ದುಬಾರಿ ಬೆಲೆಯಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಎಫ್ಐ ಎಬಿಎಸ್

ಟಿವಿಎಸ್ ನಿರ್ಮಾಣದ ಜನಪ್ರಿಯ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಈ ಬಾರಿ ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದ್ದು, ಹೊಸದಾಗಿ ಫ್ಯೂಲ್ ಇಂಜೆಕ್ಷಡ್ ಮತ್ತು ಎಬಿಎಸ್ ಸೌಲಭ್ಯದೊಂದಿಗೆ ಹೊಸ ಬೈಕ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ.

ಹೊಸ ಸೌಲಭ್ಯ ಪ್ರೇರಿತ ಆರ್‌ಟಿಆರ್ 160 4ವಿ ಮಾದರಿಯ ಬೆಲೆಯು ಈ ಬಾರಿ ತುಸು ದುಬಾರಿಯಾಗಿದ್ದು, ಫ್ಯೂಲ್ ಇಂಜೆಕ್ಷಡ್ ಮತ್ತು ಎಬಿಎಸ್ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.98,644ಕ್ಕೆ ನಿಗದಿ ಪಡಿಸಲಾಗಿದೆ. ಇದು ಈ ಹಿಂದಿನ ಮಾದರಿಗಿಂತ ರೂ. 6,999 ನಷ್ಟು ದುಬಾರಿ ಎನ್ನಿಸಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮೂರು ಆವೃತ್ತಿಗಳಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಎಫ್ಐ ಎಬಿಎಸ್

ಹೊಸ ಫ್ಯೂಲ್ ಇಂಜೆಕ್ಷಡ್ ಎಬಿಎಸ್ ಆವೃತ್ತಿಯನ್ನು ಹೊರತುಪಡಿಸಿ ಕಾರ್ಬ್ಯೂಟೆಡ್/ಫ್ರಂಟ್ ಡಿಸ್ಕ್(ರೂ.81,490 ಎಕ್ಸ್‌ಶೋರೂಂ) , ಕಾರ್ಬ್ಯೂಟೆಡ್/ಡ್ಯುಯಲ್ ಡಿಸ್ಕ್(84,490 ಎಕ್ಸ್‌ಶೋರೂಂ) ಮತ್ತು ಫ್ಯೂಲ್ ಇಂಜೆಕ್ಷಡ್/ಡ್ಯುಯಲ್(ರೂ.89,990) ಕೂಡಾ ಖರೀದಿಗೆ ಲಭ್ಯವಿದ್ದು, ಇವುಗಳು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್‌ನೊಂದಿಗೆ ಉನ್ನತಿಕರಣ ಹೊಂದಲಿವೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಎಫ್ಐ ಎಬಿಎಸ್

ಸದ್ಯಕ್ಕೆ ಫ್ಯೂಲ್ ಇಂಜೆಕ್ಷಡ್ ಮಾದರಿಯಲ್ಲಿ ಮಾತ್ರವೇ ಎಬಿಎಸ್ ಸೌಲಭ್ಯ ಒದಗಿಸಲಾಗಿದ್ದು, ಮುಂದಿನ ಒಂದು ವಾರದೊಳಗಾಗಿ ಮೇಲಿನ ಮೂರು ವೆರಿಯೆಂಟ್‌ಗಳು ಹೊಸ ಸೌಲಭ್ಯಗಳನ್ನು ಹೊಂದಿರಲಿದ್ದು, ಹೊಸ ಬೈಕಿನ ಬೆಲೆಯಲ್ಲಿ ರೂ.4 ಸಾವಿರದಿಂದ ರೂ.6 ಸಾವಿರ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಇನ್ನು ಅಪಾಚೆ ಆರ್‌ಟಿಆರ್ 160 4ವಿ ಎಫ್ಐ ಎಬಿಎಸ್ ಮಾದರಿಯು 159.7 ಸಿಸಿ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 16.56-ಬಿಎಚ್‌ಪಿ ಮತ್ತು 14.8-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ದುಬಾರಿ ಬೆಲೆಯಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಎಫ್ಐ ಎಬಿಎಸ್

ಈ ಮೂಲಕ ಸ್ಪೋರ್ಟಿ ಲುಕ್‌ನೊಂದಿಗೆ ಉತ್ತಮ ಎಂಜಿನ್ ಪರ್ಫಾಮೆನ್ಸ್ ಹೊಂದಿರುವ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಕಮ್ಯೂಟರ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಜಾಜ್ ಪಲ್ಸರ್ 160, ಸುಜುಕಿ ಜಿಕ್ಸರ್, ಯಮಹಾ ಎಫ್‌ಜೆಡ್ ವಿ3.0 ಮತ್ತು ಹೋಂಡಾ ಸಿಬಿ ಹಾರ್ನೆಟ್ ಬೈಕ್‌ಗಳಿಗೆ ಉತ್ತಮ ಎದುರಾಳಿಯಾಗಿದೆ.
Most Read Articles

Kannada
Read more on ಟಿವಿಎಸ್
English summary
TVS Apache RTR 160 4V FI ABS Launched At Rs 98,644. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X