Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರ ಆಟೋ ಎಕ್ಸ್ಪೋನಲ್ಲಿ ಬಿಡುಗಡೆಯಾಗಲಿದೆ ಟಿವಿಎಸ್ ಝೆಪ್ಲಿನ್ ಬೈಕ್.!
ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟಿವಿಎಸ್ ಮೋಟಾರ್ ಇದೀಗ ಕ್ರೂಸರ್ ಬೈಕ್ ಮಾದರಿಗಳ ನಿರ್ಮಾಣಕ್ಕೂ ಕೈ ಹಾಕಿದ್ದು, ಮೊದಲ ಪ್ರಯತ್ನದಲ್ಲೇ ತನ್ನ ವಿನೂತನ ವಿನ್ಯಾಸದ ಝೆಪ್ಲಿನ್ ಕ್ರೂಸರ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡುತ್ತಿದೆ.

ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್ಗಳಿಗೆ ಯುವ ಸಮುದಾಯವು ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್ಗಿಂತಲೂ ಉತ್ತಮವಾದ ಹೈ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಥಂಡರ್ಬರ್ಡ್ 350 ಆವೃತ್ತಿಗಿಂತಲೂ ಕಡಿಮೆ ಬೆಲೆಯಲ್ಲಿ ಝೆಪ್ಲಿನ್ ಕ್ರೂಸರ್ ಬೈಕ್ ಅನ್ನು ನಿರ್ಮಾಣ ಮಾಡಿದೆ. ಈ ಹಿಂದೆ 2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನವಾಗಿದ್ದ ಈ ಬೈಕ್ ಗಾಡಿವಾಡಿ ವರದಿ ಪ್ರಕಾರ 2020ರ ಆಟೋ ಎಕ್ಸ್ಪೋ ಮೇಳದಲ್ಲಿ ಬಿಡುಗಡೆಯಾಗಲಿದ್ದು, ಕ್ರೂಸರ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಅತ್ಯಾಧುನಿಕ ರೈಡಿಂಗ್ ಸೌಲಭ್ಯದ ಜೊತೆ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿರುವ ಝೆಪ್ಲಿನ್ ಬೈಕ್ ಮಾದರಿಯು ಇನ್ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಅರಾಮದಾಯಕ ರೈಡಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

ಹೀಗಾಗಿಯೇ ಝೆಫ್ಲಿನ್ ಬೈಕ್ಗಳನ್ನು ಸ್ಟಾರ್ಟ್ ಮಾಡುವಾಗ ಎಲೆಕ್ಟ್ರಿಕ್ ಎಂಜಿನ್ ಮೂಲಕ ಶುರುವಾಗಿ ತದನಂತರ ಪೆಟ್ರೋಲ್ ಎಂಜಿನ್ಗೆ ವರ್ಗಾವಣೆಯಾಗುತ್ತಿದೆ. ಇದಕ್ಕಾಗಿಯೇ ಈ ಬೈಕ್ಗಳಲ್ಲಿ 48ಕೆವಿ ಮೋಟಾರ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಬೈಕಿನ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚು ಸಹಕಾರಿಯಾಗಲಿದೆ.

ಇದರಿಂದಾಗಿ ಕ್ರೂಸರ್ ಬೈಕ್ ಮಾದರಿಗಳಲ್ಲೇ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿರುವ ಝೆಪ್ಲಿನ್ ಬೈಕ್ಗಳು ಇ-ಬೂಸ್ಟ್ ಆಯ್ಕೆಯೊಂದಿಗೆ ಯುವ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, 2020ರ ಫೆಬ್ರುವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿರುವ ದೆಹಲಿ ಆಟೋ ಮೇಳದಲ್ಲಿ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, 2020ರ ಏಪ್ರಿಲ್ 1ರಿಂದ ಭಾರತದಲ್ಲಿ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಟಿವಿಎಸ್ ಸಂಸ್ಥೆಯು ಹೊಸ ನಿಯಮಕ್ಕೆ ಅನುಗುಣವಾಗಿಯೇ ಝೆಪ್ಲಿನ್ ಬೈಕ್ ಎಂಜಿನ್ ಅನ್ನು ಅಭಿೃದ್ಧಿಗೊಳಿಸಿ ಜೋಡಣೆ ಮಾಡಲಾಗಿದೆ.

ಎಂಜಿನ್ ಸಾಮರ್ಥ್ಯ
ಬಿಎಸ್-6 ವೈಶಿಷ್ಟ್ಯತೆಯ 212 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಮಾದರಿಯನ್ನು ಹೊಂದಿರುವ ಝೆಪ್ಲಿನ್ ಬೈಕ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಸೌಲಭ್ಯದೊಂದಿಗೆ 20-ಬಿಎಚ್ಪಿ ಉತ್ಪಾದನಾ ಗುಣಹೊಂದಿದ್ದು, ಅವೆಂಜರ್ 220 ಬೈಕಿಗಿಂತೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಜೊತೆಗೆ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿರುವ ಝೆಪ್ಲಿನ್ ಬೈಕಿನಲ್ಲಿ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ, ಸ್ಮಾರ್ಟ್ ಬಯೋ ಕೀ, ಎಲೆಕ್ಟ್ರಾನಿಕ್ ಸ್ಪಿಡೋ ಮೀಟರ್ ಮತ್ತು ಅಡ್ವೆಂಚರ್ ಬೈಕ್ ರೈಡ್ ಕ್ಷಣಗಳನ್ನು ಸೆರೆಹಿಡಿಯಲು ಹೆಚ್ಡಿ ಕ್ಯಾಮೆರಾ ಕೂಡಾ ಪಡೆದುಕೊಂಡಿರಲಿದೆ.
MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಹಾಗೆಯೇ ಝೆಪ್ಲಿನ್ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಲೈಟ್ ವೇಟ್ ಟ್ಯೂಬ್ ಲೇಸ್ ಟೈರ್, ಸ್ಪೋರ್ಕ್ ಚಕ್ರಗಳು, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನಲ್ ಎಬಿಎಸ್ ಮತ್ತು 41-ಎಂಎಂ ಯುಎಸ್ಡಿ ಫ್ರಂಟ್ ಪೋರ್ಕ್ ಒದಗಿಸಲಾಗಿದೆ.
MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಈ ಮೂಲಕ ಬಜಾಜ್ ಅವೆಂಜರ್ 220 ಕ್ರೂಸರ್ ಮತ್ತು ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ ಬೈಕಿಗೆ ತೀವ್ರ ಪೈಪೋಟಿ ನಡೆಸಲಿರುವ ಝೆಪ್ಲಿನ್ ಬೈಕ್ 2020ರ ಆಟೋ ಎಕ್ಸ್ಪೋ ಮೇಳದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 1.10 ಲಕ್ಷದಿಂದ ರೂ.1.25 ಲಕ್ಷದವರೆಗೆ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.