ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಚೆನ್ನೈ ಮೂಲದ ಟಿ‍‍ವಿಎಸ್ ಮೋಟಾರ್ಸ್ ತನ್ನ ಅಪಾಚೆ ಆರ್‍‍ಟಿಆರ್ 200 4ವಿ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟ್ ಕ್ಲಸ್ಟರ್ ಅನ್ನು ಅಳವಡಿಸುವುದಾಗಿ ಘೋಷಣೆ ಮಾಡಿದೆ. ಅಪಾಚೆ ಟಿ‍‍ವಿಎಸ್‍ನಲ್ಲಿ ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಈ ಬೈಕ್ ಮಾಹಿತಿ ಕಂಟ್ರೋಲ್ ಸ್ವಿಚ್ ಮತ್ತು ರೇಸಿಂಗ್ ಚೈನ್‍‍ನಲ್ಲಿ ಗೋಲ್ಡ್ ಫೀನಿಶೀಂಗ್ ಹೊಂದಿದೆ.

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್‍ ಬ್ಲೂಟೂತ್-ಇಬ್‍‍ಬ್ಲೆಲ್ಡ್ ಟಿ‍‍ವಿಎಸ್ ಸ್ಮಾರ್ಟ್‍ ಕನೆಕ್ಟ್ ತಂತ್ರಜ್ಞಾನವನ್ನು ಟಿ‍‍ವಿಎಸ್ ಕನೆಕ್ಟ್ ಅಪ್ಲಿಕೇಶ್‍‍ನ್‍‍ನೊಂದಿಗೆ ಜೋಡಿಸಬಹುದು. ಆಂಡ್ರಾಯ್ಡ್ ಮತ್ತು ಐ‍ಒಎಸ್‍ ಡಿವೈಸ್ ಅಪ್ಲಿಕೇಶನ್ ಲಭ್ಯವಿದೆ. ನ್ಯಾವಿಗೇಷನ್, ರೇಸ್ ಟೆಲಿ‍‍ಮೆಟ್ರಿ, ಟೂರ್ ಮೋಡ್, ಲೀನ್ ಹ್ಯಾಂಗಲ್ ಮೋಡ್, ಕ್ರ್ಯಾಶ್ ಅಲರ್ಟ್ ಮತ್ತು ಕಾಲ್/ಎಸ್‍ಎಂಎಸ್ ನೋಟಿಫಿಕೇಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಅಪ್ಲಿಕೇಶನ್ ಹೊಂದಿದೆ.

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಟಿವಿಎಸ್ ಅಪಾಚೆಯು ಹೆಚ್ಚು ಮಾರಾಟವಾದ ಸರಣಿಗಳಲ್ಲಿ ಒಂದಾಗಿದೆ. ಲಕ್ಷಾಂತರ ಸಂಖ್ಯೆಯ ಅಪಾಚೆ ಸರಣಿಯ ಬೈಕ್‍‍ಗಳನ್ನು ವಿವಿಧ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೈಕ್ ಒನ್-ಮೇಕ್ ಚಾಂಪಿಯನ್ ಶಿಪ್ ಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಲೀನ್ ಹ್ಯಾಂಗಲ್ ಮೋಡ್ ಗೈರೊಸ್ಕೋಪಿಕ್ ಸೆನ್ಸಾರ್ ಬಳಸುತ್ತದೆ ಮತ್ತು ಮಾಲೀಕರ ಫೋನ್ ಅನ್ನು ಸವಾರರ ಲೀನ್ ಹ್ಯಾಗಲ್‍‍ಗಳ ಮೂಲಕ ರೆಕಾರ್ಡ್ ಮಾಡಿ ಅದನ್ನು ಇನ್ಸ್ ಟ್ರೂಮೆಂಟ್ ಡಿಸೆಪ್ಲೆಯಲ್ಲಿ ತೋರಿಸುತ್ತದೆ. ರೇಸ್ ಟಿಲಿಮೆಟ್ರಿ ಪ್ರತಿ ರೈಡಿನ ಕೊನೆಯಲ್ಲಿ ಡೇಟಾವನ್ನು ದಾಖಲಿಸುತ್ತದೆ ಮತ್ತು ಸಮರೈಸ್‍ ಮಾಡುತ್ತಾರೆ.

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಬೈಕಿನ ಸಿಸ್ಟಂ ಆಟೋಮ್ಯಾಟಿಕ್‍ ಆಗಿ ಕ್ರಾಶ್ ಅಲರ್ಟ್ ಮೋಡ್ ಅನ್ನು ಅನ್ ಮಾಡುತ್ತದೆ ಮತ್ತು ಅಪಘಾತಗಳು ಸಂಭವಿಸಿದಾಗ ಆಟೋಮ್ಯಾಟಿಕ್ ಆಗಿ 180 ಸೆಕೆಂಡುಗಳಲ್ಲಿ ತುರ್ತು ಸಂಪರ್ಕಕ್ಕೆ ಮಾಹಿತಿ ನೀಡುತ್ತದೆ.

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕಿನಲ್ಲಿರುವ, 197.75 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 20.7 ಬಿಎಚ್‍ಪಿ ಪವರ್ ಮತ್ತು 18.1 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಈ ಬೈಕಿನಲ್ಲಿ ಸವಾರನ ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಮುಂಭಾಗದಲ್ಲಿ 270 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ 240 ಎಂಎಂ ಪೆಟಲ್ ಡಿಸ್ಕ್ ಅಳವಡಿಸಲಾಗಿದೆ. ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್ ಟ್ಯೂಬ್ ಲೆಸ್ ಟಯರ್ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಈ ಬೈಕ್ 12 ಲೀಟರ್ ಫ್ಯೂಲ್ ಟ್ಯಾಂಕ್ ಅನ್ನು ಹೊಂದಿದೆ. ಭಾರತದ ಎಕ್ಸ್ ಶೋ ರೂಂ ದರದಂತೆ ಈ ಬೈಕಿನ ಬೆಲೆ ರೂ.1.14 ಲಕ್ಷಗಳಾಗಿವೆ. ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್‍ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಹೊಂದಲಿದೆ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್

ಟಿ‍ವಿಎಸ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಿರುವುದರಿಂದ ಇನ್ನಷ್ಟು ಜನರನ್ನು ಆಕರ್ಷಿಸಬಹುದು. ಟಿ‍ವಿಎಸ್ ಬೈಕಿನಲ್ಲಿರುವ ಹೊಸ ವೈಶಿಷ್ಟ್ಯಗಳು ಭಾರತೀಯ ರಸ್ತೆಗಳಿಗೆ ಹೇಗೆ ಹೊಂದಿಕೊಳ್ಳಲಿವೆ ಎಂಬುದನ್ನು ಕಾದು ನೋಡಬೇಕು. ಟಿವಿಎಸ್ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್ ಗ್ರಾಹಕರನ್ನು ಸೆಳೆಯಲು ಹಲವಾರು ವೈಶಿಷ್ಟ್ಯಗಳನ್ನು ಹೊಂದಲಿದೆ.

Most Read Articles

Kannada
English summary
TVS Launches Bluetooth-Enabled Apache RTR 200 4V With SmartXonnect* Technology - Read in Kannada
Story first published: Saturday, October 5, 2019, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X