ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಯುಎಂ ಮೋಟಾರ್ ಸೈಕಲ್ಸ್ ತನ್ನ ಎಲ್ಲಾ ಮೋಟಾರ್ ಸೈಕಲ್ ಗಳಲ್ಲಿ ಎಬಿಎಸ್ ಅನ್ನು ಅಳವಡಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ನಾಲ್ಕು ಮಾದರಿಗಳನ್ನು ಇನ್ನು ಎರಡು ತಿಂಗಳ ಒಳಗೆ ಎಬಿಎಸ್ ನೊಂದಿಗೆ ಬಿಡುಗಡೆ ಮಾಡಲಿದೆ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಹೊಸ ಮಾದರಿಗಳಾದ ರೆನೆಗೆಡ್ ಡ್ಯೂಟಿ ಎಸ್ ಮತ್ತು ರೆನೆಗೆಡ್ ಸ್ಪೋರ್ಟ್ಸ್ ಎಸ್ ವೆಗಾಸ್ ಎಡಿಷನ್ ಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ವರದಿಗಳ ಪ್ರಕಾರ, ಸದ್ಯ ಚಾಲ್ತಿಯಲ್ಲಿರುವ ಯುಎಂ ಮೋಟಾರ್ ಸೈಕಲ್ ಗಳಲ್ಲಿ ಸ್ಟಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸಲಾಗುವುದು. ಸದ್ಯ ಯುಎಂ ಮೋಟಾರ್ ಸೈಕಲ್ ಗಳಲ್ಲಿ - ರೆನೆಗೆಡ್ ಸ್ಫೋರ್ಟ್ಸ್ ಎಸ್, ರೆನೆಗೆಡ್ ಕಮಾಂಡೊ, ರೆನೆಗೆಡ್ ಮೊಜಾವ್ ಮತ್ತು ರೆನೆಗೆಡ್ ಕ್ಲಾಸಿಕ್ - ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಈ ಎಲ್ಲಾ ಮಾದರಿಗಳೂ ಬಾಹ್ಯವಾಗಿ ಮಾತ್ರ ಭಿನ್ನವಾಗಿದ್ದು, ರೈಡಿಂಗ್ ಪೊಸಿಷನ್ ಮತ್ತು ದಕ್ಷತೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಎಲ್ಲಾ ಮೋಟಾರ್ ಸೈಕಲ್ ಗಳು ಒಂದೇ ರೀತಿಯ ಬೇಸಿಕ್ ಮೆಕಾನಿಕಲ್ ಪವರ್ ಹೊಂದಿವೆ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಯುಎಂ ರೆನೆಗೆಡ್ ಫ್ಯಾಮಿಲಿಯ ಎಲ್ಲಾ ಮಾದರಿಯ ವಾಹನಗಳು ಒಂದೇ ರೀತಿಯ ಲಿಕ್ವಿಡ್ ಕೂಲ್ 279.55 ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇವು 24.75 ಬಿಹೆಚ್‍ಪಿ ಮತ್ತು 23 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

1ನೇ ಏಪ್ರಿಲ್ 2019 ರಿಂದ ಜಾರಿಗೆ ಬರುವಂತೆ ಭಾರತ ಸರ್ಕಾರವು ಹೊಸ ಸಂಚಾರಿ ಸುರಕ್ಷಾ ನಿಯಮ ಜಾರಿಗೊಳಿಸಿದ್ದು, ಈ ನಿಯಮದಂತೆ 125 ಸಿಸಿ ವರೆಗಿನ ಎಲ್ಲಾ ಮೋಟಾರ್ ಸೈಕಲ್ ಗಳಲ್ಲೂ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸುವುದು ಕಡ್ಡಾಯವಾಗಿರುತ್ತದೆ. 125 ಸಿಸಿ ಮತ್ತು ಅದಕ್ಕಿಂತ ಹೆಚ್ಚು ಸಿಸಿಯ ಮೋಟಾರ್ ಸೈಕಲ್ ಗಳು ಎಬಿಎಸ್ ಹೊಂದುವುದು ಕಡ್ಡಾಯವಾಗಿರಲಿದೆ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಸರ್ಕಾರವು ಈ ನಿಯಮವನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಯುಎಂ ಮೋಟಾರ್ ಸೈಕಲ್ಸ್ ಸಹ ತನ್ನ ವಾಹನಗಳಲ್ಲಿ ಎಬಿಎಸ್ ಅಳವಡಿಸುತ್ತಿದೆ. ಈ ವ್ಯವಸ್ಥೆಯನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಯುಎಂ ಮೋಟಾರ್ ಸೈಕಲ್ ಗಳ ಬೆಲೆಯಲ್ಲಿ ರೂ 15,000 ಗಳಷ್ಟು ಹೆಚ್ಚಳವಾಗಲಿದೆ. ಇದರಿಂದ ಮಾರಾಟದ ಪ್ರಮಾಣವು ಕುಸಿಯುವ ಸಾಧ್ಯತೆಗಳಿವೆ.

MUST READ: ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಮುಂಬರುವ ದಿನಗಳಲ್ಲಿ ಯುಎಂ ಮೋಟಾರ್ ಸೈಕಲ್ಸ್ ರೆನೆಗೆಡ್ ಸ್ಪೋರ್ಟ್ಸ್ ಎಸ್ ವೆಗಾಸ್ ಎಡಿಷನ್ ಅನ್ನು ಬಿಡುಗಡೆ ಮಾಡಲಿದೆ, ಇದು ಈಗಿರುವ ಸ್ಪೋರ್ಟ್ಸ್ ಎಸ್ ಬೈಕಿನ ಫ್ಯಾನ್ಸಿಯರ್ ವರ್ಷನ್ ಆಗಿರಲಿದೆ. ಮೋಟಾರ್ ಸೈಕಲಿನ ಹೊರ ಭಾಗದಲ್ಲಿ ಮಾತ್ರ ಬದಲಾವಣೆಯಾಗಲಿದ್ದು, ಯಾವುದೇ ಮೆಕಾನಿಕಲ್ ಬದಲಾವಣೆಗಳು ಆಗುವುದಿಲ್ಲ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಯುಎಂ ಮೋಟಾರ್ ಸೈಕಲ್ ರೆನೆಗೆಡ್ ಡ್ಯೂಟಿ ಎಸ್ ಅನ್ನು ಸಹ ಬಿಡುಗಡೆ ಮಾಡಲಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಆಗಿರಲಿದೆ. ಡ್ಯೂಟಿ ಎಸ್ ಅನ್ನು 2018 ರ ಇಂಡಿಯನ್ ಆಟೋ ಎಕ್ಸ್ ಪೋ ದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಬೈಕಿನ ಬೆಲೆಯು ರೂ 1.10 ಲಕ್ಷಗಳ ಅಸುಪಾಸಿನಲ್ಲಿ ಇರಲಿದೆ ಎಂದು ಘೋಷಿಸಲಾಗಿತ್ತು.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಈ ಘೋಷಣೆಯು ಬಹಳ ದಿನಗಳ ಹಿಂದೆ ಆಗಿದ್ದು, ಈಗಿನ ಬೆಲೆಯು ರೂ 1.3 ಲಕ್ಷಗಳಷ್ಟು ಆಗಲಿದೆ. ಯುಎಂ ರೆನೆಗೆಡ್ ಡ್ಯೂಟಿ ಎಸ್ ನಲ್ಲಿ ಏರ್ ಕೂಲ್ 223 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, 16.96 ಬಿಹೆಚ್‍ಪಿ ಮತ್ತು 17 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ರೆನೆಗೆಡ್ ಡ್ಯೂಟಿ ಎಸ್ ಮತ್ತು ರೆನೆಗೆಡ್ ಸ್ಪೋರ್ಟ್ಸ್ ಎಸ್ ವೆಗಾಸ್ ಎಡಿಷನ್ ಗಳ ಬಿಡುಗಡೆ ದಿನಾಂಕಗಳನ್ನು ತಿಳಿಸಿಲ್ಲ.

ಎಬಿಎಸ್ ಅಳವಡಿಸಿಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಭಾರತ ಸರ್ಕಾರದ ಸಂಚಾರಿ ಸುರಕ್ಷಾ ನಿಯಮಗಳ ಹಿನ್ನೆಲೆಯಲ್ಲಿ ಯುಎಂ ಮೋಟಾರ್ ಸೈಕಲ್ಸ್ ಗಳ ಬ್ರಾಂಡ್ ಗಳನ್ನುಅಪ್ ಡೇಟ್ ಮಾಡಲಾಗುತ್ತಿದೆ. ಈ ಬ್ರಾಂಡ್ ಗಳ ಮಾರಾಟವು ಈಗಾಗಲೇ ಕುಸಿತ ಕಂಡಿದ್ದು, ಎಬಿಎಸ್ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಡುತ್ತಿರುವ ಬೆಲೆ ಏರಿಕೆಯು, ಈ ಕಂಪನಿಯ ಮಾರಾಟ ಪ್ರಮಾಣವನ್ನು ಇನ್ನಷ್ಟು ಕುಸಿಯುವಂತೆ ಮಾಡಲಿದೆ.

Most Read Articles

Kannada
English summary
UM Motorcycles To Get ABS As Standard Equipment; Two New UM Bikes Coming-Up - Read in Kannada
Story first published: Wednesday, April 24, 2019, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X