ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಟಿವಿ‍ಎಸ್ ಮೋಟಾರ್ಸ್ ಮುಂಬರುವ ಹಬ್ಬದ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಸರಣಿಯ ವಾಹನಗಳ ಮೇಲೆ ಭಾರೀ ರಿಯಾಯಿತಿ ಹಾಗೂ ವಿವಿಧ ಕೊಡುಗೆಗಳನ್ನು ನೀಡಲಿದೆ. ಕಂಪನಿಯು ತನ್ನ ವಾಹನಗಳ ಮೇಲೆ ಭಾರೀ ಪ್ರಮಾಣದ ಉಳಿತಾಯ, ವಿಸ್ತರಿತ ಇನ್ಶೂರೆನ್ಸ್ ಪ್ಯಾಕೇಜ್ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಿದೆ.

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಟಿವಿ‍ಎಸ್ ಅಪಾಚೆ ಸರಣಿಯಲ್ಲಿರುವ ಆರ್‍‍ಟಿ‍ಆರ್ 160, ಆರ್‍‍ಟಿ‍ಆರ್ 160 4ವಿ, ಆರ್‍‍ಟಿ‍ಆರ್ 180, ಆರ್‍‍ಟಿ‍ಆರ್ 200 4ವಿ ಹಾಗೂ ಪ್ರುಮುಖ ಬೈಕ್ ಆದ ಆರ್‍ಆರ್ 310 ಬೈಕುಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುವುದರ ಜೊತೆಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುವುದು.

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಅಪಾಚೆ ಸರಣಿಯ ಬೈಕುಗಳಿಗೆ ಮಾದರಿಯ ಆಧಾರದ ಮೇಲೆ ರೂ.19,000 ನಗದು ಉಳಿತಾಯ ನೀಡಲಾಗುವುದು. ಈ ಬೈಕುಗಳ ಮೇಲೆ ಕಡಿಮೆ ಡೌನ್ ಪೇಮೆಂಟ್ ಸಹ ಇರಲಿದೆ. ಡೌನ್ ಪೇಮೆಂಟ್ ರೂ.10,999ರಿಂದ ಆರಂಭವಾಗಲಿದೆ.

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಈ ನಗದು ಉಳಿತಾಯದ ಜೊತೆಗೆ ಟಿವಿಎಸ್ ಕಂಪನಿಯು ರೂ.8,800ಗಳನ್ನು ಐದು ವರ್ಷಗಳ ಅವಧಿಗೆ ಒಡಿ ಇನ್ಶೂರೆನ್ಸ್ ಪಾಲಿಸಿಯನ್ನು ನೀಡಲಿದೆ. ಅಪಾಚೆ ಬೈಕುಗಳ ಮೇಲಿನ ಆಫರ್‍‍ನ ಹೊರತಾಗಿ, ಕಂಪನಿಯು ರೇಡಿಯಾನ್ ಪ್ರಯಾಣಿಕೆ ಬೈಕುಗಳ ಮೇಲೆಯೂ ಹಲವಾರು ರಿಯಾಯಿತಿಯನ್ನು ನೀಡುತ್ತಿದೆ.

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ವರ್ಷದ ಪ್ರಯಾಣಿಕ ಬೈಕ್ ಎಂಬ ಪ್ರಶಸ್ತಿಯನ್ನು ಪಡೆದಿರುವ ಟಿವಿ‍ಎಸ್ ರೇಡಿಯಾನ್ ಬೈಕುಗಳಿಗೆ ರೂ.5,999ಗಳ ಡೌನ್‍ ಪೇಮೆಂಟ್ ನಿಗದಿಪಡಿಸಲಾಗಿದೆ. ಈ ಪ್ರಯಾಣಿಕೆ ಬೈಕಿನ ಎಕ್ಸ್ ಶೋರೂಂ ದರವು ರೂ.53,815ಗಳಾಗಿದ್ದು, ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕವಿರುವುದಿಲ್ಲ.

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಟಿವಿ‍ಎಸ್ ಕಂಪನಿಯು ಇತ್ತೀಚಿಗೆ ಭಾರತದಲ್ಲಿ ರೇಡಿಯಾನ್ ಬೈಕಿನ ಸೆಲೆಬ್ರೆಟರಿ ಎಡಿಷನ್ ಅನ್ನು ಬಿಡುಗಡೆಗೊಳಿಸಿತ್ತು. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಈ ಲಿಮಿಟೆಡ್ ಎಡಿಷನ್ ಬೈಕಿನಲ್ಲಿರುವ ವಿನ್ಯಾಸವನ್ನು ಹಲವಾರು ರೀತಿಯಲ್ಲಿ ಬದಲಾಯಿಸಲಾಗಿದೆ.

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಈ ಬೈಕಿನಲ್ಲಿ ಹೊಸ ರೀತಿಯ ಬಣ್ಣ, ಬಾಡಿ ಗ್ರಾಫಿಕ್ಸ್ ಗಳನ್ನು ಅಳವಡಿಸಲಾಗಿದೆ. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.54,665ಗಳಾಗಿದೆ. ಟಿವಿ‍ಎಸ್ ರೇಡಿಯಾನ್ ಬೈಕಿನ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಈ ಬೈಕಿನಲ್ಲಿ 109.77 ಸಿಸಿಯ ಸಿಂಗಲ್ ಸಿಲಿಂಡರ್ ಡ್ಯೂರಾ ಲೈಫ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 7,000 ಆರ್‍‍ಪಿ‍ಎಂನಲ್ಲಿ 8 ಬಿ‍‍ಹೆಚ್‍‍ಪಿ ಪವರ್ ಹಾಗೂ 5,000 ಆರ್‍‍ಪಿ‍ಎಂನಲ್ಲಿ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಟಿವಿ‍ಎಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಜನಪ್ರಿಯ ಟಿವಿ‍ಎಸ್ ಜೂಪಿಟರ್ ಸ್ಕೂಟರ್ ಅನ್ನು ಸಹ ಇತ್ತೀಚಿಗಷ್ಟೇ ನವೀಕರಿಸಿತ್ತು. ಹೊಸ ಟಿವಿ‍ಎಸ್ ಜೂಪಿಟರ್ ಸ್ಕೂಟರಿನಲ್ಲಿ ಎನ್‍‍ಟಾರ್ಕ್ 125ನಲ್ಲಿರುವಂತಹ ಬ್ಲೂಟೂತ್ ಕನೆಕ್ಟಿವಿಟಿ ಟೆಕ್ನಾಲಜಿಯನ್ನು ಹೊಸದಾಗಿ ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟಿವಿ‍ಎಸ್ ಮೋಟಾರ್ಸ್‍‍ನಿಂದ ಭರ್ಜರಿ ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸೂರು ಮೂಲದ ಟಿವಿ‍ಎಸ್ ಮೋಟಾರ್ಸ್ ಕಂಪನಿಯು ಹಬ್ಬಕ್ಕಾಗಿ ಗ್ರಾಹಕರಿಗೆ ಹಲವಾರು ರೀತಿಯ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡುತ್ತಿದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿ, ಕುಸಿತಗೊಂಡಿರುವ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಬಯಸಿದೆ.

Most Read Articles

Kannada
English summary
TVS Discounts & Festive Season Benefits Announced On Popular Models In India - Read in Kannada
Story first published: Monday, September 30, 2019, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X