Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾದ ಪರಿಸರ ಸ್ನೇಹಿ ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಎಥೆನಾಲ್ ಬೈಕ್
ಕಳೆದ ವರ್ಷ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಟಿವಿಎಸ್ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಅಪಾಚೆ ಆರ್ಟಿಆರ್ 200 ಎಫ್ಐ ಎಥೆನಾಲ್ ಬೈಕ್‌ನ್ನು ಪ್ರದರ್ಶನಗೊಳಿಸಿದ್ದು, ಇದೀಗ ಮಾರುಕಟ್ಟೆಯಲ್ಲಿ ಅಪಾಚೆ ಆರ್‍ಟಿಆರ್ 200 4ವಿ ಎಥೆನಾಲ್ ಬೈಕ್ ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ಟಿವಿಎಸ್ ಅಪಾಚೆ ಆರ್‍ಟಿಆರ್ 2004ವಿ ಎಥೆನಾಲ್ ಮಾದರಿಯು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.20 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಅಪಾಚೆ ಆರ್‍ಟಿಆರ್ 200 4ವಿ ಎಥೆನಾಲ್ ಬೈಕ್‌ಗಳು ಮಾಲಿನ್ಯ ತಡೆಯುವ ವಿಶೇಷ ಗುಣಗಳನ್ನು ಹೊಂದಿರುವ ಬಗ್ಗೆ ಟಿವಿಎಸ್ ಹೇಳಿಕೊಂಡಿದ್ದು, ಎಥೆನಾಲ್ ಬೈಕ್ ಮಾದರಿಯು ವಿಷಕಾರಿಯಲ್ಲದ, ಬಯೊಡಿಗ್ರೇಡಬಲ್ ಮತ್ತು ಪೆಟ್ರೋಲ್‌ಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿಯಂತೆ. ಈ ನಿಟ್ಟಿನಲ್ಲಿ ಈ ಬೈಕ್ ಅನ್ನು ಮೊದಲ ಹಂತವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದು, ನಂತರದ ದಿನಗಳಲ್ಲಿ ಇನ್ನಿತರೆ ರಾಜ್ಯದಲ್ಲಿ ಬಿಡುಗಡೆಯಾಗಲಿದೆ.

ಮೊದಲೇ ಹೇಳಿದಂತೆ ಅಪಾಚೆ ಆರ್‌ಟಿಆರ್ ಎಥೆನಾಲ್ ಹಸಿರು ಗ್ರಾಫಿಕ್ಸ್ ಹೊರತುಪಡಿಸಿ ಸಾಮಾನ್ಯ ಬೈಕ್ ಮಾದರಿಗಳನ್ನೇ ಹೋಲುತ್ತಿದ್ದು, ಅಪಾಚೆ ಆರ್‌ಟಿಆರ್ 200 ಎಲ್ಇಡಿ ಡಿಆರ್‍ಎಲ್‍ಗಳು, ಸ್ಪ್ಲಿಟ್-ಸೀಟುಗಳು, ಎಡ್ಜ್ ಬಾಡಿ ಪ್ಯಾನಲ್‌ಗಳು, ಅನೋಡೈಸ್ಡ್-ಗೋಲ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಹೊಂದಿರಲಿವೆ.

ಟಿವಿಎಸ್ ಬಿಡುಗಡೆ ಮಾಡಲಾದ ಅಪಾಚೆ ಆರ್ಟಿಆರ್ 200 ಎಫ್ಐ ಎಥೆನಾಲ್ ಬೈಕ್ ಇ100 200ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 20.7 ಬಿಹೆಚ್‍ಪಿ ಮತ್ತು 18.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹಾಗೆಯೆ ಈ ಬೈಕ್ ಗಂಟೆಗೆ 129 ಕಿಲ್ಮೋಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಎಥೆನಾಲ್ ಆಧಾರಿತ ಅಪಾಚೆ ಆರ್‍ಟಿಆರ್ 200 ಬೈಕ್ ಎಲೆಕ್ಟ್ರಿಕ್ ಫ್ಯುಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಟ್ವಿನ್-ಸ್ಪ್ರೇ-ಟ್ವಿನ್-ಪೋರ್ಟ್ ಅನ್ನು ಹೊಂದಿದ್ದು, ಇದು ಹೆಚ್ಚಿನ ಪವರ್ ಔಟ್‍ಪುಟ್ ಅನ್ನು ನೀಡಲು ಮತ್ತು ಇಂಧನವನ್ನು ಕ್ಲೀನರ್ ಅನ್ನು ಸುಡಲು ಸಹ ಅನುಮತಿಸುತ್ತದೆ.

ಹೆಚ್ಚಿನ ಪೆಟ್ರೋಲ್ ಎಂಜಿನ್‌ಗಳು ಎಥೆನಾಲ್‌ನಲ್ಲಿ ಚಲಾಯಿಸಬಹುದಾದರೂ ಅದರ ವಿಶ್ವಾಸಾರ್ಹತೆಗಾಗಿ ಎಂಜಿನ್‌ನಲ್ಲಿ ಕೆಲವು ಮಟ್ಟದ ಮಾರ್ಪಾಡುಗಳನ್ನು ಮಾಡಬೇಕಾಗಿದೆ. ಹೀಗಾಗಿ ಅಪಾಚೆ ಆರ್ ಟಿ ಆರ್ ಎಥೆನಾಲ್ ರೂಪಾಂತರವು ಇ 85-ಎಥೆನಾಲ್ ಪ್ರೇರಣೆಯೊಂದಿಗೆ ಎಂಜಿನ್ ಚಾಲನೆ ಪಡೆದಲಿದೆ.

ಇನ್ನು ರೆಗ್ಯುಲರ್ ಆವೃತ್ತಿಯ ಹಾಗೆಯೇ ಈ ಬೈಕ್ ಕೂಡ 90/90 ಮತ್ತು 130/70 ಆರ್17ರ ಟ್ಯೂಬ್ ಲೆಸ್ ಟೈರ್ ಗಳನ್ನು ಹೊಂದಿದ್ದು, 270ಎಂಎಂ ಮತ್ತು 240ಎಂಎಂ ಎರಡು ಕಡೆಯ ಪೆಟಲ್ ಡಿಸ್ಕ್ ಬ್ರೇಕ್‍ಗಳನ್ನು ಹೊಂದಿದೆ. ಎಥೆನಾಲ್ ಇಂಧನ, ವಿಷಕಾರಿಯಲ್ಲದ ಮತ್ತು ಜೈವಿಕ ವಿಘಟನೀಯವಾಗಿದ್ದು, ಪರಿಸರಕ್ಕೆ ಬಹಳ ಕಡಿಮೆ ಹಾನಿ ಉಂಟುಮಾಡುತ್ತದೆ. ಆದಾಗ್ಯೂ, ಎಥೆನಾಲ್-ಆಧಾರಿತ ಇಂಜಿನ್‌ಗಳು ನಿಯಮಿತವಾದ ಪೆಟ್ರೋಲ್‌ಗಿಂತ ಹೆಚ್ಚು ಇಂಧನವನ್ನು ಪಡೆದುಕೊಳ್ಳುತ್ತವೆ.

ಎಥೆನಾಲ್ ಮೂಲತಃ ಆಲ್ಕೋಹಾಲ್ ಮತ್ತು ಗ್ಯಾಸೋಲಿನ್‍ನ ಸಂಯೋಜನೆಯಾಗಿದೆ. ಇದು ಹೆಚ್ಚಿನ ಆಕ್ಟೇನ್ ಸಂಖ್ಯೆಯನ್ನು ನೀಡುತ್ತದೆ, ಕಡಿಮೆ ವೆಚ್ಚದಲ್ಲಿ ಕ್ಲೀನರ್ ದಹನಕ್ಕೆ ಅನುವು ಮಾಡಿಕೊಡುತ್ತದೆ. ಇದನ್ನು ಸಸ್ಯದ ಅವಶೇಷಗಳಿಂದ ತಯಾರಿಸಲಾಗುತ್ತದೆ. ಈ ಬೈಕ್ ಪೆಟ್ರೋಲ್ ಅಥವಾ ಡೀಸೆಲ್ ನಂತಹ ಸಾಮಾನ್ಯ ಪಳೆಯುಳಿಕೆ ಇಂಧನಗಳಿಗಿಂತ ಇದು ಹೆಚ್ಚು ಪರಿಸರ ಸ್ನೇಹಿಯಾಗಿದೆ.

ಎಥೆನಾಲ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂಧನದ ಪರ್ಯಾಯ ನವೀಕರಿಸಬಹುದಾದ ಮೂಲವಾಗಿದ್ದು, ಇದು ಶೇಕಡಾ 35 ರಷ್ಟು ಕಡಿಮೆ ಇಂಗಾಲದ ಮಾನೊಕ್ಸೈಡ್ ಹೊರಸೂಸುವಿಕೆಯನ್ನು ಉತ್ಪಾದಿಸುತ್ತದೆ ಮತ್ತು ಜೈವಿಕ ವಿಘಟನೀಯವಾಗಿದೆ.

ಎಥೆನಾಲ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಲಭವಾದ ಪರ್ಯಾಯ ಇಂಧನಗಳಲ್ಲಿ ಒಂದಾಗಿದೆ. ಮೋಟಾರ್‍ಸೈಕಲ್‍ನಲ್ಲಿ ಎಥೆನಾಲ್ ಬಳಕೆಯು ಹಾನಿಕಾರಕ ಹೊರಸೂಸುವಿಕೆಯ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಬೈಕ್‍ಗಳು ಸಧ್ಯದ ದೇಶದ ಮಾಲಿನ್ಯವನ್ನು ತಡೆಗಟ್ಟಲು ಒಂದು ಪರ್ಯಾಯವಾಗಿದ್ದು, ಈ ಬೈಕ್ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ 200 ಎನ್ಎಸ್ ಮತ್ತು ಕೆಟಿಎಂ ಡ್ಯೂಕ್ 200 ಬೈಕ್‍ಗಳಿಗೆ ಪೋಟಿ ನೀಡಲಿದೆ.