ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ವಿಭಾಗವು ಯಶಸ್ವಿಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಟಿವಿಎಸ್ ಸಂಸ್ಥೆಯು ತಮ್ಮ ರೇಡಿಯಾನ್ ಬೈಕ್‍ಗಳನ್ನು ಕಳೆದ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಬೈಕಿನ ಮೈಲೇಜ್ ಮತ್ತು ವಿನ್ಯಾಸಕ್ಕೆ ತಲೆಬಾಗಿದ ಗ್ರಾಹಕರು, ಇದನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಟಿವಿಎಸ್ ರೇಡಿಯಾನ್ ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಪಡೆಯುತ್ತಿರುವ ಕಾರಣ, ಈ ಬೈಕಿನ ಖರೀದಿ ವೇಳೆ ಮತ್ತೆರಡು ಹೊಸ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಸಂಸ್ಥೆಯು ಗ್ರಾಹಕರಿಗೆ ನೀಡಲಾಗಿತ್ತು. ಈ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 50,070 ಸಾವಿರದ ಬೆಲೆಯನ್ನು ಪಡೆದುಕೊಂಡಿದೆ. ಈ ಬೈಕ್ ನೀಡುವ ಮೈಲೇಜ್‍‍ಗಾಗಿ ಎಲ್ಲರೂ ಇದನ್ನು ಖರೀದಿ ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ನಮ್ಮಲ್ಲಿ ಹಲವರಿಗೆ ಈ ಬೈಕ್ ಅಸಲಿಗೆ ಎಷ್ಟು ಮೈಲೇಜ್ ನೀಡಬಲ್ಲದು ಎಂಬ ಗೊಂದಲ ಇದ್ದೇ ಇರುತ್ತೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಈ ನಿಟ್ಟಿನಲ್ಲಿ ನರೇಂದ್ರ 7010 ಎಂಬ ಯೂಟ್ಯುಬ್ ಚಾನಲ್‍ನ ಮಾಲೀಕನು ಟಿವಿಎಸ್ ರೇಡಿಯಾನ್ ಬೈಕಿನ ಮೈಲೇಜ್ ಚೆಕ್ ಮಾಡಲಾಗಿದೆ. ಟಿವಿಎಸ್ ಮೋಟಾರ್ ಸಂಸ್ಥೆಯು ಪ್ರತೀ ಲೀಟರ್‍‍ಗೆ 69.2 ಕಿಲೋಮೀಟರ್ ಮೈಲೇಜ್ ನೀಡುವ ಹಾಗೆ ಹೇಳಿದ್ದರೆ, ಮೈಲೇಜ್ ಚೆಕ್ ಸಮಯದಲ್ಲಿ ಈ ಬೈಕ್ ಒಂದು ಲೀಟರ್‍ ಪೆಟ್ರೋಲ್‍ಗೆ ಸುಮಾರು 65 ಕಿಲೋಮೀಟರ್‍‍ನ ಮೈಲೇಜ್ ನೀಡಿದೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಅಂದರೆ ಸಂಸ್ಥೆಯು ತಪ್ಪು ಹೇಳಿಕೆ ನೀಡಿದ್ಯಾ ಎಂಬ ಸಂದೇಶ ನಿಮ್ಮಲ್ಲಿ ಬರಬಹುದು. ಇದಕ್ಕೆ ಸಹ ನರೆಂದ್ರ ಎಂಬುವವರು ಉತ್ತರವನ್ನು ನೀಡಿದ್ದಾರೆ. ಮೈಲೇಜ್ ಚೆಕ್‍ಗಾಗಿ ಉಪಯೋಗಿಸಿದ ಬೈಕ್ ಕೇವಲ 394 ಕಿಲೋಮೀಟರ್ ಮಾತ್ರ ಚಲಿಸಲಾಗಿದ್ದು, ಇದನ್ನು ಮೊದಲ ಬಾರಿಗೆ ಸರ್ವೀಸಿಂಗ್‍‍‍ಗೆ ನೀಡಿದ ನಂತರ ಇನ್ನು ಹೆಚ್ಚು ಮೈಲೇಜ್ ನೀಡಬಲ್ಲದು ಎಂದು ಆತ ಹೇಳಿದ್ದಾರೆ.

ಏಕೆಂದರೆ ಈ ಬೈಕ್‍ನಲ್ಲಿ ನೀಡಲಾದ ಏಂಜಿನ್ ಸಂಪೂರ್ಣವಾಗಿ ಟ್ಯೂನಿಂಗ್ ಮಾಡಿರುವುದಿಲ್ಲವಾಗಿದ್ದು, ಹೀಗಾಗಿ ಮೊದಲ ಸರ್ವೀಸಿಂಗ್‍‍ನಲ್ಲಿ ಎಂಜಿನ್ ಅನ್ನು ಸಂಪೂರ್ಣವಾಗಿ ಟ್ಯೂನಿಂಗ್ ಮಾಡಿ ಮೈಲೇಜ್ ಇನ್ನು ಹೆಚ್ಚು ನೀಡುವ ಹಾಗೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಯಾವುದೇ ವಾಹನವಾಗಲಿ ನಗರ ಪ್ರದೇಶದಲ್ಲಿ ಮತ್ತು ಹೆದ್ದಾರಿಯಲ್ಲಿ ಬೇರೆ ಸಂಖ್ಯೆಯಲ್ಲಿ ಮೈಲೇಜ್ ನೀಡುತ್ತೆ ಅಂತ. ಹಾಗು ಯಾವುದೇ ಸಂಸ್ಥೆಗಳು ನಿಖರವಾಗಿ ಇಷ್ಟೆ ನೀಡುತ್ತೆ ಅಂತಾ ಕೂಡಾ ಹೇಳಕ್ಕೆ ಆಗಲ್ಲ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಲಭ್ಯವಿರುವ ಬಣ್ಣ ಮತ್ತು ವಾರಂಟಿ

ಇನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ವೈಟ್, ಬೀಜ್, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ವಾಲ್ಕೆನೊ ರೆಡ್ ಹಾಗು ಟೈಟಾನಿಯಂ ಗ್ರೇ ಎಂಬ ಮತ್ತೆರಡು ಬಣ್ಣಗಳಲ್ಲಿ ಈ ಬೈಕ್ ಅನ್ನು ಖರೀದಿ ಮಾಡಬಹುದಾಗಿದೆ. ಇಷ್ಟೆ ಅಲ್ಲದೆಯೆ ಈ ಬೈಕ್ ಮೇಲೆ ಗರಿಷ್ಠ 5 ವರ್ಷಗಳ ವಾರಂಟಿ ದೊರೆಯಲಿದೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಬೈಕಿನ ವಿನ್ಯಾಸದಲ್ಲಿ ಸ್ಟೈಲಿಷ್ ಕ್ರೋಮ್ ಅಸೆಂಟ್ಸ್, ಪವರ್ ಫುಲ್ ಹೆಡ್‌ಲ್ಯಾಂಪ್, ಕ್ರೋಮ್ ಬೆಜೆಲ್, ಡೇ ಟೈಮ್ ರನ್ನಿಂಗ್ ಲೈಟ್, ಫ್ಯೂಲ್ ಟ್ಯಾಂಕ್ ಮೇಲ್ಭಾಗದಲ್ಲಿ ಪಾಡ್ ಸೌಲಭ್ಯ, ಕ್ರೋಮ್ ಪ್ರೇರಿತ ಇನ್‌ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯಗಳು ಬೈಕಿಗೆ ಕ್ಲಾಸಿಕ್ ಟಚ್ ನೀಡಿವೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಎಂಜಿನ್ ಸಾಮರ್ಥ್ಯ

109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಟಿವಿಎಸ್ ರೆಡಿಯನ್ ಬೈಕ್‌ಗಳು 8.2-ಬಿಎಚ್‌ಪಿ ಮತ್ತು 8.7-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 10-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಬ್ರೇಕಿಂಗ್ ಸಿಸ್ಟಂ

ಹೆಚ್ಚುತ್ತಿರುವ ಸ್ಕಿಡಿಂಗ್ ತೊಂದರೆಯನ್ನ ತಪ್ಪಿಸಲು ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫ್ರೋಕ್ಸ್ ಮತ್ತು ಹಿಂಭಾಗದಲ್ಲಿ ಐದು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಷೆನ್ ನೀಡಲಾಗಿದೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಬೈಕಿನಲ್ಲಿರುವ ಇತರೆ ಸೌಲಭ್ಯಗಳು

1,265ಎಂಎಂ ಎತ್ತರ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು 180ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಲೆಕ್ಟ್ರಿಕ್ ಸ್ಟಾರ್ಟ್, 18-ಇಂಚಿನ ಅಲಾಯ್ ಚಕ್ರಗಳು, ಡ್ಯುರಾ ಗ್ರಿಪ್ ಟೈರ್‌ಗಳು, ಯುಎಸ್‌ಬಿ ಚಾರ್ಚಿಂಗ್ ಸ್ಲಾಟ್ ಸೇರಿದಂತೆ ಆಕರ್ಷಕ ಸೀಟಿನ ವ್ಯವಸ್ಥೆ ಹೊಂದಿದೆ.

ಟಿವಿಎಸ್ ರೇಡಿಯಾನ್ ಮೈಲೇಜ್ ಚೆಕ್ - ಅಸಲಿಗೆ ಎಷ್ಟು ಮೈಲೇಜ್ ನೀಡುತ್ತೆ ಈ ಬೈಕ್.?

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೈಲ್‌ನಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದು, ಮೈಲೇಜ್ ವಿಚಾರವಾಗಿ ಉತ್ತಮ ಎನ್ನಿಸಲಿರುವ ಈ ಹೊಸ ಬೈಕ್ ಹೀರೋ ಸ್ಪ್ಲೈಂಡರ್, ಹೆಚ್ಎಫ್ ಡಿಲಕ್ಸ್, ಬಜಾಜ್ ಸಿಟಿ 100, ಹೋಂಡಾ ಡ್ರೀಮ್ ಯುಗಾ ಸೇರಿದಂತೆ ಹಲವು ಕಮ್ಯೂಟರ್ ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದೆ ಎನ್ನಬಹುದು.

Most Read Articles

Kannada
English summary
TVS Radoen 110cc Bike Mileage Check. Read In Kannada
Story first published: Tuesday, July 16, 2019, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X