ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಕೊಡುಗೆ - 'ಕಾರ್ಗಿಲ್ ಎಡಿಷನ್‍'ನಲ್ಲಿ ಬಿಡುಗಡೆಯಾದ ಟಿವಿಎಸ್ ಸ್ಟಾರ್ ಸಿಟಿ+

ಟಿವಿಎಸ್ ಮೋಟಾರ್ ಕಂಪೆನಿಯು ತಮ್ಮ ಸ್ಟಾರ್ ಸಿಟಿ+ ಬೈಕಿನ 'ಕಾರ್ಗಿಲ್ ಎಡಿಷನ್' ಅನ್ನು ಬಿಡುಗಡೆಗೊಳಿಸಿದ್ದು, ಕಾರ್ಗಿಲ್ ಎಡಿಷನ್ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 54,399 ಬೆಲೆಯನ್ನು ಪಡೆದುಕೊಂಡಿದೆ. ಈ ಸ್ಪೆಷಲ್ ಎದಿಷನ್ ಮಾಡಲ್‍‍ನಲ್ಲಿ ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವೇಣೆಯನ್ನು ಪಡೆದುಕೊಂಡಿದ್ದು, ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಯನ್ನು ಪಡೆದಿರುವುದಿಲ್ಲ.

ಭಾರತೀಯ ಸಶಸ್ತ್ರ ಪಡೆಗಳಿಗೆ ಕೊಡುಗೆ - ಕಾರ್ಗಿಲ್ ಎಡಿಷನ್‍ನಲ್ಲಿ ಬಿಡುಗಡೆಯಾದ ಟಿವಿಎಸ್ ಸ್ಟಾರ್ ಸಿಟಿ+

ಲುಕ್‍ನಲ್ಲಿ ಕಾರ್ಗಿಲ್ ಎಡಿಷನ್ ಬೈಕಿಗೆ ಈ ಬಾರಿ ಹೊಸ ವೈಟ್ ಮತ್ತು ಹಳದಿ ಬಣ್ಣದಿಂದ ಕೂಡಿದ ಪೆಯಿಂಟ್ ಸ್ಕೀಮ್ ಅನ್ನು ನೀಡಲಾಗಿದ್ದು, ಇದು ಬೈಕಿಗೆ ವಿಶೇಷವಾದ ನೋಟವನ್ನು ಮತ್ತು ಇನ್ನಿತರೆ ಬೈಕ್‍ಗಳಿಗಿಂತಲೂ ವಿಭಿನ್ನ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಮತ್ತು ಈ ಬೈಕ್ ಅನ್ನು ಖರೀದಿಸಲು ಬಯಸುವವರು ನಿಮ್ಮ ಹತ್ತಿರದ ಟಿವಿಎಸ್ ಡೀಲರ್‍‍ನ ಬಳಿ ಪಡೆಯಬಹುದಾಗಿದೆ.

ಟಿವಿಎಸ್ ಸ್ಟಾರ್ ಸಿಟಿ+ ಕಾರ್ಗಿಲ್ ಎಡಿಷನ್ ದೇಶದ ಗಡಿಯಲ್ಲಿ ಪ್ರತಿಯೊಬ್ಬ ಸೈನಿಕರ ಸಾಹಸ ಮತ್ತು ವರ್ತನೆಗೆ ಗೌರವವನ್ನು ಸಲ್ಲಿಸುತ್ತದೆ. ವಿಶೇಷ ಆವೃತ್ತಿ ಮಾದರಿಯು ಹಿಮ ಶಿಖರಗಳು, ಒರಟಾದ ಭೂಪ್ರದೇಶಗಳು ಮತ್ತು ಸೈನಿಕರ ಶಿಸ್ತಿನ ಜೀವನದಿಂದ ಪ್ರೇರೇಪಿಸಲ್ಪಟ್ಟಿದೆ.

ಕಾರ್ಗಿಲ್ ಎಡಿಷನ್ ಟಿವಿಎಸ್ ಸ್ಟಾರ್ ಸಿಟಿ+ ಬೈಕ್ ನವಲ್ ವೈಟ್, ಸೋಲ್ಡ್ಜರ್ ಗ್ರೀನ್ ಮತ್ತು ಪ್ಲೈಯಿಂಗ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿಯೊಂದು ಬಣ್ಣವು ಸೈನ್ಯ, ನೌಕಾ ಮತ್ತು ವಾಯುಪಡೆ ಎಂಬ ರಕ್ಷಣಾ ಪಡೆಗಳನ್ನು ಸಂಕೇತಿಸುತ್ತದೆ.

ಭಾರತೀಯ ಸಶಸ್ತ್ರ ಪಡೆಗಳಿಗೆ ಕೊಡುಗೆ - ಕಾರ್ಗಿಲ್ ಎಡಿಷನ್‍ನಲ್ಲಿ ಬಿಡುಗಡೆಯಾದ ಟಿವಿಎಸ್ ಸ್ಟಾರ್ ಸಿಟಿ+

ಹೊಸ ಪೆಯಿಂಟ್ ಸ್ಕೀಮ್ ಅನ್ನು ಹೊರತುಪಡಿಸಿ, ಇದರಲ್ಲಿ ವಿಶೇಷವಾದ ಗ್ರಾಫಿಕ್ಸ್, ಟಿವಿಎಸ್ ಸ್ಟ್ರಾರ್ ಸಿಟಿ+ ಲೊಗೊ ಮತ್ತು ಕಾರ್ಗಿಲ್ ಚಿಹ್ನೆಯನ್ನು ನೀಡಲಾಗಿದೆ. ಭಾರತೀಯ ರಕ್ಷಣಾ ಪಡೆಗಳ ಕೊಡುಗೆಗಳನ್ನು ಆಚರಿಸಲು ಟಿವಿಎಸ್ ಕಳೆದ ವರ್ಷ ಕಾರ್ಗಿಲ್ ಕಾಲಿಂಗ್: ರೈಡ್ ಫಾರ್ ದಿ ರಿಯಲ್ ಸ್ಟಾರ್ಸ್ ಅನ್ನು ಪ್ರಾರಂಭಿಸಿತು.

ಸಶಸ್ತ್ರ ಪಡೆಗಳ ಕೊಡುಗೆಗಳನ್ನು ಆಚರಿಸಲು ಕಾರ್ಗಿಲ್ ವಿಜಯ್ ದಿವಸ್ (ಜುಲೈ 2018) ರಂದು ಉಪಕ್ರಮವು ನಡೆಯಿತು. ಉಪಕ್ರಮದ ಭಾಗವಾಗಿ, ಟಿವಿಎಸ್ ಸ್ಟಾರ್ ಸಿಟಿ + 3,500 ಟಚ್ ಪಾಯಿಂಟ್ಗಳ ಮೂಲಕ ಹಾದುಹೋಯಿತು, ವಿಶೇಷ ಕಾರ್ಗಿಲ್ ಸ್ಟಾರ್ ಸಿಟಿ + 5 ಪ್ರಮುಖ ಮಾರುಕಟ್ಟೆಗಳಲ್ಲಿ ರ್‍ಯಾಲಿಯನ್ನು ಮುನ್ನಡೆಸಿತು.

ಭಾರತೀಯ ಸಶಸ್ತ್ರ ಪಡೆಗಳಿಗೆ ಕೊಡುಗೆ - ಕಾರ್ಗಿಲ್ ಎಡಿಷನ್‍ನಲ್ಲಿ ಬಿಡುಗಡೆಯಾದ ಟಿವಿಎಸ್ ಸ್ಟಾರ್ ಸಿಟಿ+

ಮೇಲೆ ಹೇಳಿರುವ ಹಾಗೆ ಟಿವಿಎಸ್ ಸ್ಟಾರ್ ಸಿಟಿ+ ಕಾರ್ಗಿಲ್ ಎಡಿಷನ್ ಬೈಕ್ ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಪಡೆದುಕೊಂಡಿದ್ದು, ತಾಂತ್ರಿಕತೆಯಲ್ಲಿ ಯಾವುದೇ ಬಲವಾಣೆಯನ್ನು ಪಡೆದಿರುವುದಿಲ್ಲ. ಈ ನಿಟ್ಟಿನಲ್ಲಿ ಈ ಬೈಕ್ 109.7ಸಿಸಿ, ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 8.4 ಬಿಹೆಚ್‍ಪಿ ಮತ್ತು 8.7ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
TVS Star City+ Kargil Edition Launched In India At Rs 54,399 — A Tribute To The Indian Armed Forces. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X