ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

ಡ್ರಮ್ ಬ್ರೇಕ್ ಹೊಂದಿರುವ ಟಿ‍‍ವಿ‍ಎಸ್ ಕಂಪನಿಯ ಹೊಸ ಎನ್‍‍‍ಟಾರ್ಕ್ 125 ವಾಹನವನ್ನು ಬಿಡುಗಡೆಗೊಳಿಸಲಾಗಿದ್ದು, ಹೊಸ ವಾಹನದ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.58,252 ಗಳಾಗಿದೆ. ಟಿ‍‍ವಿ‍ಎಸ್ ಮೋಟಾರ್ ಕಂಪನಿಯು ಎನ್‍‍‍ಟಾರ್ಕ್ 125 ವಾಹನವನ್ನು ಕೆಳವರ್ಗದ ಮಾದರಿಯಾಗಿ ಬಿಡುಗಡೆ ಮಾಡಿದೆ. ಇದು ಟಾಪ್ ಮಾದರಿಯ ಡಿಸ್ಕ್ ಬ್ರೇಕ್ ವಾಹನಗಳಿಗಿಂತ ರೂ.1,648ರಷ್ಟು ಕಡಿಮೆ ಬೆಲೆಯನ್ನು ಹೊಂದಿರಲಿದೆ.

ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

ಟಿ‍‍ವಿ‍ಎಸ್ ಎನ್‍‍‍ಟಾರ್ಕ್ ಟಿ‍‍ವಿ‍ಎಸ್ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಒಂದಾಗಿದ್ದು, ಒಂದು ಪರ್ಫೆಕ್ಟ್ ಸ್ಕೂಟರ್ ಹೊಂದಿರಬೇಕಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಇದು ಆಕರ್ಷಕವಾದ ಡಿಸೈನ್ ಹಾಗೂ ಬಣ್ಣಗಳನ್ನು ಹೊಂದಿದೆ. ಈ ಸ್ಕೂಟರ್‍‍‍ನಲ್ಲಿರುವ ಸಸ್ಪೆಂಷನ್ ಮತ್ತು ಎಂಜಿನ್‍‍‍‍ಗಳು ಉತ್ತಮ ಗುಣಮಟ್ಟದಲ್ಲಿದ್ದು, ಸಸ್ಪೆಂಷನ್ ಕಠಿಣವಾದ ರಸ್ತೆಗಳಲ್ಲೂ ಚಾಲಕನಿಗೆ ಆರಾಮದಾಯಕ ಅನುಭವನ್ನು ನೀಡಿದರೆ, ಎಂಜಿನ್ ಟಾರ್ಕಿಯಾಗಿದ್ದು, ಉತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ. ಇದರಲ್ಲಿರುವ ಎಕ್ಸಾಸ್ಟ್ ಸಿಸ್ಟಂ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ ಚಾಲನೆ ಮಾಡುವುದರಿಂದ ಸಿಗುವ ಅನುಭವವನ್ನು ನೀಡುತ್ತದೆ.

ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

ಈ ಸ್ಕೂಟರ್‍‍‍ನ ಮುಂಭಾಗದಲ್ಲಿ ಸ್ಟಾಂಡರ್ಡ್ ಆಗಿರುವ ಪೆಟಲ್ ಡಿಸ್ಕ್ ಬ್ರೇಕ್‍‍‍ಗಳಿವೆ. ಆಟೋಕಾರ್ ಇಂಡಿಯಾ, ವರದಿಯ ಪ್ರಕಾರ, ಟಿ‍‍ವಿ‍ಎಸ್ ಕಂಪನಿಯು ಕೆಳವರ್ಗದ ಮಾದರಿಯ ವಾಹನವನ್ನು ಬಿಡುಗಡೆ ಮಾಡಿದೆ. ಇದರ ಮುಂಭಾಗದಲ್ಲಿ ಡ್ರಮ್ ಬ್ರೇಕ್‍‍‍ಗಳಿವೆ.

ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125 ಸರ್ಕಾರವು ಕಡ್ಡಾಯಗೊಳಿಸಿರುವ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಆದರೆ ಬ್ರೇಕಿಂಗ್‍‍‍ನಲ್ಲಿ ಹೆಚ್ಚಿನ ಪವರ್ ಇಲ್ಲದೇ ಇರುವುದರಿಂದ ತನ್ನ ಮಹತ್ವವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದೆ. ಚಿತ್ರಗಳಲ್ಲಿ ತೋರಿಸಲಾಗಿರುವಂತೆ ಡ್ರಮ್ ಬ್ರೇಕ್ ಮಾದರಿಯಲ್ಲಿ, ಎಂಜಿನ್ ಕಿಲ್ ಸ್ವಿಚ್‍ ನೀಡಲಾಗಿಲ್ಲ.

ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125 ಸ್ಕೂಟರಿ‍‍ನ ಸೀಟಿನ ಕೆಳಗೆ ಎಲ್‍‍ಇ‍‍‍ಡಿ ಲೈಟ್ ಮತ್ತು ಯು‍‍ಎಸ್‍‍ಬಿ ಮೋಬೈಲ್ ಫೋನ್ ಚಾರ್ಜರ್‍‍‍ಗಳನ್ನು ನೀಡಲಾಗಿಲ್ಲ. ಪವರ್‍‍‍ಟ್ರೇನ್‍‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125 ನಲ್ಲಿಏರ್ ಕೂಲರ್, 124.8 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, ಹೆಚ್ಚಿನ ಪವರ್ ಆದ 9.5 ಬಿಹೆಚ್‍‍‍ಪಿ ಮತ್ತು 10.5 ಎನ್‍‍‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ ಮಹೀಂದ್ರಾ ಮೊಜೊ

ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125 ಕಡಿಮೆ ಬೆಲೆ ಹೊಂದಿರುವ ಸ್ಕೂಟರ್‍‍‍ಗಳಲ್ಲಿ ಒಂದಾಗಿದೆ. ಇದು ಅಧಿಕ ಸಾಮರ್ಥ್ಯ ಮತ್ತು ಹೆಚ್ಚು ಕಂಫರ್ಟ್ ಹೊಂದಿರುವ ಸ್ಕೂಟರ್‍‍‍ಗಳಲ್ಲಿ ಒಂದಾಗಿದೆ. ಸ್ಪರ್ಧಾತ್ಮಕ ಬೆಲೆಗಳಲ್ಲಿ ಈ ಸ್ಕೂಟರ್‍‍ಅನ್ನು ಮಾರಾಟ ಮಾಡಲಾಗುತ್ತಿದೆ. ಟಿ‍‍ವಿ‍ಎಸ್ ಕಂಪನಿಯು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಕೆಳವರ್ಗದ ಮಾದರಿಯ ವಾಹನವನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಚಿಂತಿಸಿದೆ. ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125 ಸ್ಕೂಟರ್, ರೂ.60,723 ದರದಲ್ಲಿ ಲಭ್ಯವಿರುವ, ಡ್ರಮ್ ಬ್ರೇಕ್ ಹೊಂದಿರುವ ಹೋಂಡಾ ಗ್ರೇಜಿಯಾ ಜೊತೆಗೆ ಪೈಪೋಟಿ ನಡೆಸಲಿದೆ. ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆ ಹೊಂದಿರುವ ಕಾರಣ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯ ಬಹುದೆಂಬ ನಿರೀಕ್ಷೆಯಿದೆ.

Most Read Articles

Kannada
English summary
TVS Ntorq 125 Launched With Drum Brake: Low Price to Attract Buyers? - Read in kannada
Story first published: Tuesday, May 7, 2019, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X