Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Movies
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
125ಸಿಸಿ ಸ್ಕೂಟರ್ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಟಿವಿಎಸ್ ಎನ್‍ಟಾರ್ಕ್ 125
ದೇಶಿಯ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಮೋಟಾರ್ ಕಳೆದ ವರ್ಷ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋ ಮೇಳದಲ್ಲಿ ಬಿಡುಗಡೆ ಮಾಡಲಾಗಿದ್ದು, 125ಸಿಸಿ ಸ್ಕೂಟರ್ ಸೆಗ್ಮೆಂಟ್ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಮಧ್ಯವರ್ಗವರಿಗೆ ಅಚ್ಚುಮೆಚ್ಚಿನ ವಾಹನವಾದ ಸ್ಕೂಟರ್‍ಗಳು ಎಂದಿಗೂ ಸಹ ಮಾರಟದಲ್ಲಿ ಟಾಪ್ ಆಗೆ ಇರುತ್ತದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟು ಸುಮಾರು 16 ತಿಂಗಳುಗಳಾದರೂ ಸಹ ಟಿವಿಎಸ್ ಎನ್‍ಟಾರ್ಕ್ 125 ಸ್ಕೂಟರ್ ಅನ್ನು ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಈ ಬೈಕಿನ ವಿಶೇಷತೆ ಅಂದರೆ ಇದರಲ್ಲಿರುವ ಹಲವಾರು ವೈಶಿಷ್ಟ್ಯತೆಗಳು. ಇದೀಗ ಟಾಪಿಕ್ ಬಗ್ಗೆ ಬರುವುದಾದರೆ ಟಿವಿಎಸ್ ಎನ್‍ಟಾರ್ಕ್ ಸ್ಕೂಟರ್ ಮೇ ತಿಂಗಳಿನಲ್ಲಿ ಸುಮಾರು 21,010 ಯೂನಿಟ್ ಮಾರಾಟಗೊಂಡಿದ್ದು, 2018ರ ಮೇ ತಿಂಗಳಿನಲ್ಲಿ 14,695 ಯೂನಿಟ್ ಮಾರಾಟಗೊಂಡಿತ್ತು. ಅಂದರೆ ಮಾರಾಟದಲ್ಲಿ ಶೇಕಡ 43ರಷ್ಟು ಹೆಚ್ಚಳವನ್ನು ಈ ಸ್ಕೂಟರ್ ಕಂಡಿದೆ.

ಟಿವಿಎಸ್ ಎನ್‌ಟಾರ್ಕ್ 125 ದೇಶದಲ್ಲಿ ಯುವ ಜನತೆಯನ್ನು ಗುರಿಯಾಗಿಸಿ ಅಭಿವೃದ್ಧಿಗೊಳಿಸಲಾಗಿದ್ದು, ಆರಾಮದಾಯಕ ಸ್ಕೂಟರ್ ಚಾಲನೆಗಾಗಿ ಸುಲಭ ಮತ್ತು ಸುರಕ್ಷಾ ಸಾಧಾನಗಳನ್ನು ನೀಡಲಾಗಿದೆ. 125ಸಿಸಿ ಸ್ಕೂಟರ್ ಮಾದರಿಗಳಲ್ಲೇ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಎನ್ ಟಾರ್ಕ್125 ಸ್ಕೂಟರ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59,990 ಬೆಲೆ ಪಡೆದುಕೊಂಡಿದ್ದು, ಹೊಸ ಸ್ಕೂಟರ್‌ನಲ್ಲಿ ಸ್ಮಾರ್ಟ್ ಕನೆಕ್ವಿಟಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಎನ್ಟಾರ್ಕ್ 125 ವಿನ್ಯಾಸ
ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.
ಒಟ್ಟಾರೆ ಸ್ಕೂಟರ್‌ನ ಆಯಾಮಗಳು ಮತ್ತು ಬೇಸಿಕ್ ಡಿಸೈನ್ ಟಿವಿಎಸ್ ಗ್ರಾಫೈಟ್ ಕಾನ್ಸೆಪ್ಟ್ ಆಗಿದ್ದು, ವಿಭಿನ್ನವಾದ ಎಲ್ಇಡಿ ಡೇ ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಡಿಸೈನ್, ಸ್ಟಬ್ಬಿ ಮಫ್ಲರ್ನಿಂದ ಎದ್ದು ಕಾಣುತ್ತದೆ.

ಎಂಜಿನ್ ಸಾಮರ್ಥ್ಯ
ಟಿವಿಎಸ್ ಎನ್‌ಟಾರ್ಕ್ 125ಸಿಸಿ ಸಿವಿಟಿಐ ಯುನಿಟ್ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಹೊಂದಿದ್ದು, 9.27 ಬಿಹೆಚ್ ಪಿ ಮತ್ತು 10.4ಎನ್ಎಂ ಟಾರ್ಕ್ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಅಲ್ಲದೆ ಇದು ಗಂಟೆಗೆ 95 ಕಿಲೋಮೀಟರ್ ಚಲಿಸುವ ಟಾಪ್ ಸ್ಪೀಡ್‌ನ್ನು ಹೊಂದಿದೆ. ಜೊತೆಗೆ ಆಟೋ ಚೋಕ್, ಇಂಟೆಲಿಜೆಂಟ್ ಇಗ್ನಿಷನ್ ಸಿಸ್ಟಂ, ಸ್ಪ್ಲಿಟ್ ಟೈಪ್ ಇಂಟೇಕ್ ಡಿಸೈನ್, ಫೋಮ್ ಆನ್ ಪೇಪರ್ ಏರ್ ಫಿಲ್ಟರ್ ಮತ್ತು ವಿಶೇಷವಾದ ಆಯಿಲ್ ಕೂಲಿಂಗ್ ಸಿಸ್ಟಂ, ಕಂಬಿಶನ್ ಚೆಂಬರ್ ಸಿಸ್ಟಂ ಅನ್ನು ಸೇರಿಸಲಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಭಾರತದ ಮೊದಲ ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿರುವ ಸ್ಕೂಟರಾಗಿದ್ದು, ಫೋನಿನೊಂದಿಗೆ ಬ್ಲೂಟೂಥ್ ಕನೆಕ್ಟ್ ಮಾಡಬಹುದಾಗಿದ್ದು, ಹಾಗೆಯೇ ನ್ಯಾವಿಗೇಶನ್ ಅಸಿಸ್ಟ್ ಅನ್ನು ಕೂಡಾ ಹೊಂದಿದೆ. ಇದುವರೆಗೂ ಯಾವುದೇ ಸ್ಕೂಟರ್‌ನಲ್ಲಿಯು ಕಾಣದಂತಹ ಎಲ್ಇಡಿ ಸ್ಕ್ರೀನ್‌ಗಳು ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಸೇರಿಸಲಾಗಿದ್ದು, 55 ವಿವಿಧ ರೀತಿಯ ಫೀಚರ್ಸ್‌ಗಳನ್ನು ನೀಡಲಾಗಿದೆ.

ಸ್ಪೀಡ್ ರೆಕಾರ್ಡರ್, ಲ್ಯಾಪ್ ಟೈಮರ್, ಫೋನ್ ಬ್ಯಾಟರಿ ಶಕ್ತಿ ಸೂಚಕ, ಹಿಂದೆ ಪಾರ್ಕ್ ಮಾಡಿರುವ ಜಾಗ, ಆವೆರೇಜ್ ಸ್ಪೀಡ್ ಹಾಗೆಯೇ ಕ್ರೀಡೆ ಮತ್ತು ಬೀದಿಗಳಂತಹ ಅನೇಕ ಸವಾರಿ ಅಂಕಿ ಅಂಶಗಳ ವಿಧಾನಗಳನ್ನು ಒಳಗೊಂಡಿದೆ.

ಅದಾಗ್ಯೂ ಈ ಸ್ಕೂಟರ್ ಬ್ಲೂಟೂಥ್ ನೊಂದಿಗೆ ಕನೆಕ್ಟ್ ಆಗಿರುವುದರಿಂದ Incoming ಕರೆಗಳು ಮತ್ತು ಸಂದೇಶಗಳು ಕೂಡ ಇನ್ಪೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವುದಲ್ಲದೇ, Incoming ಕರೆಗಳಿಗೆ ನೀವು ವಾಹನ ಚಾಲನೆಯಲ್ಲಿದ್ದಿರಿ ಎಂಬ ಆಟೋ ರಿಪ್ಲೆ ಸಂದೇಶವನ್ನು ಕೂಡ ಕಳುಹಿಸುತ್ತದೆ.

ಹೊರಗಡೆ ಪ್ಯುಯಲ್ ಟ್ಯಾಂಕ್, ಎಂಜಿನ್ ಕಿಲ್ ಸ್ವಿಚ್, ಪಾಸ್ ಬೈ ಸ್ವಿಚ್, ಪಾರ್ಕಿಂಗ್ ಬ್ರೇಕ್ಸ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಯುಎಸ್ ಬಿ ಫೋನ್ ಚಾರ್ಜರ್ ಮತ್ತು 22 ಲೀಟರ್ ಅಂಡರ್ ಸೀಟ್ ಸ್ಪೆಸ್ ಹೊಂದಿದೆ. ಟಿವಿಎಸ್ ಎನ್‌ಟಾರ್ಕ್ 125 ಗ್ರಿಪ್ಪಿ 110/80-12 ಗಾತ್ರದ ಟ್ಯೂಬ್ ಲೆಸ್ ಟೈರ್ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದ್ದು, ಸೆಗ್ಮೆಂಟ್ ಫರ್ಸ್ಟ್ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ಟಿವಿಎಸ್ ತನ್ನ ಮೊದಲ ಬಾರಿಗೆ ಹಲವಾರು ವಿಶೇಷ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ 125ಸಿಸಿ ಸ್ಕೂಟರ್‌ನ್ನು ಪರಿಚಯಿಸುವುದರ ಮೂಲಕ 125cc ಸ್ಕೂಟರ್ ವಿಭಾಗದಲ್ಲಿ ಅಗ್ರ ಸ್ಥಾನದತ್ತ ಮುನ್ನುಗ್ಗುತ್ತಿದ್ದು, ಹೊಂಡಾ ಗ್ರಾಜಿಯಾ, ಎಪ್ರಿಲಿಯಾ ಎಸ್ಆರ್ 125, ಹೀರೋ 125 ಮತ್ತು ಮ್ಯಾಸ್ಟ್ರೋ 125 ಸ್ಕೂಟರ್‌ಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.