Just In
- 6 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 7 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 7 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಲ್ಟ್ರಾವಯೊಲೆಟ್ ಬೈಕಿನ ಬಗ್ಗೆ ತಿಳಿಯಬೇಕಾದ ಸಂಗತಿಗಳು
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯಾದ ಅಲ್ಟ್ರಾವಯೊಲೆಟ್ ಆಟೋಮೊಟಿವ್ ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ವಾಹನವಾದ ಎಫ್77 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಬೈಕಿನ ಆನ್ ರೋಡ್ ಬೆಲೆಯು ಬೆಂಗಳೂರಿನಲ್ಲಿ ರೂ.3 ಲಕ್ಷದಿಂದ ರೂ.3.35 ಲಕ್ಷಗಳಾಗಿದೆ.

ಆಲ್ಟ್ರಾವಯೊಲೆಟ್ ಎಫ್ 77 ಭಾರತದ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಆಗಿದೆ. ಇದು ಸುಧಾರಿತ ವೈಶಿಷ್ಟ್ಯಗಳು, ಹೆಚ್ಚಿನ ಪರ್ಫಾಮೆನ್ಸ್ ಹಾಗೂ ಉತ್ತಮ ಶ್ರೇಣಿಯೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಲೈಟ್ನಿಂಗ್, ಶಾಡೋ ಹಾಗೂ ಲೇಸರ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಪ್ರತಿ ಮಾದರಿಯ ಬೈಕಿನಲ್ಲಿರುವ ಮೆಕಾನಿಕಲ್ ಅಂಶಗಳು ಒಂದೇ ಆಗಿದ್ದರೂ, ಭಿನ್ನವಾದ ಕಾಸ್ಮೆಟಿಕ್ ವ್ಯತ್ಯಾಸಗಳನ್ನು ಹೊಂದಿವೆ. ಭಾರತದಲ್ಲಿರುವ ಹೊಸ ಆಲ್ಟ್ರಾವಯೊಲೆಟ್ ಎಫ್ 77 ಎಲೆಕ್ಟ್ರಿಕ್ ಬೈಕಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಟಾಪ್ ಸ್ಪೀಡ್ ಹಾಗೂ ಆಕ್ಸೆಲೆರೇಷನ್
ಆಲ್ಟ್ರಾವಯೊಲೆಟ್ ಎಫ್77 ಪರ್ಫಾಮೆನ್ಸ್ ಆಧಾರಿತ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 147 ಕಿ.ಮೀಗಳಾಗಿದೆ. ಎಫ್77 ಎಲೆಕ್ಟ್ರಿಕ್ ಬೈಕ್ ಕೇವಲ 2.9 ಸೆಕೆಂಡುಗಳಲ್ಲಿ 0 - 60 ಕಿ.ಮೀ ಹಾಗೂ 7.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡುತ್ತದೆ ಎಂದು ಕಂಪನಿಯು ಹೇಳಿದೆ.

ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳು
ಆಲ್ಟ್ರಾವಯೊಲೆಟ್ ಎಫ್ 77 ಬೈಕ್, 4.2 ಕಿ.ವ್ಯಾ ಸಾಮರ್ಥ್ಯದ ಮೂರು ಲಿಥಿಯಂ-ಐಯಾನ್ ಬ್ಯಾಟರಿಗಳ ಪ್ಯಾಕ್ ಅನ್ನು ಬಳಸುತ್ತದೆ. ಈ ಬ್ಯಾಟರಿ ಪ್ಯಾಕ್ ಅನ್ನು 25 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಆಲ್ಟ್ರಾವಯೊಲೆಟ್ ಎಫ್ 77 ಬೈಕಿನಲ್ಲಿರುವ ಬ್ಯಾಟರಿಗಳು ಧೂಳು ಹಾಗೂ ನೀರಿನ ಪ್ರತಿರೋಧಕ್ಕಾಗಿ ಐಪಿ -67 ರೇಟಿಂಗ್ ಹೊಂದಿವೆ.

ಎಲೆಕ್ಟ್ರಿಕ್ ಮೋಟರ್ 2250 ಆರ್‍ಪಿಎಂನಲ್ಲಿ 33.5 ಬಿಹೆಚ್‍ಪಿ ಪವರ್ ಹಾಗೂ ವ್ಹೀಲ್‍ನಲ್ಲಿ 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಂದರೆ ಎಲೆಕ್ಟ್ರಿಕ್ ಮೋಟರ್ ಪ್ರಕಾರ 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದೂರ, ರೈಡಿಂಗ್ ಮೋಡ್ ಹಾಗೂ ಚಾರ್ಜಿಂಗ್
ಆಲ್ಟ್ರಾವಯೊಲೆಟ್ ಎಫ್ 77 ಎಲೆಕ್ಟ್ರಿಕ್ ಬೈಕ್ ಅನ್ನು ಇಕೊ, ಸ್ಪೋರ್ಟ್ ಹಾಗೂ ಇನ್‍ಸೇನ್ ಎಂಬ ಮೂರು ರೈಡಿಂಗ್ ಮೋಡ್‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎಫ್ 77 ಬೈಕ್ ಅನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ 130 ಕಿ.ಮೀ ನಿಂದ 150 ಕಿ.ಮೀ.ವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕಂಪನಿಯು ಎಫ್ 77 ಎಲೆಕ್ಟ್ರಿಕ್ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಮಾರಾಟ ಮಾಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜಿಂಗ್ 1 ಕಿ.ವ್ಯಾ ಚಾರ್ಜರ್ ಹೊಂದಿರುತ್ತದೆ. ಇದು ಬ್ಯಾಟರಿಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಸುಮಾರು 5 ಗಂಟೆ ತೆಗೆದುಕೊಳ್ಳುತ್ತದೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ವೇಗದ ಚಾರ್ಜಿಂಗ್ ಬಲಶಾಲಿಯಾದ 3 ಕಿ.ವ್ಯಾ ಪೋರ್ಟಬಲ್ ಚಾರ್ಜರ್ ಅನ್ನು ಬಳಸುತ್ತದೆ. ಈ ಚಾರ್ಜರ್ ಎಫ್77 ಬ್ಯಾಟರಿಗಳನ್ನು ಕೇವಲ 1.5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ. ಆಲ್ಟ್ರಾವಯೊಲೆಟ್ ಎಫ್ 77 ಎಲೆಕ್ಟ್ರಿಕ್ ಬೈಕಿನಲ್ಲಿ ತೆಗೆಯಬಹುದಾದ / ಬದಲಾಯಿಸಬಹುದಾದ ಬ್ಯಾಟರಿಗಳನ್ನು ಅಳವಡಿಸಲಾಗಿದೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬ್ರೇಕ್, ಸಸ್ಪೆಂಷನ್ ಹಾಗೂ ಟಯರ್
ಆಲ್ಟ್ರಾವಯೊಲೆಟ್ ಎಫ್ 77 ಎಲೆಕ್ಟ್ರಿಕ್ ಬೈಕ್, ಮುಂಭಾಗದಲ್ಲಿ ಸಿಂಗಲ್ 320 ಎಂಎಂ ಡ್ರಿಲ್ಡ್ ಹೋಲ್ ಡಿಸ್ಕ್ ಹೊಂದಿರುವ 4 ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‍ನ 230 ಎಂಎಂ ಡ್ರಿಲ್ಡ್ ಹೋಲ್ ಡಿಸ್ಕ್ ಇದೆ. ಬ್ರೇಕ್‌ಗಳಿಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಆಲ್ಟ್ರಾವಯೊಲೆಟ್ ಎಫ್ 77 ಬೈಕಿನ ಸಸ್ಪೆಂಷನ್‍ಗಳಿಗಾಗಿ ಮುಂಭಾಗದಲ್ಲಿ ತಲೆಕೆಳಗಾದ ಫೋರ್ಕ್ ಹಾಗೂ ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊ-ಶಾಕ್ ಪ್ರಿ ಲೋಡ್ ಅಡ್ಜಸ್ಟಬಿಲಿಟಿ ಸಸ್ಪೆಂಷನ್ ಸೆಟ್ ಅಪ್‍ಗಳಿವೆ.

ಆಲ್ಟ್ರಾವಯೊಲೆಟ್ ಎಫ್ 77 ಎಲೆಕ್ಟ್ರಿಕ್ ಬೈಕಿನಲ್ಲಿ ಸ್ಟಾಂಡರ್ಡ್ ಆಗಿ 17 ಇಂಚಿನ ವ್ಹೀಲ್‍ಗಳನ್ನು ನೀಡಲಾಗುವುದು. ಈ ವ್ಹೀಲ್‍ಗಳನ್ನು ಮೆಟ್ಜೆಲರ್ ರಬ್ಬರ್‌ನಲ್ಲಿ ಮುಚ್ಚಿಡಲಾಗುತ್ತದೆ. ಈ ಎಲೆಕ್ಟ್ರಿಕ್ ಬೈಕಿನ ಮುಂಭಾಗದಲ್ಲಿ 110/70 ಪ್ರೊಫೈಲ್ ಹಾಗೂ ಹಿಂಭಾಗದಲ್ಲಿ 150/60 ಟಯರ್ ಪ್ರೊಫೈಲ್‍ಗಳಿವೆ.

ಸೀಟಿನ ಎತ್ತರ, ತೂಕ ಹಾಗೂ ವ್ಹೀಲ್‌ಬೇಸ್
ಆಲ್ಟ್ರಾವಯೊಲೆಟ್ ಎಫ್ 77 ಬೈಕಿನ ಸೀಟಿನ ಎತ್ತರವು 800 ಎಂಎಂ ಆಗಿದೆ. ಈ ಎಲೆಕ್ಟ್ರಿಕ್ ಬೈಕಿನ ತೂಕವು 158 ಕೆ.ಜಿಗಳಾಗಿದೆ. ಈ ಬೈಕ್ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿಗಿಂತ 10 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ. ಎಫ್ 77 ಎಲೆಕ್ಟ್ರಿಕ್ ಬೈಕಿನ ವ್ಹೀಲ್‌ಬೇಸ್, ಕೆಟಿಎಂ ಆರ್‌ಸಿ 390 ಬೈಕಿನಂತೆ 1340 ಎಂಎಂ ಆಗಿದೆ.

ಮಾದರಿ ಹಾಗೂ ಬಣ್ಣಗಳು
ಆಲ್ಟ್ರಾವಯೊಲೆಟ್ ಎಫ್ 77 ಬೈಕ್ ಅನ್ನು ಮೂರು ವಿಭಿನ್ನ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂರು ಮಾದರಿಗಳೂ ಮೂರು ವಿಭಿನ್ನ ಬಣ್ಣಗಳನ್ನು ಹೊಂದಿವೆ. ಶಾಡೊವನ್ನು ಸ್ಟೆಲ್ತ್ ಗ್ರೇ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.

ಲೈಟ್ನಿಂಗ್ ಅನ್ನು ಬಿಳಿ ಬಣ್ಣದಲ್ಲಿ ಹಾಗೂ ಲೇಸರ್ ಅನ್ನು ಕೆಂಪು ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ. ಶಾಡೊ, ಲೈಟ್ನಿಂಗ್ ಹಾಗೂ ಲೇಸರ್ ಮೂರೂ ಮಾದರಿಗಳು ಒಂದೇ ಮೆಕಾನಿಕಲ್ ಅಂಶಗಳನ್ನು ಹೊಂದಿವೆ. ಆದರೆ ಈ ಮಾದರಿಗಳ ಕಾಸ್ಮೆಟಿಕ್ ಅಂಶಗಳಲ್ಲಿ ಬದಲಾವಣೆ ಮಾಡಲಾಗಿದೆ.

ಬುಕಿಂಗ್, ಡೆಲಿವರಿ ಹಾಗೂ ಲಭ್ಯತೆ
ಆಲ್ಟ್ರಾವಯೊಲೆಟ್ ಎಫ್ 77 ಬೈಕುಗಳಿಗಾಗಿ ಪ್ರೀ ಬುಕಿಂಗ್‍ಗಳನ್ನು ಆರಂಭಿಸಲಾಗಿದೆ. ಈ ಬೈಕುಗಳನ್ನು 2020ರ ಅಕ್ಟೋಬರ್‍ನಿಂದ ವಿತರಿಸಲಾಗುವುದು. ಆರಂಭದಲ್ಲಿ ಬೈಕುಗಳನ್ನು ಬೆಂಗಳೂರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಬೇರೆ ಮಹಾನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಆಲ್ಟ್ರಾವಯೊಲೆಟ್ ಎಫ್ 77 ದೇಶಿಯ ಮಾರುಕಟ್ಟೆಯಲ್ಲಿರುವ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಆಗಿದೆ. ರೂ.3 ಲಕ್ಷಗಳಿಂದ ಆರಂಭವಾಗುವ ಈ ಎಲೆಕ್ಟ್ರಿಕ್ ಬೈಕ್ ಖಂಡಿತವಾಗಿಯೂ ಪ್ರೀಮಿಯಂ ಕೊಡುಗೆಯಾಗಿದೆ. ಸದ್ಯಕ್ಕೆ ಈ ಬೈಕಿಗೆ ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.