೆ ಮಾಡಿರುವ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ ಸಹ ಹೊಸ ಎಂಜಿನ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ ರಸ್ತೆಗಿಳಿದಿವೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಬಿಎಸ್-6 ಪ್ರೇರಿತ 159.7ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 16-ಬಿಎಚ್‌ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹಾಗೆಯೇ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ ಮಾದರಿಯು ಸಹ ಬಿಎಸ್-6 ಮಾದರಿಯ 197.75ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 16.8-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಇದರೊಂದಿಗೆ ಎರಡು ಬೈಕ್‌ಗಳಲ್ಲೂ ಈ ಬಾರಿ ಪರ್ಫಾಮೆನ್ಸ್ ಹೆಚ್ಚಳವಾಗಿರುವ ಸ್ಪಷ್ಟವಾಗಿದ್ದು, ಇಂಧನ ದಕ್ಷತೆ ಕೂಡಾ ಗಮನಸೆಳೆಯಲಿದೆ ಎನ್ನಲಾಗಿದೆ. ಜೊತೆಗೆ ಹೊಸ ಬೈಕ್‌ಗಳಲ್ಲಿ ಇದೇ ಮೊದಲ ಬಾರಿಗೆ ಟ್ರಾಫಿಕ್ ದಟ್ಟಣೆಯಲ್ಲೂ ಕಡಿಮೆ ಇಂಧನ ದಹಿಸುವಿಕೆಯ ಹೊಸ ತಂತ್ರಜ್ಞಾನ(ಜಿಟಿಟಿ) ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಇನ್ನುಳಿದಂತೆ ಈ ಹಿಂದಿನ ಬೈಕ್ ಮಾದರಿಯಲ್ಲಿ ನೀಡಲಾಗಿದ್ದ ಬಹುತೇಕ ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್‌ಲೈಟ್ಸ್, ಎಲ್ಇಡಿ ಡಿಆರ್‌ಎಲ್ಎಸ್ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಸ್ಮಾರ್ಟ್‌ಫೋನ್ ಜೊತೆ ಸಂಪರ್ಕಿಸಲು ಸ್ಮಾಟ್ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಹಾಗೆಯೇ ಬೈಕ್ ಸವಾರರ ಸುರಕ್ಷತೆಗಾಗಿ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ನೀಡಿದಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ನಲ್ಲಿ ಸಿಂಗಲ್ ಚಾನೆಲ್ ಎಬಿಸ್, ಸ್ಲಿಪ್ಲರ್ ಕ್ಲಚ್ ಸೌಲಭ್ಯವನ್ನು ಎರಡು ಬೈಕ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಅಪಾಚೆ ಆರ್‌ಟಿಆರ್ 160 4ವಿ ಬೈಕ್‌(ರೆಡ್, ಬ್ಲ್ಯಾಕ್ ಮತ್ತು ಬ್ಲ್ಯೂ)

ಅಪಾಚೆ ಆರ್‌ಟಿಆರ್ 200 4ವಿ ಬೈಕ್‌(ಬ್ಲ್ಯಾಕ್ ಆ್ಯಂಡ್ ವೈಟ್, ರೆಡ್ ಆಕ್ಸೆಂಟ್)

ಬಿಎಸ್-6 ವರ್ಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳು ಬಿಡುಗಡೆ

ಒಟ್ಟಿನಲ್ಲಿ ಗ್ರಾಹಕರ ನೀರಿಕ್ಷೆಯೆಂತೆ ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಗಳು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಹೊಸ ತಂತ್ರಜ್ಞಾನ ಜೋಡಣೆಯಿಂದಾಗಿ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

Most Read Articles

Kannada
English summary
TVS Apache RTR BS-VI Range Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X