ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಟಿವಿಎಸ್ ನಿರ್ಮಾಣದ ಜನಪ್ರಿಯ ಅಪಾಚೆ ಆರ್‌ಟಿಆರ್ 160 ಬೈಕ್ ಮಾದರಿಯು ಈ ಬಾರಿ ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮಕ್ಕೆ ಅನುಸಾರವಾಗಿ ಹೊಸ ಬೈಕ್ ಅನ್ನು ಎಬಿಎಸ್ ಸೌಲಭ್ಯದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಎಬಿಎಸ್ ಸೌಲಭ್ಯ ಹೊಂದಿರುವ ಆರ್‌ಟಿಆರ್ 160 ಬೈಕ್ ಮಾದರಿಯ ಬೆಲೆಯು ಈ ಬಾರಿ ತುಸು ದುಬಾರಿಯಾಗಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 84,710 ಕ್ಕೆ ನಿಗದಿ ಪಡಿಸಲಾಗಿದೆ. ಇದು ಈ ಹಿಂದಿನ ಮಾದರಿಗಿಂತ ರೂ. 6 ಸಾವಿರದಷ್ಟು ದುಬಾರಿ ಎನ್ನಿಸಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎರಡು ವಿವಿಧ ಆವೃತ್ತಿಗಳಲ್ಲಿ ಅಪಾಚೆ ಆರ್‌ಟಿಆರ್ 160 ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಅಪಾಚೆ ಆರ್‌ಟಿಆರ್ 160 ಬೈಕಿನ ಆರಂಭಿಕ ಮಾದರಿಯು ಸಿಂಗಲ್ ಚಾನೆಲ್ ಎಬಿಎಸ್‌ನೊಂದಿಗೆ ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಹೊಂದಿದ್ದು, ಹೈ ಎಂಡ್ ಮಾದರಿಯೂ ಸಹ ಸಿಂಗಲ್ ಚಾನೆಲ್ ಎಬಿಎಸ್‌ನೊಂದಿಗೆ ಎರಡು ಬದಿಯ ಚಕ್ರದಲ್ಲೂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಹೀಗಾಗಿ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಆರಂಭಿಕ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.84,710 ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯು ರೂ.87,719 ಬೆಲೆ ಹೊಂದಿದ್ದು, ಎಬಿಎಸ್ ಹೊರತುಪಡಿಸಿ ಬೈಕಿನ ಬಹುತೇಕ ಡಿಸೈನ್‌ಗಳು ಈ ಹಿಂದಿನ ಮಾದರಿಯಂತೆ ಮುಂದುವರಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಎಂಜಿನ್ ಸಾಮರ್ಥ್ಯ

ಅಪಾಚೆ ಆರ್‌ಟಿಆರ್ 160 ಎಬಿಎಸ್ ಮಾದರಿಯು 160 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 15-ಬಿಎಚ್‌ಪಿ ಮತ್ತು 13-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಇದರೊಂದಿಗೆ ಆರ್‌ಟಿಆರ್ 160 4ವಿ ಮಾದರಿಯ ಬೆಲೆಯು ಸಹ ಈ ಬಾರಿ ತುಸು ದುಬಾರಿಯಾಗಿದ್ದು, ಫ್ಯೂಲ್ ಇಂಜೆಕ್ಷಡ್ ಮತ್ತು ಎಬಿಎಸ್ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.98,644ಕ್ಕೆ ನಿಗದಿ ಪಡಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಇದು ಈ ಹಿಂದಿನ ಮಾದರಿಗಿಂತ ರೂ. 6,999 ನಷ್ಟು ದುಬಾರಿ ಎನ್ನಿಸಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮೂರು ಆವೃತ್ತಿಗಳಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಇನ್ನು ಕೇಂದ್ರ ಸರ್ಕಾರವು ಇದೇ ವರ್ಷ ಏಪ್ರಿಲ್ 1ರಿಂದ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಸಿಬಿಯು(ಕಾಂಬಿ ಬ್ರೇಕ್ ಸಿಸ್ಟಂ) ಮತ್ತು 150ಸಿಸಿ ಮೇಲ್ಪಟ್ಟ ಬೈಕ್ ಮಾದರಿಗೂ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಕಡ್ಡಾಯಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯಿಂದಾಗಿ ಪ್ರತಿವರ್ಷ ದೇಶಾದ್ಯಂತ ಸಂಭವಿಸುತ್ತಿರುವ ಸಾವಿರಾರು ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ. ಇದರಿಂದ ವಾಹನ ಸವಾರಿಗೂ ಗರಿಷ್ಠ ಮಟ್ಟದ ಸುರಕ್ಷತೆ ಸಿಗಲಿದ್ದು, ಹೊಸ ನಿಮಯ ಜಾರಿಯಾದ್ರೆ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಕೂಡಾ ತಗ್ಗಲಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಎಬಿಎಸ್ ಬಿಡುಗಡೆ- ಒಂದೇ ಬಾರಿಗೆ ರೂ.6 ಸಾವಿರ ಬೆಲೆ ಹೆಚ್ಚಳ..!

ಎಬಿಎಸ್ ಇಲ್ಲದ ಬೈಕಿನಲ್ಲಿ ರೈಡ್ ಮಾಡುವಾಗ ಹಠಾತ್ ಆಗಿ ಬ್ರೇಕ್ ಅದುಮಿದಾಗ ಚಕ್ರದ ಚಲನೆ ನಿಲುಗಡೆಯಾಗುತ್ತದೆ. ಚಕ್ರವನ್ನು ಬಿಗಿಯಾಗಿ ಹಿಡಿಯುವುದರಿಂದ ಹೀಗಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿರುವುದಿಲ್ಲ. ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಎಬಿಎಸ್ ಸಹಕಾರಿಯಾಗುತ್ತೆ.

Most Read Articles

Kannada
English summary
TVS Apache RTR 160 ABS Launched In India — Prices Start At Rs 84,710. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X