Just In
- 14 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 15 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 16 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 17 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News Love Jihad: ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿವಿಎಸ್ ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ಸ್ಕೂಟರ್ ಯಾವುದು.?
ಚೆನ್ನೈ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟಾರ್ ಸಧ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಯಲ್ಲಿದ್ದು, ಮಾಹಿತಿಗಳ ಪ್ರಕಾರ ಟಿವಿಎಸ್ ಮೋಟಾರ್ ಸಂಸ್ಥೆಯು ಈ ಹಣಕಾಸು ವರ್ಷದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಟಿವಿಎಸ್ ಬಿಡುಗಡೆ ಮಾಡಲಿರುವ ಆ ಎಲೆಕ್ಟ್ರಿಕ್ ಸ್ಕೂಟರ್ ಯಾವುದು ಎಂಬುದು ಇನ್ನು ಬಹಿರಂಗವಾಗಲಿಲ್ಲ.
ಸಂಸ್ಥೆಯು ತಯಾರು ಮಾಡಲಿರುವ ಎಲೆಕ್ಟ್ರಿಕ್ ಸ್ಕೂಟರ್ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಲಾಗಿದ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೇ ಹಣಕಾಸಿನ ವರ್ಷದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇಂಡಿಯನ್ ಆಟೋಸ್ ಬ್ಲಾಗ್ ವರದಿಗಳ ಪ್ರಕಾರ ನಾವೀಗಾಗಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಬಂಡವಾಳವನ್ನು ಹೂಡಿಕೆ ಮಾಡಲಾಗಿದ್ದು, ಇದೇ ಹಣಕಾರಸಿನ ವರ್ಶದಲ್ಲಿ ನಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಹಾಗು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಕುರಿತಾಗಿ ಮತ್ತು ಹೊಸ ಎಲೆಕ್ಟ್ರಿಕ್ ಸ್ಕೂಟರ್ನ ಬಗೆಗಿನ ಸ್ಪಷ್ಠನೆಯನ್ನು ನೀಡಲಿದ್ದೇವೆ. ಎಂದು ಟಿವಿಎಸ್ ಮೋಟಾರ್ ಸಂಸ್ಥೆಯ ನಿರ್ದೇಶಕ ಮತ್ತು ಸಿಇಒ ಆದ ಕೆ.ಎನ್. ರಾಧಕೃಷ್ಣರವರು ಹೇಳಿಕೊಂಡಿದ್ದಾರೆ.
ಟಿವಿಎಸ್ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಡಿಸೈನ್ ಮತ್ತು ಸ್ಟೈಲ್ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಸಿಲ್ವರ್ ಥೀಮ್ಡ್ ಫ್ರೇಮ್ ಅನ್ನು ಬಳಸಲಾಗಿದ್ದು, ಹೊಳುಪಾದ ಕೆಂಪು ಬಣ್ಣದಲ್ಲಿ ನಾಲ್ಕು ಫ್ಲೋಟಿಂಗ್ ಪ್ಯಾನಲ್ಸ್ ಅನ್ನು ಪಡೆದುಕೊಂಡಿದೆ. ಹೀಗಾಗಿ ಹೊಸ ಸ್ಕೂಟರ್ಗಳು ಸ್ಪೋರ್ಟ್ಸ್ ಬೈಕ್ ಮಾದರಿಯಲ್ಲೇ ಸೀಟಿನ ಆಕಾರವನ್ನು ಹೊಂದಿದೆ.
ಟಿವಿಎಸ್ ಕ್ರಿಯಾನ್ ಮುಂದಿನ ತಲೆಮಾರಿನ ಎಲೆಕ್ಟ್ರಿಕ್ ಮೋಟಾರ್ ಆಗಿದ್ದು, ಕೇವಲ 5.1 ಸೇಕೆಂಡುಗಳಲ್ಲಿ 80 ಕಿಮಿ ವೇಗ ಪಡೆಯುವ ಸಾಮಥ್ಯ ಹೊಂದಿವೆ. ಜೊತೆಗೆ ಸ್ಕೂಟರ್ನ ಬ್ಯಾಟರಿ 60 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಮಾಡಬಹುದಾಗಿದೆ.
ಟಿವಿಎಸ್ ಕ್ರಿಯಾನ್ ಮೂರು ಲೀಥಿಯಂ ಇಯಾನ್ ಬ್ಯಾಟರಿಗಳನ್ನು ಹೊಂದಿದ್ದು, 12ಕೆವಿ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಅಲ್ಲದೇ ಸುಧಾರಿತ ಮಾದರಿ ಕನೆಕ್ಟಿವಿಟಿಗಳನ್ನು ಹೆಚ್ಚಿಸುವ ಉದ್ದೇಶದಿಂದ ತಂತ್ರಜ್ಞಾನ ದೈತ್ಯ ಇಂಟೆಲ್ ಜೊತೆ ಸೇರಿ ಸ್ಮಾರ್ಟ್ ಸಂಪರ್ಕ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಹಕರಿಸಿದೆ.
ಇನ್ನು ಟಿವಿಎಸ್ ಕ್ರಿಯಾನ್ ಸ್ಕೂಟರ್ಗಳಲ್ಲಿ ಟಿಎಫ್ಟಿ ಸ್ಕ್ರೀನ್ ಅನ್ನು ಹೊಂದಿದ್ದು, ಹೊಸದಾಗಿ ಬಿಡುಗಡೆಯಾದ ಎನ್ ಟಾರ್ಕ್ 125 ಸ್ಕೂಟರ್ ನಂತೆಯೇ ಬಳಕೆದಾರರು ಸ್ಕೂಟರಿನೊಂದಿಗೆ ಸಂವಹನ ನಡೆಸಲು ಸಂಬಂಧಿಸಿದ ತಂತ್ರಜ್ಞಾನಗಳೊಂದಿಗೆ ಬರುತ್ತದೆ.
ಇದಲ್ಲದೆ ಟಿವಿಎಸ್ ಕ್ರಿಯಾನ್ ಕ್ಲೌಡ್ ಕೆನೆಕ್ಟಿವಿಟಿ ಜೊತೆ 3 ಕಸ್ಟಂ ರೈಡಿಂಗ್ ಮೋಡ್ಸ್ ನೀಡಲಾಗಿದ್ದು, ರೀಜೆನೆರೇಟಿವ್ ಬ್ರೇಕಿಂಗ್, ಪಾರ್ಕ್ ಅಸ್ಸಿಸ್ಟ್, ಸೇಫ್ಟಿ, ಆಂಟಿ ಥೆಫ್ಟ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಜಿಯೊ ಫೆನ್ಸಿಂಗ್ ಅನ್ನು ಹೊಂದಿರಲಿದೆ. ಬ್ರೇಕಿಂಗ್ ಕರ್ತವ್ಯವನ್ನು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಎಬಿಎಸ್ ಹೊಂದಿದೆ.
MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?
ಈ ಬಗ್ಗೆ ಮಾತನಾಡಿರುವ ಟಿವಿಎಸ್ ಮೋಟಾರ್ ಸಂಸ್ಥೆಯ ಅಧ್ಯಕ್ಷರಾದ ವಿನಯ್ ಹಾರ್ನೆ, ಆಧುನಿಕ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಉತ್ತಮ ಭವಿಷ್ಯವಿದ್ದು, ಇದೇ ಉದ್ದೇಶದಿಂದ ಸ್ಮಾರ್ಟ್ ಕನೆಕ್ಟೆಡ್ ಗ್ಯಾಜೆಟ್ಗಳ ಪ್ರೇರಿತ ಕ್ರಿಯಾನ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದಿದ್ದಾರೆ.
MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?
ಹೀಗಿರುವಾಗ ಸರ್ಕಾರವು ಫೇಮ್2 ಸಬ್ಸಿಡಿಯನ್ನು ಪಡೆಯಲು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾದ ಪರೀಕ್ಷೆಯನ್ನು ಒಕಿನಾವಾ ಸಂಸ್ಥೆಯ ಐ ಪ್ರೈಸ್ ಮತ್ತು ರಿಡ್ಜ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ಗಳು ಪೂರ್ಣಗೊಳಿಸಿದ್ದು, ಇದೀಗ ಈ ಸ್ಕೂಟರ್ಗಳ ಖರೀದಿಯ ಸಮಯದಲ್ಲಿ ಗ್ರಾಹಕರು ಸುಮಾರು 26 ಸಾವಿರದ ವರೆಗು ಸಬ್ಸಿಸ್ಡಿ ಪಡೆಯಬಹುದಾಗಿದೆ.
MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್..
ಒಟ್ಟಿನಲ್ಲಿ ಟಿವಿಎಸ್ ಕ್ರಿಯಾನ್ ಎಲೆಕ್ರ್ಟಿಕ್ ಸ್ಕೂಟರ್ ಪರಿಕಲ್ಪನೆಯು ತೀಕ್ಷ್ಣ ಮತ್ತು ವಿನ್ಯಾಸದಿಂದ ಸ್ಪೋರ್ಟಿ ಲುಕ್ ಪಡೆದಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹಿಂದಿಕ್ಕುವ ತವಕದಲ್ಲಿದೆ.