ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಕ್ರೂಸರ್ ಬೈಕ್ ನಿರ್ಮಾಣದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಯುನೈಟೆಡ್ ಮೋಟಾರ್ಸ್(ಯುಎಂ) ಸಂಸ್ಥೆಯು ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವ ಸುಳಿವು ನೀಡಿದ್ದು, ಹೊಸ ಬೈಕ್‌ಗಳನ್ನು ಉತ್ಪಾದನೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಅಮೆರಿಕದ ಜನಪ್ರಿಯ ಮೋಟಾರ್‌ಸೈಕಲ್ ನಿರ್ಮಾಣ ಸಂಸ್ಥೆಯಾಗಿರುವ ಯುಎಂ ಕ್ರೂಸರ್ ಬೈಕ್‌ಗಳಿಗೆ ಯುರೋಪ್ ಮತ್ತು ಯುಎಸ್ಎ ಮಾರುಕಟ್ಟೆಗಳಲ್ಲಿ ಸಾಕಷ್ಟು ಬೇಡಿಕೆಯಿದ್ದರೂ ಏಷ್ಯಾ ಮಾರುಕಟ್ಟೆಗಳಲ್ಲಿ ಮಾತ್ರ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಈ ಹಿನ್ನಲೆ 2019ರ ಏಪ್ರಿಲ್‌ನಲ್ಲಿ ಚೀನಿ ಮಾರುಕಟ್ಟೆಗೆ ಅಧಿಕೃತವಾಗಿಯೇ ಗುಡ್‌ಬೈ ಹೇಳಿದ್ದು, ಇದೀಗ ಭಾರತದಲ್ಲೂ ತನ್ನ ಬೈಕ್ ಮಾದರಿಗಳ ಮಾರಾಟವನ್ನು ಸಂಪೂರ್ಣ ನಿಲ್ಲಿಸುವ ನಿರ್ಧಾರಕ್ಕೆ ಬಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ದೇಶಿಯ ಮಾರುಕಟ್ಟೆಯಲ್ಲಿ ಲೋಹಿಯಾ ಆಟೋ ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ ಬೈಕ್ ಉತ್ಪಾದನೆ ಮತ್ತು ಮಾರಾಟದ ಯೋಜನೆ ಹೊಂದಿದ್ದ ಯುಎಂ ಸಂಸ್ಥೆಯು ಸದ್ಯಕ್ಕೆ ಯಾವುದೇ ಹೊಸ ಬೈಕ್ ಉತ್ಪಾದನೆ ಮುಂದಾಗಿರುವುದು ಮಾರಾಟ ಬಂದ್ ಮಾಡುವ ಸೂಚನೆ ನೀಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಜೊತೆಗೆ ಕಳೆದ ಆರು ತಿಂಗಳಿನಿಂದ ಬೈಕ್ ಮಾರಾಟದಲ್ಲಿ ಹಲವು ಬಾರಿ ಸೊನ್ನೆ ಸುತ್ತಿರುವ ಯುಎಂ ಸಂಸ್ಥೆಯು ಮಾರುಕಟ್ಟೆಯಲ್ಲಿ ಯಾವೊಂದು ಬೈಕ್ ಮಾದರಿಯನ್ನು ಸಹ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಜೊತೆಗೆ ಸಹಭಾಗಿತ್ವದ ಯೋಜನೆ ಮುಂದಿನ ನಡೆ ಕುರಿತಂತೆಯೂ ಲೋಹಿಯಾ ಆಟೋ ಸಂಸ್ಥೆಯೊಂದಿಗೆ ಯಾವುದೇ ಚರ್ಚೆ ಕೈಗೊಳ್ಳದ ಯುಎಂ ಸಂಸ್ಥೆಯು ಹೊಸ ಯೋಜನೆಗಳಿಗೆ ಬಂಡವಾಳ ಹೂಡಿಕೆಗೂ ಹಿಂದೇಟು ಹಾಕುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೈಕ್ ಮಾದರಿಗಳನ್ನು ಸಹ ಯಾವುದೇ ರೀತಿಯ ಉನ್ನತೀಕರಣ ಯೋಜನೆಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ 2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಯುಎಂ ಹೊಸ ಬೈಕ್‌‌ಗಳ ಬಿಡುಗಡೆ ಬಗ್ಗೆಯೂ ಲೋಹಿಯಾ ಆಟೋ ಅನುಮಾನ ವ್ಯಕ್ತಪಡಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಇದಕ್ಕೆ ಕಾರಣ, ಉತ್ತರಾಖಂಡ್‌ನಲ್ಲಿರುವ ಲೋಹಿಯಾ ಆಟೋ ಉತ್ಪಾದನಾ ಘಟಕದಲ್ಲಿ 50:50 ಅನುಪಾತದಲ್ಲಿ ಬೈಕ್ ಉತ್ಪಾದನೆ ಮಾಡುತ್ತಿದ್ದ ಯುಎಂ ಮತ್ತು ಲೋಹಿಯಾ ಸಂಸ್ಥೆಗಳು ಶೇ.40 ಸ್ಥಳೀಯ ಮತ್ತು ಶೇ.60ರಷ್ಟು ಆಮದು ಬಿಡಿಭಾಗಗಳನ್ನು ಬಳಕೆ ಮಾಡಿಕೊಂಡು ಉತ್ಪಾದನೆ ಮಾಡುತ್ತಿದ್ದ ಯೋಜನೆಗೂ ಬ್ರೇಕ್ ಬಿದ್ದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಜೊತೆಗೆ ಕಳೆದ ಕೆಲ ದಿನಗಳಿಂದ ವಿದೇಶಿ ಮಾರುಕಟ್ಟೆಗಳಿಂದ ಯುಎಂ ಸಂಸ್ಥೆಯು ಬಿಡಿಭಾಗಗಳ ಆಮದು ಪ್ರಕ್ರಿಯೆಗೂ ತಡೆಹಿಡಿದ್ದು, ಬಿಡಿಭಾಗಗಳು ಇಲ್ಲದೇ ಲೋಹಿಯಾ ಆಟೋ ಕೂಡಾ ಯಎಂ ಬೈಕ್ ಉತ್ಪಾದನೆಯನ್ನು ಬಂದ್ ಮಾಡಿದೆ.

MOST READ: ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಐಷಾರಾಮಿ ಕಾರುಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಇದರಿಂದ ಯುಎಂ ಸಂಸ್ಥೆಯು 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದ ಹೊಸ ಬೈಕ್‌ಗಳ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದ್ದು, ಯುಎಂ ಅಧಿಕೃತ ಡೀಲರ್ಸ್ ಬಳಿಯು ಹೊಸ ಬೈಕ್‌ಗಳ ಬಿಡುಗಡೆ ಕುರಿತಾದ ಯಾವುದೇ ಲಭ್ಯವಾಗುತ್ತಿಲ್ಲ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಇದೇ ಕಾರಣಕ್ಕಾಗಿ ಸರ್ವೀಸ್ ಸಂಬಂಧಿತ ವಿಚಾರವಾಗಿ ಗ್ರಾಹಕರು ಯುಎಂ ಬೈಕ್ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಇದೀಗ ಮಾರುಕಟ್ಟೆಯಲ್ಲಿರುವ ಯುಎಂ ಬೈಕ್‌ಗಳ ಬೀಡಿಭಾಗಗಳ ಅಧಿಕೃತ ಸೇವೆ ಎಲ್ಲಿಯೂ ಲಭ್ಯವಿಲ್ಲದಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ.

MOST READ: ಭಾರತಕ್ಕೆ ಬಂದಿಳಿದ ಚೀನಾ ಅಧ್ಯಕ್ಷರ ಅಧಿಕೃತ ಕಾರಿನ ಸ್ಪೆಷಲ್ ಏನು?

ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿದ ಯುಎಂ?

ಇನ್ನು ಮಾಹಿತಿಗಳ ಪ್ರಕಾರ, ಯುಎಂ ಸಂಸ್ಥೆಯು ಭಾರತದಲ್ಲಿ ತಾತ್ಕಲಿಕವಾಗಿ ಮಾತ್ರವೇ ಬೈಕ್ ಉತ್ಪಾದನೆಯನ್ನು ತಡೆಹಿಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್ ಉತ್ಪನ್ನಗಳೊಂದಿಗೆ ಮಾರಾಟಕ್ಕೆ ಮರುಚಾಲನೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

Most Read Articles

Kannada
English summary
According to reports, American cruiser bike maker UM Motorcycles is planning to shut operations in India.
Story first published: Saturday, October 12, 2019, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X