2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಚೆನ್ನೈ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟಾರ್ ಸಧ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಯಲ್ಲಿದ್ದು, ಸಂಸ್ಥೆಯು ತಯಾರು ಮಾಡಲಿರುವ ಎಲೆಕ್ಟ್ರಿಕ್ ಸ್ಕೂಟರ್ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಲಾಗಿದ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೇ ಹಣಕಾಸಿನ ವರ್ಷದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಇಂಡಿಯನ್ ಆಟೋಸ್ ಬ್ಲಾಗ್ ವರದಿಗಳ ಪ್ರಕಾರ ನಾವೀಗಾಗಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಬಂಡವಾಳವನ್ನು ಹೂಡಿಕೆ ಮಾಡಲಾಗಿದ್ದು, ಇದೇ ಹಣಕಾರಸಿನ ವರ್ಶದಲ್ಲಿ ನಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಹಾಗು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಕುರಿತಾಗಿ ಮತ್ತು ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ನ ಬಗೆಗಿನ ಸ್ಪಷ್ಠನೆಯನ್ನು ನೀಡಲಿದ್ದೇವೆ. ಎಂದು ಟಿವಿಎಸ್ ಮೋಟಾರ್ ಸಂಸ್ಥೆಯ ನಿರ್ದೇಶಕ ಮತ್ತು ಸಿಇಒ ಆದ ಕೆ.ಎನ್. ರಾಧಕೃಷ್ಣರವರು ಹೇಳಿಕೊಂಡಿದ್ದಾರೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಟಿವಿಎಸ್ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಡಿಸೈನ್ ಮತ್ತು ಸ್ಟೈಲ್ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಸಿಲ್ವರ್ ಥೀಮ್ಡ್ ಫ್ರೇಮ್ ಅನ್ನು ಬಳಸಲಾಗಿದ್ದು, ಹೊಳುಪಾದ ಕೆಂಪು ಬಣ್ಣದಲ್ಲಿ ನಾಲ್ಕು ಫ್ಲೋಟಿಂಗ್ ಪ್ಯಾನಲ್ಸ್ ಅನ್ನು ಪಡೆದುಕೊಂಡಿದೆ. ಹೀಗಾಗಿ ಹೊಸ ಸ್ಕೂಟರ್‌ಗಳು ಸ್ಪೋರ್ಟ್ಸ್ ಬೈಕ್ ಮಾದರಿಯಲ್ಲೇ ಸೀಟಿನ ಆಕಾರವನ್ನು ಹೊಂದಿದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಟಿವಿಎಸ್ ಕ್ರಿಯಾನ್ ಮುಂದಿನ ತಲೆಮಾರಿನ ಎಲೆಕ್ಟ್ರಿಕ್ ಮೋಟಾರ್ ಆಗಿದ್ದು, ಕೇವಲ 5.1 ಸೇಕೆಂಡುಗಳಲ್ಲಿ 80 ಕಿಮಿ ವೇಗ ಪಡೆಯುವ ಸಾಮಥ್ಯ ಹೊಂದಿವೆ. ಜೊತೆಗೆ ಸ್ಕೂಟರ್‌ನ ಬ್ಯಾಟರಿ 60 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಮಾಡಬಹುದಾಗಿದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಟಿವಿಎಸ್ ಕ್ರಿಯಾನ್ ಮೂರು ಲೀಥಿಯಂ ಇಯಾನ್ ಬ್ಯಾಟರಿಗಳನ್ನು ಹೊಂದಿದ್ದು, 12ಕೆವಿ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಅಲ್ಲದೇ ಸುಧಾರಿತ ಮಾದರಿ ಕನೆಕ್ಟಿವಿಟಿಗಳನ್ನು ಹೆಚ್ಚಿಸುವ ಉದ್ದೇಶದಿಂದ ತಂತ್ರಜ್ಞಾನ ದೈತ್ಯ ಇಂಟೆಲ್ ಜೊತೆ ಸೇರಿ ಸ್ಮಾರ್ಟ್ ಸಂಪರ್ಕ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಹಕರಿಸಿದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಇನ್ನು ಟಿವಿಎಸ್ ಕ್ರಿಯಾನ್ ಸ್ಕೂಟರ್‌ಗಳಲ್ಲಿ ಟಿಎಫ್‌ಟಿ ಸ್ಕ್ರೀನ್ ಅನ್ನು ಹೊಂದಿದ್ದು, ಹೊಸದಾಗಿ ಬಿಡುಗಡೆಯಾದ ಎನ್ ಟಾರ್ಕ್ 125 ಸ್ಕೂಟರ್ ನಂತೆಯೇ ಬಳಕೆದಾರರು ಸ್ಕೂಟರಿನೊಂದಿಗೆ ಸಂವಹನ ನಡೆಸಲು ಸಂಬಂಧಿಸಿದ ತಂತ್ರಜ್ಞಾನಗಳೊಂದಿಗೆ ಬರುತ್ತದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಇದಲ್ಲದೆ ಟಿವಿಎಸ್ ಕ್ರಿಯಾನ್ ಕ್ಲೌಡ್ ಕೆನೆಕ್ಟಿವಿಟಿ ಜೊತೆ 3 ಕಸ್ಟಂ ರೈಡಿಂಗ್ ಮೋಡ್ಸ್ ನೀಡಲಾಗಿದ್ದು, ರೀಜೆನೆರೇಟಿವ್ ಬ್ರೇಕಿಂಗ್, ಪಾರ್ಕ್ ಅಸ್ಸಿಸ್ಟ್, ಸೇಫ್ಟಿ, ಆಂಟಿ ಥೆಫ್ಟ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಜಿಯೊ ಫೆನ್ಸಿಂಗ್ ಅನ್ನು ಹೊಂದಿರಲಿದೆ. ಬ್ರೇಕಿಂಗ್ ಕರ್ತವ್ಯವನ್ನು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಎಬಿಎಸ್ ಹೊಂದಿದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಈ ಬಗ್ಗೆ ಮಾತನಾಡಿರುವ ಟಿವಿಎಸ್ ಮೋಟಾರ್ ಸಂಸ್ಥೆಯ ಅಧ್ಯಕ್ಷರಾದ ವಿನಯ್ ಹಾರ್ನೆ, ಆಧುನಿಕ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಉತ್ತಮ ಭವಿಷ್ಯವಿದ್ದು, ಇದೇ ಉದ್ದೇಶದಿಂದ ಸ್ಮಾರ್ಟ್ ಕನೆಕ್ಟೆಡ್ ಗ್ಯಾಜೆಟ್‌ಗಳ ಪ್ರೇರಿತ ಕ್ರಿಯಾನ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದಿದ್ದಾರೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಹೀಗಿರುವಾಗ ಸರ್ಕಾರವು ಫೇಮ್2 ಸಬ್ಸಿಡಿಯನ್ನು ಪಡೆಯಲು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾದ ಪರೀಕ್ಷೆಯನ್ನು ಒಕಿನಾವಾ ಸಂಸ್ಥೆಯ ಐ ಪ್ರೈಸ್ ಮತ್ತು ರಿಡ್ಜ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಪೂರ್ಣಗೊಳಿಸಿದ್ದು, ಇದೀಗ ಈ ಸ್ಕೂಟರ್‍‍ಗಳ ಖರೀದಿಯ ಸಮಯದಲ್ಲಿ ಗ್ರಾಹಕರು ಸುಮಾರು 26 ಸಾವಿರದ ವರೆಗು ಸಬ್ಸಿಸ್ಡಿ ಪಡೆಯಬಹುದಾಗಿದೆ.

2019-20ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಟಿವಿಎಸ್ ಮೋಟಾರ್

ಒಟ್ಟಿನಲ್ಲಿ ಟಿವಿಎಸ್ ಕ್ರಿಯಾನ್ ಎಲೆಕ್ರ್ಟಿಕ್ ಸ್ಕೂಟರ್ ಪರಿಕಲ್ಪನೆಯು ತೀಕ್ಷ್ಣ ಮತ್ತು ವಿನ್ಯಾಸದಿಂದ ಸ್ಪೋರ್ಟಿ ಲುಕ್ ಪಡೆದಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹಿಂದಿಕ್ಕುವ ತವಕದಲ್ಲಿದೆ.

Most Read Articles

Kannada
English summary
TVS Motor To Launch Electric Scooter This Financial Year — Could Be The Creon Concept. Read In Kannada
Story first published: Tuesday, May 7, 2019, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X