ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಅಮೆರಿಕದ ಪ್ರಸಿದ್ಧ ಬೈಕ್ ಉತ್ಪಾದನಾ ಸಂಸ್ಥೆಯಾದ ಯುಎಂ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಸ್ಕೂಟರ್ ವಿಭಾಗದಲ್ಲೂ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಆಟೋ ಉದ್ಯಮದಲ್ಲಿ ಹೊಸ ವಾಹನ ಮಾರಾಟ ಜೋರಾಗಿದ್ದು, ಹಲವಾರು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ಈ ಬಾರಿ ಹೊಸ ಉತ್ಪನ್ನಗಳೊಂದಿಗೆ ಭಾರತಕ್ಕೆ ಪ್ರವೇಶ ಪಡೆಯುತ್ತಿವೆ. ಇವುಗಳಲ್ಲಿ ಯುಎಂ ಮೋಟಾರ್‌ಸೈಕಲ್ ಕೂಡಾ ಕಳೆದ ವರ್ಷವೇ ದೇಶಿಯ ಮಾರುಕಟ್ಟೆ ಪ್ರವೇಶ ಪಡೆಯುವ ಮೂಲಕ ವಿವಿಧ ಮಾದರಿಯ ಕ್ರೂಸರ್ ಬೈಕ್‌ಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತಿದೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಬೈಕ್ ಮಾರಾಟ ಪ್ರಮಾಣದಷ್ಟೇ ಸ್ಕೂಟರ್ ವಿಭಾಗದಲ್ಲೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಈ ಹಿನ್ನೆಲೆ ಹೊಸ ಯೋಜನೆ ರೂಪಿಸಿರುವ ಯುಎಂ ಮೋಟಾರ್‌ಸೈಕಲ್ ಸಂಸ್ಥೆಯು ತನ್ನ ಜನಪ್ರಿಯ ಚಿಲ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಸದ್ಯ ಮಾರುಕಟ್ಟೆಯಲ್ಲಿರುವ ವೆಸ್ಪಾ ಪ್ರೀಮಿಯಂ ಸ್ಕೂಟರ್‌ಗೆ ಪೈಪೋಟಿಯಾಗಿ ಚಿಲ್ 150 ಸ್ಕೂಟರ್ ರಸ್ತೆಗಿಳಿಯಲಿದ್ದು, ಇದೇ ವರ್ಷ 2ನೇ ತ್ರೈಮಾಸಿಕ ಅವಧಿಗೆ ಹೊಸ ಸ್ಕೂಟರ್ ಬಿಡುಗಡೆಯಾಗುವುದು ಪಕ್ಕಾ ಆಗಿದೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಯುಎಂ ಸಂಸ್ಥೆಯು 2019ರ ಯೋಜನೆಗಳ ಕುರಿತಾಗಿ ಸಭೆ ನಡೆಸಿದ್ದು, ಈ ವೇಳೆ ಹೊಸ ಚಿಲ್ 150 ಸ್ಕೂಟರ್ ಬಿಡುಗಡೆ ಕುರಿತಂತೆ ಮಹತ್ವದ ಚರ್ಚೆ ಮಾಡಿದೆ. ಹೀಗಾಗಿ ಹೊಸ ವಿನ್ಯಾಸ ಮತ್ತು ಸೌಲಭ್ಯವನ್ನು ಹೊಂದಿರುವ ಹೊಸ ಸ್ಕೂಟರ್ ಭಾರತೀಯ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಸದ್ಯ ಯುಎಂ ಸಂಸ್ಥೆಯು ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ 125ಸಿಸಿ ಹಾಗೂ150ಸಿಸಿ ಚಿಲ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಮೊದಲ ಹಂತವಾಗಿ ಭಾರತದಲ್ಲಿ ಕೇವಲ 150ಸಿಸಿ ಸಾಮರ್ಥ್ಯದ ಚಿಲ್ ವರ್ಷನ್ ಮಾತ್ರವೇ ಬಿಡುಗಡೆಯಾಗಲಿದೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಹೊಸ ಸ್ಕೂಟರ್ ಪ್ರೀಮಿಯಂ ಸೌಲಭ್ಯಗಳಾದ ಬ್ಲೂಟೂಥ್ ಕನೆಕ್ಟಿವಿಟಿ, ನೆವಿಗೆಷನ್, ಫ್ರಂಟ್ ಡಿಸ್ಕ್, ಸಿಂಗಲ್ ಚಾನೆಲ್ ಎಬಿಎಸ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕಲರ್ ಕನ್ಸೊಲ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಇದು ನೇರವಾಗಿ ವೆಸ್ಪಾ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಎಂಜಿನ್ ಸೌಲಭ್ಯ

150ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಹೊಂದಿರುವ ಚಿಲ್ 150 ಸ್ಕೂಟರ್ ಮಾದರಿಯು ಬೆಲ್ಟ್ ಡ್ರೈವನ್ ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿವೆ.

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಸ್ಕೂಟರ್ ಬೆಲೆ(ಅಂದಾಜು)

ಚಿಲ್ ಸ್ಕೂಟರ್ ಬೆಲೆಗಳ ಬಗೆಗೆ ಯಾವುದೇ ಖಚಿತ ಮಾಹಿತಿ ಇಲ್ಲವಾದರೂ ವೆಸ್ಪಾ ಸ್ಕೂಟರ್‌ಗಳಿಗೆ ಸರಿಸಮವಾಗಿರುವ ಚಿಲ್ ಸ್ಕೂಟರ್ ಬೆಲೆಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 80 ಸಾವಿರದಿಂದ ರೂ.85 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಬೆಲೆ ದುಬಾರಿಯಾದ್ರು ಅತಿ ಹೆಚ್ಚು ಮೈಲೇಜ್‌ ನೀಡುತ್ತೆ ಡ್ಯೂಕ್ 125

ವೆಸ್ಪಾ ಎದುರಾಳಿಯಾಗಿ ರಸ್ತೆಗಿಳಿಯಲಿದೆ ಯುಎಂ ಚಿಲ್ 150 ಪ್ರೀಮಿಯಂ ಸ್ಕೂಟರ್

ಒಟ್ಟಿನಲ್ಲಿ ಕ್ರೂಸರ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಯುಎಂ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸ್ಕೂಟರ್ ಮಾರಾಟದಲ್ಲಿ ಸಂಚಲನ ಸೃಷ್ಠಿಸುವ ನೀರಿಕ್ಷೆಯಲ್ಲಿದ್ದು, ಸ್ಕೂಟರ್ ಬೆಲೆ ನಿರ್ಧಾರದ ಮೇಲೆ ಚಿಲ್ ಮಾಡುವ ಮೋಡಿ ನಿರ್ಧಾರವಾಗಲಿದೆ.

Source: Bikewale

Most Read Articles

Kannada
English summary
India-Bound UM Chill 150 ABS Scooter Details Leaked. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X